ಹೊಸದಾಗಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಗಲಿದೆ 2.67 ಲಕ್ಷ ಸಹಾಯಧನ

 

WhatsApp Group Join Now
Telegram Group Join Now

2015ರ ಜನವರಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು (PM Narendra Modi) ದೇಶದ ಪ್ರತಿಯೊಂದು ಕುಟುಂಬವು ಕೂಡ ಸ್ವಂತ ಸೂರಿನಡಿ ವಾಸಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು (PM Awas Scheme) ಪರಿಚಯಿಸಿದರು ಇಲ್ಲಿಯವರೆಗೂ ಈ ಯೋಜನೆಯಲ್ಲಿ 7 ಕೋಟಿ ಮನೆಗಳು ನಿರ್ಮಾಣವಾಗಿವೆ.

ಇತ್ತೀಚೆಗೆ ಈ ವರ್ಷದ ಬಜೆಟ್ ಮಂಡಣೆ ಸಮಯದಲ್ಲಿ ಸಚಿವೆ ನಿರ್ಮಲ ಸೀತಾರಾಮನ್ ರವರು (Nirmala Sitharaman) ಯೋಜನೆ ಬಗ್ಗೆ ಮಾತನಾಡಿದರು. ಮುಂದಿನ ಐದು ವರ್ಷಗಳಲ್ಲಿ ಎರಡು ಕೋಟಿ ಕುಟುಂಬಗಳಿಗೆ ಯೋಜನೆಯಡಿಯಲ್ಲಿರುವ ನೆರವು ನೀಡಲು ಸರ್ಕಾರ ಸಿದ್ಧವಾಗಿದೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಇದೊಂದು ಕ್ರೆಡಿಟ್ ಲಿಂಕ್ ಸಬ್ಸಿಡಿ ಸ್ಕೀಮ್, (Credit Link Subsidy Scheme) ಈ ಯೋಜನೆ ಹೋಮ್ ಲೋನ್ ಗೆ ಲಿಂಕ್ ಆಗಿರುತ್ತದೆ.

ಈ ಸುದ್ದಿ ಓದಿ:- ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342.ರೂ ಕಟ್ಟಿ ಸಾಕು 2 ಲಕ್ಷ ಸಿಗುತ್ತೆ.! ಸಾಮಾನ್ಯ ಜನರಿಗೆ ಮೋದಿ ಕೊಡುಗೆ.!

ಈ ಯೋಜನೆಯಡಿ ಫಲಾನುಭವಿಗೆ ರೂ.2,67,000 ಸಬ್ಸಿಡಿ ಸಿಗುತ್ತದೆ. ಸರ್ಕಾರವೇ ನೇರವಾಗಿ ಬ್ಯಾಂಕ್ ಗಳಿಗೆ ನಿಮ್ಮ ಪರವಾಗಿ ಈ ಹಣ ಕಟ್ಟಿ ಕೊಡುತ್ತದೆ. ಈ ಅನುಕೂಲತೆ ಪಡೆಯುವುದು ಹೇಗೆ? ಇತ್ಯಾದಿ ವಿವರವನ್ನು ಈ ಅಂಕಣದಲ್ಲಿ ಮಾಹಿತಿ ಹಂಚಿಕೊಳ್ಳುತ್ತಿದ್ದೇವೆ.

ಆವಾಸ್ ಯೋಜನೆ ಕುರಿತಾದ ಕೆಲವು ಪ್ರಮುಖ ಅಂಶಗಳು:-

* ಅತಿ ಮುಖ್ಯವಾದ ಕಂಡಿಷನ್ ಏನೆಂದರೆ, ನೀವು ಹೋಂ ಲೋನ್ ಗೆ ಅಪ್ಲೈ ಮಾಡುವ ಸಮಯದಲ್ಲಿಯೇ ಪ್ರಧಾನಮಂತ್ರಿ ಆವಾಸ್ ಯೋಜನೆಗೂ ಕೂಡ ಅಪ್ಲೈ ಮಾಡಬೇಕು. ಒಂದೆರಡು ವರ್ಷಗಳಾದ ನಂತರ ಈ ಯೋಜನೆಗೆ ಅಪ್ಲೈ ಮಾಡಲು ಅವಕಾಶ ಇರುವುದಿಲ್ಲ.
* ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಇದೇ ಯೋಜನೆಯ ಅಧಿಕೃತ ವೆಬ್ಸೈಟ್ ಅಥವಾ ಬ್ಯಾಂಕ್ ಗಳು ಅಥವಾ CSC ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬಹುದು.

