ರೇಷನ್ ಕಾರ್ಡ್ ಗೆ (Ration card) ಅರ್ಜಿ ಸಲ್ಲಿಸುವಾಗ ಆ ಕುಟುಂಬದ ಸದಸ್ಯರಲ್ಲಿ (members) ಒಬ್ಬರ ಅಥವಾ ಕುಟುಂಬದ ಮುಖ್ಯಸ್ಥರ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು (Caste and Income Certificate) ದಾಖಲೆಯಾಗಿ ನೀಡಲೇಬೇಕು ಎನ್ನುವ ನಿಯಮ ಇದೆ. ಆದರೆ ಬಹಳ ಹಳೆಯ ರೇಷನ್ ಕಾರ್ಡ್ ಹೊಂದಿರುವವರು ಅವರ ರೇಷನ್ ಕಾರ್ಡಿಗೆ ಜಾತಿ ಪ್ರಮಾಣ ಪತ್ರ ಲಿಂಕ್ ಮಾಡದೆ ಇರಬಹುದು ಅಥವಾ ಇನ್ನು ಕೆಲವರ ರೇಷನ್ ಕಾರ್ಡ್ ಗಳಿಗೆ ನಾನಾ ಕಾರಣಗಳಿಂದ ಈ ರೀತಿ ಲಿಂಕ್ ಆಗಿಲ್ಲದೆ ಇರಬಹುದು.
ಆದರೆ ಸರ್ಕಾರದಿಂದ ಪಡಿತರ ಚೀಟಿ ಮೂಲಕ ಸಿಗುವ ಎಲ್ಲಾ ಸೌಲಭ್ಯಗಳು ಸಿಗಬೇಕು ಎಂದರೆ ಆ ರೇಷನ್ ಕಾರ್ಡ್ ಸರ್ಕಾರ ನಿಯಮಗಳಿಗೆ ಒಳಪಟ್ಟಿರಬೇಕು. ಈಗ ರೇಷನ್ ಕಾರ್ಡ್ ಮುಖ್ಯಸ್ಥರ ಖಾತೆಗೆ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ ಹಣವನ್ನು DBT ಮೂಲಕ ವರ್ಗಾವಣೆ ಮಾಡಲಾಗುತ್ತಿದೆ ಇದನ್ನು ಪಡೆಯಬೇಕು ಎಂದರು ಜಾತಿ ಪ್ರಮಾಣ ಪತ್ರವನ್ನು ರೇಷನ್ ಕಾರ್ಡ್ ಗೆ ಲಿಂಕ್ (Link) ಮಾಡಿರಬೇಕು.
ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿದವರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್.!
ಇನ್ನು ಸಹ ಈ ಪ್ರಕ್ರಿಯೆ ಪೂರ್ತಿಗೊಳಿಸದೆ ಇದ್ದವರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೆ ಇದನ್ನು ನ್ಯಾಯಬೆಲೆ ಅಂಗಡಿಗಳಲ್ಲಿ (Fairprice shop) ಹೋಗಿ ಮಾತ್ರ ಲಿಂಕ್ ಮಾಡಿಸಬಹುದು, ಪ್ರೈವೇಟ್ ಸೆಕ್ಟರ್ ಗೆ ಅನುಮತಿ ನೀಡಿಲ್ಲ. ಹಾಗಾಗಿ ನೀವು ಕೂಡ ನಿಮ್ಮ ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಆಗಿದಿಯೋ ಇಲ್ಲವೋ ಎಂದು ಚೆಕ್ ಮಾಡಿಕೊಳ್ಳಿ ಇಲ್ಲ ಎಂದರೆ ಈಗ ನಾವು ಹೇಳುವ ಈ ವಿಧಾನದ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಲಿಂಕ್ ಮಾಡಿಸಿ.
● ಮೊದಲಿಗೆ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.
● e-services ಕ್ಲಿಕ್ ಮಾಡಿ.
● Shop owner Module ಎನ್ನುವ ಆಪ್ಷನ್ ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ.
