ಸರ್ಕಾರಿ ಜಮೀನು ಒತ್ತುವರಿ ಮಾಡಿದ ರೈತರ ಹೆಸರಿಗೆ ಜಮೀನು ವರ್ಗಾವಣೆ, ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಸರ್ಕಾರದಿಂದ ಅಧಿಕೃತ ಘೋಷಣೆ.

WhatsApp Group Join Now
Telegram Group Join Now

ಕರ್ನಾಟಕ ರಾಜ್ಯದ ಕಂದಾಯ ಸಚಿವರಾಗಿರುವಂತಹ ಆರ್ ಅಶೋಕ್ ಅವರು ಇಡೀ ರಾಜ್ಯದಾದ್ಯಂತ ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುತ್ತಿರುವಂತಹ ರೈತರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ದಾಖಲಿಸುವಂತಿಲ್ಲ ಎಂದು ಹೊಸ ಮಸೂದೆಯನ್ನು ಜಾರಿಗೆ ತರಲಾಗಿದೆ. ಜೊತೆಗೆ ಸರ್ಕಾರವು ಬಡ ರೈತರಿಗೆ ಕೊಟ್ಟಿರುವಂತಹ ಜಮೀನಿನಲ್ಲಿ ರೈತರು ಉಳುಮೆ ಮಾಡುತ್ತಿದ್ದರೆ ಅವರಿಗೆ ಈ ಜಮೀನಿ ನಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಉಪಯೋಗವಾಗಲಿ ಎನ್ನುವಂತೆ.

ಆ ರೈತರ ಹೆಸರಿಗೆ ಆ ಜಮೀನನ್ನು ವರ್ಗಾವಣೆ ಮಾಡಿ ಕೊಡುವ ಬಗ್ಗೆ ಮಹತ್ತರವಾದ ನಿರ್ಧಾರವನ್ನು ಕೈಗೊಂಡಿದ್ದು ರೈತರು ಸರ್ಕಾರ ಹೇಳುವಂತಹ ಈ ಒಂದು ಸರಳವಾದ ವಿಧಾನದೊಂದಿಗೆ ರೈತರ ತಮ್ಮ ಹೆಸರಿಗೆ ಈ ಜಮೀನನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಸರ್ಕಾರಿ ಜಾಗ ಅಥವಾ ಸರ್ಕಾರಿ ಜಾಗದಲ್ಲಿ ಮನೆ ಅಥವಾ ಸರ್ಕಾರಿ ಜಾಗದಲ್ಲಿ ಫ್ಲಾಟ್ ಹೀಗೆ ಯಾವುದೇ ರೀತಿಯ ಆಸ್ತಿಯನ್ನು ಅಕ್ರಮಿಸಿಕೊಂಡಿದ್ದರೆ. ಅಂತಹ ಬಡ ರೈತರಿಗೂ ಹಾಗೂ ಬಡ ಜನರಿಗೆ ಅವರ ಹೆಸರುಗಳಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಕೊಡಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿತ್ತು.

ರಾಜ್ಯದ ಕಂದಾಯ ಸಚಿವರಾದಂತಹ ಆರ್ ಅಶೋಕ್ ಅವರು ಈ ಬಗ್ಗೆ ಒಂದು ಸ್ಪಷ್ಟ ನಿರ್ಣಯವನ್ನು ಹೇಳಿದ್ದು. ಬಡವರು ತಮ್ಮ ಹೆಸರುಗಳಿಗೆ ಆಸ್ತಿಯನ್ನು ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ, ಆದರೆ ಈ ಸರ್ಕಾರಿ ಜಮೀನು ಅಥವಾ ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ. ಎನ್ನುವಂತಹ ಕಾರಣಕ್ಕಾಗಿ ಯಾವುದೇ ರೀತಿಯ ಕ್ರಿ.ಮಿ.ನ.ಲ್ ಕೇಸ್ ದಾಖಲಿಸುವಂತಿಲ್ಲ ಹಾಗೂ ಅವರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳುವಂತಿಲ್ಲ.

ಹಾಗಾದರೆ ಈ ದಿನ ಸರ್ಕಾರವು ಬಡವರಿಗೆ ತೆಗೆದುಕೊಂಡಿರುವಂತಹ ಈ ನಿರ್ಧಾರ ಸರಿಯೋ, ತಪ್ಪೋ, ಎನ್ನುವುದರ ಬಗ್ಗೆ ಈ ದಿನ ತಿಳಿಯುತ್ತಾ ಹೋಗೋಣ. ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುವಂತಹ ರೈತರ ವಿರುದ್ಧ ಯಾವುದೇ ರೀತಿಯ ಕ್ರಿಮಿನಲ್ ಕೇಸ್ ದಾಖಲು ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ತಿಳಿಸಿದ್ದಾರೆ. ಸರ್ಕಾರಿ ಜಮೀನುಗಳಲ್ಲಿ ಉಳುಮೆ ಮಾಡುವ ರೈತರನ್ನು ಕಾನೂನಿನ ಅಡಿ ಭೂಕಬಳಿಕೆ ದಾರರು ಎಂಬ ಕ್ರಿಮಿನಲ್ ಕೇಸ್ ದಾಖಲಿಸುತ್ತಿದ್ದು ಇದರಿಂದ ರೈತರು ಕೋರ್ಟ್ ಗೆ ಅಲೆಯುವಂತಾಗಿತ್ತು.

ಇದನ್ನು ತಡೆಯಲು ಕಾಯ್ದೆಗಳನ್ನು ಸಡಿಲ ಮಾಡಲಾಗಿದೆ, ರೈತರ ಮೇಲೆ ಭೂ ಒತ್ತುವರಿ ಕೇಸ್ ಹಾಕುವುದಿಲ್ಲ ಎಂದು ಹೇಳಿದ್ದಾರೆ. ಭೂ ಪರಿವರ್ತನೆ ಕಾಯ್ದೆ ನಿಯಮ ಸಡಿಲಿಕೆ ಮಾಡಲಾಗಿದೆ. ಡೀಮ್ಡ್ ಅರಣ್ಯದ ನಿಯಮವನ್ನು ಸಡಿಲಿಕೆ ಮಾಡಲಾಗಿದೆ. ರೈತರು ಉಳುಮೆ ಮಾಡಿಕೊಂಡು ಜೀವನವನ್ನು ಸಾಗಿಸುತ್ತಿದ್ದು ಕೆಲವು ಕಡೆ ಒತ್ತುವರಿಯಾಗಿರುತ್ತದೆ. ಹೀಗಾಗಿ ನಗರ ಪ್ರದೇಶದ ಜಾಗವನ್ನು ಹೊರತು ಪಡಿಸಿ ಉಳಿದೆಡೆ ರೈತರ ಮೇಲೆ ಯಾವುದೇ ರೀತಿಯ ಭೂ ಒತ್ತುವರಿ ಕೇಸ್ ದಾಖಲಿಸದಂತೆ ಸೂಚನೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಭೂ ಪರಿವರ್ತನೆಯನ್ನು ಮಾಡಿಸಿಕೊಳ್ಳಲು ನೋಂದಣಿಯಾದ ಏಳು ದಿನಗಳ ಒಳಗಾಗಿ ಪ್ರತಿಕ್ರಿಯೆಯನ್ನು ಪೂರ್ಣಗೊಳಿಸ ಲಾಗುವುದು ಎಂದು ಆದೇಶಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಮನೆಯನ್ನು ನಿರ್ಮಿಸಲು ಭೂ ಪರಿವರ್ತನೆಗಾಗಿ ತಿಂಗಳುಗಟ್ಟಲೆ ಅಲೆಯಬೇಕಾಗಿತ್ತು. ನಿಯಮ ಸರಳೀಕರಣ ಮಾಡಿ ಏಳು ದಿನಗಳಲ್ಲಿ ಭೂ ಪರಿವರ್ತನೆಯನ್ನು ಮಾಡಿಕೊಳ್ಳಲಾಗುವುದು. ಸರ್ಕಾರಿ ಜಮೀನುಗಳಲ್ಲಿ ಮನೆಯನ್ನು ನಿರ್ಮಿಸುವವರಿಗೆ ಜಾಗದ ಮಾಲೀಕತ್ವ 94 C ಅಡಿ ನೀಡಲಾಗುವುದು ಎಂದರು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now