ಕೇಸರಿಯು (saffron) ಒಂದು ಅತ್ಯುತ್ತಮ ಆಹಾರ. ಕೇಸರಿಯು ಔಷಧೀಯ ಗುಣಗಳನ್ನು ಹೊಂದಿದ್ದು ಅಡುಗೆಗೆ ಮತ್ತು ಕಾಸ್ಮೆಟಿಕ್ ತಯಾರಿಕೆಗೆ ಬಳಕೆ ಆಗುತ್ತದೆ. ಅತಿ ದುಬಾರಿ ಬೆಲೆಯ ಮಸಾಲೆ ಪದಾರ್ಥ ಇದಾಗಿದ್ದು, ಇಂದು ಭಾರತ ದೇಶದಲ್ಲಿ ಬಳಕೆ ಆಗುತ್ತಿರುವ ಕೇಸರಿಯಲ್ಲಿ 98% ವಿದೇಶಗಳಿಂದ ಆಮದು ಆಗಿ ಬರುತ್ತಿದೆ ಎನ್ನುವುದನ್ನು ಹೇಳುತ್ತಿದೆ ಅಂಕಿ ಅಂಶ.
ನಮ್ಮಲ್ಲಿ ಕಾಶ್ಮೀರದ ಮಣ್ಣು ಮಾತ್ರ ಕೇಸರಿ ಬೆಳೆಯುವುದಕ್ಕೆ ಸೂಕ್ತ ಮತ್ತು ಕಾಶ್ಮೀರದ ಕೇಸರಿ ಮಾತ್ರ ಪ್ಯೂರ್ ಎನ್ನುವ ಮಾತಿದೆ. ಹಾಗೆಯೇ ಜಗತ್ತಿನಾದ್ಯಂತ ನೋಡುವುದಾದರೆ ಇರಾನ್ ದೇಶಗಳಲ್ಲಿ ಈ ರೀತಿ ಶುದ್ಧ ಕೇಸರಿ ಬೆಳೆಯುತ್ತಾರೆ ಇದರಿಂದಲೇ ಆದೇಶ ಶ್ರೀಮಂತವಾಗಿದೆ ಅತಿ ಹೆಚ್ಚು ಕೇಸರಿ ಬೆಳೆಯುವ ದೇಶದಲ್ಲಿ ಇರಾನ್ ಮೊದಲನೆಯದ್ದು ಎನ್ನುವ ಮಾತಿದೆ.
ಈ ಸುದ್ದಿ ಓದಿ:- ಮನೆಯಲ್ಲಿಯೇ ನೋಟ್ ಬುಕ್ ತಯಾರಿಸಿ ಪ್ರತಿದಿನ ರ4,500 ಲಾಭ ಮಾಡಬಹುದು ತಿಂಗಳಿಗೆ 1,75,000 ಲಾಭ ಪಕ್ಕಾ.!
ಕೇಸರಿಗೆ ಇಷ್ಟೊಂದು ಬೇಡಿಕೆ ಇರುವುದರಿಂದ ಮತ್ತು ಸೀಮಿತ ಪ್ರದೇಶದ ಮಣ್ಣು ಮಾತ್ರ ಈ ಬೆಳೆಗೆ ಸೂಕ್ತ ಆಗಿರುವುದರಿಂದ ಸಹಜವಾಗಿ ಮಾರುಕಟ್ಟೆಯಲ್ಲಿ ಇದರ ಕೊರತೆ ಕಾಣುತ್ತದೆ. ಹೀಗಾಗಿ ಇರಾನ್ ದೇಶದ ವ್ಯಕ್ತಿಯೊಬ್ಬರು ಇನ್ ಡೋರ್ ನಲ್ಲಿ (Indoor) ಕೇಸರಿ ಬೆಳೆಯ ಬೆಳೆಯುವುದಕ್ಕೆ ಪ್ರಯೋಗ ಮಾಡಿ ಏರೋಫೋನಿಕ್ (Aeroponic) ಪದ್ಧತಿಯಲ್ಲಿ ಕೇಸರಿ ಬೆಳೆಯುವುದರಲ್ಲಿ ಯಶಸ್ವಿಯಾದರು.
