ಮಿಸ್ಟೇಕ್ ಅನ್ನೋದು ಕಾಮನ್. ಮಿಸ್ಟೇಕ್ ಮಾಡದೇ ಇರೋರು ಯಾರಾದ್ರೂ ಇದ್ದಾರಾ? ಹೇಳಿ. ಈ ಮಿಸ್ಟೇಕ್‌ಗಳನ್ನು ಕೆಲವೊಮ್ಮೆ ಸರಿಪಡಿಸಿಕೊಳ್ಳಬಹುದು. ಆದ್ರೆ ಕೆಲವೊಮ್ಮೆ ಅದು ಅಸಾಧ್ಯ. ಆದ್ರೆ, ನಾವು ಮಾಡಿದ ಒಂದು ಮಿಸ್ಟೇಕ್ ಅನ್ನು ಯಾವುದೇ ಸಂದೇಹವಿಲ್ಲದೇ ಸರಿ ಮಾಡ್ಕೊಬೋದು. ಹೌದು, ನಾವೇನಾದರೂ ತಪ್ಪು ನಂಬರಿಗೆ ಮೊಬೈಲ್(mobile) ರೀಚಾರ್ಜ್(Recharge) ಮಾಡಿಕೊಂಡರೆ ಆ ಹಣವನ್ನು ಹಿಂತಿರುಗಿಸಿಕೊಳ್ಳಬಹುದು ಅದು ಹೇಗೆ ಎಂಬುದರ ಬಗ್ಗೆ ಇಂದು ಈ ಲೇಖನದಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
ನಾವು ಇತ್ತೀಚಿನ ದಿನಗಳಲ್ಲಿ ಆನ್ಲೈನ್(online) ಮೂಲಕ ಎಲ್ಲಾ ಕೆಲಸವನ್ನು ಸುಲಭ ಮಾಡಿಕೊಂಡಿದ್ದೇವೆ. ಆನ್‌ಲೈನ್ ರೀಚಾರ್ಜ್ ಯುಗದಲ್ಲಿ, ಕೆಲವು ಬಾರಿ ನಮ್ಮ ಆತುರದಲ್ಲಿ ನಾವು ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಹಣವನ್ನು ಹೇಗೆ ಮರಳಿ ಪಡೆಯಬಹುದು ಎಂಬುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗುತ್ತದೆ. ಈ ಲೇಖನವನ್ನು ಸಂಪೂರ್ಣವಾಗಿ ಓದುವ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳಿ.
ತಪ್ಪು ನಂಬರ್‌ಗೆ ರೀಚಾರ್ಜ್ ಮಾಡಿದರೆ ವಾಪಸ್ ಪಡೆಯುವುದು ಹೇಗೆ.?
ಜನರು ತಮ್ಮ ಮೊಬೈಲ್ ಫೋನ್‌ಗಳನ್ನು ರೀಚಾರ್ಜ್ ಮಾಡಲು ಅಂಗಡಿಗಳಿಗೆ ಹೋಗಿ ಟಾಪ್ ಅಪ್ ಕಾರ್ಡ್‌ಗಳನ್ನು ಆರಿಸಿ ಖರೀದಿಸುವ ಕಾಲವಿತ್ತು. ಆ ಕಾಲದಲ್ಲಿ ಇಂಟರ್ನೆಟ್(Internet) ತುಂಬಾ ದುಬಾರಿಯಾಗಿತ್ತು ಮತ್ತು ಅಂಗಡಿಯ ಮಾಲೀಕರು ಕೂಡಾ ಅಷ್ಟೇ ಬುದ್ಧಿವಂತಿಕೆಯಿಂದ ಮೊಬೈಲ್ ರೀಚಾರ್ಜ್ ಮಾಡುತ್ತಿದ್ದರು. ಆದರೆ, ಕಾಲ ಬದಲಾದಂತೆ ಹೊಸ ಹೊಸ ಟೆಕ್ನಿಕ್(Technic) ಗಳು ಮಾರುಕಟ್ಟೆಯಲ್ಲಿ ಬರುತ್ತಿವೆ.
ಇಂದು ನಾವು ಇದ್ದ ಜಾಗದಿಂದಲೇ ನಮ್ಮ ಮನೆಯಲ್ಲೇ ಕುಳಿತು ರೀಚಾರ್ಜ್ ಮಾಡಿಕೊಳ್ಳಬಹುದಾಗಿದೆ. ನಾವುಗಳು ಸಾಮಾನ್ಯವಾಗಿ ರೀಚಾರ್ಜ್‌ಗಾಗಿ ಬೇರೆ ಬೇರೆ ಆ್ಯಪ್(App)ಗಳನ್ನು ಬಳಸುತ್ತೇವೆ. ಅನೇಕ ಬಾರಿ ನಮ್ಮ ಅವಸರದಲ್ಲಿ, ನಾವು ತಪ್ಪು ರೀಚಾರ್ಜ್ ಮಾಡುತ್ತೇವೆ. ರೀಚಾರ್ಜ್ ಮೊತ್ತ ಚಿಕ್ಕದಾಗಿದ್ದರೆ, ಜನರು ಅದನ್ನು ನಿರ್ಲಕ್ಷಿಸುತ್ತಾರೆ. ಆದರೆ, ದೊಡ್ಡ ಮೊತ್ತದ ರೀಚಾರ್ಜ್ ತಪ್ಪು ಸಂಖ್ಯೆಗೆ ಹೋದರೆ, ವ್ಯಕ್ತಿಯು ತನ್ನ ಹಣವನ್ನು ವ್ಯರ್ಥ ಮಾಡಿದ್ದಾನೆ ಎಂಬ ಆತಂಕದಿಂದ್ದ ತೊಂದರೆಗೆ ಬೀಳುತ್ತಾನೆ.
ರಾಂಗ್/ತಪ್ಪು ನಂಬರ್‌ಗೆ ರೀಚಾರ್ಜ್ ಮಾಡಿದರೆ ಆ ಮೊತ್ತ/ ಹಣವನ್ನು ಹಿಂತಿರುಗಿಸಬಹುದು ಎಂಬ ಮಾಹಿತಿ ಹೆಚ್ಚಿನ ಜನರಿಗೆ ತಿಳಿದಿಲ್ಲ. ಬಹುಶಃ ನಿಮಗೆ ಇದರ ಬಗ್ಗೆ ತಿಳಿದಿಲ್ಲ ಅಂದರೆ, ಇಂದು ಈ ಲೇಖನದ ಮೂಲಕ ನಾವು ಈ ಮಾಹಿತಿ ಬಗ್ಗೆ ನಿಮಗೆ ತಿಳಿಸಕೊಡಲಿದ್ದಿವೆ.
ನೀವು ತಪ್ಪು ನಂಬರ್‌ಗೆ ರೀಚಾರ್ಜ್ ಮಾಡಿದ್ದರೆ ಹೀಗೆ ಮಾಡಿ .!
ನೀವು ಏನಾದ್ರು ತಪ್ಪಾಗಿ ಅಥವಾ ಅವಸರದಲ್ಲಿ ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದ್ದರೆ, ಕೂಡಲೇ ನೀವು ನಿಮ್ಮ ಸಿಮ್ ಕಾರ್ಡ್ ಬಳಸುವ ಟೆಲಿಕಾಂ ಆಪರೇಟರ್‌ನ ಕಸ್ಟಮರ್ ಕೇರ್‌ಗೆ ಕರೆ ಮಾಡಿ ಮತ್ತು ಅವರಿಗೆ ಎಲ್ಲಾ ನಿಮ್ಮ ವಿವರಗಳನ್ನು ತಿಳಿಸಿ. ಅಂದರೆ, ರೀಚಾರ್ಜ್ ಮೊತ್ತ ಎಷ್ಟು?, ಯಾವ ಕಂಪನಿಯ ನಂಬರ್ ರೀಚಾರ್ಜ್ ಮಾಡಲಾಗಿದೆ?, ಯಾವ ಆಪ್ ಮೂಲಕ ರೀಚಾರ್ಜ್ ಮಾಡಲಾಗಿದೆ? ಹೀಗೆ ಇತ್ಯಾದಿ.
ಇದಲ್ಲದೆ, ನಿಮ್ಮ ಹಣವನ್ನು ಹಿಂತಿರುಗಿಸಲು ನೀವು ಸಂಪೂರ್ಣ ವಿವರಗಳನ್ನು ಇಮೇಲ್(E-mail) ಮೂಲಕ ಸಂಬಂಧಪಟ್ಟ ಕಂಪನಿಗೆ ಕಳುಹಿಸಬೇಕು. ಭಾರತದಲ್ಲಿ ಹೆಚ್ಚಿನ ಜನರು vodafone-idea, Jio ಮತ್ತು Airtel ನ SIM ಕಾರ್ಡ್ ಅನ್ನು ಬಳಸುತ್ತಾರೆ, ನಂತರ ಅದರ ಇಮೇಲ್ ಐಡಿಗಳು ಈ ಕೆಳಗಿನಂತಿವೆ.
* VI- customercare@vodafoneidea.com
* Airtel- airtelpresence@in.airtel.com
* JIO- care@jio.com
ನೀವು ಕೇಳಿದಂತೆ ನಿಮ್ಮ ಎಲ್ಲಾ ವಿವರಗಳನ್ನು ಕಳುಹಿಸಿದಾಗ, ಕಂಪನಿಯು ಅದನ್ನು ಹಿಂಭಾಗದಲ್ಲಿ ಪರಿಶೀಲಿಸುತ್ತದೆ ಮತ್ತು ನಿಮ್ಮ ಮಾಹಿತಿ ಸರಿಯಾಗಿ ಕಂಡು ಬಂದರೆ, ನಿಮ್ಮ ಹಣವನ್ನು ಹಿಂತಿರುಗಿಸಬಹುದಾಗಿದೆ. ಗಮನಿಸಿ, ನೀವು ಈ ಕೆಲಸವನ್ನು ಎಷ್ಟು ಬೇಗ ಮಾಡುತಿರೋ, ಅಷ್ಟು ಬೇಗ ಹಣವನ್ನು ಹಿಂತಿರುಗಿ ಪಡಿಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.
ಟೆಲಿಕಾಂ ಕಂಪನಿಯು ಕೂಡ ಕೇಳದಿದ್ದರೆ ಹೀಗೆ ಮಾಡಿ.!
ಹಲವು ಬಾರಿ ಟೆಲಿಕಾಂ ಕಂಪನಿಗಳು ನಮ್ಮ ಗ್ರಾಹಕರ ದೂರುಗಳಿಗೆ ಕಿವಿಗೊಡುವುದಿಲ್ಲ ಮತ್ತು ದೀರ್ಘಕಾಲದವರೆಗೆ ಯಾವುದೇ ಕೆಲಸ ಮಾಡದಿರುವುದು ಕೂಡ ಕಂಡುಬರುತ್ತದೆ. ಹೀಗೆ ನಿಮ್ಮ ದೂರಿನ ಮೇಲೆ ಟೆಲಿಕಾಂ ಕಂಪನಿಯು ಯಾವುದೇ ರೀತಿಯಾದ ಕ್ರಮವನ್ನು ತೆಗೆದುಕೊಳ್ಳದಿದ್ದರೆ, ನೀವು ನಿಮ್ಮ ದೂರನ್ನು ಕಸ್ಟಮರ್ ಕೇರ್ ಪೋರ್ಟಲ್‌ನಲ್ಲಿ ನೋಂದಾಯಿಸಬಹುದಾಗಿದೆ. ನೀವು ಇಚ್ಚಿಸಿದರೆ, ನಿಮ್ಮ ದೂರನ್ನು ವಾಟ್ಸಾಪ್ ಮೂಲಕದಿಂದ ಕೂಡ ನೋಂದಾಯಿಸಬಹುದಾಗಿದೆ.
ಇದಲ್ಲದೆ, ಮತ್ತೆ ನೀವು ಪ್ಲೇ ಸ್ಟೋರ್‌ನಿಂದ ಕೂಡ ಗ್ರಾಹಕ ಸೇವಾ ಪೋರ್ಟಲ್‌ನ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವದರ ಮೂಲಕವೂ ಕೂಡ ದೂರು ಸಲ್ಲಿಸಬಹುದಾಗಿದೆ. ನೆನಪಿನಲ್ಲಿ ಇರಲಿ, ಕೊಟ್ಟ ಸಮಯಕ್ಕೆ ದೂರು ನೀಡಿದಾಗ ಮಾತ್ರ ಹಣವನ್ನು ಹಿಂತಿರುಗಿಸಲಾಗುತ್ತದೆ ಮತ್ತು ರೀಚಾರ್ಜ್ ಮಾಡಿದ ಸಂಖ್ಯೆಯೊಂದಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೊಂದಿಸುವುದು ಸಹ ಅಗತ್ಯವಾಗಿದೆ.
ಅಂದರೆ, ಒಂದು ಅಥವಾ ಎರಡು ಸಂಖ್ಯೆಗಳಿಂದಾಗಿ ರೀಚಾರ್ಜ್ ತಪ್ಪು ಸಂಖ್ಯೆಗೆ ಹೋಗಿದ್ದರೆ, ಈ ಪರಿಸ್ಥಿತಿಯಲ್ಲಿ ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳು ಹೆಚ್ಚು ಆಗಬಹುದು. ಸಂಪೂರ್ಣ ಸಂಖ್ಯೆಯು ವಿಭಿನ್ನವಾಗಿದ್ದರೆ, ಈ ಪರಿಸ್ಥಿತಿಯಲ್ಲಿ ಹಣವನ್ನು ನೀಡಲು ಕಂಪನಿಯು ಕೂಡ ಹಿಂಜರಿಯುತ್ತದೆ ಏಕೆಂದರೆ, ಅನೇಕ ಜನರು ಉದ್ದೇಶಪೂರ್ವಕವಾಗಿ ಕಂಪನಿಗೆ ತೊಂದರೆ ನೀಡುತ್ತಾರೆ ಎಂದು ತಿಳಿದು ಹಿಂಜರಿಯುತ್ತಾರೆ ಎಂದು ತಿಳಿದು ಬರುತ್ತದೆ.
ಯಾವಾಗಲೂ ಕೂಡ ರಿಚಾರ್ಜ್ ಮಾಡುವಾಗ ತಮ್ಮ ನಂಬರ್‌ಗಳನ್ನು ಎರಡು ಬಾರಿ ಪರಿಶೀಲಿಸಿ. ನಂತರ, ರಿಚಾರ್ಜ್ ಮಾಡಿದರೆ ಯಾವ ತೊಂದರೆಯೂ ಇರುವುದಿಲ್ಲ. ಕೆಲವೊಮ್ಮೆ ತಪ್ಪಾಗಿ ನಂಬರ್ಗಳನ್ನು ನೋಂದಾಯಿಸುವುದರಿಂದ ಹಣ ವ್ಯರ್ಥವಾದಲ್ಲಿ ಈ ಮೇಲಿನ ನಿಯಮವನ್ನು ಅನುಸರಿಸಿ.