ಜನರಿಗೆ ಒಂದು ಅನುಮಾನವಿದೆ ಡಾಕ್ಟರ್ ಗಳು ತಮಗೆ ಹೆಚ್ಚು ದುಡ್ಡು ಬರಲಿ ಎನ್ನುವ ಕಾರಣಕ್ಕಾಗಿ ಸಿ-ಸೆಕ್ಷನ್ ಅಂದರೆ ಸಿಜೇರಿಯನ್ ಹೆರಿಗೆ ಮಾಡುತ್ತಾರೆ ಎಂದು. ಆದರೆ ಬೆಂಗಳೂರಿನ ಹಲವಾರು ಆಸ್ಪತ್ರೆಗಳಲ್ಲಿ ಸಿಜೇರಿಯನ್ ಹಾಗೂ ನಾರ್ಮಲ್ ಹೆರಿಗೆ ಎರಡಕ್ಕೂ ಕೂಡ ಒಂದೇ ರೀತಿಯ ಚಾರ್ಜಸ್ ಆಗುತ್ತದೆ ಜನಸಾಮಾನ್ಯರ ಈ ಅನುಮಾನದ ನೋಟದಿಂದ ಬೇಸತ್ತು ಹೋಗಿರುವ ವೈದ್ಯರು ಈ ರೀತಿ ಮಾಡಿದ್ದಾರೆ.
ಅಷ್ಟಕ್ಕೂ ಇತ್ತೀಚಿಗೆಗಳಲ್ಲಿ ಸಿಜೇರಿಯನ್ ಹೆರಿಗೆಗಳು ಹೆಚ್ಚಾಗುತ್ತಿರುವುದು ಏಕೆ? ಎಲ್ಲಾ ಪ್ರಕರಣಗಳಲ್ಲೂ ವೈದ್ಯರು ಸಿಜೇರಿಯನ್ ಸೂಚಿಸುತ್ತಾರೆಯೇ ಅಥವಾ ರೋಗಿಗಳು ಕೂಡ ಸಿಜೇರಿಯನ್ ಬಯಸುತ್ತಾರೆಯೇ ಇದೆಲ್ಲದಕ್ಕೂ ಉತ್ತರವನ್ನು ಬೆಂಗಳೂರಿನ ಹೆಸರಾಂತ ಆಸ್ಪತ್ರೆ ಮಹಿಳಾ ವೈದ್ಯರು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಿಜೇರಿಯನ್ ಪ್ರಕರಣಗಳು ಹೆಚ್ಚಾಗಲು ಮುಖ್ಯ ಕಾರಣ ಎಂದರೆ ಜನರು ಇನ್ನೂ ಸಹ ಮೂಢನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಟೆಕ್ನಾಲಜಿಯಲ್ಲಿ ಎಷ್ಟು ಅಡ್ವಾನ್ಸ್ ಆಗಿದ್ದರು ಅವರ ಮನಸ್ಸಿನಲ್ಲಿರುವ ಈ ರಾಶಿ ನಕ್ಷತ್ರ ಘಳಿಗೆ ಅದೃಷ್ಟ ಎನ್ನುವುದರ ಬಗ್ಗೆ ಇರುವ ಭಾವನೆಗಳು ಬದಲಾಗಿಲ್ಲ ಹಾಗಾಗಿ ಜ್ಯೋತಿಷಿಗಳ ಬಳಿಗೆ ಯಾವ ಸಮಯಕ್ಕೆ ಡೆಲಿವರಿ ಆದರೆ ಮಕ್ಕಳ ಚೆನ್ನಾಗಿರುತ್ತಾರೆ ಎಂದು ಬರೆಸಿಕೊಂಡು ಬಂದಿರುತ್ತಾರೆ ಮತ್ತು ಅವರೇ ವೈದ್ಯರಿಗೆ ಕೇಳುತ್ತಾರೆ.
ಈ ಸುದ್ದಿ ಓದಿ:- ಕ್ರಿಮಿನಲ್ ಕೇಸ್ ಇದ್ದರೆ ಪಾಸ್ ಪೋರ್ಟ್ ರಿನೀವಲ್ ಆಗಲ್ವಾ.?
ಈ ಟೈಮ್ ಚೆನ್ನಾಗಿದೆ ಇಷ್ಟರೊಳಗೆ ಡೆಲಿವೆರಿ ಮಾಡಿ ಕೊಟ್ಟು ಬಿಡಿ ಎಂದು ಹೇಳುತ್ತಾರೆ. ಅದರಲ್ಲೂ ಇತ್ತೀಚಿತ ದಿನಗಳಲ್ಲಿ ಈ ರೀತಿ ಕೇಸ್ ಗಳು ಹೆಚ್ಚಾಗಿವೆ. ಇದು ಮಾತ್ರವಲ್ಲದೆ ಡೆಲಿವರಿ ಡೇಟ್ ಕೊಟ್ಟಿರುವ ದಿನ ಪರೀಕ್ಷೆ ಇದೆ ಎನ್ನುವ ಕಾರಣಕ್ಕೆ ಹೆಣ್ಣುಮಕ್ಕಳು ಮುಂಚಿತವಾಗಿ ಮಾಡಿಸಿಕೊಳ್ಳುತ್ತಾರೆ ಅಥವಾ ಇನ್ನಿತರ ಕಾರಣಗಳಿಗಾಗಿ ಅವರೇ ಕೇಳಿ ಸಿಜೇರಿಯನ್ ಮಾಡಿಸಿಕೊಳ್ಳುತ್ತಾರೆ ಎನ್ನುವ ಶಾಕಿಂಗ್ ಉತ್ತರವನ್ನು ಕೂಡ ನೀಡಿದ್ದಾರೆ.
ಈಗ ಎಲ್ಲರೂ ಕೂಡ ಬಹಳ ಆರಾಮಾಗಿ ಬೆಳೆಯುತ್ತಿದ್ದಾರೆ. ಆಗಿನ ಕಾಲದವರಂತೆ ಆರೇಳು ಮಕ್ಕಳು ಹೆರುವ ಶಕ್ತಿ ಹಾಗೂ ಆಸಕ್ತಿ ಯಾರಿಗೂ ಇಲ. ಲ ಹಾಗಾಗಿ ಹೆರಿಗೆ ಸರಾಗವಾಗಲಿ ನೋವು ತಿನ್ನಲು ಆಗಲ್ಲ ಎಂದು ಅವರೇ ಕೇಳುವುದರಿಂದ ಮಾಡುತ್ತಿದ್ದೇವೆ. ಇನ್ನು ಕೆಲವು ಕೇಸ್ ಗಳಲ್ಲಿ ಖಂಡಿತವಾಗಿಯೂ ನಾವು ಕೂಡ ನಾವೇ ಸಜೆಸ್ಟ್ ಮಾಡುತ್ತೇವೆ.
ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರಿಗೆ ತಡವಾಗಿ ಮದುವೆ ಆಗುತ್ತಿರುವುದು ಮತ್ತು PCOS ಅಂತಹ ಸಮಸ್ಯೆಗಳಿಂದ ಮಕ್ಕಳಾಗುವುದು ವಿಳಂಬವಾಗುತ್ತಿದೆ. ಬಹಳ ಅಪರೂಪಕ್ಕೆ ಮಕ್ಕಳಾಗುವವರಿಗೆ ಹೆರಿಗೆ ಸಮಯದಲ್ಲಿ ರಿಸ್ಕ್ ಆಗಬಾರದು ಎನ್ನುವ ಮುಂಜಾಗ್ರತೆಯಿಂದಾಗಿ ಆ ಮಗುವನ್ನು ಉಳಿಸಲೇಬೇಕಾದ ಉದ್ದೇಶದಿಂದ ಅಥವಾ ಯಾವುದೋ ಒಂದು ಪ್ರಕರಣದಲ್ಲಿ ತಾಯಿ ಹಾಗೂ ಮಗುವಿಗೆ ಸಮಸ್ಯೆ ಇದೆ ಎಂದು ಕಂಡು ಬಂದಾಗ ನಾವೇ ಸಿಜೇರಿಯನ್ ಸಜೆಶನ್ ಮಾಡುತ್ತೇವೆ.
ಈ ಸುದ್ದಿ ಓದಿ:-ಆಸ್ತಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ.! ಮನೆ, ಜಮೀನು, ಸೈಟ್ ಇನ್ನಿತರ ಆಸ್ತಿ ಇರೋರು ತಪ್ಪದೆ ನೋಡಿ.!
ಇನ್ನು ಕೆಲವು ಸಂದರ್ಭಗಳಲ್ಲಿ ರಿಸ್ಕ್ ಇದೆ ಎಂದು ಗೊತ್ತಾಗುತ್ತದೆ ನಾರ್ಮಲ್ ಮಾಡಿ ಕೊನೆ ಘಳಿಗೆಯಲ್ಲಿ ಹೇಗಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಫೋರ್ಸ್ ನಿಂದ ಮಕ್ಕಳಿಗೆ ಬುದ್ಧಿಮಾಂದ್ಯತೆ ಅಥವಾ ಕೈ ಕಾಲು ಹೂನು ಆಗಬಹುದು ಹಾಗಾಗಿ ಇದಕ್ಕೆ ಭಯಪಟ್ಟು ಕೆಲವರು ನಾರ್ಮಲ್ ಆಗುವ ಸಾಧ್ಯತೆ ಇದ್ದರೂ ಹೆದರಿ ಸಿಜೇರಿಯನ್ ಮಾಡಿಸಿಕೊಳ್ಳುತ್ತಾರೆ.
ಡೆಲಿವರಿಯಲ್ಲಿ ಹೀಗೆ ಆಗುತ್ತದೆ ಎಂದು ಹೇಳಲು ಆಗುವುದಿಲ್ಲ, ಏನು ಕೆಲಸ ಮಾಡದೆ ಇದ್ದವರಿಗೆ ಕೂಡ ನಾರ್ಮಲ್ ಆಗುತ್ತದೆ ಎಲ್ಲವೂ ಚೆನ್ನಾಗಿದ್ದವರಿಗೆ ಸಿ-ಸೆಕ್ಷನ್ ಮಾಡಬೇಕಾಗಿ ಬರುತ್ತದೆ. ಆದರೆ ವೈದ್ಯರನ್ನು ನಂಬಿ ಕೊನೆಯಲ್ಲಿ ವೈದ್ಯರ ಮೇಲೆ ದೂರು ಹೇಳಬೇಡಿ. ದುಡ್ಡಿನ ಕಾರಣಕ್ಕಾಗಿ ಯಾವ ವೈದ್ಯರು ಹೀಗೆ ಮಾಡುವುದಿಲ್ಲ.
ನಾರ್ಮಲ್ ಡೆಲಿವರಿ ಮಾಡಲು ವೈದ್ಯರಿಗೆ ಹೆಚ್ಚು ಟೆನ್ಶನ್ ಇರುತ್ತದೆ ನಾರ್ಮಲ್ ಆಗುವವರಿಗೆ 2-3 ದಿನಗಳ ಕಾಲ ಮಗು ಹಾಗೂ ತಾಯಿಯ ಆರೋಗ್ಯ ಹೇಗಿದೆ ಎನ್ನುವುದನ್ನು ಕ್ಷಣ ಕ್ಷಣಕ್ಕೂ ಅಬ್ಸರ್ವ್ ಮಾಡಬೇಕು. ಸಿಜೇರಿಯನ್ ನಲ್ಲಿ ಒಂದು ಗಂಟೆ ಒಳಗೆ ಆಪರೇಷನ್ ಮುಗಿಯುತ್ತದೆ ಸಾಧ್ಯವಾದರೆ ಸಿಜರ್ ಗಿಂತ ನಾರ್ಮಲ್ ಹೆಚ್ಚು ಚಾರ್ಜಸ್ ಮಾಡಿ ನಮ್ಮ ಮೇಲೆ ಬರುವ ಅಪವಾದ ತಪ್ಪುತ್ತದೆ ಎನ್ನುತ್ತಾರೆ ವೈದ್ಯರು.