ದಿನನಿತ್ಯ ನಮ್ಮ ಕಣ್ಣೆದುರಿಗೆ ನಡೆಯುವ ಎಷ್ಟೋ ಘಟನೆಗಳಿಗೆ ಕಾರಣಗಳನ್ನು ನಾವು ತಿಳಿದುಕೊಂಡೇ ಇರುವುದಿಲ್ಲ. ಒಮ್ಮೆ ಈ ಬಗ್ಗೆ ಪ್ರಶ್ನಿಸಿದರು ಸರಿಯಾದ ಉತ್ತರ ಎಲ್ಲರಿಂದ ಸಿಗುವುದಿಲ್ಲ ಆದರೆ ಇವು ಬಹಳ ಕುತೂಹಲ ಉಂಟು ಮಾಡುತ್ತದೆ. ಅಂತಹ ಕೆಲವು ಸಂಗತಿಗಳ ಬಗ್ಗೆ ಈ ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದೇವೆ.
1. ನಮ್ಮ ಮೊಬೈಲ್ ಫೋನ್ ಬ್ಯಾಟರಿ 1% ತೋರಿಸುತ್ತಿದ್ದರು, ಅದು ತುಂಬಾ ಹೊತ್ತು ಬರುತ್ತದೆ ಆಗ ನಮಗೆ ಇದು ನಿಜವಾಗಿಯೂ 1% ಇತ್ತಾ ಎನ್ನುವ ಕುತೂಹಲ ಬರುತ್ತದೆ. ಇದರ ಅಸಲಿಯತ್ತು ಏನೆಂದರೆ ಫೋನ್ ಬ್ಯಾಟರಿ 1% ಬಂದರೆ ಫೋನ್ ಗೆ ಬಹಳ ಡ್ಯಾಮೇಜ್ ಆಗುತ್ತದೆ ಹಾಗಾಗಿ ಮ್ಯಾನಿಫ್ಯಾಕ್ಚರ್ ಮಾಡುವಾಗಲೇ ಈ ರೀತಿಯಾಗಿ ಡಿಸೈನ್ ಮಾಡಿರಲಾಗುತ್ತದೆ. ಅದು 1% ಬರುವ ಮೊದಲೇ 1% ಬಂದಿರುವ ರೀತಿ ನಿಮಗೆ ಸೂಚನೆ ಕೊಟ್ಟಾಗ ನೀವು ಚಾರ್ಜ್ ಗೆ ಹಾಕುತ್ತೀರಿ ಎಂದು ಈ ರೀತಿ ಮಾಡಲಾಗಿದೆ. ಆದರೂ ಇಷ್ಟು ಚಾರ್ಜ್ ಕಡಿಮೆ ಆಗುವವರೆಗೂ ಕೂಡ ಮೊಬೈಲ್ ಬಳಸುವುದು ಒಳ್ಳೆಯದಲ್ಲ.
2. ಸಾಮಾನ್ಯವಾಗಿ ಶೂಗಳ ಬಗ್ಗೆ ಎಲ್ಲರಿಗೂ ಕ್ರೇಜ್ ಇದ್ದೇ ಇರುತ್ತದೆ. ಬೆಳಗ್ಗೆ ಎದ್ದು ವಾಕಿಂಗ್ ಹೋಗುವುದರಿಂದ ಹಿಡಿದು ಫಂಕ್ಷನ್ ಗೆ ಹೋಗುವವರೆಗೆ ಅನೇಕ ರೀತಿಯ ಶೂಗಳನ್ನು ಬಳಸುತ್ತಿರುತ್ತೇವೆ. ಈಗ ಮಾರ್ಕೆಟ್ ನಲ್ಲಿ ಒಂದು ಸ್ಮಾರ್ಟ್ ಶೂ ಬಂದಿದೆ. ಇದರ ವಿಶೇಷತೆ ಏನೆಂದರೆ ಈ ಶೂ ಹಾಕಿಕೊಂಡು ವಾಕಿಂಗ್ ಮಾಡಿದರೆ ಉಂಟಾಗುವ ಕೈನೆಟಿಕ್ ಎನರ್ಜಿಯಿಂದ ಇದು ಚಾರ್ಜ್ ಆಗುತ್ತದೆ ನಂತರ USB ಕೇಬಲ್ ಬಳಸಿ ಮೊಬೈಲ್ ಫೋನ್ ಚಾರ್ಜ್ ಮಾಡಿಕೊಳ್ಳಬಹುದು ಅಷ್ಟೇ.
ಈ ಸುದ್ದಿ ಓದಿ:- ಸಿಜೇರಿಯನ್ ಹೆರಿಗೆಗಳ ಕರಾಳ ಮುಖ ತೆರೆದಿಟ್ಟ ವೈದ್ಯೆ.! ಯಾವ ಕಾರಣಗಳಿಂದ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿವೆ ಗೊತ್ತಾ.?
ಶೂ ಹಿಂದೆ ಮತ್ತು ಮುಂದೆ ಕ್ಯಾಮೆರಾಗಳು ಇರುತ್ತದೆ. ಇದನ್ನು ಬಳಸಿ ನೀವು ಸೆಲ್ಫಿ ತೆಗೆದುಕೊಳ್ಳಬಹುದು ಹಾಗೂ ನಿಮ್ಮ ಹಿಂದೆ ಮುಂದೆ ಆಗುವ ವಿಚಾರಗಳನ್ನು ಮೊಬೈಲ್ ಮೂಲಕ ರೆಕಾರ್ಡ್ ಮಾಡಿಕೊಳ್ಳಬಹುದು ಮತ್ತು ಆಂಟಿ ಥೆಫ್ಟ್ ಮೆಕಾನಿಸಂ ಕೂಡ ಇದ್ದು ಶೂ ಕಳ್ಳತನವಾದರೆ ನಿಮ್ಮ ಮೊಬೈಲ್ ಗೆ ನೋಟಿಫಿಕೇಶನ್ ಬರುತ್ತದೆ ಮತ್ತು ಶೂ ನಲ್ಲಿ ಅಲಾರಂ ಹೊಡೆದುಕೊಳ್ಳುತ್ತದೆ.
3. ನಾವು ಹಲವಾರು ಬಗ್ಗೆ ಕೋರ್ಟ್ ಕೇಸ್ ಬಗ್ಗೆ ಕೇಳಿರುತ್ತೇವೆ ಇದರಲ್ಲಿ ಬಹಳ ವಿಚಿತ್ರವಾದ ಕೇಸ್ ಬಗ್ಗೆ ಹೇಳುತ್ತಿದ್ದೇವೆ ನೋಡಿ.
* ವಿದೇಶದಲ್ಲಿ ವ್ಯಕ್ತಿಯೊಬ್ಬ ತನಗೆ ಹುಟ್ಟಿದ ಮಗು ದಂಪತಿಗಳಲ್ಲಿ ಯಾರೊಬ್ಬರ ಹೋಲಿಕೆಯು ಇಲ್ಲ ಎಂದು ಹೆಂಡತಿ ಮೇಲೆ ಕೇಸ್ ಹಾಕುತ್ತಾರೆ ನಂತರ DNA ಟೆಸ್ಟ್ ನಲ್ಲಿ ಮಗು ಆತನದ್ದೇ ಎಂದು ಸಾಬೀತಾಗುತ್ತದೆ ಆದರೂ ಹೆಂಡತಿ ಆತನಿಗೆ ದಂಡ ಕಟ್ಟಬೇಕಾಗುತ್ತದೆ.
ಯಾಕೆಂದರೆ ಹೆಂಡತಿ ಮದುವೆಗೆ ಮುನ್ನ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುತ್ತಾಳೆ, ಆಕೆಗೆ ಹುಟ್ಟಿದ ಮಗು ಅವಳು ಪ್ಲಾಸ್ಟಿಕ್ ಸರ್ಜರಿಗೂ ಮುಂಚೆ ಇದ್ದ ಹೋಲಿಕೆ ಹೊಂದಿರುತ್ತದೆ. ಈ ವಿಷಯ ಮುಚ್ಚಿಟ್ಟು ಮದುವೆಯಾಗಿದ್ದ ಕಾರಣ ಆಕೆಗೆ ದಂಡ ಬೀಳುತ್ತದೆ.
