ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು (Karnataka government) ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯಡಿ (Skakthi yochane fee travel for womes) ರಾಜ್ಯಾದ್ಯಂತ ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕ ರಾಜ್ಯದ ಎಲ್ಲಾ ಮಹಿಳೆಯರು ಕರ್ನಾಟಕ ಸಾರಿಗೆ ಸಂಸ್ಥೆಯ ನಾಲ್ಕು ನಿಗಮದ ಬಸ್ ಗಳಲ್ಲಿ ಉಚಿತವಾಗಿ ಸಂಚರಿಸುತ್ತಿದ್ದಾರೆ.
ರಾಜ್ಯದ ಗಡಿಯೊಳಗೆ ಮಾತ್ರ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು AC ಬಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಬಸ್ ಗಳಲ್ಲೂ ಶೂನ್ಯ ದರ ಟಿಕೆಟ್ ಪಡೆದು ಮಹಿಳೆಯರು ಪ್ರಯಾಣಿಸಬಹುದಾಗಿದೆ. ಶಕ್ತಿ ಯೋಜನೆ ಪರಿಣಾಮವಾಗಿ ಪ್ರೇಕ್ಷಣೀಯ ಸ್ಥಳಗಳಿಗೆ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಮತ್ತು ಸಭೆ ಸಮಾರಂಭಗಳಿಗೆ ಪಾಲ್ಗೊಳ್ಳುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗುತ್ತದೆ.
ಮತ್ತು ಶಾಲಾ ಕಾಲೇಜುಗಳಿಗೆ ಹೋಗುವ ಸ್ವಾವಲಂಬಿಯಾಗಿ ಬದುಕಲು ದುಡಿಯುವುದಕ್ಕಾಗಿ ಮನೆಯಿಂದ ಹೊರಹೋಗುವ ಮಹಿಳೆಯರಿಗೆ ಸಾರಿಗೆ ವೆಚ್ಚವು ಉಳಿತಾಯವಾಗುತ್ತಿದೆ. ಆದರೆ ಈಗ ಸಾರಿಗೆ ಇಲಾಖೆಯಿಂದ ಹೊಸದೊಂದು ಸೂಚನೆಯನ್ನು ಶಕ್ತಿ ಯೋಜನೆಯಡಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರಿಗೆ ನೀಡಿದೆ.
ಇತ್ತೀಚಿಗೆ ಕರ್ನಾಟಕ ರಾಜ್ಯ ಸಾರಿಗೆ ನಿಗಮಕ್ಕೆ ಹೊಸ ಬಸ್ ಗಳ ಸೇರ್ಪಡೆಯಾಗಿದ್ದು ಆ ಬಸ್ ಗಳ ಉದ್ಘಾಟನೆಯನ್ನು ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರು ನೆರವೇರಿಸಿದ್ದಾರೆ. ರಾಜ್ಯ ಸರ್ಕಾರ ಒಟ್ಟು 148 ಹೊಸ ಬಸ್ ಗಳಿಗೆ ಅನುಮೋದನೆ ನೀಡಿದ್ದು, ಇವುಗಳನ್ನು ಪಲ್ಲಕ್ಕಿ ಬಸ್ (pallaki bus) ಎಂದು ಬ್ರಾಂಡಿಂಗ್ (branding) ಮಾಡಲಾಗಿದೆ.
ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಸಾರಿಗೆಗೆ ಬ್ರಾಂಡಿಂಗ್ ನೀಡಲಾಗಿದೆ. ಒಟ್ಟು ಈ ಬಸ್ ಗಳಲ್ಲಿ 40 ನಾನ್ ಎಸಿ ಬಸ್ (non AC bus) ಗಳು ಹಾಗೂ 100 ನಗರ ಸಾರಿಗೆ ಎಸಿ ಬಸ್ ಗಳಾಗಿವೆ (AC Bus). 40 ಬಸ್ ಗಳು ಐಷಾರಾಮಿ ಬಸ್ ಗಳು ಆಗಿರುವ ಕಾರಣ ಈ ಹೊಸ ಬಸ್ ಗಳು ಶಕ್ತಿ ಯೋಜನೆಯಡಿಯಲ್ಲಿ ಬರುವುದಿಲ್ಲ, ಹಾಗಾಗಿ ಈ ಬಸ್ ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಸರ್ಕಾರ ತಿಳಿಸಿದೆ.
ಆದರೆ ಇನ್ನುಳಿದ 100 ಬಸ್ ಗಳಲ್ಲಿ ಎಂದಿನಂತೆ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಹೊಸದಾಗಿ ರಾಜ್ಯ ಸಾರಿಗೆಗೆ ಸೇರ್ಪಡೆಗೊಂಡಿರುವ ಪಲ್ಲಕ್ಕಿ ಬಸ್ ಗಳ ವಿಶೇಷತೆ ಏನೆಂದು ನೋಡುವುದಾದರೆ ಇವುಗಳಲ್ಲಿ ಸುಧಾರಿತ ತಂತ್ರಜ್ಞಾನಗಳನ್ನು (technology) ಅಳವಡಿಸಿದ್ದಾರೆ. ಇದರಲ್ಲಿ BS 6 ಇಂಜಿನ್ (Engine) ಅಳವಡಿಸಲಾಗಿದೆ.
ಪ್ರತೀ ಸೀಟ್ ನಲ್ಲಿಯೂ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು (Electronic Gadget) ಚಾರ್ಜ್ ಮಾಡಬಹುದಾದ ಚಾರ್ಜರ್ ಪಾಯಿಂಟ್ (charging facility) ಅನುಕೂಲತೆ ಮಾಡಿ ಕೊಡಲಾಗಿದೆ ಸೆಟ್ ನಂಬರ್ ಗಳಿಗೆ LED ಲೈಟ್ (LED light) ಅಳವಡಿಸಲಾಗಿದೆ.
ಮೆಟ್ರೋ ಮಾದರಿಯಲ್ಲಿ ಸ್ಪೀಕರ್ ಗಳ ಕೂಡ ಅಳವಡಿಸಲಾಗಿದ್ದು ಇವುಗಳ ಮೂಲಕ ಬಸ್ ಪ್ರಯಾಣಿಕರಿಗೆ ಗೈಡ್ ಮಾಡಲಾಗುತ್ತದೆ. ಒಟ್ಟು 40 ನಾನ್ ಎಸಿ ಬಸ್ ಗಳಲ್ಲಿ 30 ರಾಜ್ಯದ ಒಳಗೆ ಹಾಗೂ ಹತ್ತು ಹೊರ ರಾಜ್ಯಗಳಿಗೆ ಸಂಚರಿಸಲಿವೆ. ಈ ಪಲ್ಲಕ್ಕಿ ಬ್ರಾಂಡಿಂಗ್ ಬಹಳ ಹೈಟೆಕ್ (Hi-Tech) ಆಗಿದ್ದು ಇದು ನಿಗಮಕ್ಕೆ ಉತ್ತಮ ಆದಾಯ ತೆರಿಗೆ ಎಂದು ನಿರೀಕ್ಷಿಸಲಾಗಿದೆ, ರಿಸಲ್ಟ್ ಗಾಗಿ ಇನ್ನು ಕೆಲವು ದಿನ ಕಾದು ನೋಡೋಣ.!