ಭಾರತ ಸರ್ಕಾರದ ಅಂಗ ಸಂಸ್ಥೆಯಾದ ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ (Aadhar Card) ಕುರಿತಂತೆ ಕಳೆದ ವರ್ಷ ಮಾರ್ಚ್ ನಲ್ಲಿ ಒಂದು ನಿಯಮ ಹೇರಿದೆ. ಆಧಾರ್ ಜಾರಿಯಾಗಿ 10 ವರ್ಷಗಳು ಕಳೆದಿವೆ. ಈ 10 ವರ್ಷದ ಸಮಯದಲ್ಲಿ ಯಾರು ಒಮ್ಮೆಯೂ ಕೂಡ ತಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ (Aadhar Update) ಅಂತಹವರ ಆಧಾರ್ ಕಾರ್ಡ್ ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೂಡ ಎಚ್ಚರಿಕೆ ನೀಡಿದೆ.
ಸದ್ಯಕ್ಕೆ ಈಗ ಆಧಾರ್ ಕಾರ್ಡ್ ನಮ್ಮ ದೇಶದಲ್ಲಿ ಒಂದು ಅತ್ಯಗತ್ಯ ದಾಖಲೆ ಆಗಿದೆ ನಾವು ಪಾನ್ ಕಾರ್ಡ್, ಬ್ಯಾಂಕ್ ಅಕೌಂಟ್, ಶಾಲಾ ಅಂಕಪಟ್ಟಿ ಸೇರಿದಂತೆ ಇನ್ನಿತರ ಪ್ರಮುಖ ದಾಖಲಗಳಿಗೆಲ್ಲಾ ಆಧಾರ್ ಲಿಂಕ್ ಮಾಡಿಸಿರುತ್ತೇವೆ ಹೀಗೆ ನಮ್ಮ ದಿನನಿತ್ಯದ ಅದೆಷ್ಟೋ ಕೆಲಸ ಕಾರ್ಯಗಳಿಗೆ ನಮಗೆ ತಿಳಿಯದಂತೆ ಆಧಾರ್ ಬಳಕೆ ಮಾಡುತ್ತಿದ್ದೇವೆ. ನಾವು ಸರ್ಕಾರ ನಿಯಮದಂತೆ ನಡೆದುಕೊಳ್ಳದೆ ಇದ್ದಲ್ಲಿ ಇನ್ನು ಮುಂದೆ ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಲಿಂಕ್ ಆಗಿರುವ ಇನ್ಯಾವುದೇ ದಾಖಲೆಗಳನ್ನು ಕೂಡ ಬಳಸಲು ಆಗುವುದಿಲ್ಲ.
ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ಶಾಕಿಂಗ್ ನ್ಯೂಸ್.! ಇನ್ಮುಂದೆ ಇಂತವರಿಗೆ ಸರ್ಕಾರದಿಂದ ಯಾವುದೇ ಪ್ರಯೋಜನ ಸಿಗಲ್ಲ, ಎಲ್ಲಾ ಸೌಲಭ್ಯಗಳು ಬಂದ್
ಹಾಗಾಗಿ ತಪ್ಪದೆ ಸರ್ಕಾರದ ನಿಯಮದಂತೆ ಅಪ್ಡೇಟ್ ಮಾಡಿಸುವುದು ಬಹಳ ಒಳ್ಳೆಯದು. ಮೊದಲ ಬಾರಿಗೆ ಮೂರು ತಿಂಗಳು ಕಾಲಾವಕಾಶ ನೀಡಿದ ಸರ್ಕಾರವು ಡಿಸೆಂಬರ್ 18 2023ರ ವರೆಗೆ ಈ ಕಾಲಾವಕಾಶವನ್ನು ವಿಸ್ತರಿಸಿ ಮತ್ತೊಮ್ಮೆ ನಾಗರಿಕರಿಂದ ಮನವಿ ಕೇಳಿಬಂದ ಕಾರಣ ಮತ್ತೆ ಕೊನೆಯ ಬಾರಿ 14 ಮಾರ್ಚ್, 2024ರವರೆಗೆ ಆನ್ಲೈನಲ್ಲಿ UIDAI Website ನಲ್ಲಿ ಅಥವಾ ಆಫ್ ಲೈನ್ ನಲ್ಲಿ ಆಧಾರ್ ಕೇಂದ್ರಗಳಿಗೆ ಹೋಗಿ ಆಧಾರ್ ಅಪ್ಡೇಟ್ ಮಾಡಿಕೊಳ್ಳಲು ಅವಕಾಶ ನೀಡಿದೆ.
ಆಧಾರ್ ಕಾರ್ಡ್ ನಲ್ಲಿ ನಮ್ಮ ಹೆಸರು, ಜನ್ಮ ದಿನಾಂಕ, ಲಿಂಗ, ಸಂಪರ್ಕ ಸಂಖ್ಯೆ, ಇಮೇಲ್ ವಿಳಾಸ ನಮ್ಮ ಪ್ರಸ್ತುತ ಮತ್ತು ಶಾಶ್ವತ ವಿಳಾಸ ಭಾವಚಿತ್ರ ಸೇರಿದಂತೆ ಬಯೋಮೆಟ್ರಿಕ್ ಹಾಗೂ ಡಯಾಮೆಟ್ರಿಕ್ ದಾಖಲೆಗಳು ಇರುತ್ತವೆ. ಕಳೆದ 10 ವರ್ಷಗಳಲ್ಲಿ ಇವುಗಳಲ್ಲಿ ಯಾವುದಾದರೂ ಬದಲಾವಣೆ ಆಗಿರುತ್ತದೆ ಆಗದೆ ಇದ್ದರು ನಮ್ಮ ಮುಖ ಚಹರೆ ಮತ್ತು ಬಯೋಮೆಟ್ರಿಕ್ ದಾಖಲೆಗಳಲ್ಲಂತೂ ವ್ಯತ್ಯಾಸವಾಗಿರುತ್ತದೆ.ಹೀಗಾಗಿ ಅದನ್ನು ಅಪ್ಡೇಟ್ ಮಾಡಿಸುವುದು ಅನಿವಾರ್ಯ ಎನ್ನುವ ಕಾರಣದಿಂದ ಸರ್ಕಾರ ಈ ನಿಯಮ ಮಾಡಿದೆ.
ಈ ಸುದ್ದಿ ಓದಿ:- ಸ್ಟೇಟ್ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!
ಒಂದು ವೇಳೆ ಸರ್ಕಾರ ನೀಡಿರುವ ಅವಧಿ ಒಳಗೆ ನೀವು ಇದನ್ನು ಪೂರ್ತಿಗೊಳಿಸದೆ ಹೋದಲ್ಲಿ ನಂತರದ ದಿನಗಳಲ್ಲಿ ಆಧಾರ್ ಕಾರ್ಡ್ ಕ್ಯಾನ್ಸಲ್ ಆಗಿ ಮತ್ತೆ ಅದನ್ನು ಪಡೆದುಕೊಳ್ಳಲು ನೀವು ದಂಡವನ್ನು ಕೂಡ ಕಟ್ಟ ಬೇಕಾಗಬಹುದು ಅಥವಾ ಹೆಚ್ಚಿನ ಶುಲ್ಕವನ್ನು ನೀಡಿ ಆಧಾರ್ ರಿನೀವಲ್ ಮಾಡಿಸಬೇಕಾಗುತ್ತದೆ
ಸದ್ಯಕ್ಕೆ ಆಧಾರ್ ಕಾರ್ಡ್ ಮುಖ್ಯವಾಗಿರುವ ಅನೇಕ ಸಂಗತಿಗಳಲ್ಲಿ ಕರ್ನಾಟಕ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳನ್ನು (Gyaranty Schemes Amount) ಕೂಡ ಸೇರಿವೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆ ಹಣ DBT ಮೂಲಕ ವರ್ಗಾವಣೆ ಆಗುತ್ತಿದೆ. ನಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದ್ದಾಗ ಮಾತ್ರ ಈ ವರ್ಗಾವಣೆ ಸಾದ್ಯ.
ಈ ಸುದ್ದಿ ಓದಿ:- ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ, ಅರ್ಜಿ ಸಲ್ಲಿಸುವುದು ಹೇಗೆ ನೋಡಿ.!
ನೀವೇನಾದರೂ ಆಧಾರ್ ಕಾರ್ಡ್ ರಿನೀವಬಲ್ ಮಾಡದೇ ಇದ್ದರೆ ಆರು ತಿಂಗಳ ಹಣ ಪಡೆದಿದ್ದರು ಈಗ ಸಮಸ್ಯೆ ಎದುರಾಗಬಹುದು. ಆದ್ದರಿಂದ ಕೂಡಲೇ ಸರ್ಕಾರ ನಿಯಮದಂತೆ ಅಪ್ಡೇಟ್ ಮಾಡಿಸಿ. ಕಳೆದ ಹತ್ತು ವರ್ಷಗಳಲ್ಲಿ ಯಾವುದಾದರೂ ಒಂದು ಕಾರಣಕ್ಕಾಗಿ ತಿದ್ದುಪಡಿ ಮಾಡಿಸಿದ್ದರೆ ಇದರ ಅವಶ್ಯಕತೆ ಇರುವುದಿಲ್ಲ. ಕರ್ನಾಟಕ ಸರ್ಕಾರದಿಂದ ಈಗಾಗಲೇ 7ನೇ ಕಂತಿನ ಗೃಹಲಕ್ಷ್ಮಿ ಹಣವು ಬಿಡುಗಡೆಯಾಗಿದೆ ಮಾರ್ಚ್ 3ನೇ ವಾರದ ಒಳಗೆ ಸಂಪೂರ್ಣವಾಗಿ ಎಲ್ಲಾ ಅರ್ಹ ಫಲಾನುಭವಿಗಳಿಗೂ ಹಣ ತಲುಪಲಿದೆ ಎಂದು ಇಲಾಖೆ ತಿಳಿಸಿದೆ.