ಪೋಸ್ಟ್ ಆಫೀಸಿನ 5 ಬೆಸ್ಟ್ ಸ್ಕೀಮ್ ಗಳು ಇವು, 5,000 ಹೂಡಿಕೆ ಮಾಡಿದರೆ ಸಾಕು ಲಕ್ಷಗಳಲ್ಲಿ ರಿಟರ್ನ್ಸ್ ಪಡೆಯಬಹುದು.!

 

WhatsApp Group Join Now
Telegram Group Join Now

ದುಡಿಯುವ ದಿನಗಳಲ್ಲಿ ಭವಿಷ್ಯದ ಹಿತ ದೃಷ್ಟಿಯಿಂದ ಸ್ವಲ್ಪ ಹಣವನ್ನು ಉಳಿತಾಯ (Saving) ಮಾಡಿ ಇಟ್ಟುಕೊಳ್ಳಬೇಕು. ಈ ರೀತಿ ಉಳಿತಾಯ ಮಾಡಿದ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವುದರಿಂದ ಅತಿ ಹೆಚ್ಚು ಲಾಭ ದೊರೆಯುವುದಿಲ್ಲ ಹಾಗಾಗಿ ಅವುಗಳನ್ನು ಉತ್ತಮ ಯೋಜನೆಗಳಲ್ಲಿ ಹೂಡಿಕೆ (Invest) ಮಾಡಬೇಕು ಹೂಡಿಕೆ ಮಾಡುವುದಕ್ಕೆ ಈಗ ಮ್ಯೂಚುವಲ್ ಫಂಡ್, ಸ್ಟಾಕ್ ಮಾರ್ಕೆಟ್ ನಂತಹ ಅವಕಾಶಗಳು ಇದ್ದರೂ ಕೂಡ ಅವುಗಳಲ್ಲಿ ರಿಸ್ಕ್ ಕೂಡ ಅಷ್ಟೇ ಪ್ರಮಾಣದಲ್ಲಿ ಇರುತ್ತದೆ.

ನಾವು ಹೂಡಿಕೆ ಮಾಡಿದ ಹಣಕ್ಕೆ ನೂರಕ್ಕೆ ನೂರರಷ್ಟು ಭದ್ರತೆಯ ಜೊತೆಗೆ ಉತ್ತಮವಾದ ಲಾಭವು ಕೂಡ ಸಿಗಬೇಕು ಎಂದರೆ ಕೇಂದ್ರ ಸರ್ಕಾರದಡಿಯಲ್ಲಿ ಇರುವ ಅಂಚೆ ಕಚೇರಿ ಯೋಜನೆಗಳನ್ನು (post office Scheme) ಆರಿಸಿಕೊಳ್ಳುವುದು ಉತ್ತಮ. ಅಂಚೆ ಕಚೇರಿಗಳು ಈಗ ಈ ರೀತಿ ಜನಸಾಮಾನ್ಯರಿಗೆ ಹತ್ತಿರವಾಗುವ ಯೋಜನೆಗಳನ್ನು ನೀಡುವುದರಲ್ಲಿ ಮುಂಚೂಣಿಯಲ್ಲಿದ್ದು, ಆ ಪೋಸ್ಟ್ ಆಫೀಸ್ ನಲ್ಲಿ ಕಡಿಮೆ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಬಹುದಾದ ಕೆಲ ಯೋಜನೆಗಳ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಗೃಹಲಕ್ಷ್ಮಿ ಯೋಜನೆ 2000/- ಇನ್ನೂ ನಿಮ್ಮ ಅಕೌಂಟ್ ಗೆ ಬಂದಿಲ್ವಾ.? ಚಿಂತೆ ಬೇಡ ಈ ದಿನಾಂಕದಂದು ನಿಮ್ಮ ಖಾತೆಗೆ ಹಣ ಬರಲಿದೆ.! ಈ ರೀತಿ ಚೆಕ್ ಮಾಡಿ.!

● ಕಿಸಾನ್ ವಿಕಾಸ್ ಪತ್ರ (KVP) ಯೋಜನೆ:-

ಈ ಯೋಜನೆಯನ್ನು ಖರೀದಿಸುವುದರಿಂದ 115 ತಿಂಗಳಿನಲ್ಲಿ ನೀವು ಹೂಡಿಕೆ ಮಾಡಿದ ಹಣವು ಡಬಲ್ ಆಗುತ್ತದೆ. 9 ವರ್ಷ 7 ತಿಂಗಳಿಗೆ ನೀವು 5 ಲಕ್ಷ ಹೂಡಿಕೆ ಮಾಡಿದ್ದರೆ 10 ಲಕ್ಷ ಹಣವನ್ನು ನೀವು ರಿಟರ್ನ್ ಪಡೆಯಬಹುದು. ಅತಿ ಹೆಚ್ಚು ಬಡ್ಡಿದರ ಎಂದರೆ 7.5% ಬಡ್ಡಿದರವು ನಿಮ್ಮ ಹಣಕ್ಕೆ ಸಿಗುತ್ತದೆ.

● ಪೋಸ್ಟ್ ಆಫೀಸ್ ಟರ್ಮ್ ಡೆಪಾಸಿಟ್ ಅಥವಾ ಫಿಕ್ಸೆಡ್ ಡೆಪಾಸಿಟ್ ಯೋಜನೆ (FD Scheme) :-

ಯೋಜನೆಯಲ್ಲಿ ನಿಮ್ಮ ಹಣವನ್ನು ಒಂದು ವರ್ಷ, ಎರಡು ವರ್ಷ, ಮೂರು ವರ್ಷ ಅಥವಾ ಐದು ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಒಂದು ವರ್ಷಕ್ಕೆ ನಿಮ್ಮ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಮಾಡಿದರೆ 6.9%, ಎರಡು ಅಥವಾ ಮೂರು ವರ್ಷಗಳಿಗೆ ಹೂಡಿಕೆ ಮಾಡಿದರೆ 7%, 5 ವರ್ಷಗಳಿಗೆ ಫಿಕ್ಸೆಡ್ ಡೆಪಾಸಿಟ್ ಮಾಡುವುದಾದರೆ 7.5% ಬಡ್ಡಿದರವು ಹೂಡಿಕೆ ಹಣದ ಮೇಲೆ ಅನ್ವಯಿಸುತ್ತದೆ.

ಶುಗರ್ ಲೆವೆಲ್ ಎಷ್ಟಿರಬೇಕು.? ಡಯಾಬಿಟಿಕ್ ಬಗ್ಗೆ ಆಸ್ಪತ್ರೆಗಳಲ್ಲಿ ಹೇಳುವುದು ಸುಳ್ಳಾ.? ವೈದ್ಯರೇ ಬಿಚ್ಚಿಟ್ಟ ಸತ್ಯಾಂಶ ಇದು ತಪ್ಪದೆ ನೋಡಿ.!

● ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ (NSC Scheme):-

ಈ ಯೋಜನೆಯಲ್ಲಿ ಹೂಡಿಕೆ ಮಾಡುವವರಿಗೆ ಈಗ 7.7% ಬಡ್ಡಿದರ ಸಿಗುತ್ತದೆ. ಕನಿಷ್ಠ 1,000 ರೂಪಾಯಿಯಿಂದ ಗರಿಷ್ಠ ಎಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಬಹುದು. ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳು ಇರುತ್ತದೆ, 80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡ ಸಿಗುತ್ತದೆ. ಉದಾಹರಣೆಗೆ ಈ ಯೋಜನೆಯಡಿಯಲ್ಲಿ ನೀವು ಒಂದು ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ಇದರ ಮೆಚ್ಯುರಿಟಿ ಅವಧಿ ಮುಗಿದ ಬಳಿಕ ನಿಮಗೆ 1,44,903 ರೂ. ಸಿಗುತ್ತದೆ.

● ಪೋಸ್ಟ್ ಆಫೀಸ್ ರಿಕ್ಯೂರಿಂಗ್ ಡೆಪಾಸಿಟ್ ಸ್ಕೀಮ್ (RD Scheme):-

ಈ ಯೋಜನೆಯ ಮೆಚುರಿಟಿ ಅವಧಿ 5 ವರ್ಷಗಳಿರುತ್ತದೆ. ಈ ಯೋಜನೆಗೆ ಪ್ರಸ್ತುತವಾಗಿ 6.5% ಬಡ್ಡಿದರ ನಿಗದಿಯಾಗಿದೆ. ಪ್ರತಿ ತಿಂಗಳು ನೀವು ಆರಿಸಿಕೊಂಡ ನಿಗದಿತ ಮೊತ್ತದ ಹಣವನ್ನು ಡೆಪೂಸಿಟ್ ಮಾಡಿದರೆ 5 ವರ್ಷಗಳ ಬಳಿಕ ಇದರ ರಿಟರ್ನ್ಸ್ ನಿಮಗೆ ಸಿಗುತ್ತದೆ. ಉದಾಹರಣೆಗೆ 1,000 ಸಾವಿರ ರೂಪಾಯಿಯನ್ನು ಡೆಪಾಸಿಟ್ ಮಾಡುತ್ತಾ ಬಂದರೆ 5 ವರ್ಷಕ್ಕೆ ಅದು 60,000 ಆಗಿರುತ್ತದೆ 70,990 ರೂ. ರಿಟರ್ನ್ಸ್ ಸಿಗುತ್ತದೆ.

ಗೃಹಲಕ್ಷ್ಮಿ ಯೋಜನೆ 2000/- ನಿಮ್ಮ ಖಾತೆಗೆ ಜಮೆ ಆಗಿದೆ ಈ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿ.!

● ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ (PPF Scheme):-

ಇದು ಲಾಂಗ್ ಟರ್ಮ್ ಇನ್ವೆಸ್ಟ್ಮೆಂಟ್ ಯೋಜನೆಯಾಗಿದೆ. ಇದರ ಮೆಚುರಿಟಿ ಅವಧಿ 15 ವರ್ಷಗಳು. ಈ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 5000 ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿ ಮುಗಿದ ಬಳಿಕ ನಿಮಗೆ 15,77,840 ರೂ. ರಿಟರ್ನ್ಸ್ ಸಿಗುತ್ತದೆ. ಈ ಯೋಜನೆಗಳ ಬಗ್ಗೆ ಮತ್ತಷ್ಟು ಮಾಹಿತಿ ಬೇಕಾದಲ್ಲಿ ಹತ್ತಿರದಲ್ಲಿರುವ ಅಂಚೆಠಾಣೆಗೆ ಭೇಟಿ ಕೊಟ್ಟು ವಿವರವನ್ನು ಪಡೆಯಿರಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now