ಪ್ರತಿಯೊಬ್ಬರಿಗೂ ಕೂಡ ಹಣಕಾಸಿನ ಅನಿವಾರ್ಯತೆ ಬಂದೇ ಬರುತ್ತದೆ. ಈ ಸಮಯದಲ್ಲಿ ಸ್ನೇಹಿತರ ಹಾಗೂ ಕುಟುಂಬದವರ ಬಳಿ ಸಾಲ ಕೇಳಲು ಮುಜುಗರ ಎನಿಸುತ್ತದೆ. ಆಗ ನಾವು ಹೊರಗಿಂದವರಿಂದಲೂ ಸಾಲ ಮಾಡಬೇಕಾಗುತ್ತದೆ ಇದೇ ಪರಿಸ್ಥಿತಿ ಸಾಲ ಕೊಡುವವರೆಗೂ ಇರುತ್ತದೆ.
ಬಡ್ಡಿ ಆಸೆಗೆ ಅಥವಾ ಬಹಳ ವರ್ಷದಿಂದ ನೋಡಿರುವ ವ್ಯಕ್ತಿ ಎನ್ನುವ ಕಾರಣಕ್ಕೆ ಅಥವಾ ಇತ್ತೀಚಿಗೆ ಪರಿಚಯವಾದರೂ ಒಳ್ಳೆಯವರು ಎನಿಸುತ್ತದೆ ಎನ್ನುವ ಕಾರಣಕ್ಕೆ ಸಾಲ ಕೊಟ್ಟು ಬಿಡುತ್ತೇವೆ. ಸಾಲ ಕೊಡುವಾಗ ಖಾಲಿ ಚೆಕ್ ತೆಗೆದುಕೊಳ್ಳುವ ವಾಡಿಕೆ ಇದೆ. ಬ್ಲಾಂಕ್ ಚೆಕ್ ತೆಗೆದುಕೊಂಡು ಒಂದು ವೇಳೆ ಅವರು ಸಾಲ ಕೊಡದೇ ಇದ್ದರೆ ಚೆಕ್ ಬೌನ್ಸ್ ಕೇಸ್ ಹಾಕೋಣ, ಈ ರೀತಿ ಸಾಲ ಕೊಡುವುದು ಸೇಫ್ ಎಂದುಕೊಂಡು ಕೊಟ್ಟು ಬಿಡುತ್ತಾರೆ.
ನಿಮ್ಮ ಹೆಸರಿನಲ್ಲಿ ಯಾರಾದ್ರೂ ಸಿಮ್ ಖರೀದಿಸಿದ್ದಾರಾ.? ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಆದರೆ ಇಷ್ಟಕ್ಕೆ ಇದು ಮುಗಿಯುವುದಿಲ್ಲ. ನೀವು ಕೊಟ್ಟ ಸಾಲ ಸರಿಯಾಗಿ ವಾಪಸ್ ಬರಬೇಕು ಎಂದರೆ ನೀವು ಚೆಕ್ ಕೊಟ್ಟಿದ್ದಾರೆ ಎನ್ನುವುದನ್ನು ನಂಬಿಕೊಂಡು ಸಾಲ ಕೊಟ್ಟಿದ್ದರೂ ಚೆಕ್ ಬೌನ್ಸ್ ಪ್ರಕರಣದಡಿ ಕೇಸ್ ಹಾಕಿದರೂ ವರ್ಷಗಟ್ಟಲೆ ಕೋರ್ಟ್ ಗೆ ತಿರುಗಿ ಹಣ ಸಿಗದ ಪರಿಸ್ಥಿತಿಯು ಎದುರಾಗಬಹುದು.
ಹಾಗಾಗಿ ಸಾಲ ಕೊಡುವಾಗ ಚೆಕ್ ಮಾತ್ರವಲ್ಲದೆ ಇನ್ನೂ ಅನೇಕ ವಿಷಯಗಳ ಬಗ್ಗೆ ನೀವು ಗಮನ ಕೊಡಬೇಕು. ಅದೇನೆಂದರೆ ನೀವು ಚೆಕ್ ತೆಗೆದುಕೊಳ್ಳುವುದರ ಜೊತೆಗೆ ಆತನ ಬ್ಯಾಂಕ್ ಡಿಟೇಲ್ಸ್ ಕೂಡ ನೋಡಬೇಕು. ಯಾಕೆಂದರೆ ಆತನ ಬ್ಯಾಂಕ್ ವಹಿವಾಟು ಯಾವ ರೀತಿ ಇದೆ ನಾವು ಕೊಟ್ಟ ಸಾಲ ವಾಪಸ್ ಕೊಡುವುದಕ್ಕೆ ಆತ ನಿಜವಾಗಿಯೂ ಸಾಮರ್ಥ್ಯ ಹೊಂದಿದ್ದಾನೆ ಎನ್ನುವುದನ್ನು ನೋಡಿ ಸಾಲ ಕೊಡಬೇಕು.
ಗೃಹಲಕ್ಷ್ಮಿ ಯೋಜನೆ 5ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್ ಜಾರಿ.!
ಸಾಲ ವಾಪಸ್ ಕೊಡದೆ ಇದ್ದಾಗ ಚೆಕ್ ಬೌನ್ಸ್ ಕೇಸ್ ಹಾಕಿದರು ನೀವು ನೋಟಿಸ್ ಸಮನ್ಸ್ ಗಳನ್ನು ಕಳುಹಿಸಬೇಕು ಅವರ ಸರಿಯಾದ ವಿಳಾಸ ನಿಮಗೆ ಗೊತ್ತಿರಬೇಕು. ಅವರ ವಿಳಾಸ ಹುಡುಕುವ ಕೆಲಸ ಕೋರ್ಟ್ ಆಗಲಿ ಪೊಲೀಸ್ ಆಗಲಿ ಮಾಡುವುದಿಲ್ಲ. ನೀವು ಕೊಟ್ಟ ವಿಳಾಸಕ್ಕೆ ನೋಟಿಸ್ ಗಳನ್ನು ಕಳುಹಿಸುತ್ತಾರೆ.
ನೀವು ಕಳುಹಿಸಿದ ನೋಟಿಸ್ ಗಳು ಅವರಿಗೆ ತಲುಪಿದರೆ ಕೇಸ್ ನಡೆಯುವುದಕ್ಕೆ ಸರಾಗವಾಗುತ್ತದೆ ಒಂದು ವೇಳೆ ನೀವು ಕೊಟ್ಟ ಸಮನ್ಸ್ ಗಳು ಅವರಿಗೆ ತಲುಪೆ ಇಲ್ಲ ಅಂದಾಗ ಅವರ ಸ್ವೀಕರಿಸಲೇ ಇಲ್ಲ ಅವರ ಸರಿಯಾದ ವಿಳಾಸಕ್ಕೆ ಹೋಗಿಲ್ಲ ಎಂದಾಗ ಕೇಸ್ ಗೆ ಹಿನ್ನಡೆಯಾಗುತ್ತದೆ ಹಾಗಾಗಿ ಅವರ ಪರ್ಮನೆಂಟ್ ವಿಳಾಸ ನಿಮಗೆ ಗೊತ್ತಿರಲೇಬೇಕು.
ಜಲ ಜೀವನ್ ಮಿಷನ್ ನಿಂದ ಬಂಪರ್ ನೇಮಕಾತಿ.! ಅರ್ಜಿ ಸಲ್ಲಿಸಿದವರಿಗೆ ನಿಮ್ಮ ಗ್ರಾಮದಲ್ಲಿಯೇ ಸಿಗಲಿದೆ ಉದ್ಯೋಗ.!
ಕೆಲವರು ಮೂರು ತಿಂಗಳು ಆರು ತಿಂಗಳ ಹಿಂದೆ ಪರಿಚಯವಾಗಿರುತ್ತಾರೆ ಅವರ ಬ್ಯಾಗ್ರೌಂಡ್ ಗೊತ್ತಿರುವುದಿಲ್ಲ ಅವರು ಈಗಷ್ಟೇ ನೀವಿರುವ ಪ್ರದೇಶಕ್ಕೆ ಬಂದಿರುತ್ತಾರೆ ಫ್ಯಾಮಿಲಿ ಜೊತೆ ಇದ್ದಾರೋ ಒಬ್ಬರೇ ಇದ್ದಾರ ಎನ್ನುವುದು ಗೊತ್ತಿರುವುದಿಲ್ಲ, ಅವರ ಮನೆ ಅಕ್ಕ ಪಕ್ಕ ನೀವು ವಿಚಾರಿಸುವುದಿಲ್ಲ ಈಗ ಬಂದು ಯಾವುದೋ ಅಂಗಡಿ ಇಟ್ಟವರಿಗೆಲ್ಲ.
ಲಕ್ಷಾಂತರ ಸಾಲ ಕೊಟ್ಟರೆ ಅವರು ಅಂಗಡಿ ಬಿಟ್ಟು ಹೋದರೆ ಅಥವಾ ಅಂಗಡಿ ಖಾಲಿ ಮಾಡಿಕೊಂಡು ಹೋದರೆ ನೀವು ಅವರನ್ನು ಹುಡುಕಲು ಬಹಳ ಕಷ್ಟ ಆಗುತ್ತದೆ. ಕೆಲವರು ತಾವಿರುವ ಜಿಲ್ಲೆಯನ್ನು ಬದಲಾಯಿಸುತ್ತಾರೆ ಕೆಲವರು ಫ್ಯಾಮಿಲಿ ಸಮೇತ ಬೇರೆ ಪ್ರದೇಶಕ್ಕೆ ಹೋಗಿಬಿಡುತ್ತಾರೆ ಇಂತಹ ಸಂದರ್ಭಗಳನ್ನು ನೀವು ಹಣ ವಸೂಲಿ ಮಾಡುವುದಾದರೂ ಹೇಗೆ ಅದಕ್ಕಾಗಿ ಹಣ ಕೊಡುವ ಸಮಯದಲ್ಲಿ ಈ ವಿಚಾರಗಳ ಬಗ್ಗೆ ಯೋಚನೆ ಮಾಡಿ ಸಾಲ ಕೊಡಿ.