UPI ಬಳಸುವವರಿಗೆ ಹೊಸ ನಿಯಮ ಜಾರಿ.! ಫೋನ್ ಪೇ, ಗೂಗಲ್ ಪೇ, ಬಳಕೆ ಮಾಡುವವರು ತಪ್ಪದೆ ಈ ಸುದ್ದಿ ನೋಡಿ.!

 

ಇತ್ತೀಚೆಗೆ ಜನರು ನಗದು ಹಣದ ಮೂಲಕ ವ್ಯವಹಾರ (less Cash) ಮಾಡುವುದು ಬಹಳ ಕಡಿಮೆ ಆಗಿದೆ. ಅದರಲ್ಲೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (P.M Narendra Modi) 500 ಹಾಗೂ 1,000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ (demonitisation) ಮಾಡಿದ ನಂತರ ಹಾಗೂ ಕರೋನ ಮಹಾಮಾರಿಯ ಸಂದರ್ಭದಲ್ಲಿ ಉಂಟಾದ ಕಟ್ಟುನಿಟ್ಟಿನ ನಿಯಮಗಳ ನಂತರ ಜನರು ನಗದು ವ್ಯವಹಾರವನ್ನು ಶೇಕಡಾ 75%ರಷ್ಟು ಕಡಿಮೆ ಮಾಡಿದ್ದಾರೆ.

ಇಂದು ಭಾರತದಲ್ಲಿ ತರಕಾರಿ ವ್ಯಾಪಾರ ಮಾಡುವ ತಳ್ಳುಗಾಡಿ ವ್ಯಾಪಾರದಿಂದ ಹಿಡಿದು ದೊಡ್ಡ ದೊಡ್ಡ ಹಣದ ವ್ಯವಹಾರಗಳ ಮೂಡುವವರೂ ಕೂಡ ತಮ್ಮ ಹಣಕಾಸಿನ ವರ್ಗಾವಣೆಯನ್ನು UPI ಆಧಾರಿತ ಆಪ್ ಗಳ ಮೂಲಕ ನಡೆಸುತ್ತಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ ಕೂಡ ಆಗಿದೆ ಎಂದು ನಾವು ಸಂತಸ ಪಡೆಯಬಹುದು.

ಗೃಹಲಕ್ಷ್ಮಿ ಯೋಜನೆ ಹಣ ಇನ್ನೂ ಬಂದಿಲ್ವಾ.? ಈ ರೀತಿ ಸ್ಟೇಟಸ್ ಚೆಕ್ ಮಾಡಿ ನೋಡಿ.!

ಫೋನ್ ಪೇ, ಗೂಗಲ್ ಪೇ (Phone pe, Google pe) ಮುಂತಾದ UPI ಆಧಾರಿತ ಆಪ್ ಗಳ ಮೂಲಕ ನಡೆಯುವ ಹಣಕಾಸಿನ ವಹಿವಾಟಿನ ಕುರಿತು RBI ಹಲವು ನಿಯಮಗಳನ್ನು ಜಾರಿ ಮಾಡಿದೆ. ಇದರಲ್ಲಿ ಬಹುತೇಕ ಈ ಆಪ್ಗಳನ್ನು ಬಳಸುವ ಗ್ರಾಹಕರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಜಾರಿ ಮೂಡಿದ ನಿಯಮಗಳಾಗಿವೆ. ಈ ಪಟ್ಟಿಗೆ ಈಗ ಹೊಸ ಕಾನೂನೊಂದು ಸೇರ್ಪಡೆ ಆಗುತ್ತಿದೆ.

ಈ ಮೇಲೆ ನಾನು ತಿಳಿಸದಂತೆ ಈಗ ಅತಿ ಹೆಚ್ಚು ಜನರು UPI ನಲ್ಲಿ QR Code ಸ್ಕ್ಯಾನ್ ಮಾಡುವ ಮೂಲಕ ಹಣದ ವರ್ಗಾವಣೆ ನಡೆಸುತ್ತಿದ್ದಾರೆ. ಒಂದೆಡೆ ಡಿಜಟಲೀಕರಣದ ಮಹಾಪರ್ವವೇ ನಡೆಯುತ್ತಿದ್ದರೆ, ಮತ್ತೊಂದೆಡೆ ಈ ರೀತಿ ವಂಚನೆಯ ಪ್ರಕರಣಗಳು ಕೂಡ ಹೆಚ್ಚಾಗಿ ದಾಖಲಾಗುತ್ತಿವೆ. UPI ಆಧಾರಿತ ಆಪ್ ಗಳ ಮೂಲಕ ನಡೆಯುತ್ತಿರುವ ಹಣದ ವರ್ಗಾವಣೆಯಲ್ಲಿ ವಂಚನೆಯ ಪ್ರಕರಣಗಳ ಬಗ್ಗೆ ಹೆಚ್ಚು ದೂರು ದಾಖಲಾಗುತ್ತಿದ್ದಂತೆ ಇದಕ್ಕೆ ಕಡಿವಾಣ ಹಾಕಲು RBI ಮುಂದಾಗಿದೆ.

ಪೋಸ್ಟ್ ಆಫೀಸಿನ 5 ಬೆಸ್ಟ್ ಸ್ಕೀಮ್ ಗಳು ಇವು, 5,000 ಹೂಡಿಕೆ ಮಾಡಿದರೆ ಸಾಕು ಲಕ್ಷಗಳಲ್ಲಿ ರಿಟರ್ನ್ಸ್ ಪಡೆಯಬಹುದು.!

ಇದು ಮೊಬೈಲ್ಗಳಲ್ಲಿ UPI ಆಪ್ ಬಳಸುವ ಎಲ್ಲರಿಗೂ ಅನುಕೂಲಕರವಾಗಿರಲಿದೆ. ಮೊಬೈಲ್ ಗಳಲ್ಲಿ UPI ಆಪ್ ಬಳಸುವ ಎಲ್ಲರಿಗೂ ಕೂಡ UPILite app ಬಗ್ಗೆ ಪರಿಚಯ ಇದ್ದೇ ಇರುತ್ತದೆ. ಪಿನ್ ಬಳಸದೇ ಹಣ ವರ್ಗಾವಣೆ (without pincode amount transfer) ಮಾಡಲು ಈ ಅನುಕೂಲತೆ ಬಳಸಬಹುದು. ಇದುವರೆಗೂ ಕೂಡ ಈ ಮಿತಿಯನ್ನು ಸರ್ಕಾರವು 200 ವರೆಗೆ ಏರಿಸಿತ್ತು, ಜನರು ತಮ್ಮ ಪಿನ್ ಕೋಡ್ ಬಳಸದೆ ಒಂದು ದಿನಕ್ಕೆ 200 ರೂ. ಹಣ ವರ್ಗಾವಣೆ ಮಾಡಬಹುದಾಗಿತ್ತು.

ಇದು ನೆಟ್ ವರ್ಕ್ ಇರದ ಪ್ರದೇಶಗಳಲ್ಲಿ ಅಥವಾ ಇಂಟರ್ನೆಟ್ ಸಮಸ್ಯೆ ಆದ ಸಮಯದಲ್ಲಿ ಅಥವಾ ಖಾತೆಯಲ್ಲಿ ಹಣ ಇರದ ಸಂದರ್ಭದಲ್ಲಿ ಅನುಕೂಲಕ್ಕೆ ಬರುತ್ತಿತ್ತು. ಈಗ ಅದರ ಅವಶ್ಯಕತೆ ಮತ್ತು ಜನರು ಅದಕ್ಕೆ ಸ್ಪಂದಿಸುತ್ತಿರುವ ರೀತಿಯನ್ನು ನೋಡಿ ಆ ಮಿತಿಯನ್ನು 2000 ರೂಪಾಯಿವರೆಗೂ ಕೂಡ ಏರಿಸಲಾಗಿದೆ.

ಗೃಹಲಕ್ಷ್ಮಿ ಯೋಜನೆ 2000/- ಇನ್ನೂ ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಚಿಂತೆ ಬೇಡ ಈ ದಿನಾಂಕದಂದು ನಿಮ್ಮ ಖಾತೆಗೆ ಹಣ ಬರಲಿದೆ.! ಈ ರೀತಿ ಚೆಕ್ ಮಾಡಿ.!

UPI Lite app ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಜನರು ಇನ್ನು ಮುಂದೆ 2000 ರೂಪಾಯಿವರೆಗೆ ಅದರಲ್ಲಿ ಹಣ ಉಳಿಸಿಕೊಂಡು ಪಿನ್ ಹಾಕದೆ ಹಣ ಉಪಯೋಗಿಸುವ ಅನಿವಾರ್ಯತೆ ಬಂದ ಸಂದರ್ಭಗಳಲ್ಲಿ ಬಳಸಿಕೊಳ್ಳಬಹುದು. ಇದನ್ನೇ ಮಾಡುವುದಕ್ಕೂ ಮುನ್ನ ನೀವು ಮೊದಲಿಗೆ UPI ಲೈಟ್ ಆಪ್ ಗೆ ಹಣ ವರ್ಗಾವಣೆ ಮಾಡಿಕೊಳ್ಳಬೇಕಾಗುತ್ತದೆ.

ನಂತರ ಮಾತ್ರ ಈ ಹಣದ ಬಳಕೆ ಸಾಧ್ಯವಾಗುತ್ತದೆ. ಆಪ್ ಗಳ ವ್ಯಾಲೆಟ್ (Wallet) ನಲ್ಲಿರುವ ಹಣವನ್ನು ಬಳಸಿದ ಮಾದರಿಯಲ್ಲಿಯೇ ಇದು ಕೂಡ ಕೆಲಸ ಮಾಡುತ್ತದೆ ಎಂದು ಸುಲಭವಾಗಿ ಅರ್ಥೈಸಬಹುದು. ಜೊತೆಗೆ ದಿನವೊಂದಕ್ಕ 200 ರೂಪಾಯಿಗಳಿಗೆ ಮಾತ್ರ ಹಣದ ವಹಿವಾಟು ನಡೆಸುವವರು ಆಪ್ ಬಳಸಿ ಹಣ ವರ್ಗಾವಣೆ ಮಾಡುವುದರಿಂದ ಅವರ ಖಾತೆಯು ಇನ್ನಷ್ಟು ಸುರಕ್ಷತೆಯಿಂದ ಕೂಡಿರುತ್ತದೆ ಎಂದೇ ಹೇಳಬಹುದು.

Leave a Comment

%d bloggers like this: