ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ಜಾರಿಗೆ ತಂದಿದೆ. ರಾಜ್ಯದಲ್ಲಿ ನೂತನವಾಗಿ ಅಧಿಕಾರ ಸ್ಥಾಪಿಸಿರುವ ಕಾಂಗ್ರೆಸ್ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣೆ – 2023ರ (Karnataka Assembly Election – 2023) ಚುನಾವಣೆ ಪ್ರಣಾಳಿಕೆಯಲ್ಲಿ.
ಆಕರ್ಷಣೀಯವಾಗಿ ಐದು ಗ್ಯಾರಂಟಿಗಳನ್ನು ತಮ್ಮ ಪಕ್ಷ ಅಧಿಕಾರ ಹಿಡಿಯುತ್ತಿದ್ದಂತೆ ಜಾರಿಗೆ ತಂದು ರಾಜ್ಯದ ಜನತೆಗೆ ಅನುಕೂಲತೆ ಮಾಡಿಕೊಡಲಾಗುವುದು ಎಂದು ಆಶ್ವಾಸನೆ ನೀಡಿತ್ತು, ಈಗ ಅದೇ ರೀತಿ ನುಡಿದಂತೆ ನಡೆದಿರುವ ಸಿದ್ದರಾಮಯ್ಯ (CM Siddaramaih) ಸರ್ಕಾರವು ಎಲ್ಲ ಯೋಜನೆಯನ್ನು ಹಂತ ಹಂತವಾಗಿ ಆರು ತಿಂಗಳೊಳಗೆ ಜಾರಿಗೆ ತಂದಿದೆ.
ಮೊದಲನೆಯದಾಗಿ ರಾಜ್ಯದ ಎಲ್ಲಾ ಮಹಿಳೆಯರಿಗೂ ರಾಜ್ಯದ ಗಡಿಯೊಳಗೆ ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ ನೀಡುವ ಶಕ್ತಿ ಯೋಜನೆ (Shakthi Yojane) ಎರಡನೇ ಗ್ಯಾರೆಂಟಿಯಾಗಿ ಕರ್ನಾಟಕ ಪ್ರತಿ ಮನೆಗೂ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ (Gruhajyothi Scheme) ಮತ್ತು ಬಡತನ ರೇಖೆಗಿಂತ ಕೆಳಗಿರುವ.
ಈ ಸುದ್ದಿ ಓದಿ:- ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!
ಎಲ್ಲಾ ಕುಟುಂಬಗಳಿಗೂ ಪ್ರತಿ ಸದಸ್ಯರಿಗೂ 10KG ಪಡಿತರ ನೀಡುವ ಅನ್ನ ಭಾಗ್ಯ ಯೋಜನೆ (Annabhagya) ಹಾಗೂ ಕುಟುಂಬದ ಮುಖ್ಯಸ್ಥೆ ಖಾತೆಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನ ನೀಡುವ ಗೃಹಲಕ್ಷ್ಮಿ ಯೋಜನೆ (Gruhalakshmi) ರಾಜ್ಯದಲ್ಲಿರುವ ನಿರುದ್ಯೋಗಿ ವಿದ್ಯಾರ್ಥಿಗಳಿಗೆ ಪದವೀಧರರಿಗೆ ರೂ.3000 ಹಾಗೂ ಡಿಪ್ಲೋಮಾ ಪದವೀಧರರಿಗೆ ರೂ.1500 ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆಯನ್ನು (Yuvanidhi) ಜಾರಿಗೆ ತಂದಿದೆ.
ಆದರೆ ಇದರಲ್ಲಿ ಅನ್ನಭಾಗ್ಯ ಯೋಜನೆ ಜಾರಿಗೆ ತರುವ ಸಮಯದಲ್ಲಿ ಕೆಲ ವ್ಯತ್ಯಾಸಗಳಾಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ BPL ಕಾರ್ಡ್ ಹೊಂದಿರುವ ಪ್ರತಿ ಸದಸ್ಯರಿಗೂ ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ ಪಡಿತರವನ್ನು 10KG ಏರಿಸಲಾಗುವುದು ಎಂದು ಘೋಷಣೆ ಮಾಡಲಾಗಿತ್ತು ಮತ್ತು ಇದನ್ನು ಜಾರಿಗೆ ತರಲು ಅಕ್ಕಿ ಖರೀದಿಗೆ ಸರ್ಕಾರ ಕೇಂದ್ರ ಸರ್ಕಾರದ ನೆರವು ಕೋರಿತ್ತು.
