Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಲೇಬರ್ ಕಾರ್ಡ್ (Labour Card) ಹೊಂದಿರುವವರಿಗೆ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಮಂಡಳಿ ವತಿಯಿಂದ ಸಾಕಷ್ಟು ಕಲ್ಯಾಣ ಯೋಜನೆಗಳ ಅನುಕೂಲತೆ ಸಿಗುತ್ತಿದೆ. ಆದರೆ ಈಗ ಕಾರ್ಮಿಕರ ಕಾರ್ಡ್ ಗೆ ಸಂಬಂಧಪಟ್ಟ ಹಾಗೆ ಈಗ ಸರ್ಕಾರದ ವತಿಯಿಂದ ಒಂದು ಸೂಚನೆ ನೀಡಲಾಗಿದೆ.
ಇದರಲ್ಲಿ ತಿಳಿಸಿರುವ ಮುಖ್ಯ ವಿಷಯ ಹೀಗಿದೆ ಲೇಬರ್ ಕಾರ್ಡ್ ಎಲ್ಲಾ ಕಾರ್ಮಿಕರಿಗೂ ತಿಳಿಸುವುದೇನೆಂದರೆ ಸರ್ಕಾರವು ಹೊಸ ವೆಬ್ಸೈಟ್ ಲಾಂಚ್ ಮಾಡಿದೆ ಆದಕಾರಣ ಎಲ್ಲಾ ಕಾರ್ಮಿಕರು ತಮ್ಮ ಹಳೆಯ ಕಾರ್ಮಿಕರ ಕಾರ್ಡ್ ನವೀಕರಣ ಮಾಡಿಸಿಕೊಳ್ಳಬೇಕು ಒಂದು ವೇಳೆ ಹೊಸ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಸದೆ ಹೊಸ ಕಾರ್ಡ್ ಪಡೆಯದೆ ಇದ್ದಲ್ಲಿ ಸರ್ಕಾರದಿಂದ ಮತ್ತು ಮಂಡಳಿಯಿಂದ ನಿಮಗೆ ಯಾವುದೇ ಸಹಾಯ ಹಾಗೂ ಸವಲತ್ತುಗಳು ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಕಾಗುವ ದಾಖಲೆಗಳು:-
* ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಹಳೆಯ ಕಾರ್ಮಿಕರ ಕಾರ್ಡ್
* ಕಾರ್ಮಿಕನ ಬ್ಯಾಂಕ್ ಪಾಸ್ ಬುಕ್
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಎಲ್ಲಿ ಅರ್ಜಿ ಸಲ್ಲಿಸಬೇಕು.?
* ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅಥವಾ CSC ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
* ಕಾರ್ಮಿಕರ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಕೂಡ ಕಾರ್ಮಿಕರೇ ಹೊಸ ಲೇಬರ್ ಕಾರ್ಡ್ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- ಹೊಸದಾಗಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಗಲಿದೆ 2.67 ಲಕ್ಷ ಅರ್ಜಿ ಸಲ್ಲಿಸುವುದು ಹೇಗೆ.? ಯಾರು ಅರ್ಹರು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗ ಅಪ್ಡೇಟ್ ಮಾಡಿರುವ ಹೊಸ ಲೇಬರ್ ಕಾರ್ಡ್ ಹಿಂದಿನ ಫಾರ್ಮೆಟ್ ಗಿಂತ ಬದಲಾಗಿದೆ. ಈ ಹಿಂದೆ A4 ಶೀಟ್ ಮಾದರಿಯಲ್ಲಿ ಲೇಬರ್ ಕಾರ್ಡ್ ನೀಡಲಾಗುತ್ತಿತ್ತು ಈಗ ಅದನ್ನು ರೇಷನ್ ಕಾರ್ಡ್ ಫಾರ್ಮೆಟ್ ಗೆ ಬದಲಾಯಿಸಲಾಗಿದೆ. ರೇಷನ್ ಕಾರ್ಡ್ ಸೈಜ್ ಇರುವ ಈ ಕಾರ್ಡಿನಲ್ಲಿ ಕಾರ್ಮಿಕನ ಭಾವಚಿತ್ರ, QR Code, ಕಾರ್ಮಿಕನ ಹೆಸರು, ಕಾರ್ಮಿಕರ ತಂದೆ/ ತಾಯಿ / ಪೋಷಕರ ಅಥವಾ ಗಂಡನ ಹೆಸರು, ಜನ್ಮ ದಿನಾಂಕ, ಲಿಂಗ, ವಿಳಾಸ, ನೋಂದಣಿ ಸಂಖ್ಯೆ.