● ಜಿಲ್ಲಾವಾರು ಪ್ರತ್ಯೇಕ ಲಿಂಕ್ ಇರುತ್ತದೆ, ಅದರಲ್ಲಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಬೇಕು.
ಕಾಶಿಯಾತ್ರೆ ಮಾಡುವವರಿಗೆ ಸರ್ಕಾರದಿಂದ 7,500 ಸಹಾಯಧನ, ಬುಕ್ಕಿಂಗ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ.!
● ನಿಮ್ಮ ID ಮತ್ತು Password ಮೂಲಕ Login ಆಗಬೇಕು.
● ಮುಖ್ಯಮಾಹಿತಿ ಎನ್ನುವ ಆಪ್ಷನ್ ಇರುತ್ತದೆ, ಅದನ್ನು ಕ್ಲಿಕ್ ಮಾಡಿದರೆ ಅದರಲ್ಲಿ ಹಲವು ಸೇವೆಗಳ ವಿವರ ಇರುತ್ತದೆ.
● DBT ಪಡಿತರ ಚೀಟಿ ಫಲಾನುಭವಿಗಳಿಗೆ ಜಾತಿ ಲಿಂಕ್ ಮಾಡುವುದು ಎನ್ನುವ ಆಪ್ಶನ್ ಕೊನೆಯಲ್ಲಿ ಕಾಣುತ್ತದೆ. ಇದು ಕಳೆದ ಎರಡು ಮೂರು ದಿನಗಳಿಂದ ಮಾತ್ರ ಓಪನ್ ಆಗಿದೆ ಹಾಗೂ ಈ ಆಪ್ಷನ್ ಅನ್ನು ನ್ಯಾಯಬೆಲೆ ಅಂಗಡಿಗಳಿಗೆ ಮಾತ್ರವೇ ನೀಡಲಾಗಿದೆ.
● ಆಪ್ಷನ್ ಕ್ಲಿಕ್ ಮಾಡಿದಾಗ Linking of Cast Data against RC ಎಂಬ ಹೊಸ ಪೇಜ್ ಓಪನ್ ಆಗುತ್ತದೆ. ಅದರಲ್ಲಿ Enter RC Number ಎನ್ನುವ ಕಾಲಂ ನಲ್ಲಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಕಿ, Select Category ಎನ್ನುವ ಆಪ್ಷನ್ ನಲ್ಲಿ SC, ST, OTHERS ಎನ್ನುವ ಆಯ್ಕೆಗಳು ಇರುತ್ತದೆ ಅದರಲ್ಲಿ ನಿಮ್ಮ ವರ್ಗವನ್ನು ಸೆಲೆಕ್ಟ್ ಮಾಡಿ Go ಕ್ಲಿಕ್ ಮಾಡಿ.
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ, ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ ಇಲ್ಲಿದೆ ನೋಡಿ.!
● ಆಗ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಹೆಸರು ಐಡಿ ಸಂಖ್ಯೆ ಹಾಗೂ ಅದರ ಮುಂದೆ RD Certificate num. ಎನ್ನುವ ಆಪ್ಷನ್ ನೀಡಲಾಗಿರುತ್ತದೆ. ಅದರಲ್ಲಿ ಸದಸ್ಯರ ಜಾತಿ ಪ್ರಮಾಣ ಪತ್ರದಲ್ಲಿ ಇರುವ RD Num. ಅನ್ನು ಎಂಟ್ರಿ ಮಾಡಿ. ಕೊನೆಯಲ್ಲಿ Save ಎನ್ನುವ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಿದರೆ ರೇಷನ್ ಕಾರ್ಡ್ ಗೆ ಜಾತಿ ಪ್ರಮಾಣ ಪತ್ರ ಲಿಂಕ್ ಆಗುತ್ತದೆ ಆದ ತಕ್ಷಣವೇ ಸಕ್ಸಸ್ ಆಗಿರುವ ಬಗ್ಗೆ ಪಾಪ್ ಆಫ್ ಮೆಸೇಜ್ ಕೂಡ ಬರುತ್ತದೆ.