ಅಂಚೆ ಕಚೇರಿಯೂ (Post office) ಕೂಡ ಈಗ ಉಳಿತಾಯ ಯೋಜನೆಗಳು ಮತ್ತು ಹೂಡಿಕೆ ಯೋಜನೆಗಳನ್ನು (Saving and Investment) ಪರಿಚಯಿಸುತ್ತಿದೆ. ಅಂಚೆ ಕಚೇರಿಗಳು ಕೇಂದ್ರ ಸರ್ಕಾರದ ಅಂಗಸಂಸ್ಥೆಗಳಾಗಿರುವುದರಿಂದ ನಾವು ಹೂಡಿಕೆ ಮಾಡುವ ಹಣಕ್ಕೆ ಸರ್ಕಾರವೇ 100% ಗ್ಯಾರಂಟಿ ಆಗಿರುತ್ತದೆ.
ಮತ್ತು ಈ ಯೋಜನೆಗಳು ಸರ್ಕಾರವೇ ದೇಶದ ಜನತೆಗಾಗಿ ಪರಿಚಯಿಸಿದ ಯೋಜನೆಗಳಾಗಿರುತ್ತವೆ ಅತಿ ಕಡಿಮೆ ಹಣವನ್ನು ಕೂಡ ಹೂಡಿಕೆ ಮಾಡಬಹುದಾದ ಅವಕಾಶ ಇರುವುದರಿಂದ ಮತ್ತು ಹೆಚ್ಚಿನ ಅ’ಪಾ’ಯವನ್ನು ಇಲ್ಲದ ಕಾರಣ ದೇಶದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೆಚ್ಚು ಅನುಕೂಲತೆಯಾಗುತ್ತಿದೆ.
ಈ ಸುದ್ದಿ ಓದಿ:- ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!
ಪ್ರಸ್ತುತ 13ಕ್ಕೂ ಹೆಚ್ಚು ಖಚಿತ ಲಾಭ ತಂದು ಕೊಡುವ ಯೋಜನೆಗಳು ಅಂಚೆಕಚೇರಿಯಲ್ಲಿವೆ. ಇದರಲ್ಲಿ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಹಣ ಪಡೆಯಬಹುದಾದ ಹೂಡಿಕೆ ಯೋಜನೆಯಾದ ಸಾರ್ವಜನಿಕ ಭವಿಷ್ಯ ನಿಧಿ (PPF) ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಯೋಜನೆಯ ಹೆಸರು:- ಸಾರ್ವಜನಿಕ ಭವಿಷ್ಯ ನಿಧಿ (Public Provident Fund)
* ಭಾರತೀಯ ಪ್ರಜೆ ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
* ಪ್ರತಿ ತ್ರೈಮಾಸಿಕಕೊಮ್ಮೆ ಈ ಯೋಜನೆಯ ಬಡ್ಡಿದರ ಪರಿಷ್ಕೃತಗೊಳ್ಳುತ್ತಿರುತ್ತದೆ. ಪ್ರಸ್ತುತವಾಗಿ ಯೋಜನೆಯ ಬಡ್ಡಿದರವು 7.1%.
* ನೀವು ಪೋಸ್ಟ್ ಆಫೀಸ್ ಅಥವಾ ಯಾವುದೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಬೇಕಾದರೂ PPF ಖಾತೆಯನ್ನು ತೆರೆಯಬಹುದು.
* ಈ ಯೋಜನೆಯ ಮೆಚುರಿಟಿ ಅವಧಿ 15 ವರ್ಷಗಳು ಹಾಗಾಗಿ ನಿಮ್ಮ ದೊಡ್ಡ ದೊಡ್ಡ ಕನಸುಗಳಾದ ಮನೆ ನಿರ್ಮಾಣ, ಸೈಟ್ ಕೊಳ್ಳುವುದು, ಮಕ್ಕಳ ಎಜುಕೇಶನ್ ಅಥವಾ ಮಕ್ಕಳ ಮದುವೆ ಇಂತಹ ಕನಸುಗಳಿಗೆ ದೀರ್ಘಕಾಲದವರೆಗೆ ನೀವು ಈ ಯೋಜನೆಯಲ್ಲಿ ಹಣ ಉಳಿಸಬಹುದು.