ಈ ಸುದ್ದಿ ಓದಿ:- ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.! ಕೇವಲ 342.ರೂ ಕಟ್ಟಿ ಸಾಕು 2 ಲಕ್ಷ ಸಿಗುತ್ತೆ.! ಸಾಮಾನ್ಯ ಜನರಿಗೆ ಮೋದಿ ಕೊಡುಗೆ.!
ನೋಂದಣಿಯಾದ ದಿನಾಂಕ, ವ್ಯಾಲಿಡಿಟಿ, ಕೆಲಸದ ಸ್ವರೂಪ, ನಾಮಿನಿ ಸಂಬಂಧ, ಕುಟುಂಬದ ಇತರ ಸದಸ್ಯರ ಡೀಟೇಲ್ಸ್ ಇತ್ಯಾದಿ ಮಾಹಿತಿಗಳು ಇರುತ್ತವೆ. ನೀವು ಈ ಹೊಸ ರೇಷನ್ ಕಾರ್ಡ್ ಪಡೆದೆ ಇದ್ದಲ್ಲಿ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತೀರಿ ಹಾಗಾಗಿ ತಪ್ಪದೆ ಕಾರ್ಡ್ ಪಡೆದುಕೊಳ್ಳಿ.
ಲೇಬರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು:-
* ಹೆರಿಗೆ ಸೌಲಭ್ಯ
* ಮಗಳ ಮದುವೆ ಸಂದರ್ಭದಲ್ಲಿ ನೆರವು.
* ಕಾರ್ಮಿಕರ ಮಕ್ಕಳಿಗೆ ಶೂನ್ಯ ವೆಚ್ಚದ ಶಿಕ್ಷಣ ಮತ್ತು ವಿದ್ಯಾರ್ಥಿ ಕಿಟ್ ಹಾಗೂ ಉಚಿತ ಲ್ಯಾಪ್ಟಾಪ್ ವಿದ್ಯಾರ್ಥಿ ವೇತನ ಇನ್ನಿತರ ಸೌಲಭ್ಯಗಳು
* ಬಿಜು ಸ್ವಾತ್ಯ ಕಲ್ಯಾಣ ಯೋಜನೆ ಮತ್ತು ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ ಉಚಿತ ಆರೋಗ್ಯ ವಿಮೆ ಪ್ರಯೋಜನ.
* ಮಕ್ಕಳಿಗೆ ಜೀವ ವಿಮೆ ಪ್ರಯೋಜನಗಳು
* ಕೌಶಲ್ಯಗಳನ್ನು ಸುಧಾರಿಸಲು ಉಚಿತ ತರಬೇತಿ ಸೇರಿದಂತೆ ಇನ್ನಿತರ ಸಹಾಯ.
ಈ ಸುದ್ದಿ ಓದಿ:- ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಮೊಬೈಲ್ ವಿತರಣೆ.!
* ಸೈಕಲ್ ಖರೀದಿಗೆ ನೆರವು
* ಉಚಿತ ಟೂಲ್ ಕಿಟ್
* ಗೃಹಸಾಲದ ನೆರವು
* ನಿರ್ಮಾಣ ಶ್ರಮಿಕ ಪಕ್ಕಾ ಘರ್ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣಕ್ಕಾಗಿ ಸಾಲಗಳು
* ಕಾರ್ಮಿಕನಿಗೆ ಪಿಂಚಣಿ
* ಸರ್ಕಾರಿ ಬಸ್ ಗಳಲ್ಲಿ ಉಚಿತ ಪ್ರಯಾಣ
* ಇನ್ನಿತರ ಯೋಜನೆಗಳು.