* ಹೋಂ ಲೋನ್ ಗಳ ಮ್ಯಾಕ್ಸಿಮಮ್ ಅವಧಿ 20 ವರ್ಷಗಳು ಇರುತ್ತದೆ, ಅದು ಅರ್ಜಿದಾರನ ವಯಸ್ಸಿನ ಮೇಲೂ ನಿರ್ಧಾರ ಆಗುತ್ತದೆ. ಈ ಹೋಂ ಲೋನ್ ಮುಗಿಯುವುದರ ಒಳಗಡೆ ಯೋಜನೆಯ ಹಣ ಕ್ಲೈಮ್ ಆಗುತ್ತದೆ. ಇದು ಹೇಗೆ ವರ್ಕ್ ಆಗುತ್ತದೆ ಅಂದರೆ ಪ್ರತಿ ತಿಂಗಳು ನಾವು ಪಡೆದುಕೊಳ್ಳುವ ಸಾಲಕ್ಕೆ EMI ಕಟ್ಟಬೇಕಿರುತ್ತದೆ.

ಈ ಸುದ್ದಿ ನೋಡಿ:- ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಣೆ.!

10% ಬಡ್ಡಿದರದಲ್ಲಿ ಬ್ಯಾಂಕ್ ಗಳು ಹೋಮ್ ಲೋನ್ ನೀಡುತ್ತವೆ, ನೀವು ಈ ಯೋಜನೆಗೆ ಅರ್ಜಿ ಸಲ್ಲಿಸಿ ಅರ್ಹರಾದರೆ ಈ ಬಡ್ಡಿದರವು ಕಡಿಮೆ ಆಗುತ್ತದೆ. ಬ್ಯಾಂಕ್ ಗಳಿಗೆ ಸರ್ಕಾರವನ್ನು ಉಳಿಕೆ ಬಡ್ಡಿದರವನ್ನು ಭರಿಸುತ್ತವೆ.
EWS – 6.7%
LLG – 6.7%
MIG I & MIG – 3%

ಬೇಕಾಗುವ ದಾಖಲೆಗಳು:-

* ಐಡೆಂಟಿಟಿ ಪ್ರೂಫ್ (ಆಧಾರ್ ಕಾರ್ಡ್ / ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್ / ಪ್ಯಾನ್ ಕಾರ್ಡ್ ಇತ್ಯಾದಿಗಳಲ್ಲಿ ಒಂದು)
* ಅಡ್ರೆಸ್ ಪ್ರೂಫ್ (ಆಧಾರ್ ಕಾರ್ಡ್, ವೋಟರ್ ಐಡಿ ಮತ್ತು ಪಾನ್ ಕಾರ್ಡ್)
* ಇನ್ಕಮ್ ಪ್ರೂಫ್
1). ಸಂಬಳಕ್ಕೆ ದುಡಿಯುವ ವ್ಯಕ್ತಿಗಳಾಗಿದ್ದರೆ ಫಾರ್ಮ್ 3G, ಮೂರು ತಿಂಗಳ ಪೇಮೆಂಟ್ ಸ್ಕ್ರಿಪ್ ಮತ್ತು ಮೂರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
2). ಸೆಲ್ಫ್ ಎಂಪ್ಲಾಯಿಗಳು ಆಗಿದ್ದರೆ P & L A/c, Balance Sheet, ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು 2 ವರ್ಷಗಳ ITR

ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಕುಟುಂಬದ ವಾರ್ಷಿಕ ಆದಾಯವು 18 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು
* PUCCA ಮನೆ ಆಗಿರಬಾರದು
* ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಬ್ಯಾಂಕ್ ಅಥವಾ CSC ಕೇಂದ್ರ ಅಥವಾ ಯೋಜನೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now