ಕರ್ನಾಟಕ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಗೃಹಲಕ್ಷ್ಮಿ ಯೋಜನೆ (Gruhalakshmi) ಮೂಲಕ ರೇಷನ್ ಕಾರ್ಡ್ (Ration card) ಹೊಂದಿರುವ ಪ್ರತಿ ಕುಟುಂಬದ ಮುಖ್ಯಸ್ಥೆಯು (head of the family women) ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 2000 ಸಹಾಯಧನ ಪಡೆಯಬಹುದಾಗಿದೆ.
ಆಗಸ್ಟ್ 30 ರಿಂದ ಸರ್ಕಾರವು ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುತ್ತಿದ್ದು ಈಗಾಗಲೇ ಅರ್ಜಿ ಸಲ್ಲಿಸಿದ್ದ ಶೇಕಡವಾರು ಮಂದಿ ಮೊದಲನೇ ಹಣವನ್ನು (August month amount) ಪಡೆದಿದ್ದಾರೆ ಎರಡನೇ ಕಂತಿನ ಹಣವನ್ನು ಪಡೆಯಲು ಕಾಯುತ್ತಿದ್ದಾರೆ ಅವರಿಗೆಲ್ಲ ಸಿಹಿ ಸುದ್ದಿ ಇದೆ.
ಅದೇನೆಂದರೆ ಅಕ್ಟೋಬರ್ 15 ರ ಒಳಗೆ ಈಗಾಗಲೇ ಮೊದಲ ಕಂತಿನ ಹಣ ಪಡೆದಿರುವ ಎಲ್ಲರ ಖಾತೆಗೂ ಎರಡನೇ ಕಂತಿನ ಹಣ (Second month amount) ವರ್ಗಾವಣೆಯಾಗಲಿದೆ. ಆದರೆ ಅರ್ಜಿ ಸಲ್ಲಿಸಿ ಮಂಜೂರಾತಿ ಪತ್ರ (acknowledgment letter) ಪಡೆದಿದ್ದರು ಮೊದಲನೇ ಕಂತಿನ ಹಣವನ್ನೇ ಪಡೆಯದಿದ್ದವರು ಬಹಳ ಗೊಂದಲಕ್ಕೊಳಗಾಗಿದ್ದಾರೆ.
ತಮ್ಮ ಯಾವ ಸಮಸ್ಯೆಯಿಂದ ಹಣ ವರ್ಗಾವಣೆಯಾಗಿಲ್ಲ, ಅರ್ಜಿ ಸ್ಥಿತಿ (application status) ಏನಾಗಿದೆ ಎಂದು ಸ್ಪಷ್ಟವಾಗಿ ತಿಳಿಯದಾಗಿದ್ದಾರೆ. ಅವರಿಗೆಲ್ಲ ಕೆಲ ಪ್ರಮುಖ ಮಾಹಿತಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹೊಸದಾಗಿ APL / BPL ಮತ್ತು ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಈ ದಿನಾಂಕದಿಂದ ಅರ್ಜಿ ಆಹ್ವಾನ.!
● ಗೃಹಲಕ್ಷ್ಮೀ ಯೋಜನೆ ಹಣ ವರ್ಗಾವಣೆ ಆಗದಿರುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು (KWCWD) ಕೂಡ ಮಾಹಿತಿ ನೀಡಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರ 8 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳು (Bank account problem) ಸಮಸ್ಯೆಯಾಗಿದೆ, ಹಾಗಾಗಿ ಹಣ ತುಂಬಿಸಲಾಗಿಲ್ಲ ಅವರು ಈ ಸಮಸ್ಯೆಯನ್ನು ಸರಿಪಡಿಸಿಕೊಂಡರೆ ಮುಂದಿನ ತಿಂಗಳಿನಲ್ಲಿ ಒಟ್ಟಿಗೆ 4,000 ರೂ. ಹಣ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.
1. ಕೆಲವು ಮಹಿಳೆಯರ ಬ್ಯಾಂಕ್ ಖಾತೆ ಓಪನ್ ಮಾಡಿ ಹಲವು ವರ್ಷಗಳಾಗಿದೆ. ಹಣದ ವಹಿವಾಟು ನಡೆಸದ ಕಾರಣ ಬ್ಯಾಂಕುಗಳು ಆ ಖಾತೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿವೆ. ಹಾಗಾಗಿ ಇಂತಹ ಖಾತೆಗಳಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗಿಲ್ಲ
2. ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದ್ದಾಗ ಮಾತ್ರ DBT ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ಖಾತೆಗಳಿಗೆ ಆಧಾರ್ ಲಿಂಕ್ ಮಾಡಿಸಿದವರ ಖಾತೆಗಳಿಗೂ ಕೂಡ ಹಣ ವರ್ಗಾವಣೆ ಆಗಿಲ್ಲ ಎಂದು ತಿಳಿಸಿದ್ದಾರೆ.