ಇಂದು ಜಗತ್ತಿನಾದ್ಯಂತ ಭಾರತವು ಸೇರಿದಂತೆ ಹಲವು ಭಾಗಗಳಲ್ಲಿ ಇದನ್ನು ಅನುಸರಿಸಿಕೊಂಡು ತಮ್ಮ ಮನೆಯ ಒಳಗೆ ತಾವೇ ಇದಕ್ಕೆ ಬೇಕಾದ ಸೆಟ್ ಆಫ್ ಮಾಡಿಕೊಂಡು ಕೇಸರಿ ಕೃಷಿ ಮಾಡಿ ಕೈ ತುಂಬಾ ಆದಾಯ ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲೂ ಕೂಡ ಲೊಕೇಶ್ ಎಂಬ ಪ್ರಗತಿಪರ ಕೃಷಿಕ ಮತ್ತು ಸಂಪನ್ಮೂಲ ವ್ಯಕ್ತಿ ಈ ರೀತಿ ಪ್ರಯೋಗದಲ್ಲಿ ಪಾಲ್ಗೊಂಡು ತಮ್ಮ ಅನುಭವವನ್ನು ಮತ್ತು ಕೇಸರಿ ಬೆಳೆಯುವ ಈ ಕೃಷಿ ಬಗ್ಗೆ ಮಾಹಿತಿಯನ್ನು ಯೂಟ್ಯೂಬ್ ವಾಹಿನಿಯ ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿ:- ಕೇವಲ 600 ಗೆ ಛಾವಣಿ ತಂಪು, ರಾತ್ರಿ ಸೆಖೆ ಇಲ್ಲದೆ ಸುಖ ನಿದ್ರೆ ಮಾಡಲು ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ ಸಾಕು.!
ಈ ಪ್ರಮುಖ ಸಂಗತಿಗಳ ಬಗ್ಗೆ ಎಲ್ಲಾ ರೈತರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಕೆಲ ಮಾಹಿತಿಯನ್ನು ತಿಳಿಸುತ್ತಿದ್ದೇವೆ. ಕೇಸರಿ ಬೆಳೆಯುವುದಕ್ಕೆ ಈ ಏರೋಫೋನಿಕ್ ವ್ಯವಸ್ಥೆ ಅಳವಡಿಸಿ ಕೊಳ್ಳುವುದಕ್ಕೆ ಮನೆ ಒಳಗೆ ಒಂದು ರೂಮ್ ನಷ್ಟು ಜಾಗ ಇದ್ದರೆ ಸಾಕು. ಎಂಎಸ್ ಸ್ಟೀಲ್ ತೆಗೆದುಕೊಂಡು ಸ್ಟ್ಯಾಂಡ್ ರೀತಿ ಸೆಟ್ ಆಫ್ ಮಾಡಿಕೊಂಡರೆ ಸ್ಟ್ಯಾಂಡ್ ವೈಸ್ ಹೆಚ್ಚು ಕ್ರೇಟ್ ಗಳಲ್ಲಿ ಕೇಸರಿ ಬೆಳೆಯಬಹುದು.
ಇದಕ್ಕೆ ಲೈಟಿಂಗ್ ವ್ಯವಸ್ಥೆ ಕೂಡ ಅಷ್ಟೇ ಮುಖ್ಯ. ಈ ಬೆಳೆ ಬೆಳೆಯಲು ಬಿಳಿ ಬಣ್ಣ ಕಡಿಮೆ ಬಳಕೆ ಆಗುತ್ತದೆ ಹಾಗಾಗಿ ಸಂಶೋಧನೆಗಳ ಮೂಲಕ ತಿಳಿ ಪಿಂಕ್ ಹಾಗೂ ತಿಳಿ ನೇರಳೆ ಬಣ್ಣ ಅಗತ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಸೆಟ್ ಆಫ್ ಮಾಡುವುದಕ್ಕೂ ಕೂಡ ಸಾವಿರಾರು ರುಪಾಯಿ ಖರ್ಚು ಆಗುತ್ತದೆ.
