ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ಅಪ್ಡೇಟ್ ಇದೆ. ಅದರಲ್ಲೂ ಮಹಾನಗರಗಳಲ್ಲಿ ವಾಸ್ತವಿದ್ದು ನೀವೇನಾದರೂ ಗೊತ್ತಿದ್ದೋ ಗೊತ್ತಿಲ್ಲದೆಯೋ ಬಿ-ಖಾತಾ ಆಸ್ತಿಗಳನ್ನು ಖರೀದಿಸಿದ್ದರೆ ಅಂತಹವರಿಗೆ ಇದು ಸಮಾಧಾನಕರ ಸುದ್ದಿಯಾಗಿದೆ. ಯಾಕೆಂದರೆ ಎ-ಖಾತಾ ಎನ್ನುವುದು ಈಗಾಗಲೇ ಸರ್ಕಾರದಿಂದ ಸರ್ಟಿಫೈಡ್ ಆಗಿದ್ದಾಗಿರುತ್ತದೆ ಆದರೆ ಬಿ-ಖಾತೆ ಎನ್ನುವುದಕ್ಕೆ ಸರ್ಕಾರದಿಂದ ಸಂಪೂರ್ಣ ಅನುಮತಿ ಇರುವುದಿಲ್ಲ, ನಾನ ರೀತಿಯ ಲಿಟಿಗೇಷನ್ ಗಳು ಇರುತ್ತವೆ.
ಇವನ್ನು ರೆವೆನ್ಯೂ ಸೈಟ್ಗಳು ಅಥವಾ ಡಿಸಿ ಕನ್ವರ್ಟ್ ಸೈಟ್ಗಳು ಹೀಗೆ ಸೇಲ್ ಮಾಡುವಾಗ ನಾ ಕಾರಣಕೊಟ್ಟು ಸೇಲ್ ಮಾಡಿಬಿಟ್ಟಿರುತ್ತಾರೆ ಆದರೆ ಖರೀದಿಸಿದವರಿಗೆ ಅಥವಾ ಈ ರೀತಿಯ ಆಸ್ತಿ ಖರೀದಿ ಮಾಡಿದವರಿಗೆ ಯಾವಾಗಲೂ ಆತಂಕ ಇದ್ದೇ ಇರುತ್ತದೆ. ಈಗ ಅಂತಹವರಿಗೆ ಒಂದು ಗುಡ್ ನ್ಯೂಸ್ ಇದೆ.
ಬಿ-ಖಾತೆಯ ಆಸ್ತಿಗಳನ್ನು ಹೊಂದಿರುವವರಿಗೆ ಇರುವ ಒಂದು ಭ’ಯವೇನೆಂದರೆ, ಸರ್ಕಾರ ಯಾವಾಗ ಬೇಕಾದರೂ ನೋಟಿಸ್ ಕೊಟ್ಟು ಅಥವಾ ನೋಟಿಸ್ ಕೊಟ್ಟದೆಯೋ ಈ ಪ್ರಾಪರ್ಟಿಗಳನ್ನು ಡೆಮೊಲಿಶ್ ಮಾಡಬಹುದು ಅಥವಾ ಇದನ್ನು ಮಾರಾಟ ಮಾಡಲು ಕೂಡ ಸಾಧ್ಯವಾಗುವುದಿಲ್ಲ.
ಈ ಸುದ್ದಿ ಓದಿ:- ಬರ ಪರಿಹಾರ ಹಣ ಜಮೆ ಆಗದ ರೈತರು ಕೂಡಲೇ ಈ ಕೆಲಸ ಮಾಡಿ.! ನಿಮ್ಮ ಖಾತೆಗೆ ಹಣ ಬರುತ್ತೆ.!
ಈಗಾಗಲೇ ಅನೇಕ ಬಾರಿ ಸರ್ಕಾರ ಇಂತಹ ಆಸ್ತಿಗಳನ್ನು ಅನಧಿಕೃತ ಎಂದು ಘೋಷಿಸಿ ತೆರವುಗೊಳಿಸಲು ಕ್ರಮ ಕೈಗೊಂಡಿದೆ. ಆದರೆ ಇನ್ನು ಕೆಲವು ಬಾರಿ ಇದು ಎರಡು ಕಡೆವರೆಗೂ ಲಾಸ್ ಆಗುವುದರಿಂದ ಅಕ್ರಮ ಸಕ್ರಮದಡಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕೊಟ್ಟಿದ್ದು ಇದೆ.
ಈಗ ಅದೇ ರೀತಿಯ ಅವಕಾಶವನ್ನು ಮತ್ತೊಮ್ಮೆ ನೀಡಲು ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಯುತ್ತಿದೆ ಯಾಕೆಂದರೆ ಡೆವಲಪ್ಮೆಂಟ್ ಆಗಿರುವ ಏರಿಯಾಗಳಲ್ಲಿ ಹೀಗೆ ಬಿ-ಖಾತೆಯ ಮನೆಗಳು ಇದ್ದರೆ ಅವುಗಳನ್ನು ಡೆಮಲಿಶ್ ಮಾಡಲು ಬಹಳ ಕಷ್ಟ ಆಗುತ್ತದೆ ಮತ್ತು ಕೆಲವೊಮ್ಮೆ ಸರ್ಕಾರದ ಮೇಲೆ ತಪ್ಪು ಅಭಿಪ್ರಾಯಗಳು ಮೂಡುವ ಸಾಧ್ಯತೆ ಇರುತ್ತದೆ.
ಯಾರೋ ಮೋ’ಸ ಮಾಡಿ ಮಾರಾಟ ಮಾಡಿರುವುದರಿಂದ ವಸತಿ ಉದ್ದೇಶದಿಂದ ಅದನ್ನೇ ನಂಬಿ ಸಾವಿರಾರು ಕುಟುಂಬಗಳು ಬದುಕುತ್ತಿರುವ ಉದಾಹರಣೆಯು ಕೂಡ ಇದೆ. ಈಗ ಇಂತಹ ಆಸ್ತಿಗಳಿಗೆ ಸಕ್ರಮ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡುತ್ತಿದೆ. ಮೊದಲಿಗೆ ಮನೆಗಳಿಗೆ ವಿದ್ಯುತ್ ವ್ಯವಸ್ಥೆ, ನೀರಿನ ವ್ಯವಸ್ಥೆ ಮತ್ತು ಒಳಚರಂಡಿ ವ್ಯವಸ್ಥೆಗಳನ್ನು ಕಲ್ಪಿಸಿಕೊಳ್ಳಲು ಅನುಮತಿ ನೀಡಿ ಆನಂತರ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳಲು ಪರ್ಮಿಷನ್ ನೀಡಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಆಗುತ್ತಿದೆ.
ಈ ಸುದ್ದಿ ಓದಿ:-ರೈತರಿಗೆ ಶುಭ ಸುದ್ದಿ ಸರ್ಕಾರದಿಂದ 2 ಲಕ್ಷದವರೆಗಿನ ಸಾಲ ಮನ್ನಾ.!
ರಾಜ್ಯ ಸರ್ಕಾರದ ಕಡೆಯಿಂದ ಈ ಬಗ್ಗೆ ಅಕ್ರಮ ಸಕ್ರಮ ಯೋಜನೆಗಂತೂ ಜಾರಿ ಆಗುವ ಸಾಧ್ಯತೆಗಳು ಕಾಣುತ್ತಿವೆ. ಇಂತಹ ಅವಕಾಶಗಳು ಸಿಕ್ಕರೆ ಖಂಡಿತವಾಗಿಯೂ ಇದನ್ನು ಮಿಸ್ ಮಾಡಿಕೊಳ್ಳಬೇಡಿ ತಕ್ಷಣವೇ ಸರ್ಕಾರದ ನಿಯಮಗಳಂತೆ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಒದಗಿಸಿ ಅಕ್ರಮ ಸಕ್ರಮಕ್ಕೆ ನೋಂದಾಯಿಸಿಕೊಳ್ಳಿ.
ಈ ರೀತಿ ಸರ್ಕಾರ ಬಿ-ಖಾತಾ ಆಸ್ತಿಗಳನ್ನು ಸಕ್ರಮ ಮಾಡಿಕೊಳ್ಳಲು ವುದರಿಂದ ಸರ್ಕಾರಕ್ಕೂ ಕೂಡ ನ’ಷ್ಟವಾಗುತ್ತದೆ, ಇದನ್ನು ತಪ್ಪಿಸಲು ಅವುಗಳಿಗೆ ಬೆಟರ್ ಮೆಂಟ್ ಚಾರ್ಜಸ್ ಎಂದು ಅಮೌಂಟ್ ಕಟ್ಟಿಸಿಕೊಂಡು ನಂತರ ಪ್ರತಿ ವರ್ಷವೂ ಕೂಡ ಟ್ಯಾಕ್ಸ್ ವಸೂಲಿ ಮಾಡಲಾಗುತ್ತದೆ.
ಸದ್ಯಕ್ಕಿಗ ನಮ್ಮ ಕರ್ನಾಟಕದಲ್ಲಿ 54.91 ಆಸ್ತಿಗಳು ಈ ರೀತಿ ಬಿ-ಖಾತಾ ಆಸ್ತಿಗಳಿವೆ, ಇವುಗಳಲ್ಲಿ 34.35 ಲಕ್ಷ ಆಸ್ತಿಗಳನ್ನು ಮಾತ್ರ ಎ-ಖಾತಾ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಸರ್ಕಾರದಲ್ಲಿ ಮೊದಲ ಸುತ್ತಿನ ಚರ್ಚೆ ನಡೆದಿದ್ದು ಮತ್ತೊಂದು ಸುತ್ತಿನಲ್ಲಿ ಎಷ್ಟು ಬೆಟರ್ ಮೆಂಟ್ ಚಾರ್ಜಸ್ ನಿರ್ಧಾರ ಮಾಡಬೇಕು ಎನ್ನುವುದನ್ನು ಬಗ್ಗೆ ತೀರ್ಮಾನಕ್ಕೆ ಬಂದು ಅಧಿಕೃತ ಪ್ರಕಟಣೆಯನ್ನು ಕೂಡ ಹೊರಡಿಸಲಿದೆ.