ಈಗ ಸ್ವಲ್ಪ ಅವಶ್ಯಗಳ ಹಿಂದೆ ರೆಸಿಡೆನ್ಷಿಯಲ್ ಏರಿಯಾ ಗಳಲ್ಲಿ ಬೇಡ ಕಮರ್ಷಿಯಲ್ ಜಾಗಗಳಲ್ಲಿ ಲಿಫ್ಟ್ ಅವಶ್ಯಕತೆ ಇರುತ್ತದೆ ಎನ್ನುವ ಕಾನ್ಸೆಪ್ಟ್ ಇತ್ತು. ಆದರೆ ಈಗ ಹಾಗಿಲ್ಲ ಯಾವುದೇ ಬೀಲ್ಡಿಂಗ್ ಆಗಲಿ 40 ಅಡಿಗಿಂತ ಹೆಚ್ಚಿನ ಎತ್ತರದಲ್ಲಿ ಕಟ್ಟಿದ್ದರೆ ಲಿಫ್ಟ್ ಮಾಡಿಸಲೇ ಬೇಕು. ಮನೆಯಲ್ಲಿ ವಯಯಸ್ಸಾದವರು ಇರುತ್ತಾರೆ.
ಗರ್ಭಿಣಿಯರಿಗೆ ಅನುಕೂಲ ಮತ್ತು ನಮಗೂ ಕೂಡ ಈಗ ನಾಲ್ಕೈದು ಹತ್ತಿ ಹೋಗುವಷ್ಟು ಎನರ್ಜಿ ಕಡಿಮೆಯಾಗುತ್ತಾ ಬರುತ್ತಿದೆ ಹೀಗಾಗಿ ಮನೆ ಕಟ್ಟುವಾಗಲೇ ಇದರ ಬಗ್ಗೆ ಪ್ಲಾನಿಂಗ್ ಮಾಡಿ ಲಿಫ್ಟ್ ಹಾಕಿಸಿ ಬಿಟ್ಟರೆ ನಂತರ ಪಶ್ಚಾತಾಪ ಪಡುವುದು ತಪ್ಪುತ್ತದೆ. ಮನೆ ಕಟ್ಟುವ ಎಲ್ಲರಿಗೂ ಕೂಡ ಇದರ ಬಗ್ಗೆ ತಿಳಿದಿರಲಿ ಎನ್ನುವ ಇಚ್ಛೆಯಿಂದ ಈ ಲೇಖನದಲ್ಲಿ ಲಿಫ್ಟ್ ಕಟ್ಟಿಸುವುದರ ಖರ್ಚು, ವಿಧಾನ ಇನ್ನಿತರ ವಿಷಯಗಳ ಬಗ್ಗೆ ತಿಳಿಸುತ್ತಿದ್ದೇವೆ.
ಇದರ ಪ್ಲಸ್ ಪಾಯಿಂಟ್ ಗಳ ಬಗ್ಗೆ ಹೇಳುವಾಗ ಲಿಫ್ಟ್ ಇದ್ದರೆ ಪ್ರಾಪರ್ಟಿ ವ್ಯಾಲ್ಯು ಹೆಚ್ಚಾಗುತ್ತದೆ ಎಂದರೆ ತಪ್ಪಲ್ಲ ಜೊತೆಗೆ ಈಗ ಬಾಡಿಗೆಗೆ ಬರುವವರು ಕೂಡ ಲಿಫ್ಟ್ ಇದೆಯಾ ಎಂದು ಕೇಳಿ ಬರುತ್ತಾರೆ. ಸ್ಟೇರ್ ಕೇಸ್ ಮಾಡುವುದಕ್ಕಿಂತ ಕಡಿಮೆ ಜಾಗದಲ್ಲಿ ಲಿಫ್ಟ್ ಮಾಡಬಹುದು ಆದರೆ ಪ್ರಾಕ್ಟಿಕಲ್ ಆಗಿ ಲಿಫ್ಟ್ ಒಂದರ ಮೇಲೆ ಡಿಪೆಂಡ್ ಆಗುವುದು ಕೂಡ ತಪ್ಪು.
ಈ ಸುದ್ದಿ ಓದಿ:- ಈ ಟೆಕ್ನಿಕ್ ಮಾಡಿದರೆ ನಿಮ್ಮ ಗೋಡೆಯಲ್ಲಿ ಹೇರ್ ಲೈನ್ ಕ್ರಾಕ್ ಗಳು ಬರುವುದೇ ಇಲ್ಲ.!
ಕಟ್ಟಡಕ್ಕೆ ಸ್ಟೇರ್ ಕೇಸ್ ಅವಶ್ಯಕತೆ ಕೂಡ ಇರುತ್ತದೆ ಮತ್ತು ಮುನ್ನೆಚ್ಚರಿಕೆಯ ಉದ್ದೇಶದಿಂದ ಇರಲೇಬೇಕು. ರೋಗಿಗಳು ಇದ್ದರೆ, ಖಾಯಿಲೆ ಬಿದ್ದಾಗ ಅನುಕೂಲಕರ ಮತ್ತು ಯಾವುದೇ ವಸ್ತುವನ್ನು ರಿಸ್ಕ್ ಇಲ್ಲದೆ ಸಾಗಿಸಬಹುದು. ಲಿಫ್ಟ್ ಸೈಜ್ ಬಗ್ಗೆ ಹೇಳುವುದಾದರೆ 5*5 ಸ್ಟ್ಯಾಂಡರ್ಡ್ ಸೈಜ್ ಆದರೆ ತುಂಬಾ ಕಡಿಮೆ ಜಾಗ ಇದ್ದ ಕಡೆ ಅಥವಾ ತುಂಬಾ ಲೇಟಾಗಿ ಲಿಫ್ಟ್ ಹಾಕಿಸುವುದಾದರೆ ಈ ಅಳತೆ ಮೊದಲೇ ಬಿಡುವುದು ಕಷ್ಟ, ಆಗ 4*4 hydrolic lift ಹಾಕಿಸಿಕೊಳ್ಳುವುದು ಉತ್ತಮ.
ಇದರಲ್ಲಿ ಎರಡು ವೈರೈಟಿ ಬರುತ್ತದೆ. ಟ್ರ್ಯಾಕ್ಷನ್ ಮತ್ತು ಹೈಡ್ರೋಲಿಕ್ ಲಿಫ್ಟ್ ಗಳು. ಟ್ರ್ಯಾಕ್ಷನ್ ನಲ್ಲಿ ಮೇಲೆ ಮೋಟರ್ ಇರುತ್ತದೆ ಇದು, ಮಲ್ಟಿಪಲ್ ರೋಪ್ ಗಳಿಂದ ಎಳೆಯಲಾಗುತ್ತದೆ. ಒಂದು ಹಾಳಾದರೂ ಮಲ್ಟಿಪಲ್ ರೋಪ್ ಇರುವುದರಿಂದ ಸೇಫ್ಟಿ ಇರುತ್ತದೆ. ಹೈಡ್ರೋಲಿಕ್ ಗೆ ಹೋಲಿಸಿದರೆ ಟ್ರ್ಯಾಕ್ಷನ್ ಹೆಚ್ಚು ಸೇಫ್ಟಿ ಎನ್ನುವುದು ಹೆಚ್ಚಿನ ಜನರ ಅಭಿಪ್ರಾಯ.
ಹೈಡ್ರೋಲಿಕ್ ನಲ್ಲಿ ಪಿಸ್ಟಾನ್ ಗಳಿಂದ ರನ್ ಆಗುತ್ತದೆ ಮತ್ತು ಇದು ಹಾಳಾಗುವ ಸಾಧ್ಯತೆಗಳು ಕೂಡ ಇರುವುದರಿಂದ ಹೆಚ್ಚಿನ ಜನರು ಟ್ರ್ಯಾಕ್ಷನ್ ಕಡೆಗೆ ಹೋಗುತ್ತಾರೆ. ಹೈಡ್ರಾಲಿಕ್ ಗೆ ಒಂದು ಅಡ್ವಾಂಟೇಜ್ ಏನೆಂದರೆ ಪಿಟ್ ರೂಮ್ ಅಂಡ್ ಮೇಲಿನ ಹೆಡ್ ರೂಮ್ ಬೇಕಾಗುವುದಿಲ್ಲ ಆದರೆ ಟ್ರ್ಯಾಕ್ಷನ್ ಗೆ ಬೇಕೇ ಬೇಕು. ಈಗ ಟ್ರ್ಯಾಕ್ಷನ್ ನಲ್ಲಿ ಹೆಡ್ರೂಮ್ ಇಲ್ಲದೆ ವಾಲ್ ಗಳಿಗೆ ಮೋಟರ್ ಫಿಕ್ಸ್ ಮಾಡುವ ರೀತಿ ಅಪ್ಡೇಟ್ ಕೂಡ ಮಾಡಲಾಗುತ್ತಿದೆ.
ಈ ಸುದ್ದಿ ಓದಿ:-ಭೂಮಾಪಕರ ಹುದ್ದೆ ನೇಮಕಾತಿ, ವೇತನ 47,650/- ಆಸಕ್ತರು ಅರ್ಜಿ ಸಲ್ಲಿಸಿ.!
ಕನ್ಸ್ರಕ್ಷನ್ ಸಮಯದಲ್ಲಿ ಇದಕ್ಕೆ ಕಾಲಮ್ ರೆಡಿ ಮಾಡಿಕೊಳ್ಳುತ್ತಾ ಮಾಡಬೇಕು ಆಮೇಲೆ ಕಂಪನಿಯವರು ಬಂದು ಫಿಕ್ಸ್ ಮಾಡಿ ಹೋಗುತ್ತಾರೆ ಫಿನಿಶಿಂಗ್ ಸಿವಿಲ್ ವರ್ಕ್ ಇದ್ದರೆ ನಂತರ ಮಾಡಿಸಬಹುದು. ಮುಖ್ಯವಾಗಿ ಬೆಲೆ ಬಗ್ಗೆ ಹೇಳುವುದಾದರೆ
G+3 ಗೆ 10 ಲಕ್ಷ ಆಗುತ್ತದೆ 4-6 ಪ್ಯಾಸೆಂಜರ್ ಓಡಾಡಬಹುದು.
ಟ್ಯೂಪ್ಲೆಕ್ಸ್ ಮನೆಯಾಗಿದ್ದರೆ ಗ್ರೌಂಡ್ ನಿಂದ 3 ಫ್ಲೋರ್ ಹಾಕಿಸಿ ಒಂದು ಹಾಗೆ ಒಳಗಿನಿಂದ ನಡೆದುಕೊಂಡು ಓಡಾಡುವ ರೀತಿ ಮಾಡಿದ್ದರೆ 2-3 ಲಕ್ಷ ಕಡಿಮೆ ಆಗುತ್ತದೆ, ಮತ್ತು ನೀವು ಯಾವ ಕಂಪನಿ ಸೆಲೆಕ್ಟ್ ಮಾಡುತ್ತೀರಾ ಎನ್ನುವುದರ ಮೇಲೆ ಡಿಪೆಂಡ್ ಆಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.