ಮನೆ ಎನ್ನುವುದು ಮನುಷ್ಯನಿಗೆ ಮೂಲಭೂತ ಅವಶ್ಯಕತೆ. ಮನುಷ್ಯನಿಗೆ ಆರೋಗ್ಯ ಹಾಗೂ ರಕ್ಷಣೆ ಇರಬೇಕು ಎಂದರೆ ಆತನಿಗೊಂದು ಆಸರೆ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ಪ್ರತಿಯೊಂದು ಕುಟುಂಬಕ್ಕೂ ಸೂರು ಒದಗಿಸಿಕೊಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆ ರೂಪಿಸಿ ನೆರವಾಗುತ್ತಿವೆ.
ಕಳೆದ ಕೆಲವು ದಿನಗಳ ಹಿಂದೆಯಷ್ಟೇ ರಾಜ್ಯ ಸರ್ಕಾರವು ಬಸವ ವಸತಿ ಯೋಜನೆಯಲ್ಲಿ ಸಾವಿರಾರು ಮನೆಗಳನ್ನು ಮಂಜೂರು ಮಾಡಿ ಸುದ್ದಿಯಾಗಿತ್ತು. ಈಗ ಮತ್ತೊಮ್ಮೆ ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ವಾಸ ಮಾಡುತ್ತಿರುವ ಜನರಿಗಾಗಿ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಮುಖ್ಯಮಂತ್ರಿಗಳ ಬಹು ಮಹಡಿ ಬೆಂಗಳೂರು ವಸತಿ ಯೋಜನೆಯಲ್ಲಿ ರೂಪಿಸಿದ್ದಾರೆ. ಈ ಯೋಜನೆಯಲ್ಲಿ ಯಾರೆಲ್ಲ ಮನೆ ಪಡೆಯಬಹುದು ಮತ್ತು ಯಾವ ರೀತಿ ಪಡೆಯಬೇಕು ಬೇಕಾಗುವ ದಾಖಲೆಗಳೇನು? ಎಂಬುವ ವಿವರ ಇಲ್ಲಿದೆ ನೋಡಿ.
ಯೋಜನೆ ಹೆಸರು:- ಮುಖ್ಯಮಂತ್ರಿ ಬಹು ಮಹಡಿ ವಸತಿ ಯೋಜನೆ
ಉದ್ದೇಶ:-
* ಅಗ್ಗದ ದರದಲ್ಲಿ 1 ಲಕ್ಷ ಮನೆಗಳನ್ನು ವಸತಿರಹಿತ ಬಡ ಕುಟುಂಬಗಳಿಗೆ ಒದಗಿಸುವುದು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಗಳಾಗಿರಬೇಕು
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು (BPL) ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
* ಕುಟುಂಬಗಳ ವಾರ್ಷಿಕ ಆದಾಯ ರೂ. 87,000 ಕ್ಕಿಂತ ಕಡಿಮೆ ಇರಬೇಕು.
* ಅರ್ಜಿದಾರರು ಬೆಂಗಳೂರಿನಲ್ಲಿ ಕನಿಷ್ಟ ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ವಾಸವಾಗಿರಬೇಕು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೊಡಬೇಕು
* ಅರ್ಜಿದಾರನ ಹೆಸರಿನಲ್ಲಿ ಈಗಾಗಲೇ ಎಲ್ಲಿಯೂ ಸ್ವಂತ ಮನೆ ಇರಬಾರದು.
* ಅರ್ಜಿದಾರ ಬೇರೆ ಯಾವುದೇ ಯೋಜನೆಗಳಡಿ ವಸತಿ ಯೋಜನೆಗಳ ಅನುಕೂಲತೆ ಪಡೆದಿರಬಾರದು.
ಬೇಕಾಗುವ ದಾಖಲೆಗಳು:-
* ವಾಸಸ್ಥಳ ಪ್ರಮಾಣ ಪತ್ರ (ಐದು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿರುವ ಕುರಿತು)
* ಅರ್ಜಿದಾರರ ಆಧಾರ್ ಕಾರ್ಡ್
* ಕುಟುಂಬದ ರೇಷನ್ ಕಾರ್ಡ್
* ಆದಾಯ ಪ್ರಮಾಣ ಪತ್ರ
* ಪಾನ್ ಕಾರ್ಡ್
* ಬ್ಯಾಂಕ್ ಖಾತೆ ವಿವರ
* ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ರಾಜ್ಯ ಸರ್ಕಾರದ ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್‌ಸೈಟ್ ashraya.karnataka.gov.in ಗೆ ಭೇಟಿ ನೀಡಿ
* ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಮೊದಲಿಗೆ ಈ ಮೇಲೆ ನೀಡಲಾದ ವೆಬ್ಸೈಟ್ ಲಿಂಕ್ ಮಾಡಿ ಅಧಿಕೃತ ಪೇಜ್ ಗೆ ಹೋಗಿ ಈ ವಸತಿ ಯೋಜನೆ ಕುರಿತ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ.
* ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಲಿಂಕ್ ಇರುತ್ತದೆ ಕ್ಲಿಕ್ ಮಾಡುವ ಮೂಲಕ ನಿಮ್ಮ ವೈಯಕ್ತಿಕ ವಿವರಗಳನ್ನು ತುಂಬಿ ಪೂರಕ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ನೀವು ಆರಿಸುವ ಮನೆಗೆ ತಕ್ಕಂತೆ ವಿಧಿಸಿರುವ ಆರಂಭಿಕ ಶುಲ್ಕವನ್ನು ಪಾವತಿ ಮಾಡಬೇಕು.
* ಯೋಜನೆ ಸ್ಥಳಗಳ ವಿವರ. ಲಭ್ಯವಿರುವ ಪ್ಲಾಟ್ ಗಳ ಮಾಹಿತಿ, ಫ್ಲಾಟ್ ಬುಕಿಂಗ್ ಸೇರಿದಂತೆ ಸಂಪೂರ್ಣ ಮಾಹಿತಿಯು ನಿಮಗೆ ಇದೇ ವೆಬ್ಸೈಟ್ನಲ್ಲಿ ಸಿಗುತ್ತದೆ.
* ಈ ರೀತಿ ಸರ್ಕಾರ ನೆರವಿನಿಂದ ಮನೆ ಖರೀದಿಸುವವರಿಗೆ ಸರ್ಕಾರವು ರಿಯಾಯಿತಿ ದರದಲ್ಲಿ ಮನೆಗಳನ್ನು ನೀಡುತ್ತಿದೆ. ನೀವು ಎಲ್ಲ ದಾಖಲೆಗಳನ್ನು ಸರಿಯಾಗಿ ಸಲ್ಲಿಸಿದರೆ ಬ್ಯಾಂಕ್ ಲೋನ್ ಜೊತೆ ಸರ್ಕಾರದ ಅನುದಾನವು ಕೂಡ ನಿಮಗೆ ಈ ಮನೆಗಳನ್ನು ಖರೀದಿಸಲು ದೊರೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ,
ಕಾವೇರಿ ಭವನ, 9ನೇ ಮಹಡಿ,
C & F Block,
KG ರಸ್ತೆ,
ಬೆಂಗಳೂರು – 560009.
ಫೋನ್ : 91 080 22106888, 91 080 23118888