2023ರ ಈ ವರ್ಷದಲ್ಲಿ 2BHK ಮನೆ ಕಟ್ಟಿಸಲು ಎಷ್ಟು ಖರ್ಚಾಗುತ್ತೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಪ್ರತಿಯೊಬ್ಬರಿಗೂ ಕೂಡ ಜೀವನದಲ್ಲಿ ತಮ್ಮದೇ ಆದ ಒಂದು ಸ್ವಂತ ಸೂರು ಕಟ್ಟಿಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಇದಕ್ಕಾಗಿ ಕೆಲವರು ಹಲವು ವರ್ಷಗಳವರೆಗೆ ಹಣ ಕೂಡಿಟ್ಟು ಕನಸನ್ನು ಸಾಕಾರ ಮಾಡಿಕೊಂಡರೆ ಇನ್ನು ಕೆಲವರು ಬ್ಯಾಂಕ್ ಗಳು ಅಥವಾ ಇತರ ಮೂಲಗಳಿಂದ ಸಾಲ ಸೌಲಭ್ಯವನ್ನು ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಆಸೆ ತೀರಿಸಿಕೊಳ್ಳುತ್ತಾರೆ.

WhatsApp Group Join Now
Telegram Group Join Now

ಮನೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ಅತ್ಯವಶ್ಯಕ ವಸ್ತು ನಾವು ಉದ್ಯೋಗ ಮಾಡುವ ಸ್ಥಳ ಹೊರತುಪಡಿಸಿ ಅತಿ ಹೆಚ್ಚು ಸಮಯವನ್ನು ಮನೆಯಲ್ಲಿಯೇ ಕಳೆಯುವುದರಿಂದ ಆ ಮನೆ ನಮ್ಮ ಆಸೆ ಹಾಗೂ ಅವಶ್ಯಕತೆಗೆ ತಕ್ಕ ಹಾಗೆ ಇರಬೇಕು ಎನ್ನುವ ಸಣ್ಣದೊಂದು ಸ್ವಾರ್ಥ ಹಾಗೂ ಅದರ ಬಗ್ಗೆ ಕಲ್ಪನೆ ಕೂಡ ಈಗಾಗಲೇ ಮನಸ್ಸಿನಲ್ಲಿ ಮೂಡಿರುತ್ತದೆ ಆದರೆ ಇದು ಎಲ್ಲರಿಗೂ ಕೈಗೆಟುಕುವ ಕುಸುಮವಲ್ಲ.

ಸ್ವಲ್ಪ ತಲೆನೋವು ಅಂತ ನಿರ್ಲಕ್ಷ್ಯ ಮಾಡ್ಬೇಡಿ ಈ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ.!

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಗೆ ಇರುವಂತೆ. ಮದುವೆ ಕೂಡ ಈ ಕಾಲದಲ್ಲಿ ಸರಳವಾಗಿ ಮಾಡಬಹುದು ಆದರೆ ಸರಳವಾಗಿ ಮನೆ ಕಟ್ಟುತ್ತೇನೆ ಎಂದರು ಕೂಡ ಲಕ್ಷಗಳಲ್ಲಿ ಹಣ ಬೇಕು. ಅದರಲ್ಲೂ ಬೆಂಗಳೂರಿನಂತ ಮಹಾನಗರದಲ್ಲಿ ಮನೆ ಕಟ್ಟುತ್ತೇನೆ ಎಂದರೆ ಉಳಿದ ಪ್ರದೇಶಕ್ಕಿಂತ ಸ್ವಲ್ಪ ಖರ್ಚು ಹೆಚ್ಚಿಗೆ ಇರುತ್ತದೆ.

ಆದರೂ ಸದ್ಯಕ್ಕೆ 2023ರ ಈ ವರ್ಷದಲ್ಲಿ ನೀವು ಬೆಂಗಳೂರಿನಲ್ಲಿ ಈಗಾಗಲೇ ಸೈಟ್ ಹೊಂದಿದ್ದು ಅದರಲ್ಲಿ ಮನೆ ಕಟ್ಟಿಸುತ್ತೇನೆ ಎಂದರೆ ಅದು ಗ್ರೌಂಡ್ ಫ್ಲೋರ್ 2BHK ಆಗಿದ್ದರೂ ಕೂಡ ಎಷ್ಟು ನಿಮಗೆ ಖರ್ಚು ತಗಲಬಹುದು ಎನ್ನುವುದರ ಬಗ್ಗೆ ಒಂದು ಸಣ್ಣ ಎಸ್ಟಿಮೇಟ್ ಮಾಡಿ ನೋಡೋಣ.

ಇನ್ಮುಂದೆ ಎಲ್ಲಾ ಬ್ಯಾಂಕ್ ಗಳಲ್ಲೂ ಕನ್ನಡ ಕಡ್ಡಾಯ.! ಬ್ಯಾಂಕ್ ಸಿಬ್ಬಂದಿ ಕನ್ನಡ ಗೊತ್ತಿಲ್ಲ ಎನ್ನುವಾಗಿಲ್ಲ.! ಸರ್ಕಾರದಿಂದ ಜಾರಿ ಆಯ್ತು ಹೊಸ ರೂಲ್ಸ್

ಮನೆ ಕಟ್ಟುವ ಮೊದಲು ಮನೆ ಕಟ್ಟುವುದಕ್ಕೆ ಬೇಕಾಗುವ ಸಾಮಗ್ರಿಗಳನ್ನು ಯಾವ ಬ್ರಾಂಡ್ ಇಂದ ಆಯ್ದುಕೊಳ್ಳುತ್ತೇವೆ ಎನ್ನುವುದರ ಮೇಲೆ ಅದರ ಖರ್ಚು ನಿರ್ಧಾರವಾಗುತ್ತದೆ. ಮನೆ ಎನ್ನುವುದು ಮುಂದಿನ ತಲೆಮಾರಿಗೂ ನೀಡುವ ಆಸ್ತಿ ಆಗಿರುವ ಕಾರಣ ನೀವು ಈ ವಿಚಾರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಿದರೆ ಒಳ್ಳೆಯದು ಲ್ಲವಾದರೆ ಪದೇ ಪದೇ ಇದರ ರಿಪೇರಿಗೆ ಹಣ ಸೋರಿಕೆ ಆಗುತ್ತದೆ.

ಸದ್ಯಕ್ಕೆ ಈಗ ನಾವು ಈ ಖರ್ಚಿನ ಲೆಕ್ಕಾಚಾರದಲ್ಲಿ ಮನೆ ಕಟ್ಟುವುದಕ್ಕೆ ಕೆಂಪಿಟ್ಟಿಗೆ ಬದಲು ಕಾಂಕ್ರೀಟ್ ಸಾಲಿಡ್ ಬಾಕ್ಸ್ ಗಳನ್ನು ಯುಪಿವಿಸಿ ಕೆಟಕಿಗಳನ್ನು ಮರಳಿನ ಬದಲು ಎಂ ಸ್ಯಾಂಡ್ ಬಳಸಿದರೆ ಎಂದು ಲೆಕ್ಕಾಚಾರ ತೆಗೆದುಕೊಳ್ಳೋಣ. ಮನೆ ಕಟ್ಟುವ ಕಾರ್ಯ ಶುರುವಾಗುವುದೇ ಫೌಂಡೇಶನ್ ನಿಂದ. ಅರ್ಥ್ ವರ್ಕ್, ಎಕ್ಸ್ಕವೇಷನ್, ಲೇಯರಿಂಗ್ ಎಂಡ್ ಕ್ಯೂರಿಂಗ್ ಪ್ರೊವೈಡಿಂಗ್ ಆಂಡ್ ಕನ್ಸ್ಟ್ರಕ್ಷನ್ SSM ಪ್ರೊವೈಡಿಂಗ್ ಮತ್ತು ಲೇಯರಿಂಗ್ ಕಾಂಕ್ರೀಟ್ ಫೂಟ್ಟಿಂಗ್ ಪ್ಲಾಂಟ್ ಪಿನ್ ಇತ್ಯಾದಿ ಖರ್ಚುಗಳು ಫೌಂಡೇಶನ್ ಸಮಯದಲ್ಲಿ ಬೀಳುತ್ತದೆ.

ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!

ಇವುಗಳಿಗೆ ಎಲ್ಲದರಿಂದ ಒಟ್ಟಾರೆಯಾಗಿ 1.75 ಲಕ್ಷದಿಂದ 2 ಲಕ್ಷದವರೆಗೆ ಹಣ ಬೇಕಾಗುತ್ತದೆ. ಇದು ಆರಂಭ ಅಷ್ಟೇ ನಂತರ ಒಂದಾದ ಮೇಲೆ ಒಂದರಂತೆ ವಿಪರೀತವಾಗಿ ಖರ್ಚು ಮಾಡಲೇಬೇಕು. ಗೋಡೆ ಏಳಿಸುವುದಕ್ಕೆ, ಪ್ಲಾಸ್ಟಿಕ್ ಮಾಡುವುದಕ್ಕೆ ಬೇಕಾಗುವ ಸಿಮೆಂಟು ಜೆಲ್ಲಿ ಮರಳು ನೀರು ಕೆಲಸಗಾರರು ಇತ್ಯಾದಿ ಖರ್ಚು ಒಂದೆಡೆ ಆದರೆ ಟೈಲ್ಸ್, ಮಾರ್ಬಲ್ಸ್, ಸರ್ಜಾ, ವುಡನ್ ವರ್ಕ್, ಮಾಡುವರ್ ಕಿಚನ್, ಲೈಟಿಂಗ್, ಪ್ಲಂಬರ್ ಕೆಲಸಗಳು, ಸ್ಟೇರ್ ಕೇಸ್, ಗೇಟ್, ಪೂಜಾ ಕೊಠಡಿಗೆ ವಿಶೇಷವಾದ ವ್ಯವಸ್ಥೆ ಇತ್ಯಾದಿಗಳು ಸೇರಿ ಮನೆ ಗೃಹಪ್ರವೇಶ ಮಾಡಿ ಮುಗಿಸುವ ತನಕ ಕಡಿಮೆ ಎಂದರು ಸುಮಾರು 15 ರಿಂದ 17 ಲಕ್ಷ ಹಣ ಬೇಕಾಗಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ನೋಡಿ.!

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now