ಜೇನುತುಪ್ಪದಲ್ಲಿ ಈ ವಸ್ತು ಸೇರಿಸಿ ಮುಖದಲ್ಲಿನ ಕೂದಲು ಪರ್ಮನೆಂಟಾಗಿ ಕಡಿಮೆ ಆಗುತ್ತದೆ ಮುಖ ಬೆಳ್ಳಗೆ ಹೊಳೆಯುತ್ತದೆ.

ಸಾಮಾನ್ಯವಾಗಿ ಎಲ್ಲರಿಗೂ ಸಹ ಮುಖದ ಮೇಲೆ ಕೂದಲು ಇದ್ದೇ ಇರುತ್ತದೆ ಕೆಲವರಿಗೆ ಇದು ಜಾಸ್ತಿ ಇರುತ್ತದೆ ಇನ್ನು ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ಮುಖದ ಮೇಲೆ ಕೂದಲು ಇದ್ದರೆ ನಮ್ಮ ಸೌಂದರ್ಯವು ಅಷ್ಟೊಂದು ಚೆನ್ನಾಗಿ ಕಾಣಿಸುವುದಿಲ್ಲ ಹಾಗಾಗಿ ನಾವು ಮುಖದ ಮೇಲೆ ಇರುವಂತಹ ಕೂದಲನ್ನು ನಾವು ಪಾರ್ಲರ್ ಗಳಿಗೆ ಹೋಗಿ ತೆಗಿಸುತ್ತೇವೆ ಇದರಿಂದ ನಮಗೆ ನೋವು ಉಂಟಾಗುತ್ತದೆ ಆದರೆ ನಾವು ಮನೆಯಲ್ಲಿಯೇ ತುಂಬಾ ಸುಲಭವಾಗಿ ಮುಖದ ಮೇಲೆ ಇರುವಂತಹ ಕೂದಲನ್ನು ತೆಗೆದು ಹಾಕಬಹುದು. ನಾವು ಇಲ್ಲಿ ತಿಳಿಸುವಂತಹ ಮನೆ ಮದ್ದನ್ನು ಉಪಯೋಗಿಸಿಕೊಂಡು ನೀವು ಕೂದಲನ್ನು ತೆಗೆಯುವುದರಿಂದ ಮತ್ತೆ ಮುಖದ ಮೇಲೆ ಕೂದಲುಗಳು ಬರುವುದಿಲ್ಲ.

ಮುಖದಲ್ಲಿ ಇರುವಂತಹ ಕೂದಲು ಬಾರದೆ ಇರುವುದರ ಜೊತೆಗೆ ಮುಖದಲ್ಲಿ ಇರುವಂತಹ ಕಪ್ಪು ಕಲೆಗಳು, ಪಿಗ್ಮೆಂಟೇಷನ್ ಎಲ್ಲವೂ ಸಹ ಕಡಿಮೆಯಾಗುತ್ತದೆ ನಿಮ್ಮ ಮುಖ ತುಂಬಾ ಗ್ಲೋ ಆಗಿ ಶೈನಿಂಗ್ ಆಗಿ ಬರುತ್ತದೆ. ಈ ಒಂದು ಪ್ಯಾಕನ್ನು ತಯಾರಿಸಿಕೊಳ್ಳಲು ನೀವು ಮೊದಲಿಗೆ ಜೇನುತುಪ್ಪವನ್ನು ಬೇಕಾಗುತ್ತದೆ. ಎರಡು ಟೇಬಲ್ ಸ್ಪೂನ್ ನಷ್ಟು ಜೇನುತುಪ್ಪ ಕ್ಕೆ ಒಂದು ಟೇಬಲ್ ಸ್ಪೂನ್ ಸಕ್ಕರೆಯನ್ನು ಸೇರಿಸಿ. ನಂತರ ಇವೆರಡನ್ನು ಸಹ ನೀಟಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸಕ್ಕರೆ ಜೇನುತುಪ್ಪದಲ್ಲಿ ತುಂಬಾ ಕರಗುವಂತಹ ಅವಶ್ಯಕತೆ ಇಲ್ಲ ಸ್ವಲ್ಪ ರಸ ಬಿಟ್ಟರೆ ಸಾಕಾಗುತ್ತದೆ ಈ ಒಂದು ಪ್ಯಾಕ್ ಅನ್ನು ತೆಗೆದು ತಯಾರು ಮಾಡಿಕೊಂಡ ನಂತರ ನಿಮ್ಮ ಮುಖವನ್ನು ನೀಟಾಗಿ ತೊಳೆದು ಮುಖವನ್ನು ಒರೆಸಿಕೊಂಡು ಈ ಒಂದು ಪ್ಯಾಕ್ ಅನ್ನು ನಿಮ್ಮ ಮುಖಕ್ಕೆ ಚೆನ್ನಾಗಿ ಅಪ್ಲೈ ಮಾಡಬೇಕು.

ತುಟಿಯ ಮೇಲ್ಭಾಗ ಮತ್ತು ಕಿವಿಯ ಪಕ್ಕದಲ್ಲಿ ಕೂದಲುಗಳು ಇರುತ್ತದೆ ಅಂತಹ ಸ್ಥಳದಲ್ಲಿ ನೀಟಾಗಿ ಅಪ್ಲೈ ಮಾಡಿಕೊಂಡು ನಿಮ್ಮ ಎರಡು ಕೈಗಳಿಂದ ಸ್ಕ್ರಬ್ ಮಾಡಬೇಕು. ಎಲ್ಲೆಲ್ಲಿ ನಿಮಗೆ ಕೂದಲು ಇರುತ್ತದೆ ಅಂತಹ ಭಾಗದಲ್ಲಿ ತುಂಬಾ ಜಂಟಲ್ ಆಗಿ ನೀವು ಮಸಾಜ್ ಮಾಡಬೇಕು. ಸ್ವಲ್ಪ ಹೊತ್ತು ಒಣಗಲು ಬಿಡಬೇಕು ಸ್ವಲ್ಪ ಒಣಗಿದೆ ಎಂದು ನಿಮಗೆ ಅನಿಸಿದಾಗ ಒಂದು ಕಾಟನ್ ಪ್ಯಾಡ್ ತೆಗೆದುಕೊಂಡು ಅಥವಾ ಹತ್ತಿಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ ಅಪ್ಪರ್ ಡೈರೆಕ್ಷನ್ ನಲ್ಲಿ ನೀವು ಈ ಒಂದು ಪ್ಯಾಕ್ ಅನ್ನು ರಿಮೋವ್ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಮುಖದಲ್ಲಿ ಇರುವಂತಹ ಕೂದಲು ರಿಮೂವ್ ಆಗುತ್ತದೆ ಮೊದಲ ಬಾರಿ ನೀವು ಈ ಒಂದು ಪ್ಯಾಕನ್ನು ಅಪ್ಲೈ ಮಾಡಿದ್ದೆ ಆದಲ್ಲಿ ಸ್ವಲ್ಪ ಕೂದಲು ಇದ್ದರೆ ಹೋಗುತ್ತದೆ.

ನಿಮ್ಮ ಮುಖದಲ್ಲಿ ಸ್ವಲ್ಪ ಜಾಸ್ತಿ ಕೂದಲು ಇದ್ದರೆ ವಾರದಲ್ಲಿ ಮೂರು ಸಲ ಈ ರೀತಿಯಾದಂತಹ ಪ್ಯಾಕನ್ನು ತಯಾರಿಸಿ ನಿಮ್ಮ ಮುಖಕ್ಕೆ ಹಚ್ಚುವುದರಿಂದ ನಿಮ್ಮ ಮುಖದ ಮೇಲೆ ಇರುವಂತಹ ಕೂದಲುಗಳು ಪರ್ಮನೆಂಟ್ ಆಗಿ ಹೋಗಲಾಡಿಸಬಹುದು. ಈ ಒಂದು ಪ್ಯಾಕ್ ನಮ್ಮ ಮುಖದ ಮೇಲೆ ಇರುವಂತಹ ಕೂದಲನ್ನು ಹೋಗಲಾಡಿಸುವುದು ಅಷ್ಟೇ ಅಲ್ಲದೆ ನಮ್ಮ ಮುಖವನ್ನು ಕಾಂತಿಯುತ ವನ್ನಾಗಿಯೂ ಮಾಡುತ್ತದೆ ನಮ್ಮ ಚರ್ಮಕ್ಕೆ ಇದು ತುಂಬಾ ಸಹಾಯಕಾರಿ ಯಾವುದೇ ರೀತಿಯಾದಂತಹ ಚರ್ಮ ಸಮಸ್ಯೆಗಳು ಇದ್ದರೂ ಸಹ ಈ ಒಂದು ಪ್ಯಾಕನ್ನು ನೀವು ಹಚ್ಚುವುದರಿಂದ ನಿಮ್ಮ ಚರ್ಮದ ಸಮಸ್ಯೆಯನ್ನು ಹೋಗಲಾಡಿಸಿ ಕೊಳ್ಳಬಹುದು. ಈ ಒಂದು ಮನೆಮದ್ದು ಇಷ್ಟ ಆದರೆ ತಪ್ಪದೇ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.

Leave a Comment

%d bloggers like this: