ಸರ್ಕಾರದ ಗ್ಯಾರೆಂಟಿ ಕಾರ್ಡ್ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಆರಂಭದಿಂದಲೂ ಸಾಕಷ್ಟು ವಿಜ್ಞಗಳು ಎದುರಾಗುತ್ತಿವೆ ಅಂತಲೇ ಹೇಳಬಹುದು. ಅರ್ಜಿ ಸ್ವೀಕಾರ ಮಾಡುವ ದಿನಾಂಕವನ್ನು ಕೂಡ ಅನೇಕ ಸಮಸ್ಯೆಗಳ ಕಾರಣದಿಂದ ಪದೇಪದೇ ಮುಂದೂಡಲಾಗುತ್ತಿತ್ತು.
ಕೊನೆಗೆ ಅಂತಿಮವಾಗಿ ಜುಲೈ 19 ರಿಂದ ಅರ್ಜಿ ಸ್ವೀಕಾರ ಮಾಡಲು ಅನುಮತಿ ನಿಡಲಾಯಿತಾದರೂ ಅದಕ್ಕೆ ರೂಪಿಸಿರುವ ಮನದಂಡಗಳಲ್ಲಿ ಪದೇಪದೇ ಬದಲಾವಣೆ ಆಯ್ತು. ಅಂತಿಮವಾಗಿ ಈಗ ಯೋಚನೆ ಲಾಂಚ್ ದಿನಾಂಕ (launch date postponed) ಯಾವುದು ಎನ್ನುವುದು ಕುರಿತು ಗೊಂದಲ ಎದುರಾಗಿದೆ.
ಯಾಕೆಂದರೆ ಯೋಜನೆಗೆ ಆದೇಶ ಪತ್ರದಲ್ಲಿ ತಿಳಿಸಿದ್ದ ಪ್ರಕಾರ ಆಗಸ್ಟ್ 15ರಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಯೋಜನೆಯನ್ನು ಲಾಂಚ್ ಮಾಡಿ 16ನೇ ತಾರೀಕಿನಂದು ಕರ್ನಾಟಕದ ಎಲ್ಲಾ ಕುಟುಂಬದ ಯಜಮಾನಿ ಖಾತೆಗೂ ಕೂಡ DBT ಮೂಲಕ 2000ರೂ. ಹಣ ವರ್ಗಾವಣೆ ಮಾಡಬೇಕಿತ್ತು.
ಆದರೆ ಈ ಯೋಜನೆಯನ್ನು ಆಗಸ್ಟ್ 20 ಕ್ಕೆ ಮುಂದೂಡಲಾಯಿತು, 21 ರಂದು ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ದಿನಾಂಕ ಕೂಡ ಬದಲಾಯಿತು ಕಾರ್ಯಕ್ರಮವನ್ನು ಗ್ರಾಂಡ್ ಆಗಿ ಸೆಲೆಬ್ರೇಟ್ ಮಾಡುವ ಉದ್ದೇಶದಿಂದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರು ತಮ್ಮ ತವರು ಜಿಲ್ಲೆಯಾದ ಬೆಳಗಾವಿಯಲ್ಲಿ (Belagavi) ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಿ.
ಈ ಕಾರ್ಯಕ್ರಮಕ್ಕೆ AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ವಾದ್ರ ಅವರನ್ನು ಕರೆಸಿ ಈ ಮೂಲಕ ದೇಶಕ್ಕೆ ಸಂದೇಶ ಕೊಡಬೇಕು ಎಂದು ಆಸೆ ಪಟ್ಟಿದ್ದರು. ಮತ್ತು ಈ ವಿಷಯವನ್ನು ಸುದ್ದಿಗೋಷ್ಠಿ (press meet) ನಡೆಸಿ ಸ್ವತಃ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laksmi Hebbalkar) ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ (D.K Shivakumar) ಅವರು ಮಾಧ್ಯಮಗಳಿಗೆ ತಿಳಿಸಿದ್ದರು.
ಆಗಸ್ಟ್ 27ರಂದು ಅದ್ದೂರಿಯಾಗಿ ಕಾರ್ಯಕ್ರಮ ನಡೆಯುತ್ತದೆ, ಆಗಸ್ಟ್ 28 ನೇ ತಾರೀಕಿನಂದು ಈ ಯೋಜನೆಗೆ ನೋಂದಾಯಿಸಿಕೊಂಡಿರುವ ಎಲ್ಲಾ ಫಲಾನುಭವಿಗಳ ಖಾತೆಗೆ ರೂ. 2000 ಸಹಾಯಧನ ವರ್ಗಾವಣೆ ಆಗಲಿದೆ ಎಂದು ತಿಳಿಸಿದ್ದರು. ಆದರೆ ಬಳಿಕ ಸಿದ್ದರಾಮಯ್ಯನವರು (C.M Siddaramaih) ಬೆಳಗಾವಿಯಲ್ಲಿ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳ ಪರಿಶೀಲನೆಗೆ ಹೋದಾಗ ಈ ಯೋಜನೆ ಜಾರಿ ದಿನಾಂಕ ಇನ್ನೆರಡು ದಿನ ಮುಂದೆ ಹೋಗಲಿದೆ ಎನ್ನುವ ಶಾ’ಕಿಂ’ಗ್ ಹೇಳಿಕೆಯನ್ನು ಕೊಟ್ಟಿದ್ದರು.
ಇದೀಗ ಅಂತಿಮವಾಗಿ ಎಂದು ಕಾರ್ಯಕ್ರಮ ಲಾಂಚ್ ಆಗುತ್ತದೆ ಹಾಗೂ ಯಾವಾಗ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಕುಟುಂಬದ ಯಜಮಾನಿಯರು ಕಾಯುತ್ತಿದ್ದಾರೆ. ಇತ್ತೀಚಿಗೆ ಕೃಷಿ ಸಚಿವರಾದ ಚೆಲುವರಾಯಸ್ವಾಮಿ (Agricultural Minister Cheluvaraya Swamy) ಅವರು ಈ ಕುರಿತು ಮತ್ತೊಂದು ಹೇಳಿಕೆ ಕೊಟ್ಟಿದ್ದಾರೆ.
ಆಗಸ್ಟ್ 30ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ, ಅಂದು ರಾಜ್ಯದ 1.10 ಕೋಟಿ ಮಹಿಳೆಯರ ಖಾತೆಗೆ 2000ರೂ. ಸಹಾಯಧನ ವರ್ಗಾವಣೆ ಆಗಲಿದೆ ಎನ್ನುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಮಾತನಾಡಿ 1.28 ಕೋಟಿ ಫಲಾನುಭವಿಗಳನ್ನು ಈ ಯೋಜನೆಗೆ ಗುರುತಿಸಲಾಗಿತ್ತು.
ಆದರೆ ಕುಟುಂಬದ ಯಜಮಾನಿ ಮಹಿಳೆಯ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಕಾರಣಕ್ಕಾಗಿ ಎಲ್ಲರೂ ಯೋಜನೆಗೆ ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ತಿದ್ದುಪಡಿ ಮಾಡಿಸಿಕೊಂಡ ನಂತರ ಸೇರ್ಪಡೆ ಆಗಬಹುದು. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಯಾವುದೇ ಕಡೆ ದಿನಾಂಕ ನಿಗಧಿ ಮಾಡಿಲ್ಲ (No last date to apply Gruhalakshmi Scheme).
ಈಗಾಗಲೇ ಅರ್ಜಿ ಸಲ್ಲಿಸಿರುವವರು 8147500500 ಈ ಸಹಾಯವಾಣಿ (helpline) ಸಂಖ್ಯೆಗೆ ಪಡಿತರ ಚೀಟಿ ಸಂಖ್ಯೆಯನ್ನು ಫಲಾನುಭವಿ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಸಂಖ್ಯೆಯಿಂದ ಕಳುಹಿಸುವ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವುದು ಯಶಸ್ವಿ ಆಗಿದೆಯೋ ಇಲ್ಲವೋ ಎನ್ನುವುದನ್ನು ಕಂಫರ್ಮ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