ಈ ಸುದ್ದಿ ಓದಿ:- ಟೆರೇಸ್ ಮೇಲೆ ಗಾರ್ಡನ್ ಮಾಡಲು ಬಯಸುತ್ತಿದ್ದೀರಾ.? ಈ ವಿಷಯಗಳು ಗೊತ್ತಿದ್ದರೆ ಉತ್ತಮ.!
ಇದಾದ ಮುಂದಿನ ಹಂತವೇ ನಾಟಿ. ನಾವು ಯಾವ ಗುಣಮಟ್ಟದ ತಳಿ ನಾಟಿ ಮಾಡುತ್ತೇವೆ ಎನ್ನುವುದರ ಮೇಲೆ ನಾವು ಎಷ್ಟು ಇಳುವರಿ ಪಡೆಯುತ್ತಿದ್ದೇವೆ ಎನ್ನುವುದು ನಿರ್ಧಾರ ಆಗುತ್ತದೆ ಮತ್ತು ಇದೇ ಅತ್ಯಂತ ಪ್ರಮುಖ ಅಂಶವಾಗಿದೆ.
ಇದರ ಬಗ್ಗೆ ಸಂಪನ್ಮೂಲ ವ್ಯಕ್ತಿ ಹೇಳುವುದು ಏನೆಂದರೆ 10 ಗ್ರಾಂ ಗಿಂತ ಕಡಿಮೆ ತೂಕ ಇರುವ ಗೆಡ್ಡೆಗಳು ಕೇಸರಿ ಹೂವು ಬಿಡುವುದೇ ಇಲ್ಲ. ಹಾಗಾಗಿ ಮಾರ್ಕೆಟ್ ನಲ್ಲಿ ಈಗ ಬಹಳ ಹುಷಾರಾಗಿ ಸರ್ಚ್ ಮಾಡಿ ಇದನ್ನು ಆರಿಸಿ ಕೊಳ್ಳಬೇಕಾಗುತ್ತದೆ ಎನ್ನುವ ಸಲಹೆ ನೀಡಿದ್ದಾರೆ.
ಈ ಸುದ್ದಿ ಓದಿ:- 2006 ರ ನಂತರ ಜನಿಸಿದ ಎಲ್ಲಾ ಹೆಣ್ಣು ಮಕ್ಕಳಿಗೂ ಗುಡ್ ನ್ಯೂಸ್. ಸರ್ಕಾರದವತಿಯಿಂದ ಸಿಗಲಿದೆ 1 ಲಕ್ಷ.!
ಒಮ್ಮೆ ನಾಟಿ ಮಾಡಿದರೆ ಸಾಕು ಹಲವು ವರ್ಷಗಳವರೆಗೆ ಇಳುವರಿ ಪಡೆಯಬಹುದು ಪದೇಪದೇ ನಾಟಿ ಹಾಕುವ ಅವಶ್ಯಕತೆ ಇಲ್ಲ ಹಾಗಾಗಿ ತಡವಾದರೂ ಒಳ್ಳೆ ಬಿತ್ತನೆ ಆರಿಸಬೇಕು ಎನ್ನುವ ಮಾತನ್ನು ಹೇಳುತ್ತಾರೆ. ಹೀಗೆ ಇದು ಒನ್ ಟೈಮ್ ಇನ್ವೆಸ್ಟ್ಮೆಂಟ್ ಆಗಿದ್ದು, ಸರಿಯಾಗಿ ಮೇಂಟೆನೆನ್ಸ್ ಮಾಡಿದರೆ ಲಕ್ಷ ಲಕ್ಷ ಆದಾಯ ಮಾಡಬಹುದು. ಈ ಕೃಷಿ ವಿಧಾನದ ಕುರಿತು ಕಂಪ್ಲೀಟ್ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.