ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾಗಿ (Anganawadi Worker) ಕಾರ್ಯ ನಿರ್ವಹಿಸುತಿರುವಂತಹ ಮಹಿಳೆಯರಿಗೆ ಸಿಹಿ ಸುದ್ದಿ ಇದೆ. ಸರ್ಕಾರದಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ಭಾಗ್ಯ (Smartphone) ಸಿಗುತ್ತಿದೆ ಎಲ್ಲರಿಗೂ ತಿಳಿದಿರುವಂತೆ ಈಗ ಬಹುತೇಕ ಎಲ್ಲಾ ಚಟುವಟಿಕೆ ಕೂಡ ಆನ್ಲೈನ್ ಮೂಲಕವೇ ನಡೆಯುತ್ತಿವೆ.
ಈ ಮೂಲಕ ಡಾಟಾ ಸಂಗ್ರಹಿಸಿಡಲು ಮತ್ತು ಶೀಘ್ರ ಗತಿಯಲ್ಲಿ ಸರಳವಾಗಿ ಕೆಲಸಗಳನ್ನು ನಿರ್ವಹಿಸಲು ಹೆಚ್ಚು ಅನುಕೂಲತೆ ಆಗುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತು. ಎಲ್ಲ ಕ್ಷೇತ್ರಗಳು ಕೂಡ ಡಿಜಿಟಲೀಕರಣಗೊಳ್ಳುತ್ತಿರುವುದರಿಂದ ಸರ್ಕಾರದ ಪ್ರತಿ ಇಲಾಖೆಯ ಕಾರ್ಯ ಚಟುವಟಿಕೆಗಳು ಕೂಡ ಆನ್ಲೈನ್ ನಲ್ಲಿ ನಡೆಯುತ್ತಿದ್ದು ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆವರೆಗೂ ಕೂಡ ಇದು ವಿಸ್ತರಿಸಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನದಂದು ಜಮೆ, 6ನೇ ಕಂತಿನ ಹಣ ಬಂದಿಲ್ಲ ಎಂದರೆ ಕೂಡಲೇ ಈ ಕೆಲಸ ಮಾಡಿ.!
ಇದಕ್ಕೆ ಅನುಕೂಲವಾಗಲು ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡುವ ವಿಧೇಯಕ್ಕೆ (Bill Pass) ಇಂದು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ರಾಜ್ಯದಲ್ಲಿ ಒಟ್ಟು 76,000 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಈ ಮಹಿಳೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇಂದು ತೀರ್ಮಾನಿಸಲಾಗಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ (Siddaramaih) ನೇತೃತ್ವದಲ್ಲಿ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತವಾಗಿ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಲಾಗಿದೆ, ಇದರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೆಯ ಅನೇಕ ಕಾರ್ಯ ಚಟುವಟಿಗಳು ಸರಾಗ ಆಗಲಿದೆ ಎಂದು ಊಹಿಸಿ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಸುದ್ದಿ ಓದಿ:- ಅಂಚೆ ಕಚೇರಿಯ ಹೊಸ ಯೋಜನೆ.! ಕೇವಲ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಪಡೆಯಿರಿ.!
ಯಾಕೆಂದರೆ, ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಾಗಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಸೇರಿದಂತೆ ವಿವಿಧ ಯೋಜನೆಗಳ ಕುರಿತಾದ ಸಮೀಕ್ಷೆ, ಅವುಗಳಿಗೆ ಅರ್ಜಿಗಳ ಸ್ವೀಕಾರ ಮತ್ತು ಇತರ ಡಾಟವನ್ನು ಮುಂದಿನ ಮೇಲಾಧಿಕಾರಿಗಳಿಗೆ ಶೀಘವಾಗಿ ತಲುಪಿಸುವುದು ಇಂತಹ ಅನೇಕ ಕೆಲಸಗಳಿಗೆ ಈ ಸ್ಮಾರ್ಟ್ ಫೋನ್ ಗಳು ಬಳಕೆಗೆ ಬರಲಿದೆ.
ಈ ಕಾರಣದಿಂದಾಗಿ ಮೊಬೈಲ್ ವಿತರಣೆಗೆ ಸರ್ಕಾರ ಮುಂದಾಗಿದೆ. ಅಂಗನವಾಡಿ ಮೇಲ್ವಿಚಾರಕರು ಮತ್ತು ಕಾರ್ಯಕರ್ತರೆಯರಿಗಾಗಿ ಈ ಯೋಜನೆ ರೂಪಿಸಲಾಗಿದೆ, ಇದು ಇಲಾಖೆಯ ಅನೇಕ ದಿನಗಳ ಬೇಡಿಕೆ ಕೂಡ ಆಗಿತ್ತು. ಅಂತಿಮವಾಗಿ ಇಂದು ಒಟ್ಟು 89.61 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ಖರೀದಿಸಿ ಉಚಿತವಾಗಿ ವಿತರಿಸಲು ರಾಜ್ಯ ಸಂಪುಟ ಸಭೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ ಎನ್ನುವ ವಿಚಾರವು ಈ ಮಹಿಳೆಯರಿಗೆ ಅತ್ಯಂತ ಸಿಹಿ ಸುದ್ದಿ ಆಗಿದೆ.
ಈ ಸುದ್ದಿ ಓದಿ:- ನಿಮ್ಮ ಜಮೀನು ಹೊಲ ಗದ್ದೆಗಳ ಸರ್ವೇ ಸ್ಕೆಚ್ಚ್, ಉಚಿತವಾಗಿ ನಿಮ್ಮ ಮೊಬೈಲ್ ನಲ್ಲಿ ಪಡೆಯವ ವಿಧಾನ.!
ಈಗಿರುವ ಬಲವಾದ ಮೂಲಗಳ ಮಾಹಿತಿಯ ಪ್ರಕಾರ ಪ್ರತಿ ಸ್ಮಾರ್ಟ್ ಫೋನ್ ನ್ನು ರೂ.11,800 ವೆಚ್ಚದಲ್ಲಿ ಖರೀದಿಸಲು ನಿರ್ಧರಿಸಲಾಗಿದೆ. ಮುಖ್ಯವಾಗಿ ಪೋಷಣ್ ಅಭಿಯಾನ ಯೋಜನೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಫಲಾನುಭವಿಗಳ ಗುರಿಯನ್ನಾಧರಿಸಿ ಎಲ್ಲಾ ಪೌಷ್ಟಿಕತೆಯ ಯೋಜನೆಗಳನ್ನು ಒಗ್ಗೂಡಿಸುವ ಉದ್ದೇಶದಿಂದ.
ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕತೆಯ ಸ್ಥಿತಿಯನ್ನು ನಿರ್ದಿಷ್ಟ ಅವಧಿಗೆ ಅನುಗುಣವಾಗಿ ಸುಧಾರಿಸಲು ಚಟುವಟಿಕೆಗಳನ್ನು ಕೈಗೊಂಡ ಮಾಹಿತಿಯನ್ನು ಪೋಷ್ ಟ್ರ್ಯಾಕರ್‌ನಲ್ಲಿ ಅಳವಡಿಸಲು ಸ್ಮಾರ್ಟ್ ಫೋನೊ ಖರೀದಿಸಲಾಗುತ್ತಿದೆ ಎಂದು ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್.ಕೆ.ಪಾಟೀಲ್ ಸಂಪುಟದ ನಿರ್ಣಯಗಳನ್ನು ತಿಳಿಸಿದರು.
ಈ ಸುದ್ದಿ ಓದಿ:-ಈ ದಾಖಲೆ ಇದ್ರೆ ಮಾತ್ರ ಇನ್ಮುಂದೆ ಪಿಂಚಣಿ ಹಣ ಸಿಗೋದು.!
ಈ ಯೋಚನೆ ಮಾತಾಡದೆ ಇನ್ನಷ್ಟು ಇಲಾಖೆಯ ಕಾರ್ಯ ಚಟುವಟಿಕೆಗಳಿಗೆ ಈ ಸ್ಮಾರ್ಟ್ ಫೋನ್ ಅನುಕೂಲಕ್ಕೆ ಖಂಡಿತ ಬರಲಿದೆ ಇದು ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಒತ್ತಡವನ್ನು ಕಡಿಮೆಗೊಳಿಸುವಂತಾಗಲಿ ಎಂದು ನಾವು ಆಶಿಸೋಣ.