ಭಾರತವು ಡಿಜಟಲೀಕರಣದತ್ತ (Digitalization) ಯಶಸ್ವಿಯಾಗಿ ದಾಪುಗಾಲು ಇಟ್ಟಿದೆ. ಸದ್ಯಕ್ಕೆ ದೇಶದಲ್ಲಿ ನಿಧಾನವಾಗಿ ಎಲ್ಲರೂ ಈ ವಿಧಾನ ಒಪ್ಪಿಕೊಳ್ಳುತ್ತಿದ್ದಾರೆ ಮತ್ತು ಈ ವಿಚಾರದಲ್ಲಿ ಒಂದು ದೊಡ್ಡ ಕ್ರಾಂತಿಯೇ ನಡೆದಿದೆ ಎನ್ನಲೂಬಹುದು. ಅದರಲ್ಲೂ ಬ್ಯಾಂಕಿಂಗ್ (Banking) ವಿಚಾರದಲ್ಲಿ ಕಳೆದ ಒಂದು ದಶಕದಲ್ಲಿ ಆಗಿರುವ ಬದಲಾವಣೆಯು ನಿಜವಾಗಿಯೂ ಪ್ರತಿ ಭಾರತೀಯರಿಗೆ ಹೆಮ್ಮೆಯ ವಿಚಾರವೇ ಸರಿ.
ಈಗ ನಾವು ಲೆಸ್ ಕ್ಯಾಶ್ (less Cash) ಎನ್ನುವ ಪರಿಕಲ್ಪನೆಗೆ ಎಷ್ಟು ಒಗ್ಗಿ ಹೋಗಿದ್ದೇವೆ ಎಂದರೆ ಇದು ಸಾಧ್ಯವಾದದ್ದು ಈ ರೀತಿ ಡಿಜಿಟಲ್ ಕ್ರಮದಿಂದ ಆನ್ಲೈನ್ ಪೇಮೆಂಟ್ (Online Payment) ಮಾಡಲು ಸಾಧ್ಯವಾದುದ್ದರಿಂದ. ಈಗ ತರಕಾರಿ ಅಂಗಡಿಗಳಲ್ಲಿ ಖರೀದಿಸುವ ಸಾಮಗ್ರಿಗಳಿಂದ ಹಿಡಿದು ಫ್ಲೈಟ್ ಟಿಕೆಟ್ ಬುಕ್ ಮಾಡುವವರಿಗೆ ಎಲ್ಲವೂ ಆನ್ಲೈನ್ ಪೇಮೆಂಟ್ ಮೇಲೆ ಡಿಪೆಂಡ್ ಆಗಿದೆ ಆದರೆ ಸಾರ್ವಜನಿಕವಾಗಿ ಇನ್ನು ಸರ್ಕಾರದ ಕಡೆಯಿಂದಲೇ ಸಂಪೂರ್ಣವಾಗಿ ಇದು ಯಶಸ್ವಿ ಆಗಿಲ್ಲ ಎಂದರೆ ತಪ್ಪಾಗಲಾರದು.
ಈ ಮಾತು ಹಲವರಿಗೆ ಕನ್ಫ್ಯೂಷನ್ ಕೂಡ ಕ್ರಿಯೇಟ್ ಮಾಡಬಹುದು ಆದರೂ ಇದು ವಾಸ್ತವ ಆಗಿದೆ. ಹೇಗೆಂದರೆ, ಸರ್ಕಾರಿ ಬಸ್ ಗಳಲ್ಲಿ, ಜನರಲ್ ಭೋಗಿಗಳಲ್ಲಿ ಪ್ರಯಾಣಿಸಲು ರೈಲ್ವೆ ಟಿಕೆಟ್ (Train Ticket) ಪಡೆಯುವ ಸಮಯದಲ್ಲಿ ಆನ್ಲೈನ್ ಪೇಮೆಂಟ್ ಮಾಡಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ನಿಜವಾಗಿಯೂ ಸಮಸ್ಯೆ ಎದುರಿಸುತ್ತೇವೆ.
ಈ ಸುದ್ದಿ ಓದಿ:- ವಿಧವಾ ವೇತನ ಹಣ ಇನ್ಮುಂದೆ ಬ್ಯಾಂಕ್ ಖಾತೆಗೆ ಜಮೆ ಆಗಲು ಈ ರೀತಿ ಅರ್ಜಿ ಸಲ್ಲಿಸಿ.!
ರೈಲ್ವೆ ಟಿಕೆಟ್ ಮುಂಗಡವಾಗಿ ಬುಕ್ ಮಾಡುವವರು ಆನ್ಲೈನ್ ನಲ್ಲಿ ಪೇಮೆಂಟ್ ಮಾಡುವ ಸೌಲಭ್ಯ ಪಡೆದಿದ್ದಾರೆ ಅವರಿಗೆ ಸಮಸ್ಯೆ ಇಲ್ಲ ಆದರೆ ಮಾಮೂಲಿಯಾಗಿ ದಿನನಿತ್ಯದ ಪ್ರಯಾಣಕ್ಕೆ ಜನರಲ್ ಭೋಗಿಗಳಲ್ಲಿ ಪ್ರಯಾಣಿಸಲು ಟಿಕೆಟ್ ಬೇಕೆಂದರೆ ಟಿಕೆಟ್ ಕೌಂಟರ್ ಗಳಲ್ಲಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತು ಚಿಲ್ಲರೆಗಾಗಿ ಪರದಾಡಿ ಟಿಕೆಟ್ ಪಡೆಯಬೇಕಿತ್ತು ಆದರೆ ಇನ್ನು ಮುಂದೆ ಇಂತಹ ಸಮಸ್ಯೆ ಇಲ್ಲ.
ಯಾಕೆಂದರೆ ರೈಲ್ವೆ ಇಲಾಖೆ , ಏಪ್ರಿಲ್ 1, 2024ರಿಂದ ಅನ್ವಯವಾಗುವಂತೆ ಆನ್ಲೈನ್ ಪೇಮೆಂಟ್ ಮಾಡಲು ಕ್ಯೂಆರ್ ಕೋಡ್ (QR Code) ಸ್ಕ್ಯಾನಿಂಗ್ ಸೌಲಭ್ಯ ಒದಗಿಸಿ ಸಿಹಿ ಸುದ್ದಿ ನೀಡಿದೆ. ನಿಮ್ಮ ಖಾತೆಯಲ್ಲಿ ಹಣ ಇದ್ದರೆ ನೀವು ಟಿಕೆಟ್ ಕೌಂಟರ್ ಗೆ ಹೋದ ತಕ್ಷಣ ಅಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಬಹುದು.
ಏಪ್ರಿಲ್ 1ರಿಂದ ನೀವು ನಿಮ್ಮ ಮೊಬೈಲ್ ನಿಂದಲೇ ಜನರಲ್ ಟಿಕೆಟ್ ದರವನ್ನು ಆನ್ಲೈನ್ ನಲ್ಲಿ ಪಾವತಿ ಮಾಡಬಹುದು. ದೇಶದಾದ್ಯಂತ ಈ ವ್ಯವಸ್ಥೆಯು ಜಾರಿಗೆ ಬರಲಿದೆ. ನಿಮ್ಮ ಹತ್ತಿರದ ರೈಲ್ವೆ ನಿಲ್ದಾಣದಲ್ಲಿ ಸಹ ಈ ವ್ಯವಸ್ಥೆ ಲಭ್ಯವಿರುತ್ತದೆ. ಇದರಿಂದ ಆಗುತ್ತಿರುವ ಬಹಳ ದೊಡ್ಡ ಅನುಕೂಲತೆ ಏನೆಂದರೆ, ಚಿಲ್ಲರೆ ಇಲ್ಲದೆ ಪರದಾಡುತ್ತಿದ್ದವರಿಗೆ ಸಮಸ್ಯೆ ತಪ್ಪುತ್ತಿದೆ.
ಈ ಸುದ್ದಿ ಓದಿ:-ಪತ್ನಿ ಹೆಸರಲ್ಲಿ ಗೃಹ ಸಾಲ ಮಾಡುವುದರಿಂದ ಏನೆಲ್ಲಾ ಲಾಭ ಗೊತ್ತಾ.?
ಕೌಂಟರ್ ನಲ್ಲಿರುವ ಸಿಬ್ಬಂದಿ ಹಾಗೂ ನೀವು ಚಿಲ್ಲರೆಗಾಗಿ ವಾದ ಮಾಡಿ ಸಮಯ ವ್ಯರ್ಥ ಮಾಡುವುದು ನಿಲ್ಲುತ್ತದೆ ಮತ್ತು ಅನೇಕ ಬಾರಿ ಈ ರೀತಿ ಚಿಲ್ಲರೆಗಾಗಿ ಅಥವಾ ಹಣ ಪಾವತಿ ಮಾಡಲು ಸರದಿ ಸಾಲಿನಲ್ಲಿ ನಿಂತು ಲೇಟಾಗಿ ರೈಲು ಮಿಸ್ ಮಾಡಿಕೊಂಡ ಪ್ರಸಂಗಗಳು ನೆನಪಿರಬಹುದು.
ಇನ್ನು ಮುಂದೆ ಇದೆಲ್ಲದರಿಂದ ಕೂಡ ಪರಿಹಾರ ಸಿಗುತ್ತದೆ ನಿಧಾನವಾಗಿ ಎಲ್ಲಾ ಕ್ಷೇತ್ರವೂ ಕೂಡ ಡಿಜಿಟಲೀಕರಣವಾಗುತ್ತಿರುವುದು ಬಹಳ ಉತ್ತಮ ಪರಿಣಾಮ ಬೀರುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಈ ಅನುಕೂಲತೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಪ್ಪದೇ ಕಮೆಂಟ್ ಮಾಡಿ ತಿಳಿಸಿ.