ಈ ಸುದ್ದಿ ಓದಿ:- ಈ ದಾಖಲೆ ಇದ್ರೆ ಮಾತ್ರ ಇನ್ಮುಂದೆ ಪಿಂಚಣಿ ಹಣ ಸಿಗೋದು.!
* PPF ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ ರೂ.500 ಮತ್ತು ಪ್ರತಿ ವರ್ಷ ಗರಿಷ್ಠ ರೂ 1.5 ಲಕ್ಷವನ್ನು ಠೇವಣಿ ಮಾಡಬಹುದು. * ಈ ಯೋಜನೆಯ ಮೆಚುರಿಟಿ ಅವಧಿ ಮುಗಿದ ಮೇಲು ಮುಂದಿನ 5 ವರ್ಷಗಳವರೆಗೆ ನೀವು ಇದನ್ನು ಮತ್ತೊಮ್ಮೆ ವಿಸ್ತರಿಸಬಹುದು.
* ಒಬ್ಬರು ಒಂದು ಖಾತೆ ತೆರೆಯಲು ಮಾತ್ರ ಅರ್ಹರು
* ನೀವು 15 ವರ್ಷಗಳ ಕಾಲ ನಿರಂತರವಾಗಿ PPF ನಲ್ಲಿ ಪ್ರತಿ ವರ್ಷ 1.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆಯು 22,50,000 ರೂ ಆಗಿರುತ್ತದೆ, ಆದರೆ 7.1% ಬಡ್ಡಿದರದ ಅನ್ವಯ ಮೆಚುರಿಟಿ ಅವಧಿ ವೇಳೆ ನೀವು ಒಟ್ಟು 40,68,209 ರೂಪಾಯಿಗಳನ್ನು ಪಡೆಯುತ್ತೀರಿ.
ಈ ಸುದ್ದಿ ಓದಿ:- ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಿದವರಿಗೆ ಬೇಸರ ಸುದ್ದಿ.! ರಿಜೆಕ್ಟ್ ಆದ ರೇಷನ್ ಕಾರ್ಡ್ ಪಟ್ಟಿ ಬಿಡುಗಡೆ.! ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ನೋಡಿ.!
ಒಂದು ವೇಳೆ ನೀವೇನಾದರೂ ಅದನ್ನು 5 ವರ್ಷಗಳ ಬ್ಲಾಕ್‌ಗೆ ಒಮ್ಮೆ ವಿಸ್ತರಿಸಿದರೆ ನೀವು 20 ವರ್ಷಗಳಲ್ಲಿ ಒಟ್ಟು ರೂ 30,00,000 ಹೂಡಿಕೆ ಮಾಡಿರುತ್ತೀರಿ ಆಗ 20ನೇ ವರ್ಷದಲ್ಲಿ 7.1% ಬಡ್ಡಿದರದ ಅನ್ವಯ ನೀವು 36,58,288 ರೂಪಾಯಿಗಳನ್ನು ಬಡ್ಡಿಯನ್ನೇ ಪಡೆಯುತ್ತೀರಿ ಆಗ ಒಟ್ಟಾರೆಯಾಗಿ ರೂ.66,58,288 ಕೈ ಸೇರುತ್ತದೆ.
* ನೀವು 25 ನೇ ವಯಸ್ಸಿನಲ್ಲಿಯೂ PPF ನಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿ ವಾರ್ಷಿಕವಾಗಿ 1.5 ಲಕ್ಷ ಹೂಡಿಕೆ ಮಾಡಿದ್ದರೆ 45 ನೇ ವಯಸ್ಸಿನಲ್ಲಿ ನೀವು ಈ ಮೊತ್ತದ ಮಾಲೀಕರಾಗುತ್ತೀರಿ.
* ಅಂಚೆ ಕಚೇರಿಯ ಉಳಿದ ಯೋಜನೆಗಳಂತೆ ಈ ಯೋಜನೆಗೂ ಕೂಡ ನಾಮಿನಿ ಫೆಸಿಲಿಟಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿ ವೆಬ್ಸೈಟ್ ಅಥವಾ ಹತ್ತಿರದ ಅಂಚೆ ಕಚೇರಿ ಠಾಣೆಗೆ ಭೇಟಿ ನೀಡಿ.