ಇನ್ಮುಂದೆ ಮನೆ, ಸೈಟ್, ಜಮೀನು, ಇನ್ನಿತರ ಆಸ್ತಿ ನೋಂದಣಿಗೆ ಈ ದಾಖಲೆ ನೀಡುವುದು ಕಡ್ಡಾಯ.! ಇಲ್ಲದಿದ್ರೆ ರಿಜಿಸ್ಷ್ರೇಷನ್ ಕ್ಯಾನ್ಸಲ್

 

WhatsApp Group Join Now
Telegram Group Join Now

ಆಸ್ತಿ ಪರಬಾರೆ ವಿಷಯದಲ್ಲಿ ಸಾಕಷ್ಟು ಮೋ’ಸಗಳು ನಡೆಯುತ್ತವೆ. ಇಂದು ಪ್ರತಿನಿತ್ಯ ಕೋರ್ಟ್ ಗಳಿಗೆ ಅಲೆಯುವ ಜನರಲ್ಲಿ ಆಸ್ತಿ ಸಂಬಂಧಿತ ಕೇಸ್ ಗಳಲ್ಲಿ ಸಿಲುಕಿಕೊಂಡಿರುವವರೇ ಹೆಚ್ಚು ಹಾಗೂ ಇದರಲ್ಲಿ ಕುಟುಂಬಸ್ಥರ ನಡುವೆ ವ್ಯಾಜ್ಯ ಇರುವ ಕೇಸ್ ಗಳಷ್ಟೇ ಆಸ್ತಿ ಖರೀದಿ ವೇಳೆ ಮೋ’ಸ ಹೋಗಿರುವವರ ಸಂಖ್ಯೆಯೂ ಇದೆ ಎನ್ನುವುದು ಗಣನೀಯ.

ನಾವು ಕಷ್ಟಪಟ್ಟು ಗಳಿಸಿದ ಹಣವನ್ನು ಕೊಟ್ಟು ಕಳೆದುಕೊಳ್ಳುವುದು ಮಾತ್ರವಲ್ಲದೆ, ನಾವು ಆಸೆಪಟ್ಟು ಖರೀದಿಸಿದ ಆಸ್ತಿ ಕೂಡ ಕೈತಪ್ಪಿ ಹೋಗುವ ಈ ವಿಚಾರದಲ್ಲಿ ನಾವು ಮೋ’ಸ ಹೋಗಿದ್ದೇವೆ ಎನ್ನುವ ನೋವು ಸದಾ ಕಾಲ ಕಾಡುತ್ತದೆ ಹಾಗಾಗಿ ಈ ರೀತಿ ಮುಗ್ಧ ಜನರು ಮೋಸ ಹೋಗುತ್ತಿರುವುದನ್ನು ತಪ್ಪಿಸಲು ಘನ ನ್ಯಾಯಾಲಯವು ಪ್ರಕರಣ ಒಂದರ ವಿಚಾರಣೆ ಸಮಯದಲ್ಲಿ ಎಲ್ಲರಿಗೂ ಅನ್ವಯವಾಗುವಂತೆ ಮಹತ್ವದ ಆದೇಶವೊಂದನ್ನು ನೀಡಿದೆ.

ಸಾಮಾನ್ಯವಾಗಿ ಆಸ್ತಿಯನ್ನು ಮಾರಾಟ ಮಾಡುವಾಗ ಬೇರೆಯವರ ಆಸ್ತಿಯನ್ನು ತಮ್ಮ ಆಸ್ತಿಯೆಂದು ದಾಖಲೆಗಳನ್ನು ಸೃಷ್ಟಿಸಿ ಮೋ’ಸ ಮಾಡುತ್ತಾರೆ. ಕೆಲವೊಮ್ಮೆ ತಾವೇ ಆ ವ್ಯಕ್ತಿ ಎಂದು ಹೇಳಿ ಯಾರ ಹೆಸರಿನಲ್ಲಿ ಆಸ್ತಿ ಇದೆಯೋ ಅವರ ಹೆಸರು ಹೇಳಿಕೊಂಡು ಕೂಡ ಮೋ’ಸ ಮಾಡುತ್ತಾರೆ.

ಈ ಸುದ್ದಿ ಓದಿ:- ಕೇಂದ್ರ ಸರ್ಕಾರದ ಹೊಸ ಭರ್ಜರಿ ಯೋಜನೆಗೆ ಗಂಡ ಹೆಂಡತಿ ಇಬ್ಬರೂ ಪ್ರತಿ ತಿಂಗಳು 6,000 ಪಡೆಯುವ ಹೊಸ ಯೋಜನೆ.! ಆಸಕ್ತರು ಅರ್ಜಿ ಸಲ್ಲಿಸಿ.!

ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಇತ್ತೀಚಿಗೆ ನಡೆದ ಕೇಸ್ ವಿಚಾರಣೆ ಸಮಯದಲ್ಲಿ ನ್ಯಾಯಾಲಯವು ಒಂದು ಹೊಸ ನಿಯಮವನ್ನು ಜಾರಿಗೆ ತರುವಂತೆ ಸೂಚಿಸಿದೆ. ವ್ಯಕ್ತಿ ಮಾರಾಟ ಮಾಡಿರುವ ಜಮೀನಿನ ಹಕ್ಕು ಪತ್ರದಲ್ಲಿ ಅವರ ಹೆಸರನ್ನು ತೆಗೆದುಹಾಕುವಂತೆ ಪ್ರಶ್ನಿಸಿರುವ ರಿಜಿಸ್ಟ್ರಾರ್ ಅವರ ಕ್ರಮವನ್ನು ಪ್ರಶ್ನಿಸಿ, ರಾಜೇಶ್ ತಿಮ್ಮಣ್ಣ ಉಮಾರಾಣಿ ಎನ್ನುವವರು ಸಲ್ಲಿಸಿದ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿದೆ ಇಂತಹ ತೀರ್ಪು ನೀಡಿದೆ.

