Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರೇಷನ್ ಕಾರ್ಡ್ (Ration card) ಈಗ ಎಷ್ಟು ಅಗತ್ಯ ದಾಖಲೆ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಪ್ರತಿಯೊಂದು ಕುಟುಂಬವು ಕೂಡ ರೇಷನ್ ಕಾರ್ಡ್ ಹೊಂದಿರಲೇಬೇಕು. ರೇಷನ್ ಕಾರ್ಡ್ ನಿಂದ ಸರ್ಕಾರದ ಹಲವು ಸೌಲಭ್ಯಗಳನ್ನು ಪಡೆಯಬಹುದು ಇಲ್ಲವಾದಲ್ಲಿ ರೇಷನ್ ಕಾರ್ಡ್ ಕಡ್ಡಾಯ ಆಗಿರುವ ಯೋಜನೆಗಳಿಂದ ನೀವು ವಂಚಿತರಾಗಬಹುದು.
ಸದ್ಯಕ್ಕೆ ರಾಜ್ಯದಲ್ಲಿ ಗ್ಯಾರಂಟಿ ಸ್ಕೀಮ್ ಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೂ (Gruhalakshmi) ಕೂಡ ರೇಷನ್ ಕಾರ್ಡ್ ಕಡ್ಡಾಯವಾಗಿದೆ. ಹಾಗೆಯೇ ರೇಷನ್ ಕಾರ್ಡ್ ನಲ್ಲಿ ಎಷ್ಟು ಸದಸ್ಯರು ಇದ್ದಾರೆ ಅನ್ನುವ ಅಂಕಿ ಅಂಶದ ಆಧಾರದ ಮೇಲೆ ಅವರಿಗೆ ಅನ್ನಭಾಗ್ಯ (Annabhagya) ಯೋಜನೆಯಡಿ ಉಚಿತ ಪಡಿತರ ಹಾಗೂ ಹೆಚ್ಚುವರಿ ಅಕ್ಕಿ ಹಣ ಲಭ್ಯವಾಗುತ್ತಿದೆ.
ಈ ಮೂರು ವಿಷಯ ಗೊತ್ತಿದ್ರೆ ನಿಮಗೆ ಯಾವತ್ತೂ ಸ್ಟ್ರೋಕ್ ಹೊಡೆಯುವುದಿಲ್ಲ.! ಡಾಕ್ಟರ್ ಬಿಚ್ಚಿಟ್ಟ ಸತ್ಯ ಇದು.!
ಒಂದೆಡೆ ಇಷ್ಟೆಲ್ಲ ಅನುಕೂಲತೆಗಳು ರೇಷನ್ ಕಾರ್ಡ್ ಹೊಂದಿರುವವರಿಗೆ ಸಿಗುತ್ತಿದ್ದರೆ ಇನ್ನೊಂದು ಕಡೆ ನಕಲಿ ಮಾಹಿತಿಗಳನ್ನು ಸೃಷ್ಟಿಸಿ ರೇಷನ್ ಕಾರ್ಡ್ ಪಡೆಯುವುದು, ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ನಲ್ಲಿ ಫಲಾನುಭವಿಗಳಾಗಿರುವುದು ಈ ಸಮಸ್ಯೆಗಳು ಕೂಡ ಇದೆ.
ಇದನ್ನೆಲ್ಲ ತಪ್ಪಿಸುವ ಸಲುವಾಗಿ ಸರ್ಕಾರ ಮಹತ್ವಕಾಂಕ್ಷೆಯ ಒಂದು ನಿರ್ಧಾರಕ್ಕೆ ಬಂದಿದೆ. ಅದೇನೆಂದರೆ ಸ್ಮಾರ್ಟ್ ರೇಷನ್ ಕಾರ್ಡ್ (Smart ration card) ವಿತರಣೆ ಮಾಡುವುದು. ಸ್ಮಾರ್ಟ್ ಕಾರ್ಡ್ ನ QR Code ಸ್ಕ್ಯಾನ್ ಮಾಡಿದಾಗ ಕುಟುಂಬದ ಎಲ್ಲಾ ಸದಸ್ಯರ ವಿವರವು ಕೂಡ ಬರುತ್ತದೆ.
ಅಫಿಡವಿಟ್ ಎಂದರೇನು.? ಇದನ್ನು ಬರೆಯುವುದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗ ರೇಷನ್ ಕಾರ್ಡ್ ಗೆ ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯ ಆಗಿರುವುದರಿಂದ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಗಳಲ್ಲಿ ಫಲಾನುಭವಿಗಳು ಇರುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಜೊತೆಗೆ ಕುಟುಂಬವು ಬಡತನ ರೇಖೆಗಿಂತ ಕೆಳಗಿಳಿದ ಮೇಲೆ ಅಥವಾ ಬಡತನ ರೇಖೆಗಿಂತ ಮೇಲಿರುವ ವರ್ಗಕ್ಕೆ ಸೇರಿದೆ ಎನ್ನುವುದನ್ನು ಕೂಡ ಸುಲಭವಾಗಿ ಈ ಮೂಲಕ ಪತ್ತೆ ಹಚ್ಚಬಹುದು.
ಹಾಗಾಗಿ ಈ ರೀತಿ ಸ್ಮಾರ್ಟ್ ರೇಷನ್ ಕಾರ್ಡ್ ಇರುವುದು ಉತ್ತಮ ಎನ್ನುವ ಅಭಿಪ್ರಾಯಕ್ಕೆ ಸರ್ಕಾರ ಬಂದಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ದೇಶದಲ್ಲಿ ಹಲವು ರಾಜ್ಯಗಳು ಈ ರೀತಿ ಈಗಾಗಲೇ ಸ್ಮಾರ್ಟ್ ರೇಷನ್ ಕಾರ್ಡ್ ವಿತರಣೆ ಮಾಡಿದೆ, ಈ ರೀತಿ ಸ್ಮಾರ್ಟ್ ರೇಷನ್ ಕಾರ್ಡ್ ನೀಡುವುದರಿಂದ ನ್ಯಾಯಬೆಲೆ ಅಂಗಡಿಯವರಿಗೂ (fare price shop) ಕೂಡ ಅನುಕೂಲ ಆಗಲಿದೆ ಒಂದು ಬಾರಿ ಕಾರ್ಡ್ ಸ್ಕ್ಯಾನ್ ಮಾಡಿದಾಗ ಎಷ್ಟು ಜನ ಸದಸ್ಯರಿದ್ದಾರೆ ಎಂದು ತಿಳಿಯುತ್ತದೆ.
ಗೃಹಲಕ್ಷ್ಮಿ ಯೋಜನೆ ಹಣ ಯಾರಿಗೆಲ್ಲಾ ಬಂದಿಲ್ಲ, ಅವರಿಗೆಲ್ಲಾ ಸಿಹಿ ಸುದ್ದಿ.!
ಅದರ ಆಧಾರದ ಮೇಲೆ ಅವರು ಪಡಿತರ ಹಂಚಬಹುದು. ಇನ್ನು ಫಲಾನುಭವಿಗಳು ಕೂಡ ಆ ಸ್ಮಾರ್ಟ್ ಕಾರ್ಡ್ ಗಳನ್ನು ಬಳಸಿ ಯಾವುದೇ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಮ್ಮ ಪಾಲಿನ ಪಡಿತರವನ್ನು ಪಡೆಯಬಹುದು. ಜೊತೆಗೆ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆ ಮಾಹಿತಿ ಕೂಡ ಸ್ಮಾರ್ಟ್ ಕಾರ್ಡ್ ಹೊಂದಿರುವುದರಿಂದ ಸರ್ಕಾರಿ ಯೋಜನೆಯ ಎಲ್ಲಾ ಅನುದಾನಗಳು ಕೂಡ ಕುಟುಂಬದ ಮುಖ್ಯಸ್ಥರ ಖಾತೆಗೆ ನೇರವಾಗಿ DBT ವರ್ಗಾವಣೆ ಆಗಲಿದೆ.
ಹೀಗಾಗಿ ಒಂದು ಕಾರ್ಡ್ ಹಲವು ಸಮಸ್ಯೆಗಳಿಗೆ ಪರಿಹಾರ ಆಗುವುದರಿಂದ ಈ ಕ್ರಮ ಉತ್ತಮ ಎನ್ನುವ ಭಾವನೆ ಬಂದಿದೆ. ಈ ರೀತಿ ಸ್ಮಾರ್ಟ್ ಕಾರ್ಡ್ ರಾಜ್ಯದಲ್ಲಿ ಜಾರಿಗೆ ಬಂದರೆ ಇದನ್ನು ಮಾಡಿಸಿಕೊಳ್ಳಲು ಎಷ್ಟು ಖರ್ಚು ತಗಲಬಹುದು ಎನ್ನುವ ಚರ್ಚೆ ಶುರುವಾಗಿದೆ. ನಮ್ಮ ದೇಶದಲ್ಲಿ ಈಗಾಗಲೇ ಹಲವು ರಾಜ್ಯಗಳು ಉಚಿತವಾಗಿ ಈ ರೀತಿ ರೇಷನ್ ಕಾರ್ಡ್ ನೀಡಿವೆ.
ATM ಫ್ರಾಂಚೈಸಿ ಆರಂಭಿಸಿ ತಿಂಗಳಿಗೆ 90 ಸಾವಿರ ಆದಾಯ ಗಳಿಸಿ.! ಬಂಡವಾಳವಿಲ್ಲದೆ ಲಾಭಗಳಿಸುವ ಮಾರ್ಗ.!
ಇನ್ನು ಕೆಲವು ರಾಜ್ಯಗಳು 17 ರೂಪಾಯಿಯಿಂದ 70 ರೂಪಾಯಿ ಒಳಗೆ ಚಾರ್ಜಸ್ ಮಾಡಿ ವಿತರಣೆ ಮಾಡುತ್ತಿವೆ. ಒಂದು ವೇಳೆ ಕಾರ್ಡ್ ಕಳೆದುಕೊಂಡರೆ 25 ರೂಪಾಯಿ ಶುಲ್ಕ ವಸೂಲಿ ಮಾಡಿ ಮತ್ತೆ ಕಾರ್ಡ್ ನೀಡುವ ವ್ಯವಸ್ಥೆಯು ದೇಶದಲ್ಲಿದೆ. ಹಾಗಾಗಿ ನಮ್ಮ ರಾಜ್ಯದಲ್ಲೂ ಕೂಡ ಇದೇ ರೀತಿ ಶುಲ್ಕ ನಿಗದಿ ಆಗಬಹುದು ಎನ್ನುವ ಭಾವನೆಗಳಿವೆ. ರಾಜ್ಯ ಸರ್ಕಾರವು ಈ ಕುರಿತು ಅಧಿಕೃತ ಆದೇಶ ಮಾಡುವ ತನಕ ಕಾದು ನೋಡೋಣ.