ಕೇಂದ್ರದಿಂದ ನಿರೀಕ್ಷಿತ ಸಹಾಯ ಹಸ್ತ ದೊರೆಯದ ಕಾರಣ ಇತರ ರಾಜ್ಯ ಜೊತೆಗೂ ಅಕ್ಕಿ ಖರೀದಿಗಾಗಿ ಮಾತುಕತೆ ನಡೆಸಿತ್ತು. ಆದರೆ ಅಂತಿಮವಾಗಿ ಎಲ್ಲೂ ಅಕ್ಕಿ ದಾಸ್ತಾನು ಲಭ್ಯವಾಗದ ಕಾರಣದಿಂದಾಗಿ ಅನ್ನಭಾಗ್ಯ ಯೋಜನೆಯಡಿ 10KG ಅಕ್ಕಿಯನ್ನು ನೀಡಲು ಸಾಧ್ಯವಾಗುವವರೆಗೂ ಕೂಡ 5KG ಪಡಿತರ ಉಳಿದ 5KG ಅಕ್ಕಿ ಬದಲಾಗಿ ಪ್ರತಿ KG ಅಕ್ಕಿಗೆ 34 ರೂಪಾಯಿಯಂತೆ ಒಬ್ಬ ಸದಸ್ಯನಿಗೆ 170 ರೂಪಾಯಿಯನ್ನು ಆ ಕುಟುಂಬದ ಮುಖ್ಯಸ್ಥನ ಖಾತರಿಗೆ ವರ್ಗಾವಣೆ ಮಾಡುತ್ತಿದೆ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ ಹಣ 2000, ಅಕ್ಕಿ ಹಣ 1020, ಯುವ ನಿಧಿ 3,000 ಸರ್ಕಾರದಿಂದ ಬರಬೇಕಾದ ಎಲ್ಲಾ ಪೆಂಡಿಂಗ್ ಹಣ ಒಟ್ಟಿಗೆ ನಿಮ್ಮ ಖಾತೆಗೆ ಜಮೆ ಆಗಲು ಹೀಗೆ ಮಾಡಿ.!
ಕಳೆದ ಜುಲೈ ತಿಂಗಳಲ್ಲಿ ಈ ರೀತಿ ಹೆಚ್ಚುವರಿ ಅಕ್ಕಿ ಹಣವನ್ನು DBT ಮೂಲಕ ಆ ಕುಟುಂಬದ ಮುಖ್ಯಸ್ಥನ ಖಾತೆಗೆ ವರ್ಗಾವಣೆ ಮಾಡುತ್ತಿದೆ. ಆದರೆ ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಯಾರ ಖಾತೆಗೂ ಜಮೆ ಆಗಿಲ್ಲ ಮತ್ತು ಡಿಸೆಂಬರ್ ತಿಂಗಳಿನ ಹಣವು ಈಗ ಹಂತ ಹಂತವಾಗಿ ಫಲಾನುಭವಿಗಳ ಖಾತೆ ತಲುಪುತ್ತಿದೆ.
ಇದರ ಕುರಿತು ಸಹಕಾರ ಸ್ಪಷ್ಟತೆ ನೀಡಿದ್ದು ಫೆಬ್ರವರಿ ಅಂತ್ಯದೊಳಗೆ ಸಂಪೂರ್ಣವಾಗಿ ಜನವರಿ ತಿಂಗಳ ಅನ್ನಭಾಗ್ಯ ಯೋಜನೆ ಹಣ ಎಲ್ಲ ಫಲಾನುಭವಿಗಳ ಖಾತೆಗೂ ತಲುಪಲಿದೆ. ಆದರೆ ಅದಕ್ಕೆ ಮೂರು ಪ್ರಮುಖ ಕಂಡಿಷನ್ ಗಳು ಇವೆ. ಇವುಗಳನ್ನು ಪೂರೈಸುವ ಮಾತ್ರ ಅನ್ನಭಾಗ್ಯ ಯೋಜನೆಗೆ ಅಕ್ಕಿ ಹಣ ಪಡೆಯಲಿದ್ದಾರೆ ಎಂದು ತಿಳಿಸಿದೆ. ಆ ಕಂಡಿಷನ್ ಗಳು ಹೀಗಿವೆ ನೋಡಿ.
* ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಜೋಡಣೆ ಆಗಿರಬೇಕು
* ರೇಷನ್ ಕಾರ್ಡ್ ನಲ್ಲಿ ಎಲ್ಲ ಸದಸ್ಯರ ಇ-ಕೆವೈಸಿ ಆಗಿರಬೇಕು
* BPL ಕಾರ್ಡ್ ಹೊಂದಿದ್ದು ನಿಮ್ಮ ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಪಾವತಿದಾರರಾಗಿದ್ದರೆ ಆ ಕಾರ್ಡ್ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ ಬರುವುದಿಲ್ಲ.
ಈ ಸುದ್ದಿ ಓದಿ:-ಇವರ ಸಂಪಾದನೆ ಕೇಳಿ ಸರ್ಕಾರಿ ಉದ್ಯೋಗದವರೇ ಶಾಕ್ ಆದ್ರು. ಬಿಸಿನೆಸ್ ಶುರು ಮಾಡಿದ ಮೊದಲ ತಿಂಗಳೇ ರೂ..2,35,000 ದುಡಿಮೆ, ದಿನಕ್ಕೆ ರೂ.7,500 ಗ್ಯಾರೆಂಟಿ.!
* 2016ರ ಬಿಪಿಎಲ್ ರೇಷನ್ ಕಾರ್ಡ್ ಮಾನದಂಡ ಮೀರಿ (7 ಎಕರೆ ಜಮೀನು ಹೊಂದಿರುವುದು, ಕುಟುಂಬದಲ್ಲಿ ಯಾರಾದರೂ ಸರ್ಕಾರಿ ಉದ್ಯೋಗಿಗಳಾಗಿರುವುದು ಅಥವಾ ವೈಟ್ ಬೋರ್ಡ್ ಕಾರನ್ನು ಹೊಂದಿರುವುದು) ರೇಷನ್ ಕಾರ್ಡ್ ಹೊಂದಿದ್ದರೆ ಅವರಿಗೂ ಅನ್ನ ಭಾಗ್ಯ ಯೋಜನೆ ಹಣ ಬರುವುದಿಲ್ಲ.