ಕರ್ನಾಟಕ ರಾಜ್ಯ ಸರ್ಕಾರವು ನೀಡಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಯು (Annabhagya and Gruhalakshmi) ರೇಷನ್ ಕಾರ್ಡ್ ಆಧಾರಿತ ಯೋಜನೆಗಳಾಗಿವೆ ಎಂದೇ ಹೇಳಬಹುದು. ಈ ಯೋಜನೆಗಳ ಮೂಲಕ ರೇಷನ್ ಕಾರ್ಡ್ ನಲ್ಲಿ ಕುಟುಂಬದ ಮುಖ್ಯಸ್ಥರ ಸ್ಥಾನದಲ್ಲಿರುವ ಮಹಿಳೆಯು ಸರ್ಕಾರದಿಂದ ಸಹಾಯಧನವನ್ನು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ರೂ.2000 ಕುಟುಂಬ ನಿರ್ವಹಣೆಗಾಗಿ ಸಹಾಯಧನ ಹಾಗೂ ಅನ್ನಭಾಗ್ಯ ಯೋಜನೆಯ ಮೂಲಕ ಆ ರೇಷನ್ ಕಾರ್ಡ್ ನಲ್ಲಿರುವ ಪ್ರತಿ ಸದಸ್ಯನಿಗೆ 5Kg ಬದಲಿಗೆ ತಲಾ 170 ರೂ. ಗಳನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಅನ್ನ ಭಾಗ್ಯ ಯೋಜನೆ ಹಣವನ್ನು ಜುಲೈ ತಿಂಗಳಿಂದ ಹಾಗೂ ಗೃಹಲಕ್ಷ್ಮಿ ಯೋಜನೆ ಹಣವನ್ನು ಆಗಸ್ಟ್ ತಿಂಗಳಿನಿಂದ ಫಲಾನುಭವಿಗಳು ಪಡೆಯುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ APL ಕಾರ್ಡ್ ಹೊಂದಿರುವವರು ಕೂಡ ಸರ್ಕಾರದಿಂದ ಈ ಸಹಾಯಧನ ಪಡೆಯುತ್ತಿದ್ದಾರೆ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಈಗಾಗಲೇ ತಿಂಗಳಾಗಿದ್ದರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ 1.17 ಕೋಟಿ ಮಹಿಳೆಯರಲ್ಲಿ ಸಂಪೂರ್ಣವಾಗಿ ಎಲ್ಲರೂ ಕೂಡ ರೂ.2000 ಹಣವನ್ನು ಪಡೆಯಲಾಗುತ್ತಿಲ್ಲ ಕೆಲವರು ಇದುವರೆಗೂ ಒಂದು ಕಂತಿನ ಹಣವನ್ನು ಕೂಡ ಪಡೆಯಲಾಗಿಲ್ಲ. ಇನ್ನು ಕೆಲವರಿಗೆ ಮೊದಲ ತಿಂಗಳ, ಎರಡನೇ ತಿಂಗಳ ಹಣ ಬಂದಿದ್ದು ಮೂರು ಹಾಗೂ ನಾಲ್ಕನೇ ಕಂತಿನ ಹಣ ಬಂದಿಲ್ಲ. ಹೀಗೇಕಾಯಿತು ಎಂದು ಅನೇಕರು ಗೊಂದಲಗೊಂಡಿದ್ದಾರೆ.
ಇದುವರೆಗೆ ಒಂದು ತಿಂಗಳಿನ ಹಣವನ್ನು ಕೂಡ ಪಡೆಯಲಾಗದಿದ್ದವರಿಗೆ ಅಥವಾ ನಂತರ ಸಮಸ್ಯೆ ಎದುರಿಸುತ್ತಿರುವವರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗೃಹಲಕ್ಷ್ಮಿ ಅದಾಲತ್ (Gruhalakshmi Adalath) ನಡೆಸಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಫಲಾನುಭವಿಗಳ ಸಮಸ್ಯೆ ಪರಿಹರಿಸಿ ಕೊಡಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು (CM Siddaramaih) ಇತ್ತೀಚಿಗೆ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಚನೆ ಕೊಟ್ಟಿದ್ದಾರೆ.
ಫಲಾನುಭವಿಗಳ ಬ್ಯಾಂಕ್ ಖಾತೆಗಳು ಆಕ್ಟಿವ್ ಆಗಿಲ್ಲದೆ ಇರುವುದು, ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಆಗದೆ ಇರುವುದು, ದಾಖಲೆಗಳಲ್ಲಿ ಹೊಂದಾಣಿಕೆ ಆಗದೆ ಇರುವುದು ಗೃಹಲಕ್ಷ್ಮಿ ಯೋಜನೆ ಹಣ ತಲುಪಿಸಲು ಇರುವ ತೊಡಕುಗಳಾಗಿವೆ. ಇದರ ಜೊತೆಗೆ ಒಂದು ತಿಂಗಳ ಕಂತಿನ ಹಣವನ್ನು ಪಡೆದು ಮತ್ತೊಂದು ತಿಂಗಳ ಹಣವನ್ನು ಪಡೆಯಲು ಆಗದೆ ಇರುವ ಸಮಸ್ಯೆಗೆ ಕಾರಣ ಪ್ರತಿ ತಿಂಗಳು ಕೂಡ ಆಹಾರ ಇಲಾಖೆಯಿಂದ ಅಧಿಕಾರಿಗಳು ರೇಷನ್ ಕಾರ್ಡ್ ಗಳ ಪರಿಶೀಲನೆ ನಡೆಸಿ ಹಲವು ಅನರ್ಹ ಹಾಗೂ ನಕಲಿ ರೇಷನ್ ಕಾರ್ಡ್ ಗಳನ್ನು ರ’ದ್ದುಪಡಿಸತ್ತಿರುವುದು ಎಂದು ತಿಳಿದು ಬಂದಿದೆ.
ಹಾಗಾಗಿ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿಲ್ಲದಿದ್ದರೆ, ತಡೆಹಿಡಿಯಲ್ಪಟ್ಟಿದ್ದರೆ ನಿಮಗೆ ಆ ತಿಂಗಳ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ, ನಂತರ ನೀವು ಸಮಸ್ಯೆ ಏನಾಗಿದೆ ಎಂದು ತಿಳಿದುಕೊಂಡು ಸರಿಪಡಿಸಿಕೊಳ್ಳಬೇಕು. ಹಾಗಾದರೆ ನಿಮ್ಮ ರೇಷನ್ ಕಾರ್ಡ್ ಆಕ್ಟಿವ್ ಆಗಿದಿಯೋ ಇಲ್ಲವೋ ಎನ್ನುವುದು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈಗ ನಾವು ಹೇಳುವ ಈ ವಿಧಾನಗಳನ್ನು ಪಾಲಿಸಿ ನಿಮ್ಮ ರೇಷನ್ ಕಾರ್ಡ್ ಸ್ಥಿತಿ ಏನಾಗಿದೆ ಎಂದು ತಿಳಿದುಕೊಳ್ಳಿ.
* ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿ google ಗೆ ಹೋಗಿ https://ahara.com ಎಂದು ಟೈಪ್ ಮಾಡಿ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕರ್ನಾಟಕ ಸರ್ಕಾರ ಈ ಲಿಂಕ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ
* ಮುಖಪುಟ ಓಪನ್ ಆಗುತ್ತದೆ. ಅದರಲ್ಲಿ ಈ ಸೇವೆಗಳು ಎನ್ನುವುದನ್ನು ಕ್ಲಿಕ್ ಮಾಡಿ, ಎಡ ಭಾಗದಲ್ಲಿರುವ ಸೇವೆಗಳ ಲಿಸ್ಟ್ ನಲ್ಲಿ ಇ-ಪಡಿತರ ಚೀಟಿ ಎನ್ನುವುದನ್ನು ಸೆಲೆಕ್ಟ್ ಮಾಡಿ. ಇ-ಪಡಿತರ ಚೀಟಿಯ ಮತ್ತಷ್ಟು ಆಪ್ಷನ್ ಗಳು ಓಪನ್ ಆಗುತ್ತವೆ, ಅದರಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ ಪಟ್ಟಿ (Cancelled and Suspended list) ಎನ್ನುವ ಆಪ್ಷನ್ ಅನ್ನು ಕ್ಲಿಕ್ ಮಾಡಿ
* ಸ್ಕ್ರೀನ್ ಮೇಲೆ Cancelled and Suspended list ಎಂದು ಬರುತ್ತದೆ. ಅದರಲ್ಲಿ ನಿಮ್ಮ District, Thaluk ಸೆಲೆಕ್ಟ್ ಮಾಡಿ ಹಾಗೆ ನಿಮಗೆ ಯಾವ ತಿಂಗಳ ಲಿಸ್ಟ್ ಚೆಕ್ ಮಾಡಬೇಕು Month & Year ಸೆಲೆಕ್ಟ್ ಮಾಡಿ Go ಕ್ಲಿಕ್ ಮಾಡಿ
* ಯಾವೆಲ್ಲಾ ಕಾರ್ಡುಗಳು ನೀವು ಸೆಲೆಕ್ಟ್ ಮಾಡಿದ ತಿಂಗಳಿನಲ್ಲಿ ರದ್ದಾಗಿದೆ ಎನ್ನುವ ಪಟ್ಟಿ ಬರುತ್ತದೆ. ಅವರ ರೇಷನ್ ಕಾರ್ಡ್ ನಂಬರ್, ಕುಟುಂಬದ ಮುಖ್ಯಸ್ಥರ ಹೆಸರು, ಯಾವ ದಿನಾಂಕದಂದು ರದ್ದಾಗಿದೆ ಮತ್ತು ಅದಕ್ಕೆ ಕಾರಣ ಏನು ಎನ್ನುವ ಲಿಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಆ ತಿಂಗಳಿನ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಹಣ ಬರುವುದಿಲ್ಲ.