ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Narendra Modi) ದೇಶದ ಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಪರಿಚಯಿಸಿದ್ದಾರೆ. ಕೃಷಿಕ, ಕಾರ್ಮಿಕ, ವಿದ್ಯಾರ್ಥಿಗಳು, ಮಹಿಳೆಯರು, ವೃದ್ಧರು ಹೀಗೆ ಪ್ರತಿಯೊಂದು ವರ್ಗಕ್ಕೂ ಕೂಡ ಅವರ ಅಭಿವೃದ್ಧಿಗಾಗಿ ಅನೇಕ ರೀತಿ ಯೋಜನೆಗಳು ನರೇಂದ್ರ ಮೋದಿಯವರ ಆಡಳಿತ ಅವಧಿಯಲ್ಲಿ ಜಾರಿಗೆ ಬಂದಿವೆ.
ಪ್ರಧಾನಮಂತ್ರಿ ಉಜ್ವಲ್ ಯೋಜನೆ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಇನ್ನು ಇತ್ಯಾದಿ ಯೋಜನೆಗಳನ್ನು ಹೆಸರಿಸಬಹುದು. ಮುಂದುವರೆದು ದುಡಿಯುವ ವ್ಯಕ್ತಿಯ ಕುಟುಂಬದ ಹಿತದೃಷ್ಟಿಯಿಂದ ಅತಿ ಕಡಿಮೆ ಬೆಲೆಯಲ್ಲಿ ಟರ್ಮ್ ಇನ್ಸೂರೆನ್ಸ್ ಗಳನ್ನು(Insurance) ಕೂಡ ಘೋಷಿಸಿದ್ದಾರೆ.
ಈ ಸುದ್ದಿ ಓದಿ:- ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಣೆ.!
ಆದರೆ ಅನೇಕರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ. ವಾರ್ಷಿಕವಾಗಿ ರೂ.12 ಹಾಗೂ ರೂ.330 ಪಾವತಿಸುವ ಮೂಲಕ ನೀವು ಈ ಟರ್ಮ್ ಇನ್ಶೂರೆನ್ಸ್ ಗಳನ್ನು ಖರೀದಿಸಬಹುದು. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಇದನ್ನು ಮಾಡಿಸಲೇಬೇಕು ಹಾಗಾಗಿ ಈ ಅಂಕಣದಲ್ಲಿ ಯೋಜನೆಗಳ ಕುರಿತಾದ ಬಹಳ ಪ್ರಮುಖವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇವೆ.
ಮಾರುಕಟ್ಟೆಯಲ್ಲಿ ಹಲವಾರು ಕಂಪನಿಗಳ ಇನ್ಸೂರೆನ್ಸ್ ಇದೆ. ಪ್ರತಿಯೊಬ್ಬ ವ್ಯಕ್ತಿಯು ಆತನ ದುಡಿಮೆ, ವಯಸ್ಸು ಹೇಗೆ ಅನುಕೂಲತೆಗೆ ಅನುಸಾರವಾಗಿ ತನಗೆ ಇಚ್ಛೆಯಾದ ನಂಬಿಕಸ್ಥ ಕಂಪನಿಗಳಲ್ಲಿ ಇವುಗಳನ್ನು ಮಾಡಿಸಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆಯ ಪೆಂಡಿಂಗ್ ಹಣ ಈ ದಿನದಂದು ಜಮೆ, 6ನೇ ಕಂತಿನ ಹಣ ಬಂದಿಲ್ಲ ಎಂದರೆ ಕೂಡಲೇ ಈ ಕೆಲಸ ಮಾಡಿ.!
ಆದರೆ ಇದರಲ್ಲಿ ಹೂಡಿಕೆ ಮಾಡಿದ ಹಣ ಜೀವ ವಿಮಾ ಯೋಜನೆಗಳಂತೆ ರಿಟರ್ನ್ ಬರದೇ ಇರುವ ಕಾರಣ ಆಸಕ್ತಿ ತೋರುವುದಿಲ್ಲ ಹಾಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಡಿಮೆ ಬೆಲೆಗೆ ಸರ್ಕಾರದ ಇನ್ಶೂರೆನ್ಸ್ ನ್ನು ದೇಶದ ಪ್ರತಿಯೊಬ್ಬ ವ್ಯಕ್ತಿಯೂ ಮಾಡಿಸಲು ಪ್ರೇರೇಪಿಸುತ್ತಿದ್ದಾರೆ. ಈ ವಿಮೆಗಳ ವಿವರ ಹೀಗಿದೆ ನೋಡಿ.
1. ಪ್ರಧಾನಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY):-
ಈ ಯೋಜನೆಯಡಿ ವ್ಯಕ್ತಿ ವಾರ್ಷಿಕವಾಗಿ ರೂ.330 ಕಟ್ಟಬೇಕು. ವ್ಯಕ್ತಿ ನ್ಯಾಚುರಲ್ಲಾಗಿ ಮ’ರ’ಣ ಹೊಂದಿದ ಸಂದರ್ಭದಲ್ಲಿ ಆತನ ಕುಟುಂಬಕ್ಕೆ 2 ಲಕ್ಷ ವಿಮೆ ಸಿಗುತ್ತದೆ
2. ಪ್ರಧಾನ ಮಂತ್ರಿ ಸುರಕ್ಷಾ ಭಿಮಾ ಯೋಜನೆ (PMSBY):- ಈ ಯೋಜನೆಯಡಿ ವ್ಯಕ್ತಿಯು ವಾರ್ಷಿಕವಾಗಿ ಕೇವಲ ರೂ.12 ಪಾವತಿ ಮಾಡಬೇಕು. ಅ’ಪ’ಘಾ’ತದ ಕಾರಣದಿಂದ ವ್ಯಕ್ತಿ ಏನಾದರೂ ಮೃ’ತಪಟ್ಟರೆ ಆತನ ಕುಟುಂಬಕ್ಕೆ ಈ ವಿಮೆ ಸಿಗುತ್ತದೆ.
ಈ ಸುದ್ದಿ ಓದಿ:- ಅಂಚೆ ಕಚೇರಿಯ ಹೊಸ ಯೋಜನೆ.! ಕೇವಲ 500 ರೂಪಾಯಿ ಹೂಡಿಕೆ ಮಾಡಿ 66 ಲಕ್ಷ ಪಡೆಯಿರಿ.!
ದೇಶದ ಬಡ ಕುಟುಂಬಗಳಿಗೆ ಆಸರೆಯಾಗಲಿ ಎನ್ನುವ ಕಾರಣಕ್ಕೆ ಎಷ್ಟು ಕಡಿಮೆ ಬೆಲೆಗೆ ವಿಮೆ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ತಪ್ಪದೇ ಇವುಗಳನ್ನು ಪ್ರತಿಯೊಬ್ಬ ವ್ಯಕ್ತಿಯು ಕೂಡ ಮಾಡಿಸಿಕೊಳ್ಳಿ ಮತ್ತು ನಿಮ್ಮ ಕುಟುಂಬದ ಇತರ ಸದಸ್ಯರು ಹಾಗೂ ಸ್ನೇಹಿತರಿಗೂ ಈ ಮಾಹಿತಿ ಹಂಚಿಕೊಂಡು ಅವರಿಗೂ ಈ ವಿಮೆಗಳನ್ನು ಮಾಡಿಸಿಕೊಳ್ಳುವಂತೆ ತಿಳಿಸಿ.
ಈ ವಿಮೆ ಯೋಜನೆಗಳನ್ನು ಮಾಡಿಸಲು ಬೇಕಾಗುವ ದಾಖಲೆಗಳು:-
* ವ್ಯಕ್ತಿಯ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
ವಿಮೆ ಮಾಡಿಸುವುದು ಹೇಗೆ?
* ಹತ್ತಿರದ ಯಾವುದೇ ಬ್ಯಾಂಕ್ ಗಳಲ್ಲಿ ಅಥವಾ ಅಂಚೆ ಕಚೇರಿಯಲ್ಲಿ ನೀವು ಈ ವಿಮೆ ಯೋಜನೆಗಳ ಚಂದದಾರರಾಗಬಹುದು.
* ನೀವು ಬ್ಯಾಂಕ್ ಖಾತೆ ಹೊಂದಿದ್ದರೆ ಸಾಕು ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿಕೊಟ್ಟು ಈ ವಿಮೆ ಯೋಜನೆಗಳ ಫಾರ್ಮ್ ತುಂಬಿಸಿ ಸಹಿ ಮಾಡಿಕೊಟ್ಟರೆ ಪ್ರತಿ ವರ್ಷವು ಆಟೋ ಡೆಬಿಟ್ ಆಗಿ ನಿಮ್ಮ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ.
* ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಅಥವಾ ಹತ್ತಿರದ ಬ್ಯಾಂಕ್ ಗೆ ಭೇಟಿ ಕೊಡಿ.