ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದೆ. ನಿಮ್ಮ ಮೊಬೈಲ್ ಮೂಲಕ ಈ ನಂಬರ್ ಗೆ ಮೇಸೆಜ್ ಕಳಿಸಿ ನಂತರ ಅರ್ಜಿ ಸಲ್ಲಿಸಬೇಕು ಆಗಿದ್ರೆ ಮಾತ್ರ 2000/- ಸಿಗೋದು.!

ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾಗಿದೆ. ನಿಮ್ಮ ಮೊಬೈಲ್ ಮೂಲಕ ಈ ನಂಬರ್ ಗೆ ಮೇಸೆಜ್ ಕಳಿಸಿ ನಂತರ ಅರ್ಜಿ ಸಲ್ಲಿಸಬೇಕು ಆಗಿದ್ರೆ ಮಾತ್ರ 2000/- ಸಿಗೋದು.!

ಗೃಹಲಕ್ಷ್ಮಿ ಯೋಜನೆ ನೋಂದಣಿ ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ “ಉಚಿತವಾಗಿ ನೊಂದಾಯಿಸುವುದು” ಹಾಗೂ ಈ ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು “ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ”

ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಪಡೆಯಲು ಅರ್ಹತೆಗಳು:-

ನೋಂದಣಿ ದಿನಾಂಕ : 20-07-2023ರಿಂದ ಪ್ರಾರಂಭ
1. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ವಿತರಿಸುವ ಅಂತ್ಯೋದಯ , ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿದಾರರಾಗಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.

2. ಕುಟುಂಬದ ಯಜಮಾನಿ ಅಥವಾ ಯಜಮಾನಿಯ ಪತಿ GST RETURNS ಸಲ್ಲಿಸುವವರಾಗಿದ್ದಲ್ಲಿ ಆರ್ಹರಾಗುವುದಿಲ್ಲ . ಗೃಹ ಲಕ್ಷ್ಮಿ ಯೋಜನೆ ಸಂಬಂಧ ಯಾವುದೇ ಗೊಂದಲ ಹಾಗೂ ಮಾಹಿತಿಗಾಗಿ 1902 ಕ್ಕೆ ಅಥವಾ 81475 00500 ನ್ನು ಸಂಪರ್ಕಿಸಬಹುದು .

ಗೃಹಲಕ್ಷ್ಮಿ ಯೋಜನೆ ನೋಂದಣಿ ವಿಧಾನ:-

1. ಫಲಾನುಭವಿಗಳು ಗ್ರಾಮ ಒನ್ , ಕರ್ನಾಟಕ ಒನ್ , ಬಾಪೂಜಿ ಸೇವಾ ಕೇಂದ್ರದ ಮೂಲಕ ಸೇವಾಸಿಂಧು ಪೋರ್ಟಲ್‌ನಲ್ಲಿ ಉಚಿತವಾಗಿ ನೊಂದಾಯಿಸುವುದು.
2. ಫಲಾನುಭವಿಗಳಿಗೆ ನೋಂದಾವಣೆಗೆ ನಿಗಧಿ ಮಾಡಿರುವ ದಿನಾಂಕ , ಸಮಯ , ಸ್ಥಳದ ವಿವರವನ್ನು 1902 ಕ್ಕೆ ಅಥವಾ 8147500500 ಗೆ SMS ಮೂಲಕ ಮಾಹಿತಿ ಪಡೆಯಬಹುದು.
3. ನಿಗಧಿತ ಸಮಯದಲ್ಲಿ ಭೇಟಿ ನೀಡಿ ನೋಂದಾವಣಿ ಮಾಡಿಕೊಳ್ಳಲು ಸಾಧ್ಯವಾಗದೆಯಿದ್ದಲ್ಲಿ ಅದೇ ಕೇಂದ್ರಕ್ಕೆ ಮುಂದಿನ ಯಾವುದೇ ದಿನಗಳಲ್ಲಿ ಸಂಜೆ : 5.00 ಗಂಟೆಯ ನಂತರ ತೆರಳಿ ನೋಂದಾಯಿಸಿಕೊಳ್ಳಬಹುದು.

4. ಅನುಮೋದಿಸಲ್ಪಟ್ಟ ಅರ್ಹ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ನೀಡಲಾಗುವುದು.
5. ಯೋಜನೆಯಡಿ ನೋಂದಾಯಿಸುವ ಫಲಾನುಭವಿಯು ಯಾವುದೇ ಶುಲ್ಕವನ್ನು ಪಾವತಿಸುವಂತಿಲ್ಲ.
6. ಯೋಜನೆಯಡಿ ನೋಂದಾಯಿಸಲು ಯಾವುದೇ ಅಂತಿಮ ದಿನಾಂಕ ಮತ್ತು ಸಮಯ ನಿಗಧಿ ಪಡಿಸಿರುವುದಿಲ್ಲ .

ಗೃಹಲಕ್ಷ್ಮಿ ಯೋಜನೆಗೆ ಬೇಕಾದ ದಾಖಲಾತಿಗಳು

ನೋಂದಣಿ ದಿನಾಂಕ 20-07-2023ರಿಂದ ಪ್ರಾರಂಭ
1. ಪಡಿತರ ಚೀಟಿಯ ಸಂಖ್ಯೆ
2. ಯಜಮಾನಿ ಹಾಗೂ ಯಜಮಾನಿ ಪತಿಯ ಆಧಾರ್ ಕಾರ್ಡ್ ಸಂಖ್ಯೆ 3. ಯಜಮಾನಿಯ ಆಧಾರ್ ಗೆ ಜೋಡಣೆಯಾಗಿರುವ ಬ್ಯಾಂಕ್ ಖಾತೆಯ ಪಾಸ್‌ಬುಕ್ / ಫಲಾನುಭವಿಯು ಇಚ್ಚಿಸುವ ಪರ್ಯಾಯ ಬ್ಯಾಂಕ್ ಖಾತೆ ವಿವರ ಹಾಗೂ ಮೊಬೈಲ್ ಸಂಖ್ಯೆ ಅಗತ್ಯವಿರುತ್ತದೆ .

ಆದ್ದರಿಂದ ಇಷ್ಟು ದಾಖಲಾತಿಗಳು ಇರುವುದು ಕಡ್ಡಾಯ. ಜೊತೆಗೆ ಆಧಾರ್ ಕಾರ್ಡ್ ಗೆ ನಿಮ್ಮ ಮೊಬೈಲ್ ನಂಬರ್ ಲಿಂಕ್ ಆಗಿರುವುದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ. ಈ ರೀತಿ ಮಾಡಿದ ನಂತರ ಆಗಸ್ಟ್ ನಿಂದಲೇ ನಿಮ್ಮ ಅಕೌಂಟ್ ಗೆ ಪ್ರತಿ ತಿಂಗಳು 2000 ಹಣ ಬಂದು ತಲುಪುತ್ತದೆ ಎಂದು ಹೇಳಿದ್ದಾರೆ.

Leave a Comment

%d bloggers like this: