ಗೃಹಲಕ್ಷ್ಮೀ ಯೋಜನೆ 2ನೇ ಕಂತಿನ ಹಣ ಯಾವಾಗ ಬಿಡುಗಡೆ.? ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ನಿಖರ ಮಾಹಿತಿ.!

 

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆ ಎರಡನೇ ಕಂತಿನ ಹಣ (Gruhalakshmi 2nd month amount) ಯಾವಾಗ ಬಿಡುತ್ತದೆ ಎನ್ನುವುದು ಈಗಾಗಲೇ ಮೊದಲನೇ ಕಂತಿನ ಹಣ ಪಡೆದ ಎಲ್ಲಾ ಫಲಾನುಭವಿಗಳ ಪ್ರಶ್ನೆ, ಆದರೆ ರಾಜ್ಯದಲ್ಲಿ ಇನ್ನೂ ಸಹ ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣವನ್ನೇ ಪಡೆದಿಲ್ಲ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ (Women and Child Welfar) ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು ತಾತ್ಕಾಲಿಕವಾಗಿ (Bank account inactive) ಸ್ಥಗಿತಗೊಂಡಿದೆ ಮತ್ತು ಕೆಲವರ ಬ್ಯಾಂಕ್ ಖಾತೆಗಳು ಚಾಲ್ತಿಯಲ್ಲಿದ್ದರೂ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (if Adhar not seeding to account) ಆಗಿರದೇ ಇರುವುದರಿಂದ ಅವರ ಖಾತೆಗೆ DBT ಮೂಲಕ ಹಣ ವರ್ಗಾವಣೆ ಮಾಡಲು ಆಗಿಲ್ಲ.

ಲೀಸ್ (ಬೋಗ್ಯಕ್ಕೆ) ತೆಗೆದುಕೊಂಡಿರುವ ಮನೆ ಅಂಗಡಿ ಅಥಾವ ಜಮೀನಿನ ಮೇಲೆ ಲೋನ್ ( ಸಾಲ ) ಪಡೆಯಬಹುದಾ.? ಹೊಸ ರೂಲ್ಸ್.!

ರೇಷನ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ನಲ್ಲಿರುವ ಹೆಸರಿನಲ್ಲಿ (Name mismatch) ವ್ಯತ್ಯಾಸವಾಗಿರುವುದು ಮತ್ತು ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ (e-kyc) ಆಗದೆ ಇರುವುದು ಇಂತಹ ಸಮಸ್ಯೆಗಳಿಂದ ಅವರು ಹಣ ಪಡೆಯಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿ 1.10 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಅರ್ಹರಾಗಿದ್ದರು. ಇದರಲ್ಲಿ 80%ರಷ್ಟು ಮಹಿಳೆಯರು ಮಾತ್ರ ಸಹಾಯಧನವನ್ನು ಪಡೆದಿದ್ದಾರೆ.

ಇನ್ನುಳಿದವರು ಈ ಮೇಲೆ ತಿಳಿಸಿದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಇದರ ನಡುವೆ ಎರಡನೇ ಕಂತಿನ ಹಣ ಬಿಡುಗಡೆ ಯಾವಾಗ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ ಇದಕ್ಕೆ ಉತ್ತರವನ್ನು ಸಹ ಇಲಾಖೆ ಮೂಲಗಳು ತಿಳಿಸಿವೆ. ಅವರು ಕೊಟ್ಟಿರುವ ಮಾಹಿತಿಯ ಪ್ರಕಾರ ಸಂಪೂರ್ಣವಾಗಿ ಮೊದಲನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಅರ್ಹರಾಗಿದ್ದ ಎಲ್ಲಾ ಮಹಿಳೆಯರು ಕೂಡ ಹಣ ಪಡೆಯುವವರೆಗೂ ಕೂಡ ಎರಡನೇ ಕಂತಿನ ಹಣ ಬಿಡುಗಡೆಯಾಗುವುದಿಲ್ಲವಂತೆ.

ಉತ್ತರ ದಿಕ್ಕಿನ ಬಾಗಿಲು ಈ ರಾಶಿಯವರಿಗೆ ಮಾತ್ರ ಆಗಿ ಬರುತ್ತದೆ.! ಬಾಡಿಗೆ ಮನೆ ಅಥವಾ ಸ್ವಂತ ಮನೆಗೆ ಹೋಗುವ ಮುನ್ನ ಇದನ್ನು ನೋಡಿ.!

ಈ ಮೇಲೆ ತಿಳಿಸಿದ ಸಮಸ್ಯೆಗಳನ್ನು ತಿದ್ದುಪಡಿ ಮಾಡಿಸಿಕೊಂಡರೆ ಅವರಿಗೆ ಮೊದಲನೇ ಕಂತಿನ ಹಣ ಬಿಡುಗಡೆ ಆಗಲಿದೆ. ಇದು ಪೂರ್ತಿಯಾಗಲು ಅಕ್ಟೋಬರ್ 15ರ ವರೆಗೂ ಕೂಡ ಸಮಯ ಹಿಡಿಯಬಹುದು ಎಂದು ಊಹಿಸಲಾಗಿದೆ. ಈಗಾಗಲೇ ಇಲಾಖೆಯು ಕೂಡ ಈ ಸಮಸ್ಯೆ ಪರಿಹಾರ ಮಾಡುವುದಕ್ಕೆ ಕ್ರಮ ಕೈಗೊಂಡಿದ್ದು ತಾಲೂಕು ಮಟ್ಟದ CDPO ಅಧಿಕಾರಿಗಳ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದೆ.

CDPO ಅಧಿಕಾರಿಗಳ ಬಳಿ ಅವರ ತಾಲೂಕಿನಲ್ಲಿ ಬರುವ ಎಲ್ಲಾ ಗ್ರಾಮಗಳ ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳ ಪಟ್ಟಿ ಇರುತ್ತದೆ. ಅದರಲ್ಲಿ ಯಾರೆಲ್ಲ ಸಹಾಯಧನ ಪಡೆದಿದ್ದಾರೆ ಮತ್ತು ಯಾರು ಯಾವ ಸಮಸ್ಯೆಯಿಂದ ಸಹಾಯಧನ ಪಡೆಯಲಾಗಿಲ್ಲ ಎನ್ನುವುದರ ಲಿಸ್ಟ್ ಇರುತ್ತದೆ.

ಬಿಗ್ ಬಿಲಿಯನ್ ಡೇಸ್, ಗ್ರೇಟ್ ಇಂಡಿಯನ್ ಸೇಲ್ ಈ ಆಫರ್ ಗಳಲ್ಲಿ ವಸ್ತುಗಳನ್ನು ಖರೀದಿಸುವಾಗ ಎಚ್ಚರ.!

ಇದನ್ನು ಆ ವಾರ್ಡ್ ವ್ಯಾಪ್ತಿಗೆ ಬರುವ ಅಂಗನವಾಡಿ ಸಹಾಯಕಿಯರ ಮೂಲಕ ಮನೆ ಮನೆಗೆ ಹೋಗಿ ಸರ್ವೆ ನಡೆಸಲಾಗುವುದು ಮತ್ತು ಹಣ ಪಡೆಯಲಾಗದಿದ್ದವರಿಗೆ ಅವರ ಸಮಸ್ಯೆಯನ್ನು ಅರ್ಥಪಡಿಸಿ ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಹೇಳಲಾಗುತ್ತದೆ. ಅದಕ್ಕೂ ಮುನ್ನ ಹಣ ಪಡೆಯಲಾಗದ ಮಹಿಳೆಯರು ಸ್ವತಃ ತಾವೇ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಹೋಗಿ.

ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಗೃಹಲಕ್ಷ್ಮಿ ಯೋಜನೆ ಮಂಜೂರಾತಿ ಪತ್ರದ ಜೊತೆ ಭೇಟಿ ಕೊಡುವ ಮೂಲಕ ಸಮಸ್ಯೆ ಏನಾಗಿದೆ ಎಂದು ತಿಳಿದುಕೊಂಡು ಸರಿಪಡಿಸಿಕೊಳ್ಳಬಹುದು. ಒಟ್ಟಾರೆಯಾಗಿ ಅಕ್ಟೋಬರ್ 15ರ ಒಳಗೆ ಇದನ್ನು ಪೂರ್ತಿ ಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದ್ದು ಎರಡನೇ ಕಂತಿನ ಹಣವು ಆ ಬಳಿಕವಷ್ಟೇ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now