ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!

ಈ ಹಿಂದೆ ರೈತರು (Farmers) ತಮ್ಮ ಜಮೀನಿನ ಸರ್ವೆ ಸ್ಕೆಚ್ (Survey Sketch) ಪಡೆಯಬೇಕು ಎಂದರೆ ಕಂದಾಯ ಇಲಾಖೆಗೆ (Revenue department) ಅಲೆಯಬೇಕಿತ್ತು. ಸರ್ವೇಯರ್ ಬಂದು ತಮ್ಮ ಜಮೀನನ್ನು ಅಳತೆ ಮಾಡಿ ಸ್ಕೆಚ್ ನೀಡುತ್ತಿದ್ದರು, ಆದರೆ ಈಗ ಎಲ್ಲಾ ಕ್ಷೇತ್ರವು ಕೂಡ ಡಿಜಿಟಲೀಕರಣವಾದಂತೆ ಕೃಷಿ ಕ್ಷೇತ್ರಕ್ಕೂ ಇದು ಅನ್ವಯಿಸುತ್ತಿದೆ.

WhatsApp Group Join Now
Telegram Group Join Now

ರೈತರು ತಮ್ಮ ಮೊಬೈಲ್ ಮೂಲಕವೇ (through) ತಮ್ಮ ಜಮೀನಿನ ಸರ್ವೆ ಸ್ಕೆಚ್ ನಿಮಿಷಗಳಲ್ಲಿ ಪಡೆಯಬಹುದು. ಇದಕ್ಕಾಗಿ ಸರಕಾರವು ರೈತರಿಗೆ ಅನುಕೂಲವಾಗುವಂತೆ ಸರಳವಾದ ದಿಶಾಂಕ್ ಆಪ್ (Dishank app) ಕೂಡ ಅಭಿವೃದ್ಧಿಪಡಿಸಿದೆ. ಕಂದಾಯ ಇಲಾಖೆಯಲ್ಲಿ ಲಭ್ಯವಿರುವ 1960 ರ ಸಮೀಕ್ಷೆಯ ನಕ್ಷೆಗಳನ್ನು ಆಧರಿಸಿ ಈ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರು ತಮ್ಮ ಜಮೀನಿನ ಕುರಿತಾದ ಪೂರ್ತಿ ಮಾಹಿತಿಯನ್ನು ಇದರಲ್ಲಿ ಪಡೆಯಬಹುದು. ಈ ಆಪ್ ಬಳಕೆ ಹೇಗೆ ಎನ್ನುವ ಮಾಹಿತಿ ಹೇಗಿದೆ ನೋಡಿ.

ಈ ಸುದ್ದಿ ಓದಿ:- ಈ ದಾಖಲೆ ಇದ್ರೆ ಮಾತ್ರ ಇನ್ಮುಂದೆ ಪಿಂಚಣಿ ಹಣ ಸಿಗೋದು.!

* ಮೊದಲಿಗೆ Playstore ಗೆ ಹೋಗಿ DeShank ಅಪ್ಲಿಕೇಶನ್ ನ್ನು ಡೌನ್ಲೋಡ್ ಮಾಡಿಕೊಳ್ಳಿ. ಇದು ಕರ್ನಾಟಕ ಸರ್ಕಾರದ ಆಗಿದೆ. ಕೆಲವೊಂದು ಪರ್ಮಿಷನ್ ಕೇಳುತ್ತದೆ allow ಕೊಡಿ
* ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲೂ ಮಾಹಿತಿ ಲಭ್ಯ ನಿಮ್ಮ ಆಯ್ಕೆ ಆರಿಸಿ
* ಕಂದಾಯ ಇಲಾಖೆ ಕಚೇರಿಗೆ ಅರ್ಜಿ ಸಲ್ಲಿಸಿದ್ದರು ಸರ್ಕಾರಿ ಅಧಿಕಾರಿಗಳು ನಿಮ್ಮ ಸ್ಥಳಕ್ಕೆ ಭೇಟಿ ನೀಡಿ ಇದೇ ಆಪ್ ಬಳಸಿಕೊಂಡು ಸಮೀಕ್ಷೆ ಮಾಡುತ್ತಾರೆ.

* ಈ ಆಪ್ ಬಲಬದಿಯಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ರಾಜ್ಯದ ಗಡಿಯ ಬಣ್ಣ ಹಾಗೂ ನಿಮ್ಮ ಜಿಲ್ಲೆಯ ಗಡಿ, ತಾಲೂಕು ಗಡಿ, ಹೋಬಳಿ ಗಡಿ, ಗ್ರಾಮದ ಗಡಿಯ ಬಣ್ಣ ತಿಳಿಸುತ್ತದೆ. ಪಕ್ಕದ ಸರ್ವೆ ನಂಬರ್‌ಗಳು, ವಸತಿ ಅಥವಾ ಬೆಟ್ಟಗಳು, ನದಿ, ಟ್ಯಾಂಕ್ ಅಥವಾ ಇನ್ನಾವುದೇ ಯೋಜನೆ ಇದೆಯೇ ಎಂಬ ಮಾಹಿತಿಯನ್ನು ನೀಡುತ್ತದೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರಿಗೆ ಬೇಸರ ಸುದ್ದಿ.! ರಿಜೆಕ್ಟ್ ಆದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ನೋಡಿ.!

* ಸ್ಕ್ರೋಲ್ ಮಾಡಿ ನೋಡಿದರೆ ನೀವು ನಾಲ್ಕು ಆಯ್ಕೆಗಳನ್ನು ಕಾಣುತ್ತೀರಿ, ಅಳತೆ ಉಪಕರಣಗಳು, ಹುಡುಕಾಟ ಸಮೀಕ್ಷೆ ಸಂಖ್ಯೆ, ಸ್ಥಳ ವರದಿ ಮತ್ತು ನಕ್ಷೆಗಾಗಿ ಆಯ್ಕೆಗಳಿರುತ್ತವೆ ನಿಮ್ಮ ಆಯ್ಕೆ ಸೆಲೆಕ್ಟ್ ಮಾಡಿ.

* ಸರ್ವೆ ನಂಬರ್ ಆಯ್ಕೆ ಕ್ಲಿಕ್ ಮಾಡಿದ ನಂತರ ನೀವು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮವನ್ನು ನಮೂದಿಸಬೇಕು. ನಂತರ ಸರ್ವೆ ನಂಬರ್ ನಮೂದಿಸಿ ಮತ್ತು Go ಆಯ್ಕೆಯನ್ನು ಕ್ಲಿಕ್ ಮಾಡಿ. ಈ ವಿವರವನ್ನು ಆಯ್ಕೆ ಮಾಡಿದ ನಂತರ, ನಿಮಗೆ ಸರ್ವೆ ಸಂಖ್ಯೆಯ ನಕ್ಷೆಯ ಸಾಲು ಸಿಗುತ್ತದೆ.

ಈ ಸುದ್ದಿ ಓದಿ:- ಮಾನವ ಆಸ್ತಿಯಲ್ಲಿ ಸೊಸೆಗೆ ಎಷ್ಟು ಹಕ್ಕಿದೆ.? ಎಷ್ಟು ಪಾಲು ಸಿಗುತ್ತೆ.? ಕಾನೂನು ಹೇಳುವುದೇನು ನೋಡಿ.!

ಅದರಲ್ಲಿ ನೀವು ಕುಳಿತಿರುವ ಸ್ಥಳದಿಂದ ಆ ಸ್ಥಳ ಎಷ್ಟು ದೂರದಲ್ಲಿದೆ ಎಂಬ ವಿವರ ಸಿಗುತ್ತದೆ ನೀವೇನಾದರೂ ಹೆಚ್ಚಿನ ವಿವರಗಳ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಮತ್ತು ನಿಮ್ಮ ISE ಸಂಖ್ಯೆಯನ್ನು ನೀವು ಮೊದಲೇ ನಮೂದಿಸಿದ್ದರೆ ಆ ಜಾಗದ ಮಾಲೀಕರ ಹೆಸರು ನಿಮಗೆ ತಿಳಿಯುತ್ತದೆ. ಇದಿಷ್ಟು ಮಾತ್ರವಲ್ಲದೆ ಇನ್ನು ಹೆಚ್ಚಿನ ಮಾಹಿತಿಯನ್ನು ಕೂಡ ದಿಶಾಂಕ್ ಆಪ್ ನಲ್ಲಿ ನೀವು ಪಡೆಯಬಹುದು.

 

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now