ರೈತರಿಗೆ ಸರ್ಕಾರದಿಂದ ಶಾಕಿಂಗ್‌ ನ್ಯೂಸ್, ಕಿಸಾನ್‌ ಸಮ್ಮಾನ್‌ ಯೋಜನೆಗೆ ಎಳ್ಳುನೀರು.! 50 ಲಕ್ಷ ರೈತರಿಗೆ ಬರ್ತಿದ್ದ 4 ಸಾವಿರ ರೂ. ಸ್ಥಗಿತ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ

 

WhatsApp Group Join Now
Telegram Group Join Now

ದೇಶದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan) ಅಡಿಯಲ್ಲಿ ಕೇಂದ್ರ ಸರ್ಕಾರದಂತೆ ವಾರ್ಷಿಕ 6 ಸಾವಿರ ರೂ. ನೀಡಿದರೆ, ಕರ್ನಾಟಕ ಸರ್ಕಾರವು ರಾಜ್ಯದ ಅರ್ಹ ಫಲಾನುಭವಿಗಳಿಗೆ ವಾರ್ಷಿಕ ತಲಾ 4,000 ರೂ. ಧನ ಸಹಾಯ ನೀಡುತ್ತಿದೆ. ಆದರೆ, ಈಗ ಆಡಳಿತಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರವು, ಈ ಹಿಂದಿನ ಬಿಜೆಪಿ ಸರ್ಕಾರ ನೀಡುತ್ತಿದ್ದ ವಾರ್ಷಿಕ ಲಾ 4 ಸಾವಿರ ರೂ. ಹಣ ನೀಡುವ ಕೃಷಿ ಸಮ್ಮಾನ್‌ ಯೋಜನೆಯನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಿದಂತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ ರೀತಿ ಕೃಷಿ ಸಮ್ಮಾನ್‌ ಯೋಜನೆ ಸ್ಥಗಿತದ ಬಗ್ಗೆ ಸಾಕ್ಷಿಯಾಗುತ್ತಿದೆ ಎನ್ನಲಾಗಿದೆ.
* ವಿಧಾನಸಭಾ ಅಧಿವೇಶನದಲ್ಲಿ ಮಂಗಳವಾರ ಬಿಜೆಪಿ ಶಾಸಕ ಸುನೀಲ್‌ ಕುಮಾರ್‌, ಕೃಷಿ ಸಮ್ಮಾನ್ ಯೋಜನೆ ನಿಲ್ಲಿಸಿದ್ದೀರೋ? ಇಲ್ವೋ? ಎಂದು ಪ್ರಶ್ನೆ ಕೇಳಿದರು.
* ಇದಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೃಷಿ ಭಾಗ್ಯ ಯೋಜನೆಯನ್ನು ಬಿಜೆಪಿಯವರು ಬಂದು ನಿಲ್ಲಿಸಿಬಿಟ್ಟಿದ್ದರು. ಆದರೆ, ಈಗ ನಾವು ಬಂದು ಮತ್ತೆ ಅದನ್ನು ಮುಂದುವರಿಸಿದ್ದೇವೆ ಎಂದು ಹೇಳಿದರು.

* ಈ ವೇಳೆ ಪುನಃ ಕೃಷಿ ಸಮ್ಮಾನ್ ಬಗ್ಗೆ ಹೇಳಿ ಎಂದು ಶಾಸಕ ಸುನೀಲ್ ಕುಮಾರ್ ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದರು.
* ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, “ಮತ್ತೆ ಇದು ಬೇಕೋ ಬೇಡ್ವೋ ಹೇಳ್ರಿ.. ಕೃಷಿ ಸಮ್ಮಾನ್ ಯೋಜನೆಯನ್ನು ನೀವು ರಾಜ್ಯದಲ್ಲಿರುವ 87 ಲಕ್ಷ ರೈತರಲ್ಲಿ, ಕೇವಲ 51 ಲಕ್ಚ ರೈತರಿಗೆ ಮಾತ್ರ ಕೊಟ್ಟಿದ್ದೀರಿ. ಆದರೆ, ಕೃಷಿ ಸಮ್ಮಾನ್ ಯೋಜನೆ ಎಲ್ಲರಿಗೂ ಕೊಟ್ಟಿಲ್ಲ. ಹೀಗಾಗಿ ನಾವು ಬೇರೆ ಕಾರ್ಯಕ್ರಮ ಮಾಡಿದ್ದೇವೆ” ಎಂದು ಮಾಹಿತಿ ನೀಡಿದರು.

