ಕಾಂಗ್ರೆಸ್ ಸರ್ಕಾರದ ಮೊದಲನೇ ಗ್ಯಾರಂಟಿಯಾಗಿ ಗೃಹ ಜ್ಯೋತಿ ಯೋಜನೆ ಘೋಷಣೆ ಆಗಿತ್ತು. ಈಗ ಜುಲೈ ತಿಂಗಳಿನಿಂದ ಸರ್ಕಾರ ವಿಧಿಸಿರುವ ಕಂಡೀಶನ್ ಒಳಗೆ ವಿದ್ಯುತ್ ಬಳಕೆ ಮಾಡುವ ಫಲಾನುಭವಿಗಳು ಇನ್ನು ಮುಂದೆ ಶುಲ್ಕ ಪಾಲತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಇದೆ ಜುಲೈ ತಿಂಗಳಿಂದ ಅಂದರೆ ಜುಲೈ ತಿಂಗಳಿನಲ್ಲಿ ಮಾಡಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಬರುವ ಬಿಲ್ ಅನ್ನು ಸರ್ಕಾರವೇ ಬರಿಸಲಿದೆ ಎಂದು ಘೋಷಣೆ ನೀಡಿದೆ.
ಗೃಹಜೋತಿ ಯೋಜನೆಗೆ ಕರ್ನಾಟಕದ ಎಲ್ಲಾ ಕುಟುಂಬಗಳಿಗೂ ಕೂಡ ಇನ್ನೂರು ಉಚಿತ ವಿದ್ಯುತ್ ಇರುವುದರಿಂದ ಫಲಾನುಭವಿಗಳಿಂದ ಅರ್ಜಿ ಕೂಡ ಸ್ವೀಕಾರ ಮಾಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2.14 ಕೋಟಿ ಫಲಾನುಭವಿಗಳಿದ್ದಾರೆ. ಅದರ ಪೈಕಿ 1.02 ಕೋಟಿ ಅರ್ಜಿಗಳು ಈವರೆಗೆ ಸಲ್ಲಿಕೆ ಆಗಿದೆ ಎಂದು ವಿದ್ಯುತ್ ಇಲಾಖೆ ತಿಳಿಸಿದೆ.
ಇದರ ಜೊತೆ ಇಲಾಖೆಯು ಮತ್ತೊಂದು ಪ್ರಮುಖವಾದ ವಿಷಯವನ್ನು ಸಾರ್ವಜನಿಕರಿಗೆ ತಿಳಿಸಿದೆ. ಅದೇನೆಂದರೆ, ಗೃಹಜ್ಯೋತಿ ಯೋಜನೆಗೆ ಅರ್ಜಿ ಆರಂಭವಾದ 18 ಮತ್ತು 19ನೇ ತಾರೀಖಿನಂದು 1.61 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. ಆ ಎರಡು ದಿನಗಳು ಸರ್ವರ್ ಮೇಲೆ ಅಧಿಕ ಒತ್ತಡ ಬಿದ್ದ ಕಾರಣ ತಾಂತ್ರಿಕ ದೋಷ ಉಂಟಾಗಿ ಅರ್ಜಿ ಸಲ್ಲಿಸಿದವರಲ್ಲಿ 50% ಅರ್ಜಿಗಳು ತಿರಸ್ಕೃತಗೊಂಡಿವೆ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿ ಸ್ಥಿತಿಯನ್ನು ತಿಳಿದುಕೊಳ್ಳಬೇಕು ಎಂದು ಹೇಳಿದೆ.
ನೀವೇನಾದರೂ ಜೂನ್ 18, 19ರಂದು ಅರ್ಜಿ ಸಲ್ಲಿಸಿದ್ದರೆ ಅಥವಾ ಆ ಮೊದಲ ವಾರದಲ್ಲಿ ಸರ್ವರ್ ಬಹಳಷ್ಟು ಸ್ಲೋ ಇದ್ದ ಕಾರಣ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಆರಂಭವಾದ ಮೊದಲ ವಾರದಲ್ಲಿ ಅರ್ಜಿ ಸಲ್ಲಿಸಿದ್ದರೆ ನಿಮ್ಮ ಅರ್ಜಿ ಸ್ಟೇಟಸ್ ಏನಾಗಿದೆ ಎಂದು ಚೆಕ್ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಅರ್ಜಿ ತಿರಸ್ಕೃತ ಗೊಂಡಿದ್ದರೆ ಜುಲೈ ತಿಂಗಳ ಬಳಕೆಗೆ ಆಗಸ್ಟ್ ನಲ್ಲಿ ಉಚಿತ ವಿದ್ಯುತ್ ಪಡೆಯುವ ಬದಲು ಬಿಲ್ ಪಾವತಿ ಮಾಡಬೇಕಾಗುತ್ತದೆ.
ಹೀಗಾಗಬಾರದು ಎಂದರೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿರುವವರು ತಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.
● ಮೊದಲಿಗೆ https://sevasindhugs.karnataka.gov.in/ ಈ ಲಿಂಕ್ ಕ್ಲಿಕ್ ಮಾಡುವ ಮೂಲಕ ವಿದ್ಯುತ್ ಇಲಾಖೆ ವೆಬ್ ಸೈಟ್ ಗೆ ಭೇಟಿ ಕೊಡಿ.
● ಮುಖಪುಟದಲ್ಲಿ ಎಡಭಾಗದ ಮೇಲೆ ಮೂರು ಅಡ್ಡಗೆರೆಗಳು ಇರುತ್ತವೆ. ಅದನ್ನ ಕ್ಲಿಕ್ ಮಾಡಿ ನಿಮ್ಮ ಅರ್ಜಿ ಸ್ಥಿತಿಯನ್ನು ತಿಳಿಯಿರಿ ಎನ್ನುವ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ.
● ನಿಮಗೆ ವಿದ್ಯುತ್ ಸರಬರಾಜು ಮಾಡುವ ESCOM ಹೆಸರನ್ನು ಸೆಲೆಕ್ಟ್ ಮಾಡಿ ನಿಮ್ಮ ವಿದ್ಯುತ್ ಬಿಲ್, ಅಕೌಂಟ್ ಐಡಿ ನಮೂದಿಸಿ ಚೆಕ್ ಸ್ಟೇಟಸ್ ಎನ್ನುವ ಆಪ್ಷನ್ ಆಯ್ಕೆ ಮಾಡಿ.
● ಕೂಡಲೇ ನಿಮ್ಮ ಸ್ಕ್ರೀನ್ ಮೇಲೆ ಅರ್ಜಿ ಸಲ್ಲಿಸಿರುವ ರೆಫರೆನ್ಸ್ ನಂಬರ್ ಅರ್ಜಿ, ಅಕೌಂಟ್ ಐಡಿ, ಅರ್ಜಿ ಸಲ್ಲಿಸಿರುವ ದಿನಾಂಕ ಮತ್ತು ವಿದ್ಯುತ್ ಇಲಾಖೆಯ ಘೋಷಣೆ ಬರುತ್ತದೆ. ಅದರಲ್ಲಿ ಯುವರ್ ಅಪ್ಲಿಕೇಶನ್ ಫಾರ್ ಗೃಹಜೋತಿ ಸ್ಕೀಮ್ ಇಸ್ ರಿಸೀವ್ಡ್ ಅಂಡ್ ಸೆಂಟ್ ಟು ESCOM ಫಾರ್ ಪ್ರೊಸೆಸಿಂಗ್ ಎಂದು ಇರುತ್ತದೆ.
● ಈ ರೀತಿ ಬಂದರೆ ನಿಮ್ಮ ಅಪ್ಲಿಕೇಶನ್ ಸಲ್ಲಿಕೆ ಆಗಿದೆ ಹಾಗೂ ಅದನ್ನು ವಿದ್ಯುತ್ ಇಲಾಖೆಗೆ ವರ್ಗಾಯಿಸುವ ಪ್ರೋಸೆಸಿಂಗ್ ನಲ್ಲಿ ಇದೆ ಎಂದರ್ಥ. ಒಂದು ವೇಳೆ ಈ ರೀತಿ ಬಂದಿಲ್ಲ ಎಂದರೆ ನಿಮ್ಮ ಅರ್ಜಿ ತಿರಿಸ್ಕತಗೊಂಡಿದೆ ಎಂದರ್ಥ. ಆಗ ತಪ್ಪದೆ ಮತ್ತೊಮ್ಮೆ ನೀವು ಗೃಹಜ್ಯೋತಿ ಯೋಜನೆಗೆ ನಿಮ್ಮ ಆಧಾರ್ ಸಂಖ್ಯೆ ಮತ್ತು ವಿದ್ಯುತ್ ಅಕೌಂಟ್ ಐಡಿ ದಾಖಲೆ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 25ರ ಒಳಗಡೆ ಅರ್ಜಿ ಸಲ್ಲಿಸಿದರೆ ಮಾತ್ರ ಜುಲೈ ತಿಂಗಳಿನ ಉಚಿತ ವಿದ್ಯುತ್ ಬಳಕೆಗೆ ಅರ್ಹರಾಗಿರುತ್ತೀರಿ.