ಮನೆ ಎನ್ನುವುದು ಪ್ರತಿಯೊಬ್ಬರ ಮನುಷ್ಯನ ಮೂಲಭೂತ ಅವಶ್ಯಕತೆ. ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರಿನಡಿ ನೆಲೆಸುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಆಶಯ. ರಾಜ್ಯ ಸರ್ಕಾರಗಳು ಕೂಡ ಈ ರೀತಿ ಪ್ರತಿಯೊಬ್ಬರು ವಾಸಿಸಲು ಯೋಗ್ಯವಾದ ಮನೆಯಲ್ಲಿ ಜೀವನ ಮಾಡುವಂತೆ ಆಗಲಿ ಎಂದು ಆಸೆಪಡುತ್ತದೆ. ಈಗಾಗಲೇ ಸರ್ಕಾರಗಳು ಹಲವಾರು ಯೋಜನೆಗಳನ್ನು ಕೈಗೊಂಡು ಸ್ವಂತ ಸೂರು ಇಲ್ಲದವರಿಗೆ ಸ್ವಂತ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ವಿಪರೀತವಾಗಿ ಶ್ರಮಿಸುತ್ತಿವೆ.
ಭಾರತದಲ್ಲಿ ಸ್ವಂತ ಮನೆ ಕನಸಿಗೆ ಹೆಸರುವಾಸಿ ಆಗಿರುವ ಯೋಜನೆಗಳೆಂದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಥವಾ ರಾಜೀವ್ ಗಾಂಧಿ ವಸತಿ ಯೋಜನೆ ಇತ್ಯಾದಿಗಳು. ಈ ಯೋಜನೆಯಡಿ ಪ್ರತಿ ವರ್ಷವೂ ಕೂಡ ಅರ್ಜಿ ಆಹ್ವಾನ ಮಾಡಲಾಗುತ್ತದೆ. ಆಯ್ಕೆ ಆಗುವ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ತಗಲುವ ವಸತಿ ಘಟಕದ ವೆಚ್ಚದಲ್ಲಿ ಬಹು ದೊಡ್ಡ ಪಾಲನ್ನು ಸಹಾಯಧನವಾಗಿ ಸರ್ಕಾರಗಳು ನೀಡುತ್ತಿವೆ.
ಪ್ರತಿಯೊಂದು ಗ್ರಾಮ ಪಂಚಾಯಿತಿಗೂ ಕೂಡ ಸರ್ಕಾರದ ಕಡೆಯಿಂದ ಒಂದಿಷ್ಟು ಮನೆಗಳು ಬಿಡುಗಡೆ ಆಗುತ್ತಿದೆ. ಆ ಗ್ರಾಮದಲ್ಲಿ ಇರುವ ಬಡವರಿಗೆ ನಿರ್ಗತಿಕರಿಗೆ ಅಥವಾ ಸ್ವಂತ ಮನೆ ಇಲ್ಲದವರಿಗೆ ಇದನ್ನು ತಲುಪಿಸುವ ಕೆಲಸವನ್ನು ಗ್ರಾಮ ಪಂಚಾಯಿತಿಯ ಮುಖ್ಯಸ್ಥರು ಮಾಡುತ್ತಾರೆ. ನಿಮ್ಮ ಅರ್ಜಿ ಆಯ್ಕೆ ಆಗಿ ಸಹಾಯಧನವನ್ನು ಪಡೆಯಲು ನೀಶು ನಿರೀಕ್ಷಿಸುತ್ತಿದ್ದರೆ ಅಥವಾ ಈ ಯೋಜನೆಯಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡತ್ತಿದ್ದರೆ ಇನ್ನೆಷ್ಟು ಸಹಾಯಧನ ಬಾಕಿ ಇದೆ ಎನ್ನುವ ಮಾಹಿತಿಯನ್ನು ಆನ್ಲೈನ್ ಮೂಲಕವೇ ತಿಳಿದುಕೊಳ್ಳಬಹುದು.
ಈ ಅಂಕಣದಲ್ಲಿ ಇದರ ಬಗ್ಗೆ ಹೆಚ್ಚಿನ ವಿವರವನ್ನು ತಿಳಿಸುತ್ತಿದ್ದೇವೆ. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ಅಥವಾ ಪ್ರಧಾನಮಂತ್ರಿ ಅವಾಸ್ ಯೋಜನೆಗೆ ಅರ್ಜಿ ಹಾಕಿದ್ದರೆ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ ನಮ್ಮ ಸ್ಟೇಟಸ್ ತಿಳಿದುಕೊಳ್ಳಿ.
● ಈ ಯೋಜನೆಗಳ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ಕೊಡಿ.
● ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದ ಹೋಂ ಪೇಜ್ ಅಲ್ಲಿ ಫಲಾನುಭವಿಗಳ ಮಾಹಿತಿ ಎನ್ನುವ ಆಪ್ಷನ್ ಕಡೆಯಲಿ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
● ಅದನ್ನು ಕ್ಲಿಕ್ ಮಾಡಿದ ತಕ್ಷಣ ಹೊಸದೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ. ನಿಮ್ಮ ಜಿಲ್ಲೆ ಯಾವುದು ಎಂದು ಆಯ್ಕೆ ಕೇಳಲಾಗುತ್ತದೆ ನಿಮ್ಮ ಜಿಲ್ಲೆಯನ್ನು ನೀವು ಸೆಲೆಕ್ಟ್ ಮಾಡಿ.
● ನೀವು ಅರ್ಜಿ ಸಲ್ಲಿಸಿ ಆಯ್ಕೆ ಆದಾಗ ಫಲಾನುಭವಿಗಳ ಸಂಖ್ಯೆ ಎಂದು ಒಂದು ಸಂಖ್ಯೆಯನ್ನು ನಿಮಗಾಗಿ ನೀಡಲಾಗಿರುತ್ತದೆ ಆ ಸಂಖ್ಯೆಯನ್ನು ನಮೂದಿಸಿ. ಸಬ್ಮಿಟ್ ಬಟನ್ ಕ್ಲಿಕ್ ಮಾಡಿ
● ಆಟೋಮೆಟಿಕ್ ಆಗಿ ನಿಮ್ಮ ಎಲ್ಲಾ ವಿವರವೂ ಕೂಡ ಸ್ಕ್ರೀನ್ ಮೇಲೆ ಬರುತ್ತದೆ. ನಿಮ್ಮ ಅರ್ಜಿ ಸಂಖ್ಯೆ, ಅರ್ಜಿದಾರರ ಹೆಸರು ಯಾವ ಗ್ರಾಮ ಪಂಚಾಯಿತಿಯಿಂದ ಯೋಜನೆಗೆ ಅರ್ಜಿ ಸಲ್ಲಿಸುತ್ತೀರಾ ಯಾವ ವರ್ಷದಲ್ಲಿ ಅರ್ಜಿ ಸಲ್ಲಿಸಿದ್ದೀರಾ ನಿಮ್ಮ ಜಿಲ್ಲೆ, ನಿಮ್ಮ ನಗರಸಭೆ ಎಷ್ಟು ಹಣ ಜಮೆ ಆಗಿದೆ, ಇನ್ನು ಎಷ್ಟು ಬಾಕಿ ಇದೆ ಈ ಎಲ್ಲಾ ಮಾಹಿತಿಗಳು ಕೂಡ ಕಾಣ ಸಿಗುತ್ತದೆ.
● ಅದೇ ಸ್ಕ್ರೀನ್ ಅಲ್ಲಿ ನಿಮ್ಮ ಮನೆ ನಿರ್ಮಾಣದ ಜಿಪಿಎಸ್ ಫೋಟೋಗಳು ಕೂಡ ಸಿಗುತ್ತವೆ ಹಾಗೆ ಈ ಹಿಂದೆ ಇದೆ ಯೋಜನೆಯ ಎಷ್ಟು ಸಹಾಯಧನವನ್ನು ನೀವು ಪಡೆದಿದ್ದೀರ ಅದರ ವಿವರವೂ ಕೂಡ ಸಂಪೂರ್ಣವಾಗಿ ಸಿಗುತ್ತದೆ. ಇದದಿಂದ ಇನ್ನು ಎಷ್ಟು ಸಹಾಯಧನ ಬರುವುದು ಬಾಕಿ ಇದೆ ಎನ್ನುವುದನ್ನು ನೀವು ತಿಳಿದುಕೊಳ್ಳಬಹುದು.
ಈ ಕೆಳಗಿನ ಲಿಂಕ್ ಬಳಸಿ ನೀವು ಎಲ್ಲಾ ರೀತಿಯ ಮಾಹಿತಿ ಪಡೆಯಬಹುದು
https://ashraya.karnataka.gov.in/Static/BeneficiaryStatusNew.aspx