ಬ್ಯಾಂಕ್ ಗಳ (Bank) ವಿಚಾರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ದೂರು ಕೇಳಿ ಬರುತ್ತಿದ್ದದ್ದು ಬ್ಯಾಂಕ್ ಸಿಬ್ಬಂದಿಗಳು ಕನ್ನಡದಲ್ಲಿ (Kannada) ವ್ಯವಹಾರ ಮಾಡುವುದಿಲ್ಲ, ಬಹುತೇಕ ಸಿಬ್ಬಂದಿಗಳು ಪರಭಾಷೆಯವರೇ ಇರುತ್ತಾರೆ. ಇದರಿಂದ ಸರಿಯಾಗಿ ಬ್ಯಾಂಕ್ ಗಳಲ್ಲಿ ವ್ಯವಹಾರ ಮಾಡಲಾಗುತ್ತಿಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಕೇಳಿದರೆ ಉಡಾಫೆ ಉತ್ತರಗಳನ್ನು ಕೊಡುತ್ತಾರೆ ಎನ್ನುವುದಾಗಿತ್ತು.
ಸಾಕಷ್ಟು ಬಾರಿ ಈ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿಗಳು (Bank employees) ಹಾಗೂ ಗ್ರಾಹಕರ (Customers) ನಡುವೆ ಮಾತುಕತೆಯಾಗಿ ಅವು ಸುದ್ದಿ ಮಾಧ್ಯಮ ತಲುಪುವವರೆಗೂ ಮುಂದುವರೆದಿದ್ದನ್ನು ನಾವು ನೋಡಿದ್ದೇವೆ. ಇದರ ವಿರುದ್ಧ ಸಿಡಿದೆದ್ದು ಕನ್ನಡಪರ ಸಂಘಟನೆಗಳು (Kannada Organizations) ಇದನ್ನು ಬಲವಾಗಿ ಖಂಡಿಸುತ್ತಿದ್ದೆವು.
ಸ್ಮಾರ್ಟ್ ರೇಷನ್ ಕಾರ್ಡ್ ಇದ್ದರೆ ಮಾತ್ರ ಇನ್ಮುಂದೆ ರೇಷನ್ ಸಿಗೋದು, ಹೊಸ ರೂಲ್ಸ್ ತರಲು ಮುಂದಾದ ಸರ್ಕಾರ.!
ಬ್ಯಾಂಕಿಂಗ್ ಎಕ್ಸಾಮ್ (Banking exams) ಅನ್ನು ಕನ್ನಡದಲ್ಲಿ ಬರೆಯುವುದಕ್ಕೆ ಅವಕಾಶ ಮಾಡಿಕೊಡಿ, ಕನ್ನಡಿಗರ ಅವಕಾಶಗಳು ಕೈತಪ್ಪುವೆ ಎನ್ನುವ ಕೂಗಿನ ಜೊತೆಗೆ ಕರ್ನಾಟಕದಲ್ಲಿ ಉದ್ಯೋಗ ಮಾಡುವವರು ಕನ್ನಡ ಕಲಿಯಲೇಬೇಕು ಕನ್ನಡದಲ್ಲಿಯೇ ಗ್ರಾಹಕರ ಜೊತೆ ವ್ಯವಹರಿಸಬೇಕು ಎನ್ನುವುದು ಅವರ ಅತಿ ದೊಡ್ಡ ಕೂಗಾಗಿತ್ತು.
ಈ ಸಂಬಂಧ ಕಳೆದ ಮಾರ್ಚ್ ನಲ್ಲಿ ನಡೆದ ಅಧಿವೇಶನದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ರೂಪಿಸಲಾಗಿತ್ತು. ಈ ಮಸೂದೆಯನ್ನು (bill) ರಾಜ್ಯ ಸರ್ಕಾರ ಅಂಗೀಕರಿಸಿದ್ದು ಕಟ್ಟುನಿಟ್ಟಾದ ಆದೇಶ ಕೂಡ ಹೊರಡಿಸಿದೆ. ಆ ಪ್ರಕಾರವಾಗಿ ಸ್ಥಳೀಯ ಅಧಿಕಾರಿಗಳು, ನಿಗಮಗಳು, ಶಾಸನಬದ್ಧ ಹಾಗೂ ಶಾಸನಬದ್ಧವಲ್ಲದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಕನ್ನಡ ಭಾಷಾ ಜ್ಞಾನವನ್ನು ಹೊಂದಿರುವುದು ಅತ್ಯಗತ್ಯ (Kannada compulsory in Karnataka) ಎಂದು ತಿಳಿಸಿದೆ.
ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!
ಗ್ರಾಹಕರ ಜೊತೆ ಅಗತ್ಯ ಇರುವ ಸಮಯದಲ್ಲಿ ಕನ್ನಡದಲ್ಲೇ ವ್ಯವಹಾರ ನಡೆಸಬೇಕು ಎಂದು ಸೂಚಿಸಿದೆ. ಈ ವಿಧೇಯಕ ಅನುಷ್ಠಾನಕ್ಕೆ ತಂದ ರಾಜ್ಯ ಸರ್ಕಾರ ಬ್ಯಾಂಕ್ ಉದ್ಯೋಗಿಗಳು ಕನ್ನಡದಲ್ಲಿಯೇ ಕನ್ನಡಿಗರೊಂದಿಗೆ ವ್ಯವಹರಿಸಬೇಕು ಎನ್ನುವುದನ್ನು ಕೂಡ ಕಡ್ಡಾಯಗೊಳಿಸಿ ಬಹುದಿನಗಳಿಂದ ಬ್ಯಾಂಕ್ ಸಿಬ್ಬಂದಿ ಮೇಲೆ ಕೇಳಿ ಬಂದ ಆರೋಪಕ್ಕೊಂದು ಸುಖಾಂತ್ಯ ನೀಡಿದೆ.
ಇನ್ನು ಮುಂದೆ ಕರ್ನಾಟಕದಲ್ಲಿ ಉದ್ಯೋಗ ಮಾಡುವ ಪರರಾಜ್ಯದ ಬ್ಯಾಂಕ್ ಉದ್ಯೋಗಿಗಳು ಕನ್ನಡವನ್ನು ಕಲಿಯಲೇ ಬೇಕಾಗಿದೆ. ಒಂದು ವೇಳೆ ಅವರಿಗೆ ಕನ್ನಡದ ಬಗ್ಗೆ ಅರಿವು ಇಲ್ಲ ಎಂದರೆ ಕಿರಿಯ ಅಧಿಕಾರಿಗಳ ಸಹಾಯವನ್ನು ತೆಗೆದುಕೊಂಡು ಶೀಘ್ರವಾಗಿ ಕನ್ನಡವನ್ನು ಕಲಿಯಲೇಬೇಕು. ಅಷ್ಟೇ ಅಲ್ಲದೆ ಬ್ಯಾಂಕುಗಳಲ್ಲಿ ಕನ್ನಡ ಕಲಿಕಾ ಘಟಕ ಸ್ಥಾಪಿಸಲು ಅಗತ್ಯವಿದ್ದರೆ ಬೋಧಕ ಸಿಬ್ಬಂದಿ ಹಾಗೂ ಅಧ್ಯಯನ ಸಾಮಗ್ರಿಗಳನ್ನು ಕೂಡ ನೀಡಲಿದೆ ಇದಕ್ಕೆ ತಗಲುವ ವೆಚ್ಚವನ್ನು ಬ್ಯಾಂಕ್ ನವರೇ ಭರಿಸಬೇಕು.
ಅಫಿಡವಿಟ್ ಎಂದರೇನು.? ಇದನ್ನು ಬರೆಯುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಬ್ಯಾಂಕ್ ಪ್ರತಿನಿತ್ಯ ನೂರಾರು ಜನರ ಜೊತೆ ವ್ಯವಹಾರ ಇಟ್ಟುಕೊಂಡಿರುವ ಸಂಸ್ಥೆ ಆಗಿದೆ ಅದರಲ್ಲೂ ಕೂಡ ಗ್ರಾಮೀಣ ಪ್ರದೇಶದಲ್ಲಿರುವ ಬ್ಯಾಂಕ್ ಗಳಿಗಂತೂ ಈ ರೀತಿ ಕನ್ನಡ ಗೊತ್ತಿಲ್ಲದ ಸಿಬ್ಬಂದಿಗಳು ನಿಯೋಜನೆ ಆದರೆ ಆ ಭಾಗದವರಿಗೆ ಬಹಳಷ್ಟು ತೊಂದರೆ ಆಗುತ್ತದೆ. ಹಾಗಾಗಿ ಇದನ್ನು ಗಮನಿಸಿ ಬ್ಯಾಂಕ್ ಸಿಬ್ಬಂದಿಗಳು ಕನ್ನಡವನ್ನು ಕಲಿತು ಕನ್ನಡದಲ್ಲಿಯೇ ವ್ಯವಹರಿಸಬೇಕು ಎನ್ನುವ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.
ಇದು ಎಲ್ಲಾ ಕನ್ನಡ ಅಭಿಮಾನಿಗಳಿಗೆ ಕನ್ನಡಪರ ಸಂಘಟನೆಗೆ ಬಹಳ ಸಂತೋಷ ವಿಷಯ ಆಗಿದೆ. ಇತ್ತೀಚೆಗೆ ಬ್ಯಾಂಕಿಂಗ್ ಪರೀಕ್ಷೆಗಳನ್ನು ಕೂಡ ಕನ್ನಡದಲ್ಲಿ ಬರೆಯಲು ಅವಕಾಶ ನೀಡಲಾಗಿತ್ತು ಹಾಗೂ ಎಲ್ಲಾ ಅಂಗಡಿಗಳ ಮುಂದೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆ ಜೊತೆ ಕನ್ನಡ ಭಾಷೆಯಲ್ಲೂ ಕಡ್ಡಾಯವಾಗಿ ಬೋರ್ಡ್ ಹಾಕಲೇಬೇಕು ಎನ್ನುವ ನಿಯಮ ಜಾರಿಯಾಗಿತ್ತು. ಈಗ ಅತಿ ಮುಖ್ಯವಾಗಿ ಗ್ರಾಹಕರ ಬೇಡಿಕೆ ಆಗಿದ್ದ ಬ್ಯಾಂಕ್ ಕ್ಷೇತ್ರದಲ್ಲಿ ಕೂಡ ಕನ್ನಡದ ಕಂಪು ಪಸರಿಸುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ.