ರಾಜ್ಯದ ರೈತನಿಗೆ ಇಂಧನ ಸಚಿವರಾದ ಕೆ.ಜೆ ಜಾರ್ಜ್ (Power Minister George) ಅವರು ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ 2008 ರಿಂದ 2023ರ ಸೆಪ್ಟೆಂಬರ್ 2022ರವರೆಗೆ ನೋಂದಣಿಯಾಗಿರುವಂತಹ 4 ಲಕ್ಷ ಅಕ್ರಮ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಸಕ್ರಮಗೊಳಿಸಲಾಗುವುದು, ಸುಮಾರು ಇದಕ್ಕೆ 6000 ಕೋಟಿ ಬಜೆಟ್ ಆಗಲಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಘೋಷಿಸಿದ್ದಾರೆ.
ಗುರುವಾರ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್‌ನ ಭರಮಗೌಡ ಕಾಗೆ ಅವರು ಈ ಬಗ್ಗೆ ಪ್ರಶ್ನಿಸಿದರು ಅವರ ಪ್ರಶ್ನೆಗೆ ಇಂಧನ ಸಚಿವರು ಉತ್ತರಿಸಿ ಈ ಮೇಲಿನ ಕ್ವೆಶ್ಚನ್ ಮಾಡಿದರು ಮತ್ತು ಅದರ ಸಂಬಂಧ ಪ್ರಸಕ್ತ ವರ್ಷದಲ್ಲೇ ಸುಮಾರು 80,000 ಅನಧಿಕೃತ ನೀರಾವರಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮತ್ತು ಮೌಲಸೌಕರ್ಯ ಕಲ್ಪಿಸಿ ಸಕ್ರಮಗೊಳಿಸಲು ಟೆಂಡರ್ ಆಹ್ವಾನಿಸಿ ಅಂತಿಮಗೊಳಿಸಲಾಗುವುದು ಎನ್ನುವ ಭರವಸೆ ನೀಡಿದರು.
ಈ ಹಿಂದೆಯೂ ಸರ್ಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಕೃಷಿ ಪಂಪ್ಸೆಟ್ ಅಕ್ರಮ ಸಕ್ರಮಕ್ಕಾಗಿ ಅರ್ಜಿ ಆಹ್ವಾನ ಮಾಡಿತ್ತು. ಸೆಪ್ಟೆಂಬರ್ 2022ರವರೆಗೆ ನೋಂದಣಿಯಾಗಿರುವ 4 ಲಕ್ಷ ಅನಧಿಕೃತ ಕೃಷಿ ಪಂಪ್‌ಸೆಟ್‌ಗಳಿಗೆ ಹಂತ ಹಂತವಾಗಿ ಸಕ್ರಮದ ಭಾಗ್ಯ ದೊರೆಯಲಿದೆ.
ಇದರೊಂದಿಗೆ ವಿದ್ಯುತ್ ಮಾರ್ಗ ಜಾಲದಿಂದ 500 ಮೀಟರ್ ಒಳಗಿದ್ದರೆ, ಅಂತಹವುಗಳಿಗೆ ವಿದ್ಯುತ್ ಸಂಪರ್ಕ ಮತ್ತು ಮೂಲಸೌಕರ್ಯ ಕಲ್ಪಿಸಿ, 500 ಮೀಟರ್‌ನಿಂದ ದೂರವಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಸೌರ ವಿದ್ಯುತ್ ಸಂಪರ್ಕ (Solar Pumpset) ಕಲ್ಪಿಸಲಾಗುವುದು.
ಈ ರೀತಿ ಸೌರ ವಿದ್ಯುತ್ ಚಾಲಿತ ಪಂಪ್ ಸೆಟ್ ಅಳವಡಿಸಿಕೊಳ್ಳಲು ಇಚ್ಛಿಸುವ ರೈತರಿಗೆ ಕೇಂದ್ರ ಸರಕಾರ 30% ರಷ್ಟು ಸಹಾಯಧನ ನೀಡುತ್ತಿದೆ. ರಾಜ್ಯ ಸರಕಾರದ ಸಹಾಯಧನವನ್ನು 50% ಹೆಚ್ಚಿಸಲಾಗಿದೆ. ಉಳಿದ 20% ನ್ನು ರೈತರು ಭರಿಸಬೇಕಾಗುತ್ತದೆ. ವಿದ್ಯುತ್ ಸಂಪರ್ಕಕ್ಕಾಗಿ ರೈತರು ಈಗಾಗಲೇ ಪಾವತಿಸಿರುವ ಮೊತ್ತವನ್ನು ಅವರ ಪಾಲಿನ ವಂತಿಗೆ ಎಂಬುದಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ 2022ರ ಬಳಿಕ ನೋಂದಾಯಿಸುವ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ ಸಹಿತ ವಿದ್ಯುತ್ ಸಂಪರ್ಕದ ವೆಚ್ಚವನ್ನು ರೈತರೇ ಭರಿಸಬೇಕೆಂದು ಸರ್ಕಾರ ಆದೇಶವೊಂದನ್ನು ಹೊರಡಿಸಿತ್ತು. ಈ ಆದೇಶದಿಂದ ರೈತರಿಗೆ ಹೊರೆಯಾಗುತ್ತಿದೆ ಹಾಗಾಗಿ ಇದನ್ನು ಮಾರ್ಪಡಿಸಬೇಕು ಎಂದು ಸಚಿವ ಸಂಪುಟದಲ್ಲಿ ಧ್ವನಿ ಎತ್ತಿ ಚರ್ಚೆ ಮಾಡಲಾಯಿತು.
ಅಂತಿಮವಾಗಿ ಅಗತ್ಯವಿರುವೆಡೆ ವಿದ್ಯುತ್ ಪರಿವರ್ತಕಗಳನ್ನು ಮೇಲ್ದರ್ಜೆಗೇರಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಇಂಧನ ಸಚಿವರು ಭರವಸೆ ನೀಡಿದರು. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಸಲು 750 ಮೆಗಾವ್ಯಾಟ್ ಸಾಮರ್ಥ್ಯದ ಉಪ ಕೇಂದ್ರಗಳನ್ನು ಸೌರ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಇದರ ಟೆಂಡರ್ ಪಡೆದ ಗುತ್ತಿಗೆ ಕಂಪನಿಗಳಿಗೆ ಸರಕಾರವು ಪ್ರತಿ ಯೂನಿಟ್‌ಗೆ 3.16 ರೂಪಾಯಿ ಪಾವತಿಸಲಿದೆ.
ಇದೇ ರೀತಿ 400 ಉಪ ಕೇಂದ್ರಗಳನ್ನು ಸೌರ ಕೇಂದ್ರಗಳನ್ನಾಗಿ ಪರಿವರ್ತಿಸಲು ನಿರ್ಧಾರಕ್ಕೆ ಬರಲಾಗಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡರು. ವಿದ್ಯುತ್ ಪರಿವರ್ತಕಗಳ ರಿಪೇರಿಗಾಗಿಯೇ ಕೇಂದ್ರಗಳನ್ನು ತೆರೆಯಲಾಗಿದ್ದು,ಸಮಸ್ಯೆಗಳಾದರೆ ರೈತರಿಗೆ 48 ಗಂಟೆಯೊಳಗೆ ರಿಪೇರಿ ಮಾಡಿಕೊಡಲಾಗುತ್ತಿದೆ.
ರೈತರು ಹಣ ಕೊಡದೆ ದುರಸ್ತಿ ಮಾಡಿಸಿಕೊಳ್ಳಬಹುದು ವಿದ್ಯುತ್ ಪರಿವರ್ತಕಗಳ ಬ್ಯಾಂಕ್ ತೆರೆಯಲಾಗಿದ್ದು, ಅಗತ್ಯವಿರುವವರು ಕೊಂಡೊಯ್ಯಬಹುದು ಎಂದು ತಿಳಿಸಿದರು. ಇನ್ನು ಹಲವು ವಿಭಿನ್ನ ಮಾದರಿಯ ಸೌರ ವಿದ್ಯುತ್‌ಚಾಲಿತ ಪಂಪ್‌ಸೆಟ್‌ಗಳು ಬಂದಿವೆ. ಇದರ ಸಂಬಂಧವೇ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಸೌರ ವಿದ್ಯುತ್ ಉಪಕರಣಗಳ ಪ್ರದರ್ಶನ ಆಯೋಜಿಸಲಾಗಿದೆ. ರೈತರು ಇಲ್ಲಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡೆದುಕೊಂಡು ಪ್ರಯೋಜನಪಡಿಸಿಕೊಳ್ಳಿ ಎಂದು ತಿಳಿಸಿದರು.