Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
2019ಕ್ಕೂ ಮುನ್ನ ನೋಂದಣಿಯಾಗಿರುವ ಎಲ್ಲಾ ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಕಡ್ಡಾಯವಾಗಿ HSRP ನಂಬರ್ ಪ್ಲೇಟ್ ಅಳವಡಿಕೆ ಮಾಡಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು (transport department) ಆದೇಶ ನೀಡಿದೆ. ಅದರ ಅನ್ವಯ ಕರ್ನಾಟಕ ರಾಜ್ಯದಲ್ಲೂ ಕೂಡ ಆಗಸ್ಟ್ 17, 2023ರಲ್ಲಿ HSRP ನಂಬರ್ ಪ್ಲೇಟ್ ಕಡ್ಡಾಯಗೊಳಿಸಲಾಗಿದ್ದು.
90 ದಿನದ ಒಳಗೆ ನವೆಂಬರ್ 17, 2023ರ ಒಳಗೆ ಎಲ್ಲಾ ವಾಹನ ಮಾಲೀಕರು ನಿಯಮದಂತೆ ಶೋರೂಮ್ ಗಳಲ್ಲಿ, ಡೀಲರ್ ಗಳ ಬಳಿ ಬುಕ್ ಮಾಡಿ ಅಥವಾ ಆನ್ಲೈನ್ ನಲ್ಲಿ ತಾವೇ ಅಪ್ಲಿಕೇಶನ್ ಹಾಕಿ ತಮ್ಮ ವಾಹನಗಳಿಗೆ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದಲ್ಲಿ ನಂತರ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಲಾಗಿತ್ತು.
ಈ ಸುದ್ದಿ ನೋಡಿ:- ಮೊಬೈಲ್ ನಲ್ಲಿ ಹಣ ಕಳಿಸುವವರಿಗೆ ಇಂದಿನಿಂದ ಹೊಸ ನಿಯಮ.!
ಆದರೆ ಈವರೆಗೂ 1.70 ಕೋಟಿ ವಾಹನಗಳು ನೋಂದಣಿಯಾಗಿದ್ದು, ಲಕ್ಷಾಂತರ ಮಾಲೀಕರು ಇದರ ಬಗ್ಗೆ ನಿರ್ಲಕ್ಷ ತೋರಿದ್ದಾರೆ. ದೇಶದ ಭದ್ರತೆ ಉದ್ದೇಶದಿಂದ ತಮ್ಮ ವಾಹನಗಳು ಅಪರಾಧಿ ಚಟುವಟಿಕೆಗಳಿಗೆ ಬಳಕೆಯಾಗುವುದನ್ನು ತಪ್ಪಿಸಲು ಮತ್ತು ಕಳ್ಳತನವಾದಾಗ ಸುಲಭವಾಗಿ ಅದನ್ನು ಪತ್ತೆಹಚ್ಚಲು ವಾಹನ ಮಾಲೀಕರು ಈ ನಿಯಮ ಪಾಲಿಸಲೇಬೇಕು.
ಒಂದು ವೇಳೆ ವಾಹನ ಮಾಲೀಕರು ನಂಬರ್ ಪ್ಲೇಟ್ ಬದಲಾಯಿಸದೆ ಇದ್ದರೆ ವಾಹನ ಮಾರಾಟದ ಸಮಯದಲ್ಲಿ ಬಹಳಷ್ಟು ಸಮಸ್ಯೆಗಳು ಆಗುತ್ತವೆ. ಮಾಲಿಕತ್ವದ ಬದಲಾವಣೆ, ನಕಲಿ RC ಕಾರ್ಡ್ ತಯಾರಿಸುವುದು ಮುಂತಾದ ಕೆಲಸ ಕಾರ್ಯಗಳಿಗೆ ಅಡ್ಡಿ ಆಗುತ್ತದೆ ಹಾಗಾಗಿ ನಿಯಮದ ಪ್ರಕಾರವಾಗಿ ಎಲ್ಲ ವಾಹನ ಮಾಲೀಕರು ಕೂಡ ಇದನ್ನು ಪಾಲಿಸಲೇಬೇಕಾಗಿದೆ.
ಈ ಸುದ್ದಿ ನೋಡಿ:- ಲೇಬರ್ ಕಾರ್ಡ್ ಹೊಸ ಅಪ್ಡೇಟ್, ಈ ರೀತಿ ಮಾಡಿಸದೆ ಇದ್ದಲ್ಲಿ ಕಾರ್ಮಿಕರಿಗೆ ಇನ್ಮುಂದೆ ಯಾವುದೇ ಸೌಲಭ್ಯ ಸಿಗಲ್ಲ.!
ಒಂದು ವೇಳೆ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ವಾಹನಗಳೇನಾದರು ರಸ್ತೆಗೆ ಇಳಿದರೆ ದಂಡ ತಪ್ಪಿದ್ದಲ್ಲ ನವೆಂಬರ್ 17, 2023 ಅವಧಿಯೊಳಗೆ ಇನ್ನು ಲಕ್ಷಾಂತರ ವಾಹನ ಮಾಲೀಕರ ನಂಬರ್ ಪ್ಲೇಟ್ ಬದಲಾಯಿಸುವ ಪ್ರಕ್ರಿಯೆ ಪೂರ್ತಿಗೊಳ್ಳದ ಕಾರಣ ಮತ್ತೊಮ್ಮೆ ಹೆಚ್ಚಿನ ಸಮಯಾವಕಾಶವನ್ನು ನೀಡಲಾಗಿತ್ತು.
ನವೆಂಬರ್ 17ರಂದು ಮತ್ತೆ ಮೂರು ತಿಂಗಳವರೆಗೆ ಇದನ್ನು ವಿಸ್ತರಿಸಿ ಫೆಬ್ರವರಿ 17 2023 ಕ್ಕೆ ಈ ಅವಧಿ ಕೊನೆಗೊಳ್ಳುತ್ತಿದೆ ಮತ್ತು ಈ ಬಾರಿ ಮತ್ತೊಮ್ಮೆ ಸಮಯವಕಾಶ ವಿಸ್ತರಿಸುವ ಅವಕಾಶ ಸಿಗುವ ಸಾಧ್ಯತೆಗಳು ಕೂಡ ಕಡಿಮೆ ಇದೆ. ಒಂದು ವೇಳೆ ನಿಯಮ ಮೀರಿದರೆ ಎಷ್ಟು ದಂಡ ಬೀಳಲಿದೆ ಎನ್ನುವ ಮಾಹಿತಿಯನ್ನು ತಿಳಿಸುತ್ತಿದ್ದೇವೆ.
ಈ ಸುದ್ದಿ ನೋಡಿ:- ಹೊಸದಾಗಿ ಮನೆ ಕಟ್ಟುವವರಿಗೆ ಸರ್ಕಾರದಿಂದ ಸಿಗಲಿದೆ 2.67 ಲಕ್ಷ ಅರ್ಜಿ ಸಲ್ಲಿಸುವುದು ಹೇಗೆ.? ಯಾರು ಅರ್ಹರು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗಿರುವ ನಿಯಮದ ಪ್ರಕಾರ ಮೊದಲ ಬಾರಿಗೆ HSRP ನಂಬರ್ ಪ್ಲೇಟ್ ಇಲ್ಲದೇ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನವು ರಸ್ತೆಗಳಿದ್ದರೆ ರೂ.1000 ದಂಡ ಮತ್ತು ಎರಡನೇ ಬಾರಿ ರಸ್ತೆಗಳಿದರೆ ರೂ.2000 ದಂಡವನ್ನು ವಿಧಿಸಲು ನಿರ್ಧರಿಸಲಾಗಿದೆ. ಒಂದು ವೇಳೆ ಪದೇ ಪದೇ ಈ ರೀತಿ ವಾಹನ ಮಾಲೀಕರು ನಿಯಮ ಮೀರುತ್ತಿದ್ದರೆ ಅದೇ ರೀತಿ ದಂಡದ ಮೊತ್ತವು ಕೂಡ ಹೆಚ್ಚಾಗಲಿದೆ ಎನ್ನುವ ಮಾತು ಕೂಡ ಕೇಳಿ ಬರುತ್ತದೆ.
ಹಾಗಾಗಿ ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ. ಒಂದು ವೇಳೆ ನೀವು ನಂಬರ್ ಪ್ಲೇಟ್ ಅಳವಡಿಕೆ ಮಾಡಿಕೊಳ್ಳಲು ಬುಕ್ಕಿಂಗ್ ಮಾಡಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಇದ್ದರೆ ಸಂಚಾರಿ ಪೊಲೀಸರ ತಡೆದಾಗ ನೀವು ಬುಕಿಂಗ್ ಮಾಡಿರುವುದರ ಕುರಿತು ನೀವು ಬಿಲ್ ಪೇ ಮಾಡಿರುವ ಅಥವಾ ಅಕ್ನಾಲಜಿಮೆಂಟ್ ಪಡೆದಿರುವ ಸ್ಲಿಪ್ ತೋರಿಸಿ ಅಥವಾ ಕನ್ಫರ್ಮೇಶನ್ ಗೆ ನಿಮ್ಮ ಮೊಬೈಲ್ ಗೆ ಬಂದಿರುವ SMS ತೋರಿಸಿ ಕೂಡ ದಂಡ ವಿಧಿಸುವುದರಿಂದ ತಪ್ಪಿಸಿಕೊಳ್ಳಬಹುದು ಹಾಗಾಗಿ ತಪ್ಪದೆ ಕೂಡಲೇ ಈ ಕೆಲಸ ಮಾಡಿ.