ಈ ವಿಚಾರದಲ್ಲಿ ಕೋರ್ಟ್ ಹೇಳಿರುವುದು ಏನೆಂದರೆ 2016ರ ಆಧಾರ ಆಕ್ಟ್ (Aadhaar act 2006) ಪ್ರಕಾರ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಡಿಯಲ್ಲಿ ಆಧಾರ್ ಕಾರ್ಡ್ ಪಡೆದುಕೊಂಡಿರುವ ವ್ಯಕ್ತಿಯ ಆಧಾರ್ ಕಾರ್ಡನ್ನು (Aadhar Card) OTP ಮೂಲಕ ಪರಿಶೀಲಿಸಿ ದೃಢೀಕರಿಸಬೇಕು ಎಂದು ತಿಳಿಸಲಾಗಿದೆ.

ಈ ಕಾಯ್ದೆ ಪ್ರಕಾರ ಇನ್ಸ್ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ UIDAI ನಲ್ಲಿ ನೋಂದಾಯಿಸಿಕೊಂಡಿರಬೇಕು. ಹಾಗಾಗಿ ಇನ್ಮುಂದೆ ಆಸ್ತಿ ಖರೀದಿ ಹಾಗೂ ಮಾರಾಟ ಮಾಡುವ ಸಮಯದಲ್ಲಿ ನೋಂದಣಿ ಕಚೇರಿಯಲ್ಲಿ (Register Office) ಆಸ್ತಿ ನೋಂದಣಿ ಮಾಡಿಸಿಕೊಳ್ಳುವಾಗ ಆಧಾರ್ ಪರಿಶೀಲನೆ (Aadhaar verification) ಮಾಡುವುದು ಕಡ್ಡಾಯವಾಗಿದೆ.

ಈ ಸುದ್ದಿ ಓದಿ:- ಭಾರತೀಯ ವಾಯುಪಡೆ ಅಗ್ನಿವೀರ್ ಇಲಾಖೆಯಲ್ಲಿ ಖಾಲಿ‌ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನ.! PUC ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ.!

ನೀಡಿರುವ ದಾಖಲೆಯಲ್ಲಿರುವ ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ನಂಬರ್ ಗೆ ವೆರಿಫಿಕೇಶನ್ ವೇಳೆ OTP ಕಳುಹಿಸಲಾಗುತ್ತದೆ, ಒಂದು ವೇಳೆ ಆತ ಮಾಲೀಕನಲ್ಲದೆ ಇದ್ದರೂ ಮಾಲೀಕನ ದಾಖಲೆಗಳನ್ನು ಕೊಟ್ಟು ತಾನೇ ಮಾಲೀಕ ಎಂದು ಸುಳ್ಳು ಹೇಳಿದರೆ ಅಂತ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾನೆ, ಅಥವಾ ಮುಂದೊಂದು ದಿನ ತನಗೆ ಮೋ’ಸ ಆಗಿದೆ ತಾನು ಮಾರಾಟ ಮಾಡೇ ಇಲ್ಲ ಎಂದು ಹೇಳುವ ಸಾಧ್ಯತೆಯೂ ಇರುವುದಿಲ್ಲ ಹಾಗಾಗಿ ಈ ರೀತಿ ಸೂಚನೆ ಕೊಡಲಾಗಿದೆ.

ಒಂದು ವೇಳೆ ಈ ರೀತಿ ಆಧಾರ್ ಪರಿಶೀಲನೆ ಮಾಡಿದಾಗ ಅದು ನಕಲಿ ಎಂದು ಕಂಡು ಬಂದರೆ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದು ಹೈಕೋರ್ಟ್ ತೀರ್ಮಾನ ನೀಡಿದೆ, ಮತ್ತು ಈ ರೀತಿ ಮಾಡಿದವರ ಮೇಲೆ ಕಠಿಣ ಕ್ರಮ ಕೂಡ ಜರುಗಿಸುವ ಸಾಧ್ಯತೆಯೂ ಇದೆ.

ಹೀಗಾಗಿ ಇನ್ನು ಮುಂದೆ ಯಾವುದೇ ಆಸ್ತಿ ನೋಂದಣಿ ಸಮಯದಲ್ಲಿ ಆಧಾರ್ ಕಾರ್ಡ್ ಪರಿಶೀಲನೆ ಕೂಡ ಬಹಳ ಮುಖ್ಯವಾಗಿರುವ ವಿಚಾರವಾಗಿದ್ದು ಈ ದಾಖಲೆ ನೀಡದೆ ಇದ್ದರೆ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಯುವುದಿಲ್ಲ.

ಈ ಸುದ್ದಿ ಓದಿ:- ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ದಿನಕ್ಕೆ 2 ಗಂಟೆ ಕೆಲಸ ಮಾಡಿ 15,000 ಪಡೆಯಿರಿ, ಕನ್ನಡ ಗೊತ್ತಿದ್ದರೆ ಸಾಕು.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now