ಗಂಡ ಹೆಂಡತಿಗೆ ಪ್ರತಿ ತಿಂಗಳು 10,000 ಪಿಂಚಣಿ ಕೇಂದ್ರ ಸರ್ಕಾರದ ಹೊಸ ಯೋಜನೆ ಇದು.!
● ಕೆಲವು ಮಹಿಳೆಯರು ರೇಷನ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ಹೆಸರಿನಲ್ಲಿ ಹೊಂದಾಣಿಕೆಯಾಗಿಲ್ಲ. ಹೆಸರನ ಜೊತೆ ಸರ್ ನೇಮ್ ಹೆಚ್ಚುವರಿಯಾಗಿ ಸೇರಿಸುವುದು, ಅಥವಾ ಸ್ಪೆಲ್ಲಿಂಗ್ ಬಿಟ್ಟಿರುವುದು ಈ ರೀತಿ ವ್ಯತ್ಯಾಸಗಳಾಗಿವೆ. ಈ ಮೂರು ದಾಖಲೆಗಳಲ್ಲೂ ಯಥಾವತ್ತಾಗಿ ಒಂದೇ ರೀತಿಯಾಗಿ ಹೆಸರು ಇದ್ದಾಗ ಮಾತ್ರ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ.
ಈ ರೀತಿ ಸಮಸ್ಯೆಯಾಗಿರುವ ಮಹಿಳೆಯರು ಆಧಾರ್ ಕಾರ್ಡ್ ನಲ್ಲಿ ಇರುವಂತೆ ರೇಷನ್ ಕಾರ್ಡ್ ನಲ್ಲಿ ಹೆಸರು ತಿದ್ದುಪಡಿ ಹಾಗೂ ಆಧಾರ್ ಕಾರ್ಡ್ ದಾಖಲೆಯನ್ನು ಕೊಟ್ಟು ಬ್ಯಾಂಕ್ ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಸಿಕೊಂಡಾಗ ಅವರಿಗೆ ಮುಂದಿನ ತಿಂಗಳಿಂದ ಹಣ ಹೋಗುತ್ತದೆ.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ.!
● ಎಲ್ಲಾ ಮಾಹಿತಿಗಳು ಸರಿ ಇದ್ದರೂ ರೇಷನ್ ಕಾರ್ಡ್ ನಲ್ಲಿ ಇ-ಕೆವೈಸಿ (e-kyc) ಆಗದಿದ್ದಾಗ ಕೂಡ ಹಣ ವರ್ಗಾವಣೆಯಾಗುವುದಿಲ್ಲ. ಹಾಗಾಗಿ ಈ ರೀತಿ ಸಮಸ್ಯೆ ಇರುವವರು ಹತ್ತಿರದಲ್ಲಿರುವ ನ್ಯಾಯ ಬೆಲೆ ಅಂಗಡಿ ಅಥವಾ ಸೇವಾ ಕೇಂದ್ರಕ್ಕೆ ಭೇಟಿ ಕೊಟ್ಟು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್ ಹಾಗೂ ಬಯೋಮೆಟ್ರಿಕ್ ಮಾಹಿತಿಯೊಂದಿಗೆ ಇ-ಕೆವೈಸಿ ಅಪ್ಡೇಟ್ ಮಾಡಿಸಬೇಕು. ನಂತರ ಅವರಿಗೆ ಮುಂದಿನ ತಿಂಗಳಿಂದ ಹಣ ವರ್ಗಾವಣೆಯಾಗಲಿದೆ.
● ಮಹಾಲಕ್ಷ್ಮಿ ಯೋಜನೆ ಅರ್ಜಿ ಸ್ಥಿತಿ ತಿಳಿಯಲು ಸೇವಾ ಸಿಂಧು ಪೋರ್ಟಲ್ ಗೆ ಭೇಟಿಕೊಡಿ ಅಥವಾ ಹತ್ತಿರದ ಯಾವುದೇ ಸೇವಾ ಕೇಂದ್ರಕ್ಕೆ ಹೋಗಿ ಪಡಿತರ ಚೀಟಿ ದಾಖಲೆ ನೀಡುವ ಮೂಲಕ ನಿಮ್ಮ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡಬಹುದು.