ಡಿಜಟಲೀಕರಣದ ಕಾರಣದಿಂದಾಗಿ ಈಗ ನಾವು ಹಣಕಾಸು ವಿಚಾರವಾಗಿ ಎಷ್ಟೊಂದು ಮುನ್ನಡೆದಿದ್ದೇವೆ ಎಂದರೆ ಖಾತೆ ಸಂಖ್ಯೆ ಇಲ್ಲದೇ ಮೊಬೈಲ್ ನಂಬರ್ ಮೂಲಕವೇ IMPS ಮೂಲಕ ಹಣ ವರ್ಗಾವಣೆ ಮಾಡಲು ಅನುಕೂಲತೆಗಳಿವೆ.
ಈಗ ಈ ವಿಧಾನವು ಇನ್ನಷ್ಟು ಸರಳವಾಗುತಿದ್ದು ಹೊಸ MMID ಸೌಲಭ್ಯದೊಂದಿಗೆ IMPS ಹಣ ವರ್ಗಾವಣೆ ಇನ್ನಷ್ಟು ಸಲೀಸಲಾಗಲಿದೆ. NEFT (National Electronic Fund Transfer) ಮತ್ತು IMPS (Immediate Money Transfer Service) ಎಂಬ ಎರಡು ತ್ವರಿತ ವ್ಯವಸ್ಥೆಗಳ ಮೂಲಕ ಯಾವಾಗ ಬೇಕಾದರೂ ಯಾವುದೇ ಸಮಯದಲ್ಲಿ ಹಣ ವರ್ಗಾವಣೆ ಮಾಡಬಹುದು.
IMPS ಮೂಲಕ ಹಣ ಕಳಿಸುವಾಗ, ಹಣವು ತಕ್ಷಣವೇ ನಾವು ಹಣ ಕಳಿಸಿದ ವ್ಯಕ್ತಿಯ ಖಾತೆಗೆ ಜಮೆಯಾಗುತ್ತದೆ. ಇಲ್ಲಿಯವರೆಗೂ IMPS ನಲ್ಲಿ ಹಣ ಕಳಿಸುವುದಕ್ಕೆ ವ್ಯಕ್ತಿಯ ಹೆಸರು, ಖಾತೆ ಸಂಖ್ಯೆ, ಬ್ಯಾಂಕ್ ಹೆಸರು ಮತ್ತು IFSC ಕೋಡ್ ಕೂಡ ನೀಡಬೇಕಾಗಿತ್ತು. ಆದರೆ ಫೆಬ್ರವರಿ 1 ರಿಂದ, ಈ ಪ್ರಕ್ರಿಯೆಯು ಇನ್ನಷ್ಟು ಸರಳವಾಗಿದೆ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರು ಹಾಕಿ ಹಣ ವರ್ಗಾವಣೆ ಮಾಡಬಹುದಾಗಿದೆ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಹೊಸ ಅಪ್ಡೇಟ್, ಈ ರೀತಿ ಮಾಡಿಸದೆ ಇದ್ದಲ್ಲಿ ಕಾರ್ಮಿಕರಿಗೆ ಇನ್ಮುಂದೆ ಯಾವುದೇ ಸೌಲಭ್ಯ ಸಿಗಲ್ಲ.!
ಈ ಹೊಸ ನಿಯಮಗಳ ಪ್ರಕಾರ 5 ಲಕ್ಷ ಗಳವರೆಗೆ ಬೆನಿಫಿಶಿಯರಿ ಮತ್ತು IFSC ಕೋಡ್ ಬಳಸದೆಯೂ ಹಣ ವರ್ಗಾಯಿಸಬಹುದು. ಇದರ ಬದಲಾಗಿ ಪ್ರತಿಯೊಬ್ಬ ಗ್ರಾಹಕನಿಗೂ ಬ್ಯಾಂಕ್ ಗಳು MMID (Mobile Money Identifier) ಸಂಖ್ಯೆಯನ್ನು ನೀಡಲಿವೆ. ಈ MMID ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆ (RMN) ಬಳಸಿ ಶೀಘ್ರವಾಗಿ ಹಣ ವರ್ಗಾವಣೆ ಮಾಡಬಹುದು.
ಇದಕ್ಕಾಗಿ ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ಗಳು, ಬ್ಯಾಂಕ್ ಶಾಖೆಗಳು, ATM ಗಳು , SMS ಮತ್ತು ಐವಿಆರ್ಎಸ್(IVRS) ಗಳಂತಹ ವಿವಿಧ ಮಾರ್ಗಗಳನ್ನು ಕೂಡ ಬಳಸಬಹುದು. ನಿಮಗೆ ನೀಡಲಾಗುವ MMID ನಿಮ್ಮ ಮೊಬೈಲ್ ನಂಬರ್ಗೂ ಲಿಂಕ್ ಆಗಿರುತ್ತದೆ, UPI ಮೂಲಕ ಹಣಕಾಸು ವ್ಯವಹಾರಗಳನ್ನು ನಡೆಸಲು ಇದನ್ನು ಬಳಸಬಹುದು.
ಈ ಸುದ್ದಿ ಓದಿ:- ಹೊಸದಾಗಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಗಲಿದೆ 2.67 ಲಕ್ಷ ಅರ್ಜಿ ಸಲ್ಲಿಸುವುದು ಹೇಗೆ.? ಯಾರು ಅರ್ಹರು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಇದು ಹಣ ಕಳುಹಿಸುವುದನ್ನು ಸುಲಭ ಮಾಡುತ್ತದೆ. MMID ಬಳಸಿ, ನೀವು ಬ್ಯಾಂಕ್ ಖಾತೆ ಸಂಖ್ಯೆ ಅಥವಾ IFSC ಕೋಡ್ ನಮೂದಿಸುವ ಅಗತ್ಯವಿಲ್ಲದೆ ಯಾರಿಗಾದರೂ ಹಣ ಕಳುಹಿಸಬಹುದಾಗಿದೆ. MMID ವಹಿವಾಟುಗಳು IMPS ಗಿಂತಲೂ ವೇಗವಾಗಿ ನಡೆಯುತ್ತವೆ ಹಾಗೆಯೇ ಇದು ಹೆಚ್ಚು ಸುರಕ್ಷಿತವಾಗಿಯೂ ನಡೆಯಲಿದೆ. MMID ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆಗಿರುವುದೇ ಹೆಚ್ಚಿನ ಭದ್ರತೆ ನೀಡುತ್ತಿರುವುದು.
ಈ MMID ಅನ್ನು ಹೇಗೆ ಪಡೆಯುವ ವಿಧಾನ:-
* ನಿಮ್ಮ ಬ್ಯಾಂಕಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ಗೆ ಲಾಗಿನ್ ಆಗಿ
* MMID ಆಪ್ಷನ್ ಹುಡುಕಿ, MMID Generate ಆಪ್ಷನ್ ಕ್ಲಿಕ್ ಮಾಡಿ.
* ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ಗೆ OTP ಬರುತ್ತದೆ
* OTP ನಮೂದಿಸಿ ಮತ್ತು Submit ಮಾಡಿ, ನಿಮ್ಮ MMID ಯಶಸ್ವಿಯಾಗಿ ಕ್ರಿಯೇಟ್ ಆಗಿರುತ್ತದೆ.
MMID ಮೂಲಕ ಹಣ ಕಳಿಸುವ ಸುಲಭ ವಿಧಾನ:-
* ನಿಮ್ಮ ಮೊಬೈಲ್ ಬ್ಯಾಂಕಿಂಗ್ ಅಥವಾ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಮಾಡಿ.
* Fund Transfer ಆಪ್ಷನ್ ಆಯ್ಕೆಮಾಡಿ ಮತ್ತು IMPS ಕ್ಲಿಕ್ ಮಾಡಿ.
* ನೀವು ಹಣ ಕಳಿಸಬೇಕಾಗಿರುವ ವ್ಯಕ್ತಿಯ MMID ಮತ್ತು MPIN ನಮೂದಿಸಿ, ಕಳುಹಿಸಬೇಕಾದ ಹಣದ ಮೊತ್ತವನ್ನು ನಮೂದಿಸಿ, Confirm ಕ್ಲಿಕ್ ಮಾಡಿ.
* OTP ನಮೂದಿಸಿ ಮತ್ತೊಮ್ಮೆ Confirm ಕ್ಲಿಕ್ ಮಾಡಿ ಸಾಕು.