ಕೃಷಿ (Agriculture) ಮಾಡಲು ರೈತರಿಗೆ (farmers) ಬಂಡವಾಳದ ಅವಶ್ಯಕತೆ ಇದ್ದೇ ಇದೆ. ಕೃಷಿಯಲ್ಲಿ ಉಳುಮೆ ಕೆಲಸದಿಂದ ಹಿಡಿದು ಸಾಗಣೆವರೆಗೆ ಪ್ರತಿ ಹಂತದಲ್ಲೂ ಕೂಡ ರೈತನಿಗೆ ಸಾಕಷ್ಟು ಖರ್ಚುಗಳು ಇರುತ್ತವೆ. ಭಾರತವು ಅಭಿವೃದ್ಧಿಶೀಲ ರಾಷ್ಟ್ರ ಮತ್ತು ಇಲ್ಲಿನ ಕೃಷಿ ಭೂಮಿಯು ತುಂಡು ತುಂಡಾಗಿ ಹಂಚಿಕೆ ಆಗಿರುವುದರಿಂದ ಬಹುತೇಕ ಪ್ರಮಾಣದಲ್ಲಿ ಇರುವ ಎಲ್ಲಾ ರೈತರು ಕೂಡ ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದಾರೆ.
ಈ ರೈತರ ಬಳಿ ಕೃಷಿಗೆ ಸ್ವಂತವಾಗಿ ಬಂಡವಾಳ ಹೂಡುವಂತಹ ಶಕ್ತಿಯು ಇಲ್ಲ ಅದಕ್ಕಾಗಿ ಸಾಲವನ್ನೇ ನಿರೀಕ್ಷಿಸುತ್ತಿರುತ್ತಾರೆ. ವ್ಯವಸಾಯವು ದೇಶದ ಆರ್ಥಿಕ ಬೆನ್ನೆಲುಬು ಮಾತ್ರವಲ್ಲದೆ ನಮ್ಮೆಲ್ಲರ ಆಹಾರದ ಮೂಲವು ಕೂಡ. ಇಂತಹ ಆಹಾರವನ್ನು ಸೃಷ್ಟಿಸುವ ರೈತನು ಸಾಲದ ಸುಳಿಯಲ್ಲಿ ಸಿಲುಕಬಾರದು ಎನ್ನುವ ಉದ್ದೇಶದಿಂದ ಸರ್ಕಾರವು ಕೃಷಿಗೆ ಅನೇಕ ಯೋಜನೆಗಳನ್ನು ಕೈಗೊಂಡಿದೆ.
ಬ್ಯಾಂಕ್ ಗಳು ಕೂಡ ರೈತನ ಕಷ್ಟ ಅರಿತು ಕೃಷಿ ಉದ್ದೇಶಕ್ಕಾಗಿ ಕಡಿಮೆ ಸಾಲ ನೀಡುತ್ತಿವೆ. ಇಂತಹ ಸಾಲಗಳನ್ನು ಪಡೆಯಲು ರೈತರು ತಮ್ಮ ಹೆಸರಿನಲ್ಲಿ ಭೂಮಿ ದಾಖಲೆ ಹಾಗೂ RTC ಇನ್ನಿತರ ಪ್ರಮಾಣಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. ಈ ರೀತಿ ಪಡೆದುಕೊಂಡ ಕೃಷಿ ಸಾಲಕ್ಕೆ ಕಡಿಮೆ ಬಡ್ಡಿ ಇರುವುದಲ್ಲದೆ ಕೆಲವೊಮ್ಮೆ ಬಡ್ಡಿಮನ್ನ ಕೆಲವೊಮ್ಮೆ ಸಾಲ ಮನ್ನ ಕೂಡ ಮಾಡಲಾಗುತ್ತದೆ.
ಈ ಸುದ್ದಿ ಓದಿ:- ಸಿಜೇರಿಯನ್ ಹೆರಿಗೆಗಳ ಕರಾಳ ಮುಖ ತೆರೆದಿಟ್ಟ ವೈದ್ಯೆ.! ಯಾವ ಕಾರಣಗಳಿಂದ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿವೆ ಗೊತ್ತಾ.?
ಕೃಷಿ ಸಹಕಾರ ಸಂಘಗಳಲ್ಲಿ ಕೂಡ ರೈತರಿಗೆ ಬಡ್ಡಿ ರಹಿತವಾಗಿ ಅಲ್ಪಾವಧಿ ಮತ್ತು ಕಡಿಮೆ ಬಡ್ಡಿಗೆ ಮಧ್ಯಮವಾದಿ ಸಾಲಗಳನ್ನು ದೇಶದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀಡಲಾಗುತ್ತದೆ. ಈ ರೀತಿ ಸಹಕಾರಿ ಸಂಘಗಳಲ್ಲಿನ ಸಾಲವು ಕೂಡ ಅನೇಕ ಬಾರಿ ಮನ್ನವಾಗಿದೆ. ರೈತನಿಗೆ ಯಾವಾಗ ಅತಿವೃಷ್ಟಿ ಅಥವಾ ಅನಾವೃಷ್ಟಿ ಕಾರಣದಿಂದಾಗಿ ಸಮಸ್ಯೆ ಎದುರಾಗುತ್ತದೆ ಇಂತಹ ಸಂದರ್ಭಗಳಲ್ಲಿ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಂಡು ಈ ರೀತಿ ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕ್ ಸಾಲ ಮನ್ನಾ ಮಾಡಿದೆ.