ಈ ಸುದ್ದಿ ಓದಿ:- ಸ್ವಂತ ಮನೆಯ ಕನಸು ಶೀಘ್ರವೇ ನೆರವೇರಬೇಕು ಎಂದರೆ ಭೂ ವರಹ ಸ್ವಾಮಿಯ ಈ ಪವರ್ ಫುಲ್ ಮಂತ್ರವನ್ನು ಪ್ರತಿದಿನ 21 ಬಾರಿ ಜಪಿಸಿ ಸಾಕು.!
* ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ನಲ್ಲಿ ಚೆನ್ನಾಗಿ ತಿಂದು ಬಿಲ್ ಪೇ ಮಾಡದೆ ಹೋಗಿರುತ್ತಾನೆ. ಪ್ರಶ್ನಿಸಿದ ಮ್ಯಾನೇಜರ್ ಮೇಲೆ ಹಲ್ಲೆ ಮಾಡಿ ಶೂನಿಂದ ಮುಖಕ್ಕೆ ಒದೆಯುತ್ತಾನೆ, ಮ್ಯಾನೇಜರ್ ಇದರಿಂದ ಗುಣ ಪಡಿಸಿಕೊಳ್ಳಲು ಸರ್ಜರಿಗೆ ಒಳಪಡಬೇಕಾಗುತ್ತದೆ. ಈ ಕಾರಣಕ್ಕಾಗಿ ಆತನ ಮೇಲೆ ಕೇಸ್ ಆಗಿ ಶಿಕ್ಷೆಯೂ ಆಗುತ್ತದೆ.
ಜೈಲಿನಿಂದ ಹೊರಬಂದ ಮೇಲೆ ಆತ ಇದಕ್ಕೆ NIKE ಕಂಪನಿ ಕಾರಣ ಎಂದು ನಾನು ಆತನಿಗೆ ಹಲ್ಲೆ ಮಾಡಿದಾಗ NIKE ಕಂಪನಿ ಶೂ ಧರಿಸದ್ದೆ ಅದರ ಮೇಲೆ ಇದು ಇಷ್ಟೊಂದು ಹಾನಿಕಾರಕ ಆಯುಧ ಎಂದು ಬರೆದಿರಲಿಲ್ಲ ಎಂದು ಕೇಸ್ ಹಾಕುತ್ತಾನೆ ಆದರೆ ಕೋರ್ಟ್ ನಲ್ಲಿ ಈ ಕೇಸ್ ಬಿದ್ದು ಹೋಗುತ್ತದೆ.
* ಸಾಮಾನ್ಯವಾಗಿ ನಮ್ಮ ಹೋಲಿಕೆ ಇರುವ ಮತ್ತೊಬ್ಬ ವ್ಯಕ್ತಿ ಇದ್ದರೆ ನಮಗೆ ಸಂತೋಷವಾಗುತ್ತದೆ ಅದರಲ್ಲೂ ಆತ ಸೆಲೆಬ್ರಿಟಿ ಆಗಿದ್ದರೆ ಸಂತೋಷಕ್ಕೆ ಪಾರವೇ ಇಲ್ಲ ಆದರೆ ಅಲೆನ್ ಹೆಕಾರ್ಡ್ ಎಂಬ ವ್ಯಕ್ತಿ ಖ್ಯಾತ ಬಾಸ್ಕೆಟ್ ಬಾಲ್ ಪ್ಲೇಯರ್ ಮೈಕಲ್ ಜೋಡರ್ನ್ ಮೇಲೆ ಕೇಸ್ ಹಾಕಿದ್ದಾನೆ. ಆತನಿಗೆ ತನ್ನ ಹೋಲಿಕೆ ಇರುವುದರಿಂದ ಎಲ್ಲಿ ಹೋದರು ಕೂಡ ಜನರು ಮುತ್ತಿಕೊಳ್ಳುತ್ತಾರೆ ಇದರಿಂದ ಬಹಳ ಹಿಂ’ಸೆಯಾಗುತ್ತಿದೆ ಎಂದು ಕೇಸ್ ಹಾಕಿದ್ದಾನೆ.