Skip to content

Rishi The Power

Just another WordPress site

  • Useful Information
  • Government Schemes
  • Health Tips
  • Job News
  • Law Rights
  • Home
  • About Us
  • Contact Us
  • Privacy Policy
  • Terms and Conditions
  • Toggle search form

ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನದಂದು ಜಮೆ, 6ನೇ ಕಂತಿನ ಹಣ ಬಂದಿಲ್ಲ ಎಂದರೆ ಕೂಡಲೇ ಈ ಕೆಲಸ ಮಾಡಿ.!

Posted on February 10, 2024 By Rishi The Power No Comments on ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನದಂದು ಜಮೆ, 6ನೇ ಕಂತಿನ ಹಣ ಬಂದಿಲ್ಲ ಎಂದರೆ ಕೂಡಲೇ ಈ ಕೆಲಸ ಮಾಡಿ.!

 

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಗೆ (Gruhalakshmi Scheme) ಸಂಬಂಧಿಸಿದಂತೆ ಇದ್ದ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಡಿಸೆಂಬರ್ ತಿಂಗಳಲ್ಲಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮಿ ಕ್ಯಾಂಪ್ ಗಳನ್ನು (Gruhalakshmi Caml) ನಡೆಸಿ ಸಮಸ್ಯೆ ಪರಿಹರಿಸಬೇಕು ಎಂದು ಸೂಚಿಸಿದ್ದರು.

ಅಂತೆಯೇ ಆಯ್ದ ದಿನಾಂಕಗಳಂದು ಗ್ರಾಮ ಪಂಚಾಯಿತಿ ಸದಸ್ಯರು, ಹತ್ತಿರದ ಅಂಚೆ ಕಛೇರಿ ಹಾಗೂ ಬ್ಯಾಂಕ್ ಸಿಬ್ಬಂದಿಗಳು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಸಮಸ್ಯೆ ಪರಿಹರಿಸಿಕೊಡಲು ಪ್ರಯತ್ನಿಸಿದ್ದಾರೆ.

ಆದರೆ ಇನ್ನೂ ಕೂಡ ಅನೇಕ ಮಹಿಳೆಯರಿಗೆ ಒಂದು ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಆಗಿಲ್ಲ, ಕೆಲವರಿಗೆ ಒಂದೆರಡು ಕಂತಿನ ಹಣ ಬಂದು ನಿಂತು ಹೋಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಏನು ಮತ್ತು ಒಂದೂ ಕಂತಿನ ಹಣ ಬರದೆ ಇದ್ದವರಿಗೆ ಒಟ್ಟಿಗೆ ಎಲ್ಲಾ ಕಂತುಗಳ ಹಣ ಬರಲಿದೆಯಾ? ಯಾವ ಸಮಸ್ಯೆಗಳಿಂದ ಈ ರೀತಿ ಆಗಿರಬಹುದು? ಇದಕ್ಕೆ ಪರಿಹಾರ ಏನು? ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ.

ಈ ಸುದ್ದಿ ಓದಿ:-ಅಂಚೆ ಕಚೇರಿಯ ಹೊಸ ಯೋಜನೆ.! ಕೇವಲ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಪಡೆಯಿರಿ.!

* ಬ್ಯಾಂಕ್ ಖಾತೆಯಲ್ಲಿ ಸಮಸ್ಯೆ:- ಗೃಹಲಕ್ಷ್ಮಿ ಅರ್ಜಿ ಹಾಕಿದ ಸಮಯದಲ್ಲಿ ಬ್ಯಾಂಕ್ ಖಾತೆ ಮಾಹಿತಿ ಪಡೆದುಕೊಂಡಿಲ್ಲ. ನೇರವಾಗಿ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ.

ಆದರೆ ಅನೇಕ ಮಹಿಳೆಯರಿಗೆ ತಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಬ್ಯಾಂಕ್ ದಾಖಲೆಗಳು ಕಳೆದು ಹೋಗಿವೆ ಹೀಗಾಗಿ ಅವರು ಗೊಂದಲದಲ್ಲಿದ್ದಾರೆ, ಇನ್ನು ಕೆಲವರ ಬ್ಯಾಂಕ್ ಖಾತೆಗಳೇ ಇನ್ ಆಕ್ಟಿವ್ ಆಗಿವೆ, ಕೆಲವು ಮಹಿಳೆಯರ ಖಾತೆಗಳು ಆಕ್ಟಿವ್ ಆಗಿದ್ದರು ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರದ ಕಾರಣ DBT ಮೂಲಕ ಹಣ ವರ್ಗಾವಣೆ ಮಾಡಲು ಆಗುತ್ತಿಲ್ಲ.

ಹೀಗಾಗಿ ಮಹಿಳೆಯರು ಕೂಡ ತಮ್ಮ ಬ್ಯಾಂಕ್ ಶಾಖೆಗಳಿಗೆ ಹೋಗಿ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಗಾಗಿ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬೇಕು ಮತ್ತು ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಅಥವಾ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ತೆರೆದರೆ ಸರ್ಕಾರದ ಯಾವುದೇ ಹಣವಾದರೂ ಪ್ರೈಮರಿ ಅಕೌಂಟ್ (ಅಂಚೆ ಕಛೇರಿ ಖಾತೆ) ಹೋಗುತ್ತದೆ.

ಈ ಸುದ್ದಿ ಓದಿ:-ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!

* ರೇಷನ್ ಕಾರ್ಡ್ ಇ-ಕೆವೈಸಿ:- ಸರ್ಕಾರವು ರೇಷನ್ ಕಾರ್ಡ್ e-KYC ಮಾಡಿಸದೆ ಇದ್ದಲ್ಲಿ ಅಂತಹ ರೇಷನ್ ಕಾರ್ಡ್ ಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಈ ಪ್ರಕ್ರಿಯೆ ಪೂರ್ತಿಗೊಳಿಸಿದ ನಂತರವಷ್ಟೇ ನಿರ್ಬಂಧ ತೆರವು ಗೊಳಿಸುವುದು ಎನ್ನುವ ಸೂಚನೆ ನೀಡಿದೆ. ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದ್ದರೆ ಆ ತಿಂಗಳ ಗೃಹಲಕ್ಷ್ಮಿ ಹಣ ಬರುವುದಿಲ್ಲ, ಕೂಡಲೇ ಇದನ್ನು ಸರಿಪಡಿಸಿ.

* ದಾಖಲೆಗಳಲ್ಲಿ ವ್ಯತ್ಯಾಸವಾಗಿರುವುದು:- ಗೃಹಲಕ್ಷ್ಮಿ ಹಣ ಪಡೆಯಲು ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆ ಈ ಮೂರು ದಾಖಲೆಗಳಲ್ಲೂ ಹೆಸರು ಒಂದೇ ತರ ಇರಬೇಕು ಒಂದು ವೇಳೆ ವ್ಯತ್ಯಾಸಗಳಿದ್ದರೆ ಕೂಡಲೇ ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಿ ಇಲ್ಲವಾದಲ್ಲಿ ‌ ನಿಮಗೆ ಗೃಹಲಕ್ಷ್ಮಿ ಹಣ ಬರುವುದಿಲ್ಲ.

ಇದರಲ್ಲಿ ಏನು ಸಮಸ್ಯೆ ಆಗಿದೆ ಎಂದು ನಿಮಗೆ ತಿಳಿಯದೆ ಇದ್ದರೆ ಅಥವಾ ಎಲ್ಲ ಸರಿ ಇದ್ದು ಹಣ ಬರದೆ ಇದ್ದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ಕೊಟ್ಟು CDPO ಅಧಿಕಾರಿಗಳಿಗೆ ನಿಮ್ಮ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪತ್ರದ ಜೆರಾಕ್ಸ್ ಜೊತೆಗೆ ಮನವಿ ಸಲ್ಲಿಸಿ, ಅವರು ಪರಿಶೀಲನೆ ನಡೆಸಿ ಪರಿಹಾರ ಸೂಚಿಸುತ್ತಾರೆ.

ಈ ಸುದ್ದಿ ಓದಿ:-ಈ ದಾಖಲೆ ಇದ್ರೆ ಮಾತ್ರ ಇನ್ಮುಂದೆ ಪಿಂಚಣಿ ಹಣ ಸಿಗೋದು.!

ಅರ್ಹರಾಗಿದ್ದರು ಕೂಡ ತಾಂತ್ರಿಕ ಸಮಸ್ಯೆಗಳಿಂದ ಹಣ ಪಡೆಯಲಾಗದಿದ್ದರೆ ಒಟ್ಟಿಗೆ ಎಲ್ಲಾ ಕಂತುಗಳ ಹಣ ಕೂಡ ಬರಲಿದೆ ಮತ್ತು ಫೆಬ್ರವರಿ ತಿಂಗಳ 15ನೇ ತಾರೀಕಿನ ಒಳಗೆ ಎಲ್ಲಾ ಮಹಿಳೆಯರಿಗೂ 6ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಬರಲಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
Useful Information Tags:Gruha lakshmi yojane, Gruhalakshmi Scheme
WhatsApp Group Join Now
Telegram Group Join Now

Post navigation

Previous Post: ಅಂಚೆ ಕಚೇರಿಯ ಹೊಸ ಯೋಜನೆ.! ಕೇವಲ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಪಡೆಯಿರಿ.!
Next Post: ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಣೆ.!

Leave a Reply Cancel reply

Your email address will not be published. Required fields are marked *

  • About Us
  • Contact Us
  • Privacy Policy
  • Terms and Conditions

Recent Posts

  • Gruhalakshmi: ಗೃಹಲಕ್ಷ್ಮೀ ಯೋಜನೆ ಹಣ 4000 ರೂಪಾಯಿಗೆ ಏರಿಕೆ.! March 21, 2025
  • Gold ಚಿನ್ನದ ಮೇಲೆ ಸಾಲ ಪಡೆದವರಿಗೆ – RBI ನಿಂದ ಹೊಸ ನಿಯಮ.! March 20, 2025
  • Loan: ಸಾಲಗಾರರಿಗೆ ಕಿರುಕುಳ ನೀಡಿದರೆ 10 ವರ್ಷ ಜೈಲು 5 ಲಕ್ಷ ದಂಡ.! March 20, 2025
  • DOT ದೂರಸಂಪರ್ಕ ಇಲಾಖೆ ನೇಮಕಾತಿ ಟೆಲಿಕಾಂ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ February 25, 2025
  • IOCL ನೇಮಕಾತಿ – 457 ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಸಿ February 25, 2025

Archives

  • March 2025
  • February 2025
  • January 2025
  • August 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023
  • February 2023
  • January 2023
  • December 2022
  • November 2022
  • October 2022
  • September 2022
  • August 2022
  • July 2022
  • June 2022
  • May 2022
  • April 2022

Copyright © 2025 Rishi The Power.


Developed By Top Digital Marketing & Website Development company in Mysore