ಈಗ ನಮ್ಮ ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿರುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ 2024-25ರ ರಾಜ್ಯ ಸರ್ಕಾರದ ಬಜೆಟ್ ಮಂಡಣೆಯಾದ ಸಮಯದಲ್ಲಿ ಸಾಲ ಮನ್ನದ ಬಗ್ಗೆ ನಿರೀಕ್ಷಿಸಲಾಗಿತ್ತು. ಅದಕ್ಕೂ ಮುನ್ನವೇ ಸಹಕಾರ ಸಂಘಗಳನ್ನು ಮಧ್ಯಮಾವಧಿ ಸಾಲದ ಮೇಲಿನ ಬಡ್ಡಿಯನ್ನು ಕಂಡಿಶನ್ ಮೇಲೆ ಸರ್ಕಾರವು ಮನ್ನ ಮಾಡುವುದಾಗಿ ಘೋಷಿಸಿದೆ.
ಈಗ ಎಲ್ಲರ ಚಿತ್ತ ಕೇಂದ್ರ ಸರ್ಕಾರದತ್ತ (Central Government) ಇದೆ ಯಾಕೆಂದರೆ ಇನ್ನು ಕೆಲವೇ ತಿಂಗಳಗಳಲ್ಲಿ ಲೋಕಸಭಾ ಚುನಾವಣೆ (Parliment Election) ನಡೆಯಲಿದೆ, ಆದ್ದರಿಂದ ಇದರ ನಡುವೆ ದೇಶದ ಅನೇಕ ರಾಜ್ಯಗಳ ರೈತರು ಕೃಷಿ ಸಾಲಮನ್ನ ಮಾಡುವಂತೆ ಅಲ್ಲಿನ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡುತ್ತಿವೆ. ಈಗ ಇಂತಹ ಸಾಲ ಮನ್ನ ನಿರೀಕ್ಷೆಯಲ್ಲಿದ್ದ ರೈತರಿಗೆ ಸಮಾಧಾನಕರ ಸುದ್ದಿ ಒಂದನ್ನು ಸರ್ಕಾರ ತಿಳಿಸಿದೆ.
ಈ ಸುದ್ದಿ ಓದಿ:- ಸ್ವಂತ ಮನೆಯ ಕನಸು ಶೀಘ್ರವೇ ನೆರವೇರಬೇಕು ಎಂದರೆ ಭೂ ವರಹ ಸ್ವಾಮಿಯ ಈ ಪವರ್ ಫುಲ್ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ಸಾಕು.!
ಕೃಷಿ ಸಾಲ ಮನ್ನಕ್ಕಾಗಿ ಅತಿಹೆಚ್ಚಿನ ರೈತರಿಂದ ಅರ್ಜಿ ಬಂದ ಹಿನ್ನೆಲೆಯಲ್ಲಿ ಜಾರ್ಖಂಡ್ ಸರ್ಕಾರವು (Jharkhand Government) ಅಲ್ಲಿನ ರೈತರ ಕೃಷಿ ಸಾಲವನ್ನು ಮನ್ನಾ ಮಾಡಿದೆ. ರೂ.50 ಸಾವಿರದಿಂದ ರೂ.1 ಲಕ್ಷದವರೆಗೆ ಸಾಲ ಮಾಡಿರುವ ರೈತರ ಸಂಖ್ಯೆ 3 ಲಕ್ಷದವರೆಗೆ ಇದೆ. 1 ಲಕ್ಷದಿಂದ 2 ಲಕ್ಷದವರೆಗೆ ಸಾಲ ಮಾಡಿರುವ ರೈತರ ಸಂಖ್ಯೆಯು ಒಂದು ಲಕ್ಷ ಇದೆ ಈಗ ಇಂತಹ ರೈತರ 2 ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲು ಅಲ್ಲಿನ ಸರ್ಕಾರ ನಿರ್ಧಾರ ಮಾಡಿದೆ ಘೋಷಿಸಿದೆ.
ಈ ಸಾಲ ಮನ್ನಾ ಯೋಜನೆಗೆ ರಾಜ್ಯ ಸರ್ಕಾರ 500 ಕೋಟಿ ವೆಚ್ಚ ಮಾಡುತ್ತಿದೆ. ಇತರ ರಾಜ್ಯ ಸರ್ಕಾರಗಳು ಕೂಡ ಇದನ್ನು ಮಾದರಿಯಾಗಿ ತೆಗೆದುಕೊಂಡು ಅಥವಾ ಕೇಂದ್ರ ಸರ್ಕಾರವೇ ಈ ವರ್ಷ ದೇಹದ ಬಹುತೇಕ ರೈತರ ಪರಿಸ್ಥಿತಿ ಹಿತಕರವಿಲ್ಲದೆ ಇರುವ ಕಾರಣಕ್ಕಾಗಿ ರೈತರ ಸಾಲ ಮನ್ನಾ ಮಾಡಲಿದೆ ಎಂದು ರೈತರು ಕಾಯುತ್ತಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪವಾಗಲಿದೆಯೇ ಕಾದು ನೋಡೋಣ.