* ವಿಧಾನಸಭಾ ಅಧಿವೇಶನದಲ್ಲಿ ‘ಕೃಷಿ ಸಮ್ಮಾನ್ ಯೋಜನೆ’ ನಿಲ್ಲಿಸಿದ್ದೀರಾ? ಇಲ್ವಾ? ಎಂಬ ಬಿಜೆಪಿ ಶಾಸಕ ಸುನೀಲ್ ಕುಮಾರ್ ಪ್ರಶ್ನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟ ಉತ್ತರವನ್ನೇ ಕೊಡಲಿಲ್ಲ.

50 ಲಕ್ಷ ರೈತರು ಪಡೆಯುತ್ತಿದ್ದ ವಾರ್ಷಿಕ 4 ಸಾವಿರ ರೂ. ಸ್ಥಗಿತ
ರಾಜ್ಯದಲ್ಲಿ ಒಟ್ಟು 51 ಲಕ್ಷ ರೈತರು ವಾರ್ಷಿಕ ಕೃಷಿ ಸಮ್ಮಾನ್‌ ಯೋಜನೆ ಅಡಿಯಲ್ಲಿ ತಲಾ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು. ಜೊತೆಗೆ, ಕೇಂದ್ರ ಸರ್ಕಾರದಿಂದ ವಾರ್ಷಿಕ ತಲಾ 6 ಸಾವಿರ ರೂ. ಸೇರಿ ಕರ್ನಾಟಕದ ರೈತರು ವಾರ್ಷಿಕ 10 ಸಾವಿರ ರೂ. ಹಣವನ್ನು ಪಡೆದುಕೊಳ್ಳುತ್ತಿದ್ದರು. ಒಂದು ವೇಳೆ ಈಗ ಕರ್ನಾಟಕದ ಕೃಷಿ ಸಮ್ಮಾನ್‌ ಯೋಜನೆ ನಿಲ್ಲಿಸಿದರೆ ರೈತರಿಗೆ ಸಿಗುತ್ತಿದ್ದ 4 ಸಾವಿರ ರೂ. ಹಣ ಬರುವುದು ಸ್ಥಗಿತವಾಗಲಿದೆ. ಒಟ್ಟಾರೆ, ಕಾಂಗ್ರೆಸ್‌ ಕೊಟ್ಟಿರುವ ಗ್ಯಾರಂಟಿ ಯೋಜನೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೃಷಿ ಸಮ್ಮಾನ್‌ ಯೋಜನೆಗೆ ಬಹುತೇಕ ಎಳ್ಳುನೀರು ಬಿಟ್ಟಂತೆ ಗೋಚರವಾಗುತ್ತಿದೆ.

ಕೃಷಿ ಭಾಗ್ಯ ಯೋಜನೆ ಮರುಜಾರಿ
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅವಧಿಯಲ್ಲಿ ರೈತರಿಗೆ ಅನುಕೂಲ ಆಗುವಂತಹ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದ್ದರು. ಇದರಡಿ ರೈತರು ಕೃಷಿ ಹೊಂಡ ನಿರ್ಮಾಣಕ್ಕೆ ಹಾಗೂ ಯಾಂತ್ರೀಕೃತ ಕೃಷಿ ಉಪಕರಣ ಖರೀದಿಗೆ ಅನುಕೂಲ ಆಗಲಿದೆ.

ಕಾಂಗ್ರೆಸ್‌ ಅವಧಿಯಲ್ಲಿ ಕೃಷಿಭಾಗ್ಯ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಿ ಕೃಷಿ ಹೊಂಡ ನಿರ್ಮಿಸಿಕೊಂಡವರಿಗೆ ಅನುಕೂಲ ಆಗಿದೆ. ಇನ್ನು ಬೆಳೆಯ ಇಳುವರಿಯೂ ಶೇ.30 ಹೆಚ್ಚಳ ಆಗಿತ್ತು. ಈಗ ಪುನಃ ಜಾರಿಗೆ ತರುತ್ತಿರುವುದು ಸಂತಸದ ವಿಚಾರವಾಗಿದೆ. ಆದರೆ, ಈ ಯೋಜನೆಯನ್ನು ಪಡೆಯಲು ಎಲ್ಲ ರೈತರು ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ. ಎಷ್ಟು ರೈತರಿಗೆ ಈ ಯೋಜನೆ ತಲುಪಲಿದೆ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now