ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು ಕೊಟ್ಟ ಘೋಷಣೆ ಪ್ರಕಾರ ಅನ್ನಭಾಗ್ಯ ಯೋಜನೆಯಡಿ 10Kg ಪಡಿತರ ನೀಡಲು ಸಾಧ್ಯವಾಗದ ಕಾರಣ ಪ್ರತಿ ಸದದಸ್ಯನಿಗೆ 5Kg ಪಡಿತರ ಮತ್ತು 170ರೂ. ಹಣ ನೀಡುತ್ತಿದೆ. ಈ ಹಣವು ಕುಟುಂಬದ ಸದಸ್ಯರ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ. ಆದರೆ ಇದರ ಫಲಾನುಭವಿಗಳಾಗಲು ಜುಲೈ 20, 2023 ರ ಒಳಗೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು.
ಇಲ್ಲವಾದಲ್ಲಿ ಈ ತಿಂಗಳ ಹಣ ಜಮೆ ಆಗುವುದಿಲ್ಲ. ಇದು ಮಾತ್ರ ಅಲ್ಲದೆ ಸರ್ಕಾರದ ಕಡೆಯಿಂದ ಯಾವುದೇ ಸಹಾಯಧನ ಅಥವಾ ಇನ್ಯಾವುದೇ ಯೋಜನೆಯ ಹಣವು ಕೂಡ DBT ಮೂಲಕ ವರ್ಗಾವಣೆಯಾಗಬೇಕೆಂದರೆ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಲೇಬೇಕು. ಅನೇಕರು ಇನ್ನೂ ಸಹ ಈ ಪ್ರಕ್ರಿಯೆ ಪೂರ್ತಿಗೊಳಿಸಿಲ್ಲ ಒಂದು ವೇಳೆ ನಿಮಗೂ ಸಹ ಗೊಂದಲಗಳಿದ್ದರೆ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆ ಎಂದು ಈ ವಿಧಾನದಲ್ಲಿ ಚೆಕ್ ಮಾಡಿಕೊಳ್ಳಿ.
● ಮೊದಲಿಗೆ ಗೂಗಲ್ ಮೂಲಕ UIDAI ನ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಡಿ.
● ಮುಖಪುಟದಲ್ಲಿ My aadhar ಎನ್ನುವ ಸರ್ವೀಸ್ ಆಪ್ಷನ್ ಕಾಣುತ್ತದೆ ಅದನ್ನು ಕ್ಲಿಕ್ ಮಾಡಿ. ಇನ್ನು ಹಲವು ಆಪ್ಷನ್ಗಳಿರುತ್ತವೆ, ಅದರಲ್ಲಿ aadhar services ಎನ್ನುವ ವಿಭಾಗದಲ್ಲಿ check aadhar bank seeding status ಎನ್ನುವುದನ್ನು ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ. ಅದರಲ್ಲಿ ನೀವು ಯಾರ ಮಾಹಿತಿ ಚೆಕ್ ಮಾಡುತ್ತಿದ್ದೀರಾ ಅವರ ಆಧಾರ್ ಸಂಖ್ಯೆಯನ್ನು ಎಂಟ್ರಿ ಮಾಡಿ ಅದರ ಜೊತೆಗೆ ಕೊಡಲಾದ ಕ್ಯಾಪ್ಚಾ ಕೋಡ್ ಕೂಡ ಎಂಟ್ರಿ ಮಾಡಿ, Get OTP ಕೊಡಬೇಕು.
● ಅವರ ಆಧಾರ್ ಕಾರ್ಡ್ ಅಲ್ಲಿರುವ ಮೊಬೈಲ್ ಸಂಖ್ಯೆಗೆ OTP ಹೋಗುತ್ತದೆ. ಅದನ್ನು ಎಂಟ್ರಿ ಮಾಡಿ ಸಬ್ಮಿಟ್ ಕೊಡಬೇಕು.
● ಈ ರೀತಿ ಸಬ್ಮಿಟ್ ಕೊಟ್ಟ ತಕ್ಷಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದಲ್ಲಿ Your aadhar not linked to a bank ಎನ್ನುವ ಘೋಷಣೆ ಬರುತ್ತದೆ.
● ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿ NPCI ಮ್ಯಾಪಿಂಗ್ ಆಗಿದ್ದರೆ Congratulations your aadhar bank maping has been done ಎಂದು ಬರುತ್ತದೆ.
ಬ್ಯಾಂಕ್ ಖಾತೆ ಸಂಖ್ಯೆ, ಆಧಾರ್ ಲಿಂಕ್ ಆಗಿರುವ ಡೇಟ್, ಬ್ಯಾಂಕ್ ಶಾಖೆ ಹೆಸರು ಈ ಮಾಹಿತಿ ಕೂಡ ಸ್ಕ್ರೀನ್ ಮೇಲೆ ಕಾಣುತ್ತದೆ.
ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮಾಡಿಸುವ ವಿಧಾನ:-
● ATM ಗಳ ಮೂಲಕ ಕೂಡ ಮಾಡಿಸಬಹುದು
● ಆನ್ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಇರುವ ಬ್ಯಾಂಕ್ ಗಳಲ್ಲಿ ಆಯಾ ಬ್ಯಾಂಕ್ ಆಪ್ ಗಳನ್ನು ಬಳಸಿ ಮಾಡಬಹುದು.
● ಬ್ಯಾಂಕ್ ಶಾಖೆಗೆ ಭೇಟಿಯಾಗಿ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸುವ ಮೂಲಕ ಕೂಡ ಮಾಡಿಸಬಹುದು.
ಆಧಾರ್ ಸೀಡಿಂಗ್ ಮಾಡಿಸಲು ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್ ಪ್ರತಿ
● ಬ್ಯಾಂಕ್ ಪಾಸ್ ಬುಕ್ ವಿವರ
● ಪ್ಯಾನ್ ಕಾರ್ಡ್ ಪ್ರತಿ
● ಇತ್ತೀಚಿನ ಭಾವಚಿತ್ರ
● ಮೊಬೈಲ್ ಸಂಖ್ಯೆ.