ಗೃಹಲಕ್ಷ್ಮಿ ಯೋಜನೆ 2000/- ನಿಮ್ಮ ಖಾತೆಗೆ ಜಮೆ ಆಗಿದೆ ಈ ಅಪ್ಲಿಕೇಶನ್ ನಲ್ಲಿ ಆಧಾರ್ ಕಾರ್ಡ್ ನಂಬರ್ ಹಾಕಿ ಚೆಕ್ ಮಾಡಿ.!

 

ಕರ್ನಾಟಕ ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆಗಳ (Gyarantee Scheme) ಪೈಕಿ ನಾಲ್ಕನೇ ಗ್ಯಾರಂಟಿ ಕಾರ್ಡ್ ಯೋಜನೆಯಾಗಿ ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಲಾಂಚ್ ಆಗಿದೆ. ಆಗಸ್ಟ್ 30ನೇ ತಾರೀಕು ಲಾಂಚ್ ಆಗಿದೆ. ಜುಲೈ 19 ರಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಕಿ ಅಂಶಗಳ ಪ್ರಕಾರ ಇದುವರೆಗೆ 1.33 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದು.

ಅವರೆಲ್ಲರ ಖಾತೆಗೂ ಕೂಡ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಮಾನ್ಯ ಮುಖ್ಯಮಂತ್ರಿಗಳು (Karnataka CM) DBT ಮೂಲಕ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಬಿಡುಗಡೆ ಮಾಡಲು ಅನುಮತಿ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮೈಸೂರಿನಲ್ಲಿ ನಡೆದ ಈ ಕಾರ್ಯಕ್ರಮದ ಸಂಭ್ರಮವನ್ನು ರಾಜ್ಯದಾದ್ಯಂತ 11000 ಕ್ಕೂ ಹೆಚ್ಚು ಕಡೆ ಆಚರಿಸಲಾಗಿದೆ.

ಜಾಬ್ ಕಾರ್ಡ್ ಇದ್ದವರು ಆಧಾರ್ ಕಾರ್ಡ್ ಲಿಂಕ್ ಮಾಡಲು ಕೊನೆ ಅವಕಾಶ.! ಇಲ್ಲದಿದ್ದರೆ ನಿಮ್ಮ ಕಾರ್ಡ್ ರದ್ದಾಗುತ್ತೆ

ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವವಾಗಿ ಕೊಟ್ಟಿದ್ದ ಭರವಸೆಯಂತೆ ತಮ್ಮ ಅಧಿಕಾರ ರಾಜ್ಯದಲ್ಲಿ ಸ್ಥಾಪನೆಯಾಗುತ್ತಿದ್ದಂತೆ ಹಂತ ಹಂತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ. ಇದರಲ್ಲಿ ಅತಿ ಹೆಚ್ಚು ಬಜೆಟ್ ಬೇಡಿಕೆ ಇರವ ಗೃಹಲಕ್ಷ್ಮಿ ಯೋಜನೆಯಾಗಿದೆ. ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿಗೂ (Women Head of the family account) ಕೂಡ ಪ್ರತಿ ತಿಂಗಳು 2000 ಸಹಾಯಧನ ನೀಡಿ ಮಹಿಳೆಯರನ್ನು ಆರ್ಥಿಕವಾಗಿ ಸಧೃಡರನ್ನಾಗಿಸಲು ಯೋಜನೆ ರೂಪಿಸಲಾಗಿದೆ.

ರಾಜ್ಯದಾದ್ಯಂತ ಯೋಜನೆಗೆ ನೋಂದಾಯಿಸಿಕೊಂಡಿದ್ದ ಎಲ್ಲ ಮಹಿಳೆಯರು ಕೂಡ ಇಂದು ತಮ್ಮ ಖಾತೆಗೆ ಹಣ ಪಡೆದಿದ್ದಾರೆ. ನೀವು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುತ್ತಿದ್ದು ಹಣವು ನಿಮ್ಮ ಯಾವ ಖಾತೆಗೆ ಜಮೆ ಆಗಿದೆ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದರೆ ಈ ಕೆಳಗಿನ ಹಂತಗಳನ್ನು ಪಾಲಿಸಿ ಸುಲಭವಾಗಿ ಚೆಕ್ ಮಾಡಿಕೊಳ್ಳಬಹುದು.

ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ನಿರ್ಮಾಣಕ್ಕೆ 4 ಲಕ್ಷ ಸಹಾಯಧನ ಬಿಡುಗಡೆ, ಆಸಕ್ತ ರೈತರು ಅರ್ಜಿ ಸಲ್ಲಿಸಿ.!

● ನೀವು ನಿಮ್ಮ ಕೈಯಲ್ಲಿರುವ ಆಂಡ್ರಾಯ್ಡ್ ಮೊಬೈಲ್ (DBT Status check through SMS) ಮೂಲಕವೇ ಗೃಹಲಕ್ಷ್ಮೀ ಯೋಜನೆಯ ಸಹಾಯಧನ ಯಾವ ಬ್ಯಾಂಕ್ ಖಾತೆಗೆ ವರ್ಗಾವಣೆ ಆಗಿದೆ ಎನ್ನುವುದನ್ನು ಚೆಕ್ ಮಾಡಿ ತಿಳಿದುಕೊಳ್ಳಬಹುದು
● ಮೊದಲಿಗೆ ಪ್ಲೇ ಸ್ಟೋರ್ ಗೆ ಹೋಗಿ DBT ಕರ್ನಾಟಕ ಎನ್ನುವ ಕರ್ನಾಟಕ ಸರ್ಕಾರದ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಅಥವಾ ನೇರವಾಗಿ
https://play.google.com/store/apps/detailsid=com.dbt karnataka ಲಿಂಕ್ ಕ್ಲಿಕ್ ಮಾಡುವ ಮೂಲಕವೂ ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

● ಆಪ್ ಡೌನ್ಲೋಡ್ ಆದ ಬಳಿಕ ಮೊದಲಿಗೆ ನಿಮ್ಮ ಆಧಾರ್ ಸಂಖ್ಯೆಯನ್ನು (Aadhar num. ) ಹಾಕಿ OTP ಯನ್ನು ಪಡೆಯಬೇಕು.


● ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಯನ್ನು ಹಾಕಿ ವೆರಿಫೈ ಮಾಡಬೇಕು.
ಬಳಿಕ ನೀವು ನಿಮ್ಮ ಇಚ್ಛೆಯ ನಾಲ್ಕು ನಂಬರ್ ಗಳನ್ನು ಹಾಕಿ Password ಸೆಟ್ ಮಾಡಬೇಕು
● ಆ ನಾಲ್ಕು ಸಂಖ್ಯೆಗಳನ್ನು ಮತ್ತೊಮ್ಮೆ ಹಾಕುವ ಮೂಲಕ ಅದನ್ನು Confirm ಮಾಡಿ.

ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ.! ಈ ವಿಧಾನದಲ್ಲಿ ಚೆಕ್ ಮಾಡಿ ನೋಡಿ.!

● ಈಗ ನೀವು ಯಶಸ್ವಿಯಾಗಿ DBT ಕರ್ನಾಟಕ ಆಪ್ ಅನ್ನು ಓಪನ್ ಮಾಡಿರುತ್ತೀರಿ, ನಿಮ್ಮ ಆಧಾರ್ ಕಾರ್ಡ್ ನ ವಿವರ ಪೂರ್ತಿ ಅಲ್ಲಿ ತೆರೆದುಕೊಂಡಿರುತ್ತದೆ.
● ಮುಂದಿನ ಹಂತದಲ್ಲಿ ನಾಲ್ಕು ಆಯ್ಕೆಗಳು ಕಾಣುತ್ತವೆ ಅದರಲ್ಲಿ Payment ಎಂದಿರುವ ಆಪ್ಷನ್ ಅನ್ನು ಕ್ಲಿಕ್ ಮಾಡಿದರೆ ನಿಮಗೆ ಸರ್ಕಾರದ ಕಡೆಯಿಂದ DBT ಮೂಲಕ ಯಾವೆಲ್ಲಾ ಯೋಜನೆಯ ಹಣ ವರ್ಗಾವಣೆ ಆಗಿದೆ ಎನ್ನುವುದರ ಲಿಸ್ಟ್ ಬರುತ್ತದೆ. ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗಿದ್ದರೆ ಹೆಸರು, ದಿನಾಂಕ, ಹಣದ ವಿವರ ಬಂದಿರುತ್ತದೆ.

Leave a Comment

%d bloggers like this: