ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!

 

WhatsApp Group Join Now
Telegram Group Join Now

ಮನೆ (House) ಎನ್ನುವುದು ಪ್ರತಿಯೊಬ್ಬರ ಮೂಲಭೂತ ಅವಶ್ಯಕತೆ. ಸಣ್ಣದಾದರೂ ಪರವಾಗಿಲ್ಲ ಒಂದು ಸ್ವಂತ ಸೂರು ಇದ್ದರೆ ಸಾಕು ಎಂದು ಎಲ್ಲರೂ ಆಸೆ ಪಡುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು (government Schemes) ಕೂಡ ಗೃಹ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನೇಕ ಯೋಜನೆಗಳನ್ನು ಕೈಗೊಂಡು ವಸತಿರಹಿತರಿಗೆ ಸಹಾಯ ಮಾಡಿ ಪ್ರತಿಯೊಬ್ಬರಿಗೂ ಕೂಡ ಸ್ವಂತ ಮನೆ ಸೌಲಭ್ಯ ಸಿಗುವಂತೆ ನೆರವಾಗುತ್ತಿದೆ.

ಸರ್ಕಾರದ ಸಹಾಯ ಹಸ್ತದೊಂದಿಗೆ ಪ್ರತಿಯೊಬ್ಬರೂ ಅವರ ಸ್ವಂತ ಶ್ರಮದಿಂದ ಹಣ ಹೊಂದಿಸಿಕೊಂಡು ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮನೆ ನಿರ್ಮಾಣ ಮಾಡುವ ಹೊತ್ತಿಗೆ ಅದು ಜೀವಮಾನದ ಸಾಧನೆ ಎನಿಸಿ ಬಿಡುತ್ತದೆ. ಎಲ್ಲಾ ಕಚ್ಛಾ ವಸ್ತುಗಳ ಬೆಲೆಯು ದುಬಾರಿಯಾಗಿದೆ. ಸ್ವಂತ ಸೈಟು ಇದ್ದವರಿಗೆ ಮನೆ ಕಟ್ಟುವಾಗಿದೆ, ಇನ್ನು ಖಾಲಿ ನಿವೇಶನ ಇಲ್ಲದವರು ಅದನ್ನು ಖರೀದಿಸಿ ನಂತರ ಮನೆ ಕಟ್ಟುವುದು ದೊಡ್ಡ ಸಾಹಸವೇ ಸರಿ.

ಕಾಶಿಯಾತ್ರೆ ಮಾಡುವವರಿಗೆ ಸರ್ಕಾರದಿಂದ 7,500 ಸಹಾಯಧನ, ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!

ಇದಕ್ಕಾಗಿ ಕೆಲವರು ಸಾಲದ ಮೊರೆ ಕೂಡ ಹೋಗುತ್ತಾರೆ. ಸಾಲ ಮಾಡಿಯಾದರೂ ಸ್ವಂತ ಮನೆ ಕನಸನ್ನು ನನಸಾಗಿಸಿಕೊಳ್ಳುತ್ತಾರೆ. ಇನ್ನು ಕೆಲವರಿಗೆ ಮನೆ ಕಟ್ಟುವ ಅವಶ್ಯಕತೆ ಇರುತ್ತದೆ ಆದರೆ ಜಾಗ ಇಲ್ಲದ ಕಾರಣ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿ ವಾಸಿಸಲು ಶುರು ಮಾಡಿರುತ್ತಾರೆ. ಇದು ಸರ್ಕಾರಿ ಜಾಗವಾದ ಕಾರಣ ಆ ಜಾಗದ ಅವಶ್ಯಕತೆ ಬಿದ್ದಾಗ ಸರ್ಕಾರವು ಸರ್ಕಾರಿ ಭೂಮಿ ಅಕ್ರಮ ಒತ್ತುವರಿ ತೆರವುಗೊಳಿಸುತ್ತದೆ.

ಈ ರೀತಿಯ ಸುದ್ದಿಯನ್ನು ಸುದ್ದಿ ಪತ್ರಿಕೆಗಳಲ್ಲಿ ನಾವು ಓದುತ್ತಿರುತ್ತೇವೆ, ಮಾಧ್ಯಮಗಳಲ್ಲೂ ನೋಡಿರುತ್ತೇವೆ. ಆದರೆ ಈ ಬಾರಿ ಸರ್ಕಾರ ಈ ರೀತಿ ಇದಕ್ಕೆ ವಿರೋಧವಾದ ಆದೇಶ ಹೊರಡಿಸಿದೆ. ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಜನರಿಗೆ ಅವರ ಅಕ್ರಮ ಮನೆ ಸಕ್ರಮ ಮಾಡಿಕೊಳ್ಳಲು (Akrama Sakrama Scheme) ಅವಕಾಶ ನೀಡಿದೆ.

ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!

ಬಡವರಿಗೆ ಅಕ್ರಮ ಸಕ್ರಮ‌ ಯೋಜನೆಯಡಿ ಹಕ್ಕುಪತ್ರ ವಿತರಣೆ ಮಾಡಿ ಆ ಜಾಗವನ್ನು ಶಾಶ್ವತವಾಗಿ ಅವರಿಗೆ ಬಿಟ್ಟುಕೊಡಲು ಸರ್ಕಾರ ನಿರ್ಧಾರ ಮಾಡಿದೆ. ಆದರೆ ಎಲ್ಲರಿಗೂ ಕೂಡ ಈ ಅವಕಾಶ ನೀಡುವುದಿಲ್ಲ. ಜನರ ವಾರ್ಷಿಕ ಆದಾಯವನ್ನು ಪರಿಗಣಿಸಿ ಅವರ ದಾಖಲೆಗಳನ್ನು ನೋಡಿ ಯಾರು ಬಡವರು ನಿರ್ಗತಿಕರು ಆರ್ಥಿಕವಾಗಿ ಹಿಂದುಳಿದ್ದಾರೋ ಅವರನ್ನು ಗುರುತಿಸಿ ಹಕ್ಕುಪತ್ರ ನೀಡಲು ಸರ್ಕಾರ ಚಿಂತನೆ ನಡೆಸಿದೆ.

ಅಕ್ರಮ ಸಕ್ರಮ ಯೋಜನೆಗೆ ಮಾನದಂಡಗಳು:-

● 30 ವರ್ಷದಿಂದ ಸರ್ಕಾರಿ ಜಮೀನಿನಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಜನರಿಗೆ ಈ ಅಕ್ರಮ ಸಕ್ರಮ ಯೋಜನೆ ಅರ್ಜಿ ಹಾಕಬಹುದು.
● 20×30 ವಿಸ್ತೀರ್ಣದ ಮನೆಗಳಿಗೆ ಮಾತ್ರ ಹಕ್ಕುಪತ್ರ ತೆಗೆದು ಕೊಳ್ಳಲು ಅವಕಾಶ
● ನೋಂದಣಿ ಶುಲ್ಕವನ್ನು ಕೂಡ ಪಾವತಿ ಮಾಡಬೇಕು
1. SC / ST ವರ್ಗದವರು 2,500 ರೂ. ಶುಲ್ಕ
2. ಸಾಮಾನ್ಯ ವರ್ಗದವರಿಗೆ 5,000 ರೂ. ಶುಲ್ಕ.
● ಈ ಬಾರಿ ಯೋಜನೆಯಡಿ 10 ಸಾವಿರ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲು ಸರ್ಕಾರ ಮುಂದಾಗಿದೆ.

60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ತಿಂಗಳು 5,000 ಘೋಷಣೆ, ಈ ಯೋಜನೆಗೆ ಇಂದೇ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ.!

ಈ ರೀತಿ ಅಕ್ರಮ ಸಕ್ರಮ ಯೋಜನೆಗೆ ಅರ್ಜಿ ಸಲ್ಲಿಸಿ ಸರ್ಕಾರಿ ಜಮೀನುಗಳಲ್ಲಿ ಮನೆ ಕಟ್ಟಿಕೊಂಡಿರುವ ಬಡವರು ತಮ್ಮ ಹೆಸರಿಗೆ ಸೈಟು ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ಹಾಗೆ ಹೊರಡಿಸಿರುವ ಆದೇಶ ಪತ್ರದಲ್ಲಿ ತಿಳಿಸಿರುವ ಮಾನದಂಡಗಳನ್ನು ಪೂರೈಸುವುದು ಜೊತೆಗೆ ಸರ್ಕಾರದ ಕೇಳುವ ದಾಖಲೆ ಪತ್ರಗಳನ್ನು ಕೂಡ ಸಲ್ಲಿಸಬೇಕು. ಒಟ್ಟಿನಲ್ಲಿ ಸರಕಾರಿ ಜಮೀನಿನಲ್ಲಿ‌ ಅಕ್ರಮವಾಗಿ ಮನೆ ಕಟ್ಟಿದ ‌ಜನರಿಗೆ ಸಕ್ರಮ ಮಾಡಿಕೊಳ್ಳಲು ಇದೊಂದು ಸದಾವಕಾಶವಾಗಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now