ರೈತರಿಗೆ (farmers) ತಮ್ಮ ಜಮೀನಿನ ಕುರಿತಾದ ಸಾಕಷ್ಟು ದಾಖಲೆಗಳ ಅವಶ್ಯಕತೆ (Agriculture land documents) ಇರುತ್ತವೆ. ಸರ್ಕಾರವು ರೈತರಿಗೆ ಜಮೀನಿಗೆ ಸಂಬಂಧಪಟ್ಟ ಹಾಗೆ ಅನುದಾನಗಳನ್ನು ನೀಡುವಾಗ ಅಥವಾ ಭೂಮಿಯನ್ನು ಪರಭಾರೆ ಮಾಡುವ ಸಂದರ್ಭದಲ್ಲಿ ಅಥವಾ ಆಸ್ತಿಗೆ ಸಂಬಂಧ ಪಟ್ಟ ಹಾಗೆ ಯಾವುದಾದರೂ ಲೋನ್ ತೆಗೆದುಕೊಳ್ಳುವಾಗ ಇವುಗಳಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಒಂದು ವೇಳೆ ರೈತನ ಬಳಿ ಆ ದಾಖಲೆಗಳು ಇಲ್ಲದೇ ಇದ್ದಾಗ ಅಥವಾ ಹೆಚ್ಚಿನ ದಾಖಲೆಗಳು ಬೇಕಾದಾಗ ತಹಶೀಲ್ದಾರ್ ಕಚೇರಿಯಲ್ಲಿ (Tahsildar) ಇರುವ ಭೂಮಾಪನ ಇಲಾಖೆಯಲ್ಲಿ ಸಂಬಂಧ ಪಟ್ಟ ವಿಭಾಗಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಾಗಿತ್ತು ಮತ್ತು ಸರ್ಕಾರ ಯಾವುದೇ ಸೇವೆಗಳನ್ನು ಪಡೆಯಬೇಕು ಎಂದರು ಕೂಡ ಈ ರೀತಿ ತಹಶೀಲ್ದಾರ್ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರ ಹೀಗೆ ರೈತರ ತಾನಿರುವ ಸ್ಥಳದಿಂದ ದೂರದ ಸ್ಥಳಗಳಿಗೆ ಹೋಗಿ ಅವುಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕಿತ್ತು.
ಈ ಸುದ್ದಿ ಓದಿ:- ಈ ಜಿಲ್ಲೆ ಮಹಿಳೆಯರಿಗೆ ಇಂದು ಗೃಹಲಕ್ಷ್ಮಿ ಯೋಜನೆ 7ನೇ ಕಂತಿನ ಹಣ ಬಿಡುಗಡೆಯಾಗಿದೆ.! ಮೊಬೈಲ್ ನಲ್ಲೇ ಈ ರೀತಿ ಸ್ಟೇಟಸ್ ಚೆಕ್ ಮಾಡಿ ತಿಳಿದುಕೊಳ್ಳಿ.!
ಇದರಿಂದ ರೈತರಿಗೆ ಬಹಳ ಸಮಯ ವ್ಯರ್ಥ ಆಗುತ್ತಿತ್ತು ಮತ್ತು ಒಂದು ಬಾರಿಗೆ ಹೋದ ಕೆಲಸ ಆಗುತ್ತದೆ ಎನ್ನುವ ಯಾವುದೇ ಗ್ಯಾರೆಂಟಿಯೂ ಇರಲಿಲ್ಲ, ಹೀಗಾಗಿ ದಿನ ನಿತ್ಯವೂ ಕಚೇರಿಗಳ ಮುಂದೆ ರೈತರು ಕಾದು ನಿಲ್ಲುವಂತಾಗಿತ್ತು. ಇತ್ತ ಕಡೆ ರೈತರಿಗೆ ಈ ಸಮಸ್ಯೆಯಿಂದಾಗಿ ಕೃಷಿ ಕೆಲಸಗಳು ಕೂಡ ಸರಿಯಾಗಿ ಸಮಯಕ್ಕೆ ಆಗದೆ ತೊಂದರೆ ಆಗುತ್ತಿತ್ತು ಎಲ್ಲದರ ಪರಿಣಾಮವಾಗಿ ರೈತನಿಗೆ ಸಮಯ ಮಾತ್ರವಲ್ಲದೆ ಹಣದ ಮತ್ತು ಶ್ರಮದ ವ್ಯರ್ಥವು ಆಗುತ್ತಿತ್ತು.
ಇದನ್ನು ಮನಗಂಡ ಸರ್ಕಾರವು ರೈತರಿಗೆ ಅನುಕೂಲತೆ ಮಾಡಿಕೊಡಲು ಹೊಸ ವಿಧಾನವನ್ನು ಪರಿಚಯಿಸಿದೆ. ಈಗ ಎಲ್ಲಾ ಕ್ಷೇತ್ರವು ಕೂಡ ಡಿಜಟಲೀಕರಣವಾಗುತ್ತಿರುವುದರಿಂದ (Digitalization) ರೈತರಿಗೂ ಕೂಡ ಆನ್ಲೈನ್ ನಲ್ಲಿಯೇ (online) ಎಲ್ಲ ದಾಖಲೆಗಳು ಹಾಗೂ ಸೇವೆಗಳು ಸಿಗುವಂತೆ ಮಾಡಬೇಕು ಎನ್ನುವುದನ್ನು ನಿರ್ಧರಿಸಿ ಇದಕ್ಕಾಗಿ ಕ್ರಮ ಕೈಗೊಳ್ಳಲಾಗಿದೆ.
ಈ ಸುದ್ದಿ ಓದಿ:- ಮಾರ್ಚ್ 25ರ ಒಳಗೆ ಎಲ್ಲಾ ಮಹಿಳೆಯರು ಪುರುಷರು ಈ ಕೆಲಸ ಮಾಡಿ, ಇಲ್ಲದಿದ್ರೆ ಗೃಹಲಕ್ಷ್ಮಿ, ಅಕ್ಕಿಹಣ, ಯುವನಿಧಿ ಸರ್ಕಾರದಿಂದ ಬರುವ ಎಲ್ಲಾ ಹಣ ಬಂದ್ ಆಗುತ್ತೆ.!
ಇನ್ನು ಮುಂದೆ ರೈತರು ತಹಶೀಲ್ದಾರ್ ಕಚೇರಿಯಲ್ಲಿ ಸಿಗುವ ಯಾವುದೇ ದಾಖಲೆ ಬೇಕಿದ್ದರೂ ಅಥವಾ ಯಾವುದೇ ಮನವಿ ಸಲ್ಲಿಸಬೇಕಿದ್ದರೂ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು. ಯಾವೆಲ್ಲಾ ಸೇವೆಗಳನ್ನು ಪಡೆಯಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದರ ಪೂರ್ತಿ ವಿವರ ಹೀಗಿದೆ.
ಆನ್ಲೈನ್ನಲ್ಲಿ ಪಡೆಯಬಹುದಾದ ದಾಖಲೆಗಳ ಲಿಸ್ಟ್
* ಜಮೀನಿಗೆ ಸಂಬಂಧಪಟ್ಟ ಎಲ್ಲಾ ಮೂಲಭೂತ ದಾಖಲೆಗಳು
* ಹಿಸ್ಸಾ ಪತ್ರ
* ರಸ್ತೆಗಳ ಬಗ್ಗೆ ಮಾಹಿತಿ
* ಹದ್ದುಬಸ್ತು ಪ್ರಕರಣದಲ್ಲಿ ಭೂ ಮಾಲೀಕರು ತಯಾರಿಸಿದ ದಾಖಲಾತಿ ಪತ್ರಗಳು
* ಸರ್ವೇ ನಂಬರ್ ಗೆ ಸಂಬಂಧಪಟ್ಟ ಮಾಹಿತಿ
* ಮ್ಯೂಟೇಶನ್ ಪೋಡಿ ಅಳತೆಯ ಸಮಯದಲ್ಲಿ ಬರೆಯಲಾದ ನಕ್ಷೆ ಅಥವಾ ದಾಖಲೆಗಳು.
* ಪಿ ಆರ್ ಕಾರ್ಡ್ಗಳು, ಪಿಆರ್ ಶೀಟ್, ಸ್ಥಳೀಯ ಕ್ಷೇತ್ರದ ನಕ್ಷೆ ಮೊದಲಾದ ನಗರಕ್ಕೆ ಸಂಬಂಧಪಟ್ಟ ದಾಖಲೆಗಳು.
* ತಹಶಿಲ್ದಾರ್ ಕಚೇರಿಯಿಂದ ಪಡೆಯುತ್ತಿದ್ದ ಇನ್ನಿತರ ದಾಖಲೆಗಳು ಮತ್ತು ಸೇವೆಗಳು
ಆನ್ಲೈನ್ ನಲ್ಲಿ ಪಡೆಯುವ ವಿಧಾನ:-
* ರೈತರು ಜಮೀನಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿ ಪಡೆದುಕೊಳ್ಳಲು ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
https://bhoomojini.karnataka.gov.in/service35/Dashboard.aspx ಈ ಲಿಂಕ್ ಮೇಲೆ ಕ್ಲಿಕ್ ಮಾಡಿ)
* ಮುಖಪುಟದಲ್ಲಿ ನೀಡುವ ಸೂಚನೆಗಳ ಪ್ರಕಾರ ಮುಂದುವರೆದು ನಿಮಗೆ ಬೇಕಾದ ದಾಖಲೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟೌಟ್ ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯು ಎಲ್ಲ ರೈತರಿಗೂ ತಲುಪುವಂತೆ ಶೇರ್ ಮಾಡಿ.