Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi) ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದ 1.10 ಕೋಟಿ ಮಹಿಳೆಯರಲ್ಲಿ 6-7 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆ ಮಾಹಿತಿಯಲ್ಲಿ ತೊಂದರೆಗಳಾಗಿರುವುದರಿಂದ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಮಹಿಳೆಯರ ಖಾತೆಗೂ ಸೆಪ್ಟೆಂಬರ್ ಅಂತ್ಯದ ಒಳಗೆ ಹಣ ವರ್ಗಾವಣೆ ಆಗಲಿದೆ ಎನ್ನುವ ಭರವಸೆಯನ್ನು ಸರ್ಕಾರ ನೀಡಿದೆ.
ಈಗಾಗಲೇ ಇವುಗಳ ಪೈಕಿ ಲಕ್ಷಾಂತರ ಮಹಿಳೆಯರು ತಮ್ಮ ಖಾತೆಗಳಿಗೆ ಹಣ ಪಡೆದು ಎರಡನೇ ಕಂತಿನ ಹಣಕ್ಕೆ ಕಾಯುತ್ತಿದ್ದಾರೆ. ಇನ್ನು ಬ್ಯಾಂಕ್ ಖಾತೆ ಸಮಸ್ಯೆ ಇದೆ ಎಂದು ಹೇಳಲಾದ ಆ ಮಹಿಳೆಯರ ಬ್ಯಾಂಕ್ ಖಾತೆಗಳು ಆಕ್ಟಿವ್ ಆದ ನಂತರ ಹಣ ತುಂಬಿಸಲಾಗುವುದು ಎನ್ನುವ ಭರವಸೆಯನ್ನು ಕೂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfare department) ಅಧಿಕಾರಿಗಳು ನೀಡಿದ್ದಾರೆ.
ಇದರ ನಡುವೆ ಈ ಯೋಜನೆ ಕುರಿತು ಇನ್ನು ಅನೇಕ ಮಹಿಳೆಯರಿಗೆ ಪ್ರಶ್ನೆಗಳಿವೆ. ಯಾಕೆಂದರೆ, ಹಲವರ ಬಳಿ ರೇಷನ್ ಕಾರ್ಡ್ ಇಲ್ಲ, ಕೆಲವರ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಮಹಿಳೆಯ ಹೆಸರು ಇರುವುದಿಲ್ಲ, ಇನ್ನು ಕೆಲವರ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗಿರುವುದಿಲ್ಲ ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್ ನೀಡಿರುವ ದಾಖಲೆಯಲ್ಲಿ ಹೆಸರಿನಲ್ಲಿ ವ್ಯತ್ಯಾಸವಿರುತ್ತದೆ.
ಇವರು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದಾ ಇವರಿಗೂ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರುತ್ತಿದೆಯಾ ಎನ್ನುವ ಕುರಿತು ಸ್ಪಷ್ಟತೆಯನ್ನು ಮತ್ತು ಈ ಕುರಿತು ಸರ್ಕಾರ ನೀಡಿರುವ ಹೊಸ ಆದೇಶವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ರೇಷನ್ ಕಾರ್ಡ್ (Ration card) ಮುಖ್ಯ ದಾಖಲೆಯಾಗಿ ಬೇಕೇ ಬೇಕು. ರೇಷನ್ ಕಾರ್ಡ್ ಇಲ್ಲದೆ ಇದ್ದರೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ. ರೇಷನ್ ಕಾರ್ಡ್ ಇಲ್ಲದೆ ಇದ್ದವರು ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಮೊದಲು ರೇಷನ್ ಕಾರ್ಡ್ ಪಡೆದು ನಂತರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಗೃಹಲಕ್ಷ್ಮಿ ಯೋಜನೆಗೆ ಯಾವುದೇ ಕಡೆಯ ದಿನಾಂಕ ನಿಗದಿಪಡಿಸಿಲ್ಲ, ಅರ್ಜಿ ಸಲ್ಲಿಸಿದ ಮುಂದಿನ ತಿಂಗಳಿಂದ ಹಣ ಬರುತ್ತದೆ ಎಂದು ಇಲಾಖೆ ಭರವಸೆ ನೀಡಿದೆ.
● ರೇಷನ್ ಕಾರ್ಡ್ ನಲ್ಲಿ ಮಹಿಳೆಯ ಹೆಸರು ಮುಖ್ಯಸ್ಥರ ಸ್ಥಾನದಲ್ಲಿ ಇಲ್ಲ (Women name in head of the family place) ಎಂದರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ, ಒಂದು ವೇಳೆ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿ ಈಗಾಗಲೇ ಹಿರಿಯ ಮಹಿಳೆ ಇದ್ದು ಅವರ ನಿ’ಧ’ನಗೊಂಡಿದ್ದರೆ ಬೇರೆ ಮಹಿಳೆ ಕೂಡ ಅರ್ಜಿ ಸಲ್ಲಿಸಲು ಆಗುವುದಿಲ್ಲ. ತಕ್ಷಣ ಅವರು ತಿದ್ದುಪಡಿ (Correction) ಮಾಡಿಸಿಕೊಳ್ಳಬೇಕು. ಇಲ್ಲದವರ ಹೆಸರನ್ನು ತೆಗೆದು ಹಾಕಿಸಬೇಕು ನಂತರ ಆ ಕುಟುಂಬದ ಬೇರೆ ಮಹಿಳೆ ಮುಖ್ಯಸ್ಥರ ಸ್ಥಾನಕ್ಕೆ ಹೆಸರು ಬದಲಾಯಿಸಿಕೊಂಡಾಗ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಬ್ಯಾಂಕ್ ವಿವರ ಪಡೆಯುತ್ತಿಲ್ಲ. ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ನೇರವಾಗಿ DBT ಮೂಲಕ ಹಣ ವರ್ಗಾವಣೆ ಮಾಡಲಾಗುತ್ತಿದೆ. ಹಾಗಾಗಿ ಖಾತೆಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ (Aadhar Seeding NPCI Mapping) ಆಗಿರದೆ ಇದ್ದರೆ ಮತ್ತು ಲಿಂಕ್ ಆಗಿದ್ದರು ಖಾತೆ ಆಕ್ಟಿವ್ ಆಗಿರದೇ ಇದ್ದರೆ ಆ ಮಹಿಳೆಯರಿಗೆ ಸಹಾಯಧನ ಸಿಗುವುದಿಲ್ಲ. ಜೊತೆಗೆ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಎಲ್ಲದರಲ್ಲೂ ಕೂಡ ಮಹಿಳೆಯ ಹೆಸರು ಒಂದೇ ತರ ಇರಬೇಕು. ಹೆಸರಿನಲ್ಲಿ ವ್ಯತ್ಯಾಸ, ಸ್ಪೆಲ್ಲಿಂಗ್ (Name diffrence in documents) ವ್ಯತ್ಯಾಸ ಇರಬಾರದು, ಈ ರೀತಿ ಇದ್ದವರು ಅರ್ಜಿ ಸಲ್ಲಿಸಿದರು ಹಣ ವರ್ಗಾವಣೆ ಸ್ಥಗಿತಗೊಳ್ಳಬಹುದು. ಹಾಗಾಗಿ ಈ ಸಮಸ್ಯೆ ಇದ್ದರೆ ತಕ್ಷಣವೇ ತಿದ್ದುಪಡಿ ಮಾಡಿಸಿಕೊಳ್ಳಿ.
● ಎಲ್ಲಾ ಮಾಹಿತಿ ಸರಿಯಿದ್ದು ಕೂಡ ಇನ್ನು ಗೃಹಲಕ್ಷ್ಮಿ ಯೋಜನೆ ಹಣ ತಲುಪಿಲ್ಲ ಎಂದರೆ ನಿಮ್ಮ ವ್ಯಾಪ್ತಿಗೆ ಬರುವ ಅಂಗನವಾಡಿ ಸಹಾಯಕಿ ಅಥವಾ ಕಾರ್ಯಕರ್ತೆ ಸಹಾಯದಿಂದ ನಿಮ್ಮ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟು ಈ ಕುರಿತು ಮನವಿ ಸಲ್ಲಿಸಿ ಸಮಸ್ಯೆ ಬಗೆ ಹರಿಸಿಕೊಳ್ಳಬಹುದು.