ಕರ್ನಾಟಕ ಸರ್ಕಾರ ನಾಲ್ಕನೇ ಗ್ಯಾರೆಂಟಿ ಕಾರ್ಡ್ (Guarantee Scheme) ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಜಾರಿಯಾಗಿದೆ. ಗೃಹಲಕ್ಷ್ಮಿ ಯೋಜನೆಯು ಕರ್ನಾಟಕದಲ್ಲಿ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬದ ಯಜಮಾನಿ ಮಹಿಳೆಯರ ಖಾತೆಗೂ ಕೂಡ ಪ್ರತಿ ತಿಂಗಳು 2000ರೂ. ಸಹಾಯಧನವನ್ನು ನೀಡುವ ಯೋಜನೆಯಾಗಿದೆ.
ಜುಲೈ 19 ರಿಂದ ಅರ್ಹ ಮಹಿಳೆಯರಿಗೆ ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಕೊಟ್ಟು ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಸರ್ಕಾರ ಸೂಚಿಸಿತ್ತು. ಅಂದಿನಿಂದ ಈವರೆಗೆ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಕಿ ಅಂಶದ ವರದಿ ನೀಡಿದೆ.
ಈ ಎಲ್ಲ ಮಹಿಳೆಯರು ಈಗ ಸರ್ಕಾರದ ಸಹಾಯಧನವನ್ನು ಪಡೆದಿದ್ದಾರೆ ಆಗಸ್ಟ್ 30 ರಂದು ಮೈಸೂರಿನ (Mysore) ಮಹಾರಾಜ ಕಾಲೇಜು ಅವರಣದಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಾಡಿನ ಲಕ್ಷಾಂತರ ಮಹಿಳೆಯರ ಸಮ್ಮುಖದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ (Gruhalakshmi amount transfer program launch) ನೀಡಲಾಗಿದೆ.
ಈ ಸಂಭ್ರಮವನ್ನು ನಾಡಿದ ವಿವಿಧ ಕಡೆ ಆಯಾ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಮತ್ತು ನಗರಸಭೆ ಮಟ್ಟದಲ್ಲೂ ಆಚರಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಮಹಿಳೆಯರ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡುವ ಡಿಜಿಟಲ್ ಬಟನ್ ಪ್ರೆಸ್ (Digital button press) ಮಾಡುತ್ತಿದ್ದಂತೆ ಇತ್ತ ರಾಜ್ಯದ ಲಕ್ಷಾಂತರ ಮಹಿಳೆಯರು ತಮ್ಮ ಖಾತೆಗೆ ಹಣ ವರ್ಗಾವಣೆ ಆಗುವ ಕುರಿತು ಕರ್ನಾಟಕ ಸರ್ಕಾರದ ವತಿಯಿಂದ ಅಭಿನಂದನೆಯ SMS ಸಂದೇಶ ಪಡೆದಿದ್ದಾರೆ.
UPI ಬಳಸುವವರಿಗೆ ಹೊಸ ನಿಯಮ ಜಾರಿ.! ಫೋನ್ ಪೇ, ಗೂಗಲ್ ಪೇ, ಬಳಕೆ ಮಾಡುವವರು ತಪ್ಪದೆ ಈ ಸುದ್ದಿ ನೋಡಿ.!
ಆದರೆ ಈ ವಿಷಯವೀಗ ಗೊಂದಲ ಸೃಷ್ಟಿಸಿದೆ ಯಾಕೆಂದರೆ, ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲಾ ಫಲಾನುಭವಿಗಳು ಕೂಡ ಈ SMS ಸಂದೇಶ ಬಂದಿಲ್ಲ. ಹಾಗಾಗಿ ನಾವು ಹಣದಿಂದ ವಂಚಿತರಾಗುತ್ತೇವೆ ಎಂದು ಗೊಂದಲಪಡುವ ಅಗತ್ಯ ಇಲ್ಲ. ಒಂದೇ ಬಾರಿಗೆ ಕೋಟ್ಯಾಂತರ ಮಹಿಳೆಯರಿಗೆ SMS ಕಳುಹಿಸುತ್ತಿರುವ ಕಾರಣ ಸರ್ವರ್ ಸಮಸ್ಯೆಯಿಂದ ಅಥವಾ ನೆಟ್ವರ್ಕ್ ಸಮಸ್ಯೆಯಿಂದ ಅಥವಾ ಇನ್ಯಾವುದೋ ತಾಂತ್ರಿಕ ತೊಂದರೆ ಕಾರಣ SMS ಬಂದಿರುವುದಿಲ್ಲ.
ಸೆಪ್ಟೆಂಬರ್ ಒಳಗೆ ರೂ.2000 ಸಹಾಯಧನ ಪಡೆಯುವ ಎಲ್ಲಾ ಮಹಿಳೆಯರ ಮೊಬೈಲ್ ಗೂ ಈ ಸಂದೇಶ ಬರಲಿದೆ. ಆದರೆ ಇಲಾಖೆ ತಿಳಿಸಿದ ಮಾಹಿತಿ ಪ್ರಕಾರ ಯೋಜನೆಗೆ ನೋಂದಾಯಿಸಿಕೊಂಡಿದ್ದರೂ ಕೂಡ ಲಕ್ಷಾಂತರ ಮಹಿಳೆಯರು ಯೋಜನೆಯಿಂದ ವಂಚಿತರಾಗುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ವಾ.? ಈ ರೀತಿ ಸ್ಟೇಟಸ್ ಚೆಕ್ ಮಾಡಿ ನೋಡಿ.!
KYC ಅಪ್ಡೇಟ್ ಮಾಡಿಸಿದವರು, ಆಧಾರ್ ಕಾರ್ಡ್ ನ್ನು ಬ್ಯಾಂಕ್ ಖಾತೆಗೆ ಲಿಂಕ್ ಮತ್ NPCI ಮ್ಯಾಪಿಂಗ್ ಮಾಡಿಸದವರು ಮತ್ತು ರೇಷನ್ ಕಾರ್ಡ್ ಅಲ್ಲಿ ಕುಟುಂಬದ ಮುಖ್ಯಸ್ಥರಾಗಿದ್ದರು ಅವರ ಸ್ಥಾನವನ್ನು ಬದಲಾಯಿಸದೆ ಅರ್ಜಿ ಸಲ್ಲಿಸಿರುವವರು ಈ ರೀತಿ ಅರ್ಜಿ ಸಲ್ಲಿಸುವವರು ಹಣ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಹಿಳೆಯರು ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಮಾಹಿತಿಯಲ್ಲಿ ಸಮಸ್ಯೆ ಇದ್ದರೆ ಅವುಗಳನ್ನು ತಿದ್ದುಪಡಿ ಮಾಡಿಸಿ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್, NPCI ಮ್ಯಾಪಿಂಗ್ ಮಾಡಿಸಿದರೆ ಅವರು ಗೃಹಲಕ್ಷ್ಮಿ ಯೋಜನೆ ಹಣವನ್ನು ಮುಂದಿನ ತಿಂಗಳಿನಿಂದ ಪಡೆಯಲು ಸಾಧ್ಯವಾಗುತ್ತದೆ ಎನ್ನುವ ಸಲಹೆಯನ್ನು ಕೂಡ ನೀಡಿದ್ದಾರೆ.
ಪೋಸ್ಟ್ ಆಫೀಸಿನ 5 ಬೆಸ್ಟ್ ಸ್ಕೀಮ್ ಗಳು ಇವು, 5,000 ಹೂಡಿಕೆ ಮಾಡಿದರೆ ಸಾಕು ಲಕ್ಷಗಳಲ್ಲಿ ರಿಟರ್ನ್ಸ್ ಪಡೆಯಬಹುದು.!
ಈವರೆಗೂ ಕೂಡ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೂ ಕೂಡ ಅವಕಾಶ ಮಾಡಿಕೊಡಲಾಗಿದೆ. ಯೋಜನೆಗೆ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ ನಿಗದಿಯಾಗಿಲ್ಲ ಹಾಗಾಗಿ ಇನ್ನು ಮುಂದೆ ನೋಂದಾಯಿಸಿಕೊಂಡವರು ಸೆಪ್ಟೆಂಬರ್ ತಿಂಗಳಿನಲ್ಲಿ ಈ ಸಹಾಯಧವನ್ನು ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.