ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿವೆ. ಉಚಿತ ಶಿಕ್ಷಣ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೇರಿದಂತೆ ಶಾಲೆಗಳಲ್ಲಿ ಉಚಿತವಾಗಿ ಬಿಸಿಯೂಟವನ್ನು ಕೂಡ ನೀಡಲಾಗುತ್ತಿದೆ.
ಇದರ ಜೊತೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ. ಸರ್ಕಾರಗಳು ಮಾತ್ರವಲ್ಲದೆ ಸರ್ಕಾರೇತರವಾಗಿ ಹಲವು ಸಂಘ ಸಂಸ್ಥೆಗಳು, ಧಾರ್ಮಿಕ ದತ್ತಿಗಳು NGOಗಳು ಸಹ ದೇಶದ ಬಡ ವಿದ್ಯಾರ್ಥಿಗಳ ನೆರವಿಗೆ ಮುಂದಾಗಿವೆ. ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಇವುಗಳ ಪ್ರಯೋಜನವನ್ನು ಪಡೆಯಬಹುದು.
ಈಗ ಇಂತಹದೇ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತಹ ಮತ್ತೊಂದು ಕಾರ್ಯಕ್ರಮವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ಕೂಡ ಹಮ್ಮಿಕೊಂಡಿದೆ. BBMP ಅಮೃತ ಯೋಜನೆ(BBMP Amruth yojana) ರೂಪಿಸಿ ಬೆಂಗಳೂರು ನಗರದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್(Laptops)ಗಳನ್ನು ನೀಡಲು ನಿರ್ಧರಿಸಿದೆ.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!
ಈಗ ಶಿಕ್ಷಣದ ಒಂದು ಭಾಗವಾಗಿ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ನಡೆಯಲು ಹಾಗೂ ಅವರು ಕಲಿಕೆಯಲ್ಲಿ ಸೃಜನಾತ್ಮಕವಾಗಿ ಅಭ್ಯಾಸ ಮಾಡಲು ಲ್ಯಾಪ್ಟಾಪ್ ಗಳ ಅವಶ್ಯಕತೆ ಬಹಳ ಇದೆ ಆದರೆ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ಗಳನ್ನು ಖರೀದಿಸುವ ಶಕ್ತಿ ಇರುವುದಿಲ್ಲ ಹಾಗಾಗಿ ಇಂತಹವರಿಗೆ ನೆರವು ಒದಗಿಸಿ ಉಚಿತವಾಗಿ ಲ್ಯಾಪ್ಟಾಪ್ (free Laptop) ನೀಡಿ ಅವರ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ 2022-23ನೇ ಸಾಲಿನಿಂದ BBMP ಅಮೃತ ಮಹೋತ್ಸವ ಲ್ಯಾಪ್ಟಾಪ್ ಯೋಜನೆಯನ್ನು ಮಂಡನೆ ಮಾಡಲಾಗಿದೆ.
ಈಗಾಗಲೇ ಈ ಯೋಜನೆಗೆ ಆಕಾಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿತ್ತು ಮತ್ತು ಆ ನಿಯಮದ ಪ್ರಕಾರ ಹಲವಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಕೆಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು ಕೇಳಲಾಗಿದ್ದ ಕೆಲವೊಂದು ಅಗತ್ಯ ದಾಖಲೆಗಳನ್ನು ಇನ್ನೂ ಅಪ್ಲೋಡ್ ಮಾಡಿಲ್ಲ. ಹಾಗಾಗಿ ಇದಕ್ಕೆ ತಾಂತ್ರಿಕ ಸಮಸ್ಯೆಗಳು ಉಂಟಾಗಿರಬಹುದು ಅಥವಾ ವಿದ್ಯಾರ್ಥಿಗಳಿಗೆ ಮಾಹಿತಿ ಕೊರತೆ ಇರಬಹುದು ಎಂದು ಉದ್ದೇಶ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅರ್ಹ ದಾಖಲೆಗಳನ್ನು ಅಪ್ಲೋಡ್ (Document Upload) ಮಾಡಲು ಅವಕಾಶ ನೀಡಲಾಗಿದೆ.
ಈ ವಿಚಾರವನ್ನು ಸ್ವತಃ BBMP ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರೇ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಫೆಬ್ರವರಿ 19 ರಿಂದ ಫೆಬ್ರವರಿ 29 ರವರೆಗೆ ಡಾಕ್ಯೂಮೆಂಟ್ ಅಪ್ಲೋಡ್ ಮಾಡಲು ಅವಕಾಶ ನೀಡಲಾಗಿದೆ ನಂತರ ದಾಖಲೆಗಳನ್ನು ಸಲ್ಲಿಸದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಕೂಡ ತಿಳಿಸಿದ್ದಾರೆ.
ಈ ಸುದ್ದಿ ಓದಿ:- ಫೆಬ್ರವರಿ ತಿಂಗಳ ಅಕ್ಕಿಯ ಹಣ ಪಡೆಯಲು ಸರ್ಕಾರದಿಂದ ಹೊಸ ರೂಲ್ಸ್ ಜಾರಿ.!
ದಾಖಲೆಗಳನ್ನು ಅಪ್ಲೋಡ್ ಮಾಡುವ ವಿಧಾನ:-
* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಯೋಜನಾ ವಿಭಾಗಕ್ಕೆ ಹೋಗಿ ಮೊದಲು ನಿಮ್ಮ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ
* ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಲು, ನಿಮ್ಮ ಅರ್ಜಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು
* ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅರ್ಜಿ ತಿದ್ದುಪಡಿ ಲಿಂಕ್ ಕ್ಲಿಕ್ ಮಾಡಿ. ಒಂದು ವೇಳೆ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ಅಗತ್ಯ ತಿದ್ದುಪಡಿ ಇದ್ದರೂ ಕೂಡ ಮಾಡಬಹುದು, ಇಲ್ಲವಾದಲ್ಲಿ ಡಾಕುಮೆಂಟ್ ಅಪ್ಲೋಡ್ ಲಿಂಕ್ ಕ್ಲಿಕ್ ಮಾಡಿ ಹೊಸದಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಪಾಲಿಕೆಯ ವೆಬ್ಸೈಟ್ಗೆ ವಿಳಾಸ: https://welfare.bbmpgov.in/
* ಸಂಬಂಧಪಟ್ಟ ವಲಯದ ಸಹಾಯಕ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