ಇನ್ಮುಂದೆ ಬಡವರಿಗೆ 6 ತಿಂಗಳಲ್ಲಿ ನ್ಯಾಯ ಸಿಗುತ್ತೆ, ಸಿವಿಲ್ ಪ್ರೊಸೀಜರ್ ಕೋಡ್ ತಿದ್ದುಪಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

WhatsApp Group Join Now
Telegram Group Join Now

ಕರ್ನಾಟಕವು ತ್ವರಿತ ನ್ಯಾಯದ ಭರವಸೆ ನೀಡುವ ಹೊಸ ಸಿವಿಲ್ ಪ್ರೊಸೀಜರ್ ಕೋಡ್ (Civil Procedure Code) ಸೂಚಿಸಿದೆ. ಈ ಮಸೂದೆಯನ್ನು ಕಳೆದ ವರ್ಷ ಜುಲೈನಲ್ಲಿ ಅಂಗೀಕರಿಸಲಾಗಿತ್ತು ಆದರೆ ಅದು ಈ ವರ್ಷ 18 ಫೆಬ್ರವರಿ, 2024 ರಂದು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು (President Draupadi Marmu) ಅವರಿಂದ ಒಪ್ಪಿಗೆ ಪಡೆಯಿತು.

ಇನ್ನು ಮುಂದೆ ಸಣ್ಣ ರೈತರಿಗೆ ಹಾಗೂ ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಕೇವಲ ಆರು ತಿಂಗಳ ಒಳಗೆ ನ್ಯಾಯ ಕೊಡಿಸಬೇಕು ಎನ್ನುವುದೇ ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ. ಇದರ ಅರ್ಥ ಏನು? ಇದು ಯಾವ ರೀತಿಯಲ್ಲಿ ಬಡವರಿಗೆ ಸಹಾಯ ಮಾಡುತ್ತದೆ ಎನ್ನುವ ವಿಚಾರದ ಕುರಿತು ಕೆಲ ಪ್ರಮುಖ ಸುದ್ದಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಚಿಸುತ್ತೇವೆ.

ಸಾಮಾನ್ಯವಾಗಿ ಕೋರ್ಟುಗಳಲ್ಲಿ ಕೇಸ್ ಗಳು ಬೇಗ ಮುಗಿಯುವುದಿಲ್ಲ ಹೀಗಾಗಿ ಇಂದಿಗೂ ಅನೇಕರು ತಮ್ಮ ತಮ್ಮಲ್ಲಿ ರಾಜಿ ಪಂಚಾಯಿತಿ ಜೊತೆ ಬಗೆಹರಿಸಿಕೊಳ್ಳಲು ನೋಡುತ್ತಾರೆ ಹೊರತು ಕೇಸ್ ಎಂದು ಹೋದರೆ ಇಬ್ಬರೂ ಅಲೆಯಬೇಕಾಗುತ್ತದೆ ಎಂದು ತಪ್ಪಿರದಿದ್ದರೂ ಹಿಂದೆಟು ಹಾಕುತ್ತಾರೆ.

ಈ ಸುದ್ದಿ ಓದಿ:- ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, ಬ್ಯಾಂಕ್ ಸಹಾಯಕರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ ವೇತನ 87,125/-

ಹಳ್ಳಿಗಳ ಭಾಗದ ರೈತರು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರು ಕೇಸ್ ಗಳಿಗಾಗಿ ದೂರದ ಊರುಗಳಲ್ಲಿರುವ ಕೋರ್ಟ್ ಗಳಿಗೆ ಹೋಗಲು ಸಮಯ ಮತ್ತು ಇನ್ನಿತರ ಖರ್ಚುಗಳಿಗೆ ಹಣಕಾಸು ಹೊಂದಿಸಲು ದೊಡ್ಡ ಸಮಸ್ಯೆ ಆಗುತ್ತಿದೆ ಬಹಳ ವರ್ಷಗಳಿಂದ ಇದನ್ನೆಲ್ಲಾ ಪರಿಗಣಿಸಲಾಗಿತ್ತು.

ಈಗ ಅಂತಿಮವಾಗಿ ಇದರ ಬಗ್ಗೆ ಸರ್ಕಾರ ಸಣ್ಣ ರೈತರ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದ ವ್ಯಕ್ತಿಗಳಿಗೆ ಸಂಬಂಧಿಸಿದ ನ್ಯಾಯಾಲಯ ದ ಮಕದ್ದಮೆಗಳನ್ನು ಪರಿತಗತ್ತಿಯಲ್ಲಿ ವಿಚಾರಣೆಗೆ ಒಳಪಡಿಸುವ ಸಿವಿಲ್ ಪಕ್ರಿಯ ಸಮಿತಿ ತಿದ್ದುಪಡಿಗೆ ಅಧಿಸೂಚನೆ ಹೊರಡಿಸಿದೆ.

ಈ ಬಗ್ಗೆ ಮಾತನಾಡಿರುವ ಮಾನ್ಯ ಕಾನೂನು ಮತ್ತು ಸಂಸ್ಕೃತಿಯ ವ್ಯವಹಾರಗಳ ಸಚಿವರಾದ ಎಚ್.ಕೆ ಪಾಟೀಲ್ ರವರು (Minister H.K Patil) ಸಿವಿಲ್ ಪ್ರೊಸೀಜರ್ ಕೋಡ್ (ಕರ್ನಾಟಕ ತಿದ್ದುಪಡಿ) ಇನ್ನು ಮುಂದೆ ಜಾರಿಯಲ್ಲಿರಲಿದೆ ಎಂದು ಪತ್ರಿಕಾಗೋಷ್ಠಿಯೊಂದರಲ್ಲಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿ:- ಬ್ಯಾಂಕ್ ಹರಾಜಿನಲ್ಲಿ ಮನೆ ಕೊಂಡುಕೊಳ್ಳಬಹುದೇ.? ಎಲ್ಲಿ ಪರ್ಚೇಸ್ ಮಾಡುವುದು.? ಹೇಗೆ ಅಪ್ಲೈ ಮಾಡುವುದು.? ಡಿಸ್ಕೌಂಟ್ ಇರುತ್ತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈ ತಿದ್ದುಪಡಿಯ ಪ್ರತಿಪಾದಿಸುವುದು ತ್ವರಿತನ್ಯಾಯ ಈಗ ತಿದ್ದುಪಡಿಯಾಗಿರುವ ಹೊಸ ನಿಯಮದ ಪ್ರಕಾರವಾಗಿ ಇನ್ನು ಮುಂದೆ ಯಾವುದೇ ಕೆಲಸಗಳಲ್ಲಿ ರೈತನು ಅಥವಾ ಆರ್ಥಿಕವಾಗಿ ದುರ್ಬಲವಾದ ವರ್ಗಕ್ಕೆ ಸೇರಿರುವ ವ್ಯಕ್ತಿಯು ವಾದಿ ಆಗಿರಲಿ ಅಥವಾ ಪ್ರತಿವಾದಿಯೇ ಆಗಿರಲಿ ಅಂತಹ ದಾವೆಗಳ ಪಟ್ಟಿಗಳನ್ನು ನ್ಯಾಯಾಲಯಗಳು ತೆಗೆದುಕೊಂಡು 6 ತಿಂಗಳೊಳಗೆ ವಿಚಾರಣೆ ಮಾಡಿ ವಿಲೇವಾರಿಯನ್ನು ಮಾಡಬೇಕೆಂದು ನಿರೀಕ್ಷಿಸುತ್ತದೆ.

ಇದು ಕೆಳ ಹಂತದ ನ್ಯಾಯಾಲಯಗಳಿಂದ ಹಿಡಿದು ಹೈಕೋರ್ಟ್ ವರೆಗೂ ಕೂಡ ಅನ್ವಯವಾಗುತ್ತದೆ ಎಂದು ತಿಳಿಸಿದೆ ಈ ತಿದ್ದುಪಡಿ ಬಗ್ಗೆ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದು ವಿಳಂಬವಾದ ನ್ಯಾಯವು ನಿರಾಕರಿಸಿದ ಎಂಬ ತತ್ವವನ್ನು ಆಧರಿಸಿದೆ.

ಸಕಾಲದಲ್ಲಿ ನ್ಯಾಯ ಒದಗಿಸದೆ ತಡ ಮಾಡಿದರೆ ದ್ರೋ’ಹ ಬಗೆಯುವುದಕ್ಕೆ ಸಮ ಎಂಬ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿಯೇ ಸಾಕಷ್ಟು ಚರ್ಚೆಯ ನಂತರವೇ ತಿದ್ದುಪಡಿ ತರಲಾಗಿದೆ ಎಂದು ಸಚಿವರು ನುಡಿದಿದ್ದಾರೆ. ಸಿವಿಲ್ ಪ್ರೊಸೀಜರ್ ಕೋಡ್ ಕೇಂದ್ರದ ಕಾನೂನು ಆಗಿರುವುದರಿಂದ ತಿದ್ದುಪಡಿಯ ಅಗತ್ಯವಿದೆ ನಾವು ಕೂಡ ಪ್ರಯತ್ನಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

ಈ ಸುದ್ದಿ ಓದಿ:- ಬತ್ತಿ ಹೋದ ಬೋರವೆಲ್ ನಲ್ಲಿ 4 ಇಂಚು ನೀರು ಬರುವ ಹಾಗೆ ಮಾಡಿ ಯಶಸ್ಸು ಕಂಡ ರೈತ.!

ಈಗಾಗಲೇ ಪೆಂಡಿಂಗ್ ಇರುವ ಕೇಸ್ ಗಳಿಗೂ ಕೂಡ ಈ ತಿದ್ದುಪಡಿ ಆದೇಶ ಅನ್ವಯಿಸುತ್ತದೆ. ಸಣ್ಣ ರೈತ ಹಾಗೂ ದುರ್ಬಲ ವ್ಯಕ್ತಿಗೆ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಹೆಚ್ಚಿಗೆ ಇಲ್ಲ ಎಂದಿದ್ದಾಗ ಆ ಕೇಸ್ ಐದು ವರ್ಷ ಹಳೆಯದಾಗಿದ್ದರು ಆರು ತಿಂಗಳ ಒಳಗೆ ಇತ್ಯರ್ಥ ಪ್ರಡಿಸುವಂತೆ ಅಫಿಡವಿಟಿ ಸಲ್ಲಿಸಲು ಅವಕಾಶವಿದೆ. ಈ ಹೊಸ ಕ್ರಮದಿಂದ ನ್ಯಾಯಾಲಯಗಳ ಮೇಲೆ ಒತ್ತಡ ಹೆಚ್ಚಾದರೂ ತ್ವರಿತ ನ್ಯಾಯಕ್ಕೆ ಇದರ ಅಗತ್ಯವಿದೆ. ನ್ಯಾಯಾಲಯಗಳಿಗೆ ಬೇಕಾದ ಅಗತ್ಯ ಬೆಂಬಲವನ್ನು ಸರ್ಕಾರ ನೀಡುತ್ತದೆ ಎಂದು ಸಚಿವರು ಹೇಳಿದ್ದಾರೆ.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now