ಇತ್ತೀಚಿನ ಕಾಲದಲ್ಲಿ ಮೋ’ಸ ವಂ’ಚ’ನೆಗಳು ಹೆಚ್ಚಾಗುತ್ತಿವೆ. ಜನರನ್ನು ಯಾಮಾರಿಸಿ ಬದುಕುವುದನ್ನು ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ ಹಾಗಾಗಿ ಪ್ರತಿಯೊಂದರ ನ’ಕ’ಲು ಹೆಚ್ಚಾಗುತ್ತಿದೆ. ಅಮಾಯಕ ಜನರನ್ನು ಯಾಮಾರಿಸಿ ಅವರ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಅಕೌಂಟ್ ಇವುಗಳ ದಾಖಲೆ ಪಡೆದು ಹಣ ಹೊಡೆಯುತ್ತಿರುವವರ ಸಂಖ್ಯೆ ಒಂದು ಕಡೆ ಆದರೆ ಇದೇ ದಾಖಲೆಗಳನ್ನು ಇಟ್ಟುಕೊಂಡು ಅಪರಾಧಿ ಕೃತ್ಯಗಳಿಗೆ ಬಳಸಿಕೊಂಡು ಅಮಾಯಕರನ್ನು ತಗಲಾಕಿಸುವ ಮತ್ತೊಂದು ಬಳಗವು ಕೂಡ ಸೃಷ್ಟಿಯಾಗಿದೆ.
ಸೈಬರ್ ಕ್ರೈಂ ಹಾಗೂ ಪೊಲೀಸ್ ಪಡೆ ಈ ಬಗ್ಗೆ ಸದಾ ಕಾಲ ಎಚ್ಚರಿಸುತ್ತಾ ಬಂದಿದೆ, ಈಗ ಮತ್ತೊಂದು ಶಾ’ಕಿಂ’ಗ್ ನ್ಯೂಸ್ ಎದುರಾಗಿದೆ. ಅದೇನೆಂದರೆ ಯಾರದ್ದೋ ದಾಖಲೆಗಳನ್ನು ಕೊಟ್ಟು ಸಿಮ್ ಕಾರ್ಡ್ ಗಳನ್ನು ಖರೀದಿಸಿ ಇವುಗಳನ್ನು ಭ್ರ’ಷ್ಟಾ’ಚಾ’ರ, ಭಯೋತ್ಪಾದನೆ, ಆರ್ಥಿಕ ವಂಚನೆ ಇನ್ನು ಮುಂತಾದ ಕೃತ್ಯಗಳಿಗೆ ಬಳಸಿಕೊಳ್ಳುತ್ತಿರುವುದು ತಿಳಿದು ಬಂದಿದೆ.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
ಅಪರಾಧಿ ಕೃತಗಳನ್ನು ಭೇದಿಸುವಾಗ ಪೊಲೀಸರು ಮೊಬೈಲ್ ಸಂಖ್ಯೆ ನೆಟ್ವರ್ಕ್ ಆಧಾರಿತವಾಗಿ ಅಪರಾಧಿಗಳನ್ನು ಕಂಡುಹಿಡಿತ್ತಾರೆ, ಆದರೆ ಅನೇಕ ಪ್ರಕರಣಗಳಲ್ಲಿ ಅವರ ವಿಚಾರಣೆ ಬಳಿಕ ಅವರ ಹೆಸರಿನಲ್ಲಿ ಸಿಮ್ ಖರೀದಿಸಿ ಬೇರೆಯವರು ದು’ಷ್ಕೃ’ತ್ಯ ಮಾಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ.
ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ದೂರ ಸಂಪರ್ಕ ಕಾಯ್ದೆಯನ್ನು 2023ರಲ್ಲಿ ಜಾರಿಗೆ ತರಲಾಗಿದೆ. ಕಳೆದ ವರ್ಷ 55.52 ಲಕ್ಷ ಸಿಮ್ ಗಳನ್ನು ಈ ರೀತಿ ಪತ್ತೆ ಹಚ್ಚಿ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ ಮತ್ತು ಜನವರಿ 1, 2024ರಲ್ಲಿ ಇದಕ್ಕೆ ಇನ್ನಷ್ಟು ಮಹತ್ವ ಕೊಟ್ಟು ಜನಸಾಮಾನ್ಯರಿಗೆ ಈ ಬಗ್ಗೆ ಜಾಗೃತಿಯನ್ನು ಸಹ ಮೂಡಿಸಲಾಗುತ್ತಿದೆ.
ಜಲ ಜೀವನ್ ಮಿಷನ್ ನಿಂದ ಬಂಪರ್ ನೇಮಕಾತಿ.! ಅರ್ಜಿ ಸಲ್ಲಿಸಿದವರಿಗೆ ನಿಮ್ಮ ಗ್ರಾಮದಲ್ಲಿಯೇ ಸಿಗಲಿದೆ ಉದ್ಯೋಗ.!
ಮುಖ್ಯವಾಗಿ ಈ ಸಮಸ್ಯೆ ಪರಿಹಾರಕ್ಕೆ ಎರಡು ರೀತಿಯಾಗಿ ಕ್ರಮ ಕೈಗೊಳ್ಳಲಾಗಿದ್ದು ದೂರಸಂಪರ್ಕ ಕಾಯ್ದೆ ಅನ್ವಯ ಇನ್ನು ಮುಂದೆ ಸಿಮ್ ಕಾರ್ಡ್ ಗಳನ್ನು ಖರೀದಿಸಲು ಇರುವ ನಿಯಮಗಳನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಸಿಮ್ ಕಾರ್ಡ್ ಡೀಲರ್ ಗಳು ಮತ್ತು ಸಿಮ್ ಕಾರ್ಡ್ ಮಾರುವವರು ಕಡ್ಡಾಯವಾಗಿ ಪೊಲೀಸ್ ವೆರಿಫಿಕೇಶನ್ ಮತ್ತು ಬಯೋಮೆಟ್ರಿಕ್ ಒಳಗಾಗಬೇಕು ಇದರಿಂದ ಅನಧಿಕೃತ ವ್ಯಕ್ತಿಗಳಿಗೆ ಸಿಮ್ ಕಾರ್ಡ್ ಮಾಡುವುದು ತಪ್ಪುತ್ತದೆ ಎನ್ನುವ ಪರಿಹಾರ ಕಂಡುಕೊಳ್ಳಲಾಗಿದೆ.
ಇದರ ಜೊತೆಗೆ ಈಗಾಗಲೇ ನಿಮ್ಮ ಹೆಸರಿನಲ್ಲಿ ಯಾರಾದರೂ ನಕಲಿ ಸಿಮ್ ಪಡೆದಿದ್ದಾರೆ ಎನ್ನುವುದನ್ನು ಮೊಬೈಲ್ ನಲ್ಲಿ ಗುರುತಿಸಿ ಬ್ಲಾಕ್ ಮಾಡುವ ಅವಕಾಶವನ್ನು ಕೂಡ ದೂರ ಸಂಪರ್ಕ ಇಲಾಖೆ ತಂತ್ರಾಂಶದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಕೂಡಲೇ ನೀವು ಕೂಡ ಈ ವಿಧಾನದಲ್ಲಿ ಚೆಕ್ ಮಾಡಿ ನಿಮ್ಮ ಹೆಸರಿನಲ್ಲಿ ನೀವು ಬಳಸದೆ ಇರುವ ಸಿಮ್ ಕಾರ್ಡ್ ಇದ್ದರೆ ಬ್ಲಾಕ್ ಮಾಡಿ.
ಆಸ್ತಿ & ಜಮೀನಿಗೆ ತಕರಾರು ಸಲ್ಲಿಸುವುದು ಹೇಗೆ ನೋಡಿ.!
* ಡಿಪಾರ್ಟ್ಮೆಂಟ್ ಆಫ್ ಟೆಲಿ ಕಮ್ಯುನಿಕೇಷನ್ ನ Telecom Analytics for Fraud Management and Consumer Production – TAFCOP
https://tafcop.sancharsaathi.gov.in/telecomUser/ ಈ ವೆಬ್ ಸೈಟ್ ಗೆ ಭೇಟಿ ಕೊಡಿ.
* ನಿಮ್ಮ ಹತ್ತು ಅಂಕಿಯ ಮೊಬೈಲ್ ನಂಬರ್ ಮತ್ತು Validate captcha ಎಂಟ್ರಿ ಮಾಡಿ, ನಿಮ್ಮ ಮೊಬೈಲ್ ನಂಬರ್ ಗೆ OTP ಬರುತ್ತದೆ, OTP ಯನ್ನು ನಮೂದಿಸಿ.
* ನಿಮ್ಮ ಹೆಸರಲ್ಲಿ ಎಷ್ಟು ಸಿಮ್ ಖರೀದಿಸಲಾಗಿದೆ ಮತ್ತು ಅವುಗಳ ಮೊಬೈಲ್ ಸಂಖ್ಯೆ ಕೂಡ ಕಾಣಿಸುತ್ತದೆ.
* ಆ ಸಂಖ್ಯೆಗಳ ಎದುರಿಗೆ Not My Number, Required , not Required ಎನ್ನುವ ಆಯ್ಕೆಗಳು ಕೂಡ ಇರುತ್ತವೆ. ಇದರಲ್ಲಿ ನಿಮ್ಮ ಸಂಖ್ಯೆ ಅಲ್ಲದೆ ಇದ್ದದ್ದನ್ನು Not My Number ಎಂದು ಸೆಲೆಕ್ಟ್ ಮಾಡಿ ಈಗ ಇರುವ ಪ್ರಸ್ತುತ ಸಂಖ್ಯೆಗೆ Required ಕೊಟ್ಟು ನಿಮ್ಮ ಸಂಖ್ಯೆ ಆಗಿದ್ದರೂ ಈಗ ಅದರ ಅವಶ್ಯಕತೆ ಇಲ್ಲದ ಸಂಖ್ಯೆಗೆ Not Required ಎಂದು ಕ್ಲಿಕ್ ಮಾಡುವ ಮೂಲಕ ನಿಮ್ಮ ಹೆಸರಿನಲ್ಲಿರುವ ಸಂಖ್ಯೆಗಳ ಸಂಪರ್ಕದ ಬಗ್ಗೆ ದೃಢೀಕರಿಸಿ. ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
7,000 ರೈತರಿಗೆ ಅರಣ್ಯ ಭೂಮಿ ಮಂಜೂರು.! ಮಂಜೂರಾತಿಗೆ ನಿಯಮಗಳೇನು? ಯಾವೆಲ್ಲ ರೈತರಿಗೆ ಹಕ್ಕುಪತ್ರ ಸಿಗಲಿದೆ ನೋಡಿ.!