ಇತ್ತೀಚಿನ ಯುವ ಜನತೆಯಲ್ಲಿ ನಾವು ಹೆಚ್ಚಾಗಿ ಬೊಜ್ಜಿನ ಅಂಶವನ್ನು ಹೊಂದಿರುವುದನ್ನು ಕಾಣಬಹುದು ಆದರೆ ಅದು ಒಳ್ಳೆಯ ರೀತಿಯಾದಂತಹ ಬೊಜ್ಜು ಎಂದು ಹೇಳಲು ಸಾಧ್ಯವಿಲ್ಲ. ಬದಲಿಗೆ ಅದರಿಂದ ಚಿಕ್ಕ ವಯಸ್ಸಿಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುವುದಕ್ಕೆ ಪ್ರಾರಂಭವಾಗುತ್ತದೆ ಎಂದು ಹೇಳಬಹುದು. ಜೊತೆಗೆ ಅತಿಯಾದ ದೇಹ ತೂಕವನ್ನು ಹೊಂದಿರುವುದು ಕೂಡ ಇದಕ್ಕೆ ಬಹಳ ಮುಖ್ಯ ಕಾರಣವಾಗಿರುತ್ತದೆ ಹಾಗೂ ಅನಾರೋಗ್ಯವನ್ನು ಹೆಚ್ಚಿಸುವಂತಹ ಆಹಾರ ಪದ್ಧತಿಯು ಕೂಡ ಇದಕ್ಕೆ ಪ್ರಮುಖವಾದ ಕಾರಣವಾಗಿದೆ.
ಆದರೆ ಕೇವಲ 30 ವರ್ಷ 40 ವರ್ಷ ವಯಸ್ಸಿನವರು ಈ ಸಮಸ್ಯೆಗೆ ಸಾವನ್ನಪ್ಪುತ್ತಿರುವುದು ಈ ರೀತಿಯಾದಂತಹ ಕಾರಣಗಳಿಂದಲೇ ಎಂದೇ ವೈದ್ಯರು ತಿಳಿಸಿ ಕೊಡುತ್ತಿದ್ದಾರೆ. ಆದರೂ ಕೂಡ ಯಾರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುವುದಿಲ್ಲ ಬದಲಿಗೆ ಅನಾರೋಗ್ಯ ಹೆಚ್ಚಿಸುವ ಆಹಾರ ಕ್ರಮವನ್ನು ಅನುಸರಿಸುವುದರ ಮುಖಾಂತರ ಸಮಯವಲ್ಲದ ಸಮಯದಲ್ಲಿ ಮಲಗುವುದು ಏಳುವುದು ಹಾಗೂ ಯಾವುದೇ ರೀತಿಯಾದಂತಹ ವ್ಯಾಯಾಮ ಯೋಗಭ್ಯಾಸ ಮಾಡದೆ ಇರುವುದು ಇವೆಲ್ಲವೂ ಕೂಡ ಇದಕ್ಕೆ ಕಾರಣವಾಗಿರುತ್ತದೆ.
ಆದರೆ ಈ ದಿನ ನಾವು ಈ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಲು ಇದಕ್ಕೆ ಸಂಬಂಧಿಸಿದಂತಹ ಆಹಾರ ಪದಾರ್ಥಗಳು ಯಾವುದು ಹಾಗೂ ನಮ್ಮ ದೇಹಕ್ಕೆ ಒಳ್ಳೆಯ ಬೊಜ್ಜಿನ ಅಂಶವನ್ನು ಹೆಚ್ಚಿಸುವಂತಹ ಅಂದರೆ ಹೆಚ್ ಡಿ ಎಲ್ ಲೆವೆಲ್ ಹೆಚ್ಚಿಸುವಂತಹ ಆಹಾರ ಪದಾರ್ಥಗಳು ಯಾವುದು ಅವುಗಳನ್ನು ಯಾವುದೆಲ್ಲ ಸಮಯದಲ್ಲಿ ಹೇಗೆಲ್ಲಾ ಸೇವನೆ ಮಾಡಬೇಕು ಹೀಗೆ ಈ ವಿಷಯವಾಗಿ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುತ್ತಾ ಹೋಗೋಣ.
ಜೊತೆಗೆ ಈ HDL ಹೊಂದಿರುವಂತಹ ಆಹಾರ ಪದಾರ್ಥವನ್ನು ತಿನ್ನುವುದರಿಂದ ಹೇಗೆ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಹಾಗೂ ಆ ಆಹಾರ ಪದಾರ್ಥಗಳು ಯಾವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ ಈ ಆಹಾರ ಪದಾರ್ಥ ಗಳನ್ನು ನಾವು ದಿನನಿತ್ಯ ಬಳಸುತ್ತಾ ಹೋಗುವುದರಿಂದ ಮೂರು ತಿಂಗಳಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ದೇಹದಲ್ಲಿ ಹೆಚ್ಚಾಗುತ್ತಾ ಹೋಗುತ್ತದೆ.
ಮೊದಲನೆಯದಾಗಿ ಪ್ರತಿನಿತ್ಯ ಬಳಸುವಂತಹ ಅಡುಗೆ ಎಣ್ಣೆ ಅದರಲ್ಲೂ ಶುದ್ಧವಾದಂತಹ ಕೊಬ್ಬರಿ ಎಣ್ಣೆ ಬೆಣ್ಣೆ ತುಪ್ಪ ಹಾಲು ಮೊಸರು ಇವು ಗಳನ್ನು ಬಳಸುವುದರಿಂದ ದೇಹದಲ್ಲಿ ಒಳ್ಳೆಯ ಕೊಬ್ಬು ಹೆಚ್ಚಾಗುತ್ತದೆ ಇದರಿಂದ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ ಎರಡನೆಯದಾಗಿ ಗೋಡಂಬಿ ಬಾದಾಮಿ ಪಿಸ್ತಾ ವಾಲ್ನಟ್ ಕಡಲೆ ಬೀಜ ಈ ಐದು ಪದಾರ್ಥಗಳನ್ನು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಸೇವನೆ ಮಾಡಿದ್ದೆ ಆದಲ್ಲಿ ಇದರಿಂದ ಒಳ್ಳೆಯ ಆರೋಗ್ಯ ಪ್ರಯೋಜನವನ್ನು ಪಡೆಯಬಹುದು.
ಜೊತೆಗೆ ಪ್ರತಿನಿತ್ಯ ದ್ವಿದಳ ಧಾನ್ಯಗಳನ್ನು ಉಪಯೋಗಿಸುವುದರಿಂದ ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ ಜೊತೆಗೆ ದೇಹಕ್ಕೆ ಬೇಕಾದಂತಹ ಒಳ್ಳೆಯ ಪೌಷ್ಟಿಕಾಂಶವನ್ನು ಅದು ಒದಗಿಸಿ ಕೊಡುತ್ತದೆ. ಜೊತೆಗೆ ಐದನೆಯದಾಗಿ ಪ್ರತಿನಿತ್ಯ ಎರಡರಿಂದ ಮೂರು ಮೊಟ್ಟೆಯನ್ನು ತಿನ್ನುವುದರಿಂದಲೂ ಕೂಡ ನಮ್ಮ ಹೃದಯಕ್ಕೆ ಸಂಬಂಧಿಸಿದ ಯಾವುದೇ ರೀತಿಯ ಸಮಸ್ಯೆಗಳು ಕೂಡ ಬರುವುದಿಲ್ಲ.
ಜೊತೆಗೆ ನಮ್ಮ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದಕ್ಕೆ ಇದು ಅದ್ಭುತವಾದಂತಹ ಆಹಾರ ಪದಾರ್ಥ ಎಂದೇ ಹೇಳಬಹುದು ಆದ್ದರಿಂದ ಮೇಲೆ ಹೇಳಿದ ಎಲ್ಲಾ ಆಹಾರ ಕ್ರಮವನ್ನು ಅನುಸರಿಸುವುದರಿಂದ ನೀವು ಒಳ್ಳೆಯ ಆರೋಗ್ಯ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿರುತ್ತದೆ ಜೊತೆಗೆ ಮಕ್ಕಳಲ್ಲಿ ಈ ರೀತಿಯಾದ ಆಹಾರ ಪದಾರ್ಥ ಸೇವನೆ ಮಾಡುವುದನ್ನು ಅಭ್ಯಾಸ ಮಾಡುವುದು ತಾಯಂದಿರ ಕರ್ತವ್ಯವಾಗಿರುತ್